ಕೆ-ವರ್ಡ್‌ಕ್ವಿಜ್ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಚಯ

'ಕೆ-ವರ್ಡ್ ಕ್ವಿಜ್' ಎಂಬುದು ಮಿಂಚುಪಟ್ಟಿ, ಬಹು ಆಯ್ಕೆಮಾದರಿಗಳು ಮತ್ತು ಪ್ರಶ್ನೋತ್ತರಗಳ ಮೂಲಕ ಶಬ್ದಕೋಶ ಕಲಿಕೆಗೆ ಮತ್ತು ರಸಪ್ರಶ್ನೆಗಳನ್ನು ಕೇಳಲು ಬಳಸುವ ತಂತ್ರಾಂಶವಾಗಿದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಕೆ-ವರ್ಡ್ ಕ್ವಿಜ್ ಎಂಬುದು ವಿಷಯ ಸಂಪನ್ಮೂಲ ರಚನೆ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ (ಭಾಷೆ ಮತ್ತು ಸಮಾಜವಿಜ್ಞಾನ).
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಕೆ-ವರ್ಡ್ ಕ್ವಿಜ್’ ಬಳಸಿ ಗಣಕ ಪರದೆಯ ಮೇಲೆ ಪ್ರಶ್ನೆಗಳನ್ನು ಮೂಡಿಸಿ ತರಗತಿಯಲ್ಲಿ ಏಕಕಾಲದಲ್ಲಿ ಪ್ರಶ್ನೋತ್ತರ ಚಟುವಟಿಕೆಯನ್ನು ನಿರ್ವಹಿಸಬಹುದು.
ಆವೃತ್ತಿ Version 0.9.2
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. ಸ್ಥಳೀಯ ಭಾಷೆಯಲ್ಲಿ ಬಳಸಲು ಕೆಲವು ಸಂರಚನೆಗಳನ್ನು ಮೆನುಬಾರ್‌ ಮೂಲಕ ಮಾಡಿಕೊಳ್ಳಬೇಕಾಗುತ್ತದೆ.
ಇತರೇ ಸಮಾನ ಅನ್ವಯಕಗಳು ಲಭ್ಯವಿಲ್ಲ
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಲಭ್ಯವಿಲ್ಲ
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಅಧಿಕೃತ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

ಸುಲಭವಾಗಿ ಬಳಸಬಹುದಾದ ಇಂಟರ್‌ಫೇಸ್, ಐದು ರೀತಿಯ ಪ್ರಾಯೋಗಿಕ ವಿಧಗಳು, ವಿವಿಧ ಫ್ಲಾಸ್‌ಕಾರ್ಡ್ ಮತ್ತು ಕ್ವಿಜ್ ಮಾದರಿಗಳ ಲಭ್ಯತೆ.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ KWordQuiz” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install kwordquiz

ಅನ್ವಯಕ ಬಳಕೆ

ಕೆ-ವರ್ಡ್‌ಕ್ವಿಜ್‌ ನ್ನು Application > Education > KWordQuiz ಮೂಲಕ ತೆರೆಯಬಹುದು.

ಕೆ-ವರ್ಡ್‌ಕ್ವಿಜ್‌ ಬಳಕೆ ಮತ್ತು ರಸಪ್ರಶ್ನೆ ರಚನೆ

  1. ಕೆ-ವರ್ಡ್‌ಕ್ವಿಜ್‌ ನ್ನು Application > Education > KWordQuiz ಮೂಲಕ ತೆರೆಯಬಹುದು. ಕೆ-ವರ್ಡ್‌ಕ್ವಿಜ್‌ ಮುಖ್ಯಪುಟ ಮೊದಲನೇ ಚಿತ್ರದಲ್ಲಿರುವಂತೆ ಕಾಣುತ್ತದೆ. ಇದರಲ್ಲಿ ಕಾಲಂ೧ ಅನ್ನು ಪ್ರಶ್ನೆಯಾಗಿ ಮತ್ತು ಕಾಲಂ ೨ ಅನ್ನು ಅದಕ್ಕೆ ಉತ್ತರವಾಗಿ ನಮ್ಮ ಪ್ರಶ್ನಾವಳಿಗಳನ್ನು ರಚಿಸಿಕೊಳ್ಳಬಹುದು.
  2. ಪ್ರಶ್ನೋತ್ತರಗಳನ್ನು ರಚಿಸುವ ಮೊದಲು, ಕಾಲಂ ೧ ಮತ್ತು ಕಾಲಂ ೨ ಕ್ಕೆ ಶೀರ್ಷಿಕೆಗಳನ್ನು ನೀಡಬೇಕು, ಅದಕ್ಕಾಗಿ Vocabulary ಯಲ್ಲಿ colum setting ಅನ್ನು ಕ್ಲಿಕ್ಕಿಸಿ. ಇಲ್ಲಿ ಉದಾಹರಣಗೆ ಕಾಲಂ ೧ ನಲ್ಲಿ ರಾಜ್ಯದ ಹೆಸರು,ಕಾಲಂ 2- ರಾಜಧಾನಿಯ ಹೆಸರು ನಮೂದಿಸಿ OK ಒತ್ತಿರಿ.
  3. ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಪ್ರಶ್ನೋತ್ತರಗಳ್ನನು ರಚಿಸಿಕೊಳ್ಳಬಹುದು.

ರಸಪ್ರಶ್ನೆಯ ವಿಧಾನಗಳು

<gallery mode="packed" heights="200px" caption="ರಸಪ್ರಶ್ನೆಯ ವಿಧಾನಗಳು">

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು