ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
ಮುಕ್ತ ಶೈಕ್ಷಣಿಕ ಸಂಪನ್ಮೂಲ
ಬೋದನೆಯನ್ನು ಪರಿಣಾಮಕಾರಿಯಾಗಿಸಲು ಸಂಪನ್ಮೂಲಭರಿತವಾದ ಕಲಿಕಾ ವಾತಾವರಣ ಅವಶ್ಯಕವಾದುದು. ಹೀಗಿದ್ದರೂ ಸಹ ಹಲವುಕಡೆ ಶಿಕ್ಷಕರು ಕೇವಲ ಪಠ್ಯಪುಸ್ತಕವನ್ನೇ ಹೊಂದಿದ್ದಾರೆ. ಪಠ್ಯಪುಸ್ತಕವು ಮಕ್ಕಳಿಗಾಗಿ ಇರುವಂತದ್ದು. ಶಿಕ್ಷಕರು ಪಠ್ಯಪುಸ್ತಕದಲ್ಲಿನ ವಿಷಯಗಳಿಗೆ ಸಂಪನ್ಮೂಲಗಳನ್ನು ಬಳಸಬೇಕು. ಈ ಮೂಲಕ ಶಿಕ್ಷಕರು ಮಕ್ಕಳ ಕಲಿಕಾ ಸಂದರ್ಭ ಮತ್ತು ಅವಶ್ಯಕತೆಗಳಿಗನುಗುಣವಾಗಿ ವಿವಿಧ ರೀತಿಯಲ್ಲಿ ಬೋಧನೆ ಮಾಡಲು ಸಾಧಯವಾಗುತ್ತದೆ. ತರಗತಿ ಕೋಣೆಯಲ್ಲಿ ಅಥವಾ ಪಠ್ಯದಲ್ಲಿ ಬರುವ ಸಂದೇಹ ಅಥವ ಪ್ರಶ್ನೆಗಳನ್ನು ಪರಿಹರಿಸಲು ಸಾಧ್ಯವಾಗುವಂತೆ ಶಿಕ್ಷಕರು ಸಂಪನ್ಮೂಲ ಹೊಂದಿರಬೇಕು.
ಹೀಗಿದ್ದರೂ ಸಹ ಕಲಿಕಾ ಸಂಪನ್ಮೂಲಗಳು ಶಿಕ್ಷಕರಿಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ. ಲಭ್ಯವಾಗುತ್ತಿರುವ ನಿರ್ಧಿಷ್ಟ ಸಂಪನ್ಮೂಲಗಳು ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿರುವವಾಗಿರುತ್ತವೆ. ಇವುಗಳನ್ನು ಶಿಕ್ಷಕರು ಅವರ ಬಳಕೆಗೆ ತಕ್ಕಂತೆ ಬದಲಾಯಿಸಲು ಸಾಧ್ಯವಿರುವುದಿಲ್ಲ ಹಾಗು ವೆಚ್ಚದಾಯಕವಾಗಿರುತ್ತವೆ. 'ಹಕ್ಕುಸ್ವಾಮ್ಯ' ಎಂದರೆ ಲೇಖಕನು ತನ್ನ ಲೇಖನವನ್ನು ಸಾರ್ವಜನಿಕವಾಗಿ ಲಭ್ಯವಾಗಿಸಲು ಇರುವ ಕಾನೂನಾತ್ಮಕ ಚೌಕಟ್ಟಾಗಿದೆ. ಯಾವುದೇ ಲೇಖಕನು ತನ್ನ ಲೇಖನಕ್ಕೆ ಯಾವುದೇ ರೀತಿಯ ಹಕ್ಯಸ್ವಾಮ್ಯ ಮಾಹಿತಯನ್ನು ನೀಡದಿದ್ದಲ್ಲಿ, ಅದು ಹಕ್ಕಯಸ್ವಾಮ್ಯಕ್ಕೆ ಒಳಪಟ್ಟಿದೆ ಎಂದು ಪರಿಗಣಿಸಲಾಗುತ್ತದೆ. ಹಲವು ಸಂಪ್ಮೂಲಗಳು 'all rights reserved' ಎಂಬ ರೀತಿಯ ಹಕ್ಕುಸ್ವಾಮ್ಯವನ್ನು ಹೊಂದಿರುತ್ತವೆ, ಇವುಗಳನ್ನು ಮುಕ್ತವಾಗಿ ಬಳಸಲು, ಹಂಚಿಕೊಳ್ಳಲು ಅಥವಾ ಪರಿಷ್ಕರಿಸಲು ಅನುಮತಿ ಇರುವುದಿಲ್ಲ.
ಶಿಕ್ಷಕರು ತಮ್ಮ ಅವಶ್ಯಕತೆಗೆ ತಕ್ಕಂತೆ ಸಂಪನ್ಮೂಲಗಳನ್ನು ಪರಿಷ್ಕರಿಸಿಕೊಳ್ಳಬೇಕಿರುತ್ತದೆ. ಆದರೆ ಹಕ್ಕುಸ್ವಾಮ್ಯವುಳ್ಳ ಸಂಪನ್ಮೂಲಗಳು ಈ ರೀತಿಯ ಪರಿಷ್ಕರಣೆಗೆ ಅನುಮತಿಸುವುದಿಲ್ಲ. ಆದ್ದರಿಂದ ಕಡಿಮೆ ಹಕ್ಕುಸ್ವಾಮ್ಯ ನಿರ್ಬಂಧ ಹೊಂದಿರುವ ಸಂಪನ್ಮೂಲಗಳನ್ನು ಲಭ್ಯವಾಗಿಸುವಂತಹ ಚಳುವಳಿ ಆರಂಭವಾಗಿದೆ. 'ಮುಕ್ತ ಶೈಕ್ಷಣಿಕ ಸಂಪನ್ಮೂಲವು' ಶಿಕ್ಷಕರು ಮರುಬಳಸಲು(re-use), ಪರಿಷ್ಕರಿಸಲು (re-vise), ಮರು-ಮಿಶ್ರಣ ಮಾಡಲು (re-mix) ಮತ್ತು ಮರು ಹಂಚಿಕೆ (re-distribute) ಮಾಡು ಸಾಧ್ಯವಾಗಿಸುವ ಸಂಪನ್ಮೂಲಗಳನ್ನು ಒದಗಿಸುವ ಗುರಿ ಹೊಂದಿದೆ.
ಜಾಗತಿಕ ವಿದ್ಯುನ್ಮಾನ ಸಂಗ್ರಹಾಲಯದಿಂದ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ
ಶಿಕ್ಷಕರು ತಮ್ಮ ಆಸಕ್ತಿಯ ವಿಷಯಗಳಿಗೆ, ತಮ್ಮ ಕಂಪ್ಯೂಟರ್ನಲ್ಲಿ ಅಂತ್ರಜಾಲ ಮೂಲಕ ಹೇಗೆ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ಬಳಸಬಹುದು ಎಂಬುದನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗುತ್ತದೆ. ಜಾಗತಿಕ ವಿದ್ಯುನ್ಮಾನ ಸಂಗ್ರಹಾಲಯವಾಗಿ ಅಂತರ್ಜಾಲವು ಬಹಳಷ್ಟು ವಿಷಯಗಳೊಗೆ ಮಾಹಿತಿಯನ್ನು ಹೊಂದಿದೆ. ಇದು ನಮ್ಮ ಕಲಿಕೆಯ ಬಗೆಗಿನ ಯೋಚನೆಯನ್ನು ಹಾಗು ಕಲಿಕಾ ಕೌಶಲಗಳ ಬಗೆಗಿನ ಯೋಚನೆಯನ್ನು ಬದಲಾಯಿಸುತ್ತದೆ.
ಅಂತರ್ಜಾಲವು ನಿರಂತರವಾದ ಕಲಿಕಾ ಸಂಪನ್ಮೂಲವಾಗಿದೆ, ಇಲ್ಲಿ ಬಹಳಷ್ಟು ವಿಷಯಗಳು ಲಭ್ಯವಿವೆ. ಈ ಸಂಪನ್ಮೂಲಗಳನ್ನು ಉಪಯುಕ್ತವಾಗಿಸಲು ಇವುಗಳನ್ನು ಉತ್ತಮವಾಗಿ ನಿರ್ವಹಿಸಬೇಖು, ಈ ಸಂಪನ್ಮೂಲಗಳನ್ನು ಬೋದನೆಯಲ್ಲಿ ಅಳವಡಿಕೆಮಾಡಿಕೊಳ್ಳಲು ಸ್ಪಷ್ಟವಾದ ಘಟಕ ಯೋಜನೆಯನ್ನು ಹೊಂದಿರಬೇಕು. ಇದಕ್ಕಾಗಿ ಮಾಹಿತಿಯನ್ನು ಬಳಸುವ, ನಿರ್ವಹಿಸುವ, ಮೌಲ್ಯಮಾಪನ ಮಾಡುವ ಕೌಶಲವು ಬಹಳ ಮುಖ್ಯವಾದುದು. ಇಲ್ಲಿ ಬೊಧನೆ ಮತ್ತು ಕಲಿಕೆಗಾಗಿ ಬಹಳಷ್ಟು ಪರಿಕರಗಳು ಲಭ್ಯವಿವೆ, ಒಂದೇ ಪರಿಕರದ ಮೂಲಕ ಕಲಿಕೆ ಸಾಧ್ಯವಾಗುವುದಿಲ್ಲ, ಪರಿಕರಗಳು ಮತ್ತು ಸಾಮಗ್ರಿಗಳ ಸಂಗ್ರಹಾಲಯವನ್ನು ನಾವು ಬಳಸಬೇಕು.
ಅಂತರ್ಜಾಲದಲ್ಲಿ ಮಾಹಿತಿಯನ್ನು ವಿವಿಧ ರೀತಿಯಲ್ಲಿ ಹುಡುಕಬಹುದು. ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕುವುದು ಹೇಗೆ ಎಂಬುದನ್ನು ನಾವು ತಿಳಿಸಿದಿರಬೇಕು. ಮಾಹಿತಿಯ ಮೂಲ, ಸಂಪನ್ಮೂಲವು ಉಚಿತವಾಗಿ ಲಭ್ಯವಿದ್ದರೂ ಸಹ ಮಾಹಿತಿಯ ಮೂಲವನ್ನು ನಮೂದಿಸಬೇಕು. ಅಂತರ್ಜಾಲದಲ್ಲಿ ಸಂಪನ್ಮೂಲಗಳು ವಿವಿಧ ನಮೂನೆಯಲ್ಲಿ ಲಭ್ಯವಿರುತ್ತವೆ -ಚಿತ್ರಗಳು, ವೀಡಿಯೋ ಮತ್ತು ಆಡಿಯೋ ಇತ್ಯಾದಿ. ಅಂತರ್ಜಾಲದಲ್ಲಿ ವೀಡಿಯೋ, ಆಡಿಯೋ ಹಾಗು ಇತರೇ ಸಂಪನ್ಮೂಲಗಳನ್ನು ಬಳಸುವಾಗ ಅಂತರ್ಜಾಲ ಸುರಕ್ಷತೆಯ ಬಗ್ಗೆ ಅರಿವು ಹೊಂದಿರಬೇಕು. ಈಗಾಗಲೇ ನಮಗೆ ತಿಳಿದಿರುವಂತೆ, ಪ್ರತಿಯೊಂದು ವೆಬ್ಸೈಟ್ ಸಹ ಅಂತರ್ಜಾಲದ ಒಂದು ಪುಟವಾಗಿರುತ್ತದೆ ಹಾಗು ವಿಳಾಸವನ್ನು ಹೊಂದಿರುತ್ತದೆ. ಈ ವಿಳಾಸದ ಕೊಂಡಿಯನ್ನು ನಾವು ಕಾಪಿ ಮಾಡಿಕೊಳ್ಳಲೂಬಹುದು.ಸರ್ಚ್ ಎಂಜಿನ್ ಮೂಲಕ ಮಾಹಿತಿಯನ್ನು ಹುಡುಕಬಹುದು.
ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯದ ಉದ್ದೇಶಗಳು
ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯವು ನಿಮ್ಮ ಆಸಕ್ತಿಯ ವಿವಿಧ ವಿಷಯಗಳಿಗೆ ಮಾಹಿತಿಯನ್ನು ಸಂಗ್ರಹಿಸುವುದಾಗಿದೆ. ಇಲ್ಲಿ ವೈಯುಕ್ತಿಕವೆಂದರೆ, ಇದು ನಿಮ್ಮ ಕಂಪ್ಯೂಟರ್ನಲ್ಲಿ ಲಭ್ಯವಿದೆ ಎಂದು ಅರ್ಥ.ವಿದ್ಯುನ್ಮಾನ ವೆಂದರೆ ಇದು ವಿದ್ಯುನ್ಮಾನ ನಮೂನೆಯಲ್ಲಿ ಲಭ್ಯವಿದೆ, ಹಾಗು ಈ ಮೂಲಕ ಪರಿಷ್ಕರಿಸಲು, ಸಂಗ್ರಹಿಸಲು ಹಾಗು ಹಂಚಿಕೊಳ್ಳಲು ಸುಲಭವಾಗಿರುತ್ತದೆ. ಮುಖ್ಯವಾಗಿ ಇದು ಸಂಗ್ರಹಾಲಯವಾಗಿರುತ್ತದೆ. ಇದರ್ಥ ವಿದ್ಯುನ್ಮಾನ ಸಂಪನ್ಮೂಲಗಳು ವ್ಯವಸ್ಥಿತವಾಗಿ ನಿರ್ವಹಿಸಲ್ಪಟ್ಟಿರುತ್ತವೆ ಹಾಗು ಬೇಕಾದಾಗ ಸುಲಭವಾಗಿ ಬಳಸಬಹುದಾಗಿರುತ್ತದೆ.
ಅಂತರ್ಜಾಲದಲ್ಲಿ ಮಾಹಿತಿ ಹುಡುಕುವುದು ಹೇಗೆ- ಪಠ್ಯ, ಚಿತ್ರ, ಆಡಿಯೋ ಹಾಗು ವೀಡಿಯೋ ಸಂಪನ್ಮೂಲ
ಪಠ್ಯ ಸಂಪನ್ಮೂಲ ಹುಡುಕುವುದು
ಅಂತರ್ಜಾಲವು ಮುಕ್ತ ಪಠ್ಯ ಸಂಪನ್ಮೂಲದ ಶ್ರೀಮಂತ ಮೂಲವಾಗಿದೆ. ಮುಕ್ತಶೈಕ್ಷಣಿಕ ಸಂಪನ್ಮೂಲಗಳನ್ನು ಬಳಸುವುದು ಸೂಕ್ತ, ಏಕೆಂದರೆ ವೈಯುಕ್ತಿಕ ಸಂಗ್ರಹಾಲಯ ರಚನೆಯಲ್ಲಿ ಬಳಕೆಗೆ ಅನುಮತಿಯಿಲ್ಲದ ವಿಷಯಗಳನ್ನು ಬಳಸಬಾರದು. ನಿಮಗೆ ಪರಿಚಿತವಿರುವ ಮುಕ್ತ ಶೈಕ್ಷಣಿಕ ಸಂಗ್ರಹಾಲಯಗಳನ್ನು ನೋಡಬಹುದು ಅಥವಾ ಅಂತರ್ಜಾಲದಲ್ಲಿ ಹುಡುಕಬಹುದು. ಪಠ್ಯ ಸಂಗ್ರಹಾಲಯದಲ್ಲಿ ಹುಡುಕುವುದು ಈಗಾಗಲೇ ಲಭ್ಯವಿರುವ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ಹುಡುಕುವ ವಿಧಾನವಾಗಿದೆ. ತುಂಬಾ ಪ್ರಮುಖವಾದ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಸಂಗ್ರಹಾಲಯಗಳೆಂದರೆ, ಎನ್ಸೈಕ್ಲೋಪೀಡಿಯಾ, ವಿಕಿಪೀಡಿಯಾ. ವಿಕಿಪೀಡಿಯಾದಲ್ಲಿ ನಿಮ್ಮ ವಿಷವನ್ನು ಸರ್ಚ್ಬಾರ್ನಲ್ಲಿ ನಮೂದಿಸುವ ಮೂಲಕ ಸಂಪನ್ಮೂಲ ಹುಡುಕಬಹುದು.
ವಿಕಿಪೀಡಿಯಾ ವು ನೂರಕ್ಕೂ ಹಚ್ಚು ಭಾಷೆಗಳಲ್ಲಿ ಲಭ್ಯವಿದೆ. ಇದರಿಂದ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ತೆಲುಗು ಮತ್ತು ಉರ್ದು ಭಾಷೆಯಲ್ಲಿಯೂ ಹುಡುಕಬಹುದು.
ಇತರೆ ಪ್ರಮುಖ ಮುಕ್ತ ಶೈಕ್ಷಣಿಕ ಸಂಪನ್ಮೂಲ ವೆಬ್ಸೈಟ್ಗಳೆಂದರೆ, http://www.wikieducator.org, https://oercommons.org. ಮುಕ್ತ ಶೈಕ್ಷಣಿಕ ಸಂಪನ್ಮೂಲ ವೆಬ್ಸೈಟ್ಗಳ ಪಟ್ಟಿಯು http://www.searchoer.com/list-of-oer.html ನಲ್ಲಿ ಲಭ್ಯವಿದೆ.
ಇದರ ಜೊತೆಗೆ ಮಾಹಿತಿ ಹುಡುಕಲು ಗೂಗಲ್ ಸರ್ಚ್, ಡಕ್ಡಕ್ಗೋ ಸರ್ಚ್ ಎಂಜಿನ್ಗಳನ್ನು ಸಹ ನೀವು ಬಳಸಬಹುದು. ಈ ಸರ್ಚ್ ಎಂಜಿನ್ಗಳು ನಿಮ್ಮ ವಿಷಯದ ಬಗೆಗಿನ ವೆಬ್ಪುಟಗಳನ್ನು ಒದಗಿಸುತ್ತದೆ. ಈ ವೆಬ್ಪುಟಗಳು ಮುಕ್ತ ಸಂಪನ್ಮೂಲಗಳು ಆಗಿರುತ್ತವೆ ಹಾಗು ಇದಕ್ಕೆ ವಿರುದ್ದವಾದವು ಆಗಿರುತ್ತವೆ. ಬಳಸುವ ಮುನ್ನ ಇವು ಮುಕ್ತ ಸಂಪನ್ಮೂಲಗಳೇ ಎಂಬುದನ್ನು ನೀವು ಪರಿಶೀಲಿಸಬೇಕು.
ಚಿತ್ರ ಸಂಪನ್ಮೂಲಗಳನ್ನು ಹುಡುಕುವುದು
ವಿಕಿಪೀಡಿಯಾವು ಪ್ರಮುಖ ಮುಕ್ತ ಪಠ್ಯ ಸಂಪನ್ಮೂಲ ಸಂಗ್ರಹಾಲಯವಾಗಿರುವಂತೆ ವಿಕಿಮೀಡಿಯಾ ಕಾಮನ್ಸ್ ಎಂಬುದು ಬಹುಮಾಧ್ಯಮ ಸಂಪನ್ಮೂಲ ಸಂಗ್ರಹಾಲಯವಾಗಿದೆ ( ಆಡಿಯೋ, ವೀಡಿಯೋ ಮತ್ತು ಚಿತ್ರ). ವಿಕಿಮೀಡಿಯಾ ಕಾಮನ್ಸ್ ಪುಟದಲ್ಲಿ ನಿಮ್ಮ ವಿಷಯದ ಮೇಲೆ ಹುಡುಕಬಹುದು. ಪ್ಲಿಕರ್ ಎಂಬದು ಸಹ ಮತ್ತೊಂದು ಮುಕ್ತ ಚಿತ್ರ ಸಂಪನ್ಮೂಲ ಸಂಗ್ರಹಾಲಯವಾಗಿದೆ. ಚಿತ್ರ ಸಂಪನ್ಮೂಲಗಳಿಗಾಗಿ ಗೂಗಲ್ ಸರ್ಚ್, ಡಕ್ಡಕ್ಗೋ ಸರ್ಚ್ ಎಂಜಿನ್ಗಳನ್ನು ಸಹ ನೀವು ಬಳಸಬಹುದು.ಪಠ್ಯ ಸಂಪನ್ಮೂಲಗಳಂತೆಯೇ, ಮುಕ್ತವಾಗಿ ಲಭ್ಯವಿರುವ ಚಿತ್ರಗಳನ್ನು ಮಾತ್ರವೇ ನೀವು ಬಳಸಬೇಕು.
ಆಡಿಯೋ ಸಂಪನ್ಮೂಲಗಳನ್ನು ಹುಡುಕುವುದು
Freesound ಮತ್ತು and Soundcloud ಗಳು ಆಡಿಯೋ ಸಂಗ್ರಹಾಲಯಗಳಾಗಿವೆ. ಆಡಿಯೋ ಸಂಪನ್ಮೂಲಗಳಿಗಾಗಿ ಗೂಗಲ್ ಸರ್ಚ್, ಡಕ್ಡಕ್ಗೋ ಸರ್ಚ್ ಎಂಜಿನ್ಗಳನ್ನು ಸಹ ನೀವು ಬಳಸಬಹುದು.
ವೀಡಿಯೋ ಸಂಪನ್ಮೂಲಗಳನ್ನು ಹುಡುಕುವುದು
ಯೂಟ್ಯೂಬ್ ಪ್ರಮುಖವಾದ ವೀಡಿಯೋ ಸಂಗ್ರಹಾಲಯವಾಗಿದೆ. ಇದು ಸಹ ಮುಕ್ತವಾದ ಹಾಗು ಮುಕ್ತವಲ್ಲದ ವೀಡಿಯೋ ಸಂಪನ್ಮೂಲಗಳನ್ನು ಹೊಂದಿರುತ್ತದೆ. ಇದು ಜಗತ್ತಿನಲ್ಲಿ ಅತಿ ಹೆಚ್ಚು ವೀಡಿಯೋಗಳನ್ನು ಹೊಂದಿರುವ ಸಂಗ್ರಹಾಲಯವಾಗಿದೆ. ಈ ವೀಡಿಯೋ ಡೌನ್ಲೋಡ್ಗೆ ಒಳಪಟ್ಟಿದಲ್ಲಿ ನಿಮಗೆ ಡೌನ್ಲೋಡ್ ಆಯ್ಕೆ ಕಾಣುತ್ತದೆ. ಯೂಟ್ಯೂಬ್ನಲ್ಲಿ ನೀವು ವೀಡಿಯೋಗಳನ್ನು ಹುಡುಕಬಹುದು. ನೀವು ಹುಡುಕುವಾಗ ಆಯಾ ವಿಷಯದ ವೀಡಿಯೋಗಳ ಆಯಾ When you search, all videos will be listed. Right click on any link and click on "download as". # It will save in downloads folder; you can copy and paste into your folder
Vimeo and Wikimedia are also audio and video repositories. A google search on ‘OER Videos’ will also give you a list of sites to explore. In the search engine, you would need to specify "videos" as a filter for search results. You cannot insert videos into a text document, so inserting the link to the file, will provide the information to play the video.
How to evaluate an Internet resource
There are a few things you must check when we look at the usefulness of the information on any website.
- ವೆಬ್ ತಾಣದ ಮೂಲ: ವೆಬ್ ತಾಣಮೂಲವನ್ನು ತಿಳಿಯುವುದು ಬಹಳ ಮುಖ್ಯ, ವಿಷಯಗಳನ್ನು ಹುಡುಕುವಲ್ಲಿ ನಮಗೆ ಅನೇಕ ರೀತಿಯಲ್ಲಿ ನಮಗೆ ಸಹಾಯ ಮಾಡುತ್ತದೆ ಮತ್ತು ವಿವಿಧ ದೃಷ್ಠಿಕೋನವನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ.
- ಬಹುಸಂಖ್ಯಾ ವೆಬ್ ತಾಣಗಳ ಬಳಕೆ: ಒಂದು ವೆಬ್ ಪುಟ ಕೇವಲ ಒಂದು ಮಾದರಿಯ ಮಾಹಿತಿಯನ್ನು ನೀಡುತ್ತದೆ, ಒಂದಕ್ಕಿಂತ ಹೆಚ್ಚು ವೆಬ್ ತಾಣಗ ಳನ್ನು ಬಳಸುವುದರಿಂದ ನಿಮಗೆ ವಿವಿಧ ದೃಷ್ಠಿಕೋನಗಳನ್ನು ಬೆಳೆಸುತ್ತದೆ, ನೀವು ಒಂದಕ್ಕೊಂದು ಪರಿಶೀಲನೆ ಮತ್ತು ಅದರಲ್ಲಿನ ದೋಷಗಳನ್ನು ಗುರುತಿಸಬಹುದು.
- ಪ್ರಸ್ತುತತೆ: ಸಾಮನ್ಯ ವಾಗಿ ವಿಷಯಗಳನ್ನು ಹುಡುಕುವಾಗ ನಮಗೆ ಒಂದು ಪುಟ ಬರುತ್ತದೆ ಮತ್ತು ನಾವು ಅದನ್ನು ಬೇರೆಯವರಿಗೆ ಹಂಚಿಕೆ ಮಾಡುತ್ತವೆ , ಆದರೆ ಆ ಪುಟ ದಲ್ಲಿನ ವಿಷಯವನ್ನು ಓದುವುದು (ಕನಿಷ್ಠ ತ್ವರಿತವಾಗಿ) ಮುಖ್ಯ ಎಂದು ತಿಳಿಯುವುದು.ಇದು ಹುಡುಕಾಟದ ಕಾರ್ಯಾನಿರ್ವಹಣೆಯನ್ನು ತಿಳಿಸುತ್ತದೆ. ಯಾವುದೇ ವೆಬ್ ಪುಟ ಕೀ ಪದ ಹೊಂದಿರುತ್ತದೆ( ಟ್ಯಾಗ ಗಳು ಎನ್ನುವರು) ಕೆಲವು ಸಮಯ ಕೀ ಪದಗಳನ್ನು ನೀಡಿರುತ್ತಾರೆ(ಇದು ವಿಷಯವನ್ನು ಸಂಬಂಧಿಸಿರುತ್ತದೆ) ಇವು ವಿಷಯವನ್ನು ಸಂಕ್ಷೀಪ್ತವಾಗಿ ವಿವರಣೆಯನ್ನು ನೀಡುತ್ತವೆ. ಪ್ರಸ್ತುತತೆಯನ್ನು ವಿಂಗಡಿಸುವುದು ಬಹಳ ಮುಖ್ಯವಾಗಿದೆ, ಮಾಹಿತಿ ಬಳಕೆ ಬಹಳ ಸಂದರ್ಭೋಚಿವಾಗಿರುತ್ತದೆ. , ಒಂದು ವೆಬ್ ಪುಟ ಮಳೆಯ ಬಗ್ಗೆ ಬರೆದು ಮತ್ತು ಅದು ಜನರ ಜೀವನ ಶೈಲಿ ಮತ್ತು ವಿವಿಧ ಸ್ಥಳಗಳಲ್ಲಿ ವಿವಿಧ ಬೆಳೆಯುವ ಬೆಳೆಗಳ ಬಗ್ಗೆ ಹೇಳುತ್ತದೆ. ನಾವು ಅದನ್ನು ಎಷ್ಟರ ಮಟ್ಟಿಗೆ ನಮಗೆ ಉಪಯುಕ್ತವಾಗಿದೆ ಎಂದು ನೋಡಬೇಕು. ಮಾಹಿತಿಯನ್ನು ನೀಡಿದ ಸಮಯಕ್ಕೆ ಅದರ ಪ್ರಸ್ತುತತೆಯನ್ನು ಗಮನಿಸಬೇಕು. ನೀಡಿದ ಮಾಹಿತಿ ಹಳೆಯದಾಗಿದ್ದರೆ, ಅದರ ನಿಖರತೆಯನ್ನು ಪರೀಕ್ಷಿಸಬೇಕು.
- ವೆಬ್ ತಾಣದ ವೈಶಿಷ್ಟ್ಯಗಳು: ವೆಬ್ ತಾಣ ಉಪಯುಕ್ತ ಹೊಂದಿದೆ ಎಂದು ನಮಗೆ ತಿಳಿಯುವುದು , ನಾವು ಎಷ್ಟು ವಿಧದಲ್ಲಿ ಮಾಹಿತಿಯನ್ನು ಬಳಕೆ ಮಾಡುತ್ತವೆ ಮತ್ತು ನೋಡುತ್ತೇವೆ ಎಂಬುದು ಆಧಾರದ ಮೇಲೆ ಅದರ ಉಪಯುಕ್ತತೆ ತಿಳಿಯುತ್ತದೆ, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಬಳಸಬಹುದು?
ಮಾಹಿತಿಯನ್ನು ಹುಡುಕುವುದು ಹೇಗೆ
ಎರಡನೇ ಅಂಶ ವೆಬ್ ತಾಣಗಳನ್ನು ಬಳಸಿಕೊಂಡು ನಾವು ಮಾಹಿತಿಯನ್ನು ಹೇಗೆ ಹುಡುಕುತ್ತೇವೆ ಎಂಬುದಕ್ಕೆ ಸಂಬಂಧಿಸಿದೆ. ನಾವು ಬಳಸುವ ಪದಗಳು, ನುಡಿಗಟ್ಟು , ಹುಡುಕಾಟದ ಪ್ರಶ್ನೆಗಳು ಫಲಿತಾಂಶದ ಗುಣಮಟ್ಟವನ್ನು ನಿರ್ಧರಿಸುವ ಪ್ರಮುಖ ಲಕ್ಷಣಗಳಾಗಿವೆ. ಉದಾಹರಣೆಗೆ ಈ ವಿವಿಧ ಹುಡುಕಾಟಗಳನ್ನು ಪ್ರಯತ್ನಿಸಿ. ಜಿರಾಫೆ, ಜಿರಾಫೆ ವಿಕಾಸ ಮತ್ತು ಬೆಳವಣಿಗೆ . ಈ ರೀತಿ ಹುಡುಕಿದಾಗ ಬರುವ ಎಲ್ಲಾ ಬೇರೆ ಬೇರೆ ಪುಟಗಳು ಸಹ ವಿಭಿನ್ನವಾಗಿರುವುದನ್ನು ಗಮನಿಸಬಹುದು. ಸಂಪನ್ಮೂಲ ಹುಡುಕುವಾಗ ಅದರ ಅಗತ್ಯವೇನು ಬಳಕೆದಾರರು ಯಾರು? ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಯಾವ ರೀತಿಯ ಫಲಿತಾಂಶವನ್ನು ನೋಡುತ್ತೇವೆ ಹಾಗು ಅದರ ಪ್ರಸ್ತುತತೆ ಏನು ಎಂಬುದನ್ನು ನಾವು ಯಾವ ಪದಗಳ ಮೂಲಕ ಹುಡುಕುತ್ತೇವೆಯೋ ಅದು ನಿರ್ಧರಿಸುತ್ತದೆ.
ವೆಬ್ ತಾಣಗಳ ಮೌಲ್ಯಮಾಪನ ಪರಿಶೀಲನಾಪಟ್ಟಿ
ವೆಬ್ಸೈಟ್ನ್ನು ಮೌಲ್ಯಮಾಪನ ಮಾಡಲು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಬೇಕು.
- ಯಾರ ವೆಬ್ ತಾಣ? ( ಪ್ರತಿ ವೆಬ್ಪುಟದಲ್ಲಿನ "About us" ಮೇಲೆ ಒತ್ತುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು).
- ಯಾವ ರೀತಿಯ ವೆಬ್ ಸೈಟ್ : ವಾಣಿಜ್ಯ, ಶೈಕ್ಷಣಿಕ, ಇತ್ಯಾದಿ .ಶೈಕ್ಷಣಿಕ ಪುಟಗಳು ಅಥವಾ ವಾಣಿಜ್ಯವಲ್ಲದ ಪುಟಗಳು ಹೆಚ್ಚು ಸೂಕ್ತ.
- ಯಾವ ರೀತಿಯ ಸಂಪನ್ಮೂಲಗಳು ? ಯಾವಾಗಲೂ ಒಂದಕ್ಕಿಂತ ಹೆಚ್ಚು ವೆಬ್ ತಾಣ ಪರಿಶೀಲಿಸಿ ವಿಶ್ವಾಸಾರ್ಹ ಮಾಹಿತಿ ಯನ್ನು ಪರೀಕ್ಷಿಸಿ.
- ಇದು ಚರ್ಚೆಗಾಗಿ ಅನುಮತಿಸುತ್ತದೆಯೆ?
- ಇದು ವ್ಯವಹಾರ ಮಾಡಲು ಸಾಧ್ಯವಿದೇಯಾ ಇ ಕಾಮರ್ಸ್ ವೆಬ್ ತಾಣ ಮುಂತಾದ ವು .
- ಸಂಚರಿಸಲು ಸುಲಭ ವಾಗಿದೇಯಾ ?
- ಉಚಿತ / ಪಾವತಿಸಿದ / ಚಂದಾದಾರಿಕೆ
- ಹಕ್ಕುಸ್ವಾಮ್ಯ (ಕಾಪಿರೈಟ್ಸ್)
- ಸಂಚರಣೆ ಆಂತರಿಕ ಮತ್ತು ಬಾಹ್ಯ ವೆಬ್ ಕೊಂಡಿಗಳು
- ವೆಬ್ ತಾಣ ಸಂಪರ್ಕಿಸುವುದು ಹೇಗೆ ?
ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದ ಸಂಪನ್ಮೂಲಗಳು
ಈ ಮೇಲಿನ ಅಂಶಗಳ ಜೊತೆಗೆ ಇವುಗಳನ್ನು ಸಹ ಪರಿಗಣಿಸಬೇಕು
- ವೆಬ್ ಸೈಟ್ ಬಗ್ಗೆ ಮಾಹಿತಿ ?
- ಮಾಹಿತಿ ಯಾವಾಗಲೂ ವಿಶ್ವಾಸಾರ್ಹ ಒಂದಕ್ಕಿಂತ ಹೆಚ್ಚು ವೆಬ್ ತಾಣ ಪರಿಶೀಲಿಸಿ
- ಯಾರು ಮಾಡಿದರು?
- ಏನನ್ನು ಇದು ಹೊಂದಿದೆ?
- ಇದು ಶಿಕ್ಷಕರಿಗಾ ?
- ಅಥವಾ ಮಕ್ಕಳಿಗಾ ?
- ತರಗತಿಯಲ್ಲಿ ಹೇಗೆ ಬಳಸುವುದು?
Steps in creating a personal resource folder
There are several steps in creating a resource folder. The specific technology actions for each of these steps, is available under the relevant application in the Explore an application page. ೧. ಪ್ರತಿ ವಿಷಯ ಕ್ಕೂ ಕಂಪ್ಯೂಟರ್ ನಲ್ಲಿ ಒಂದು ಫೋಲ್ಡರ್ ಮಾಡಿ . ೨. ಅಂತರ್ಜಾಲ ಪ್ರವೇಶ ಸಂಬಂಧಿತ ಸಂಪನ್ಮೂಲಗಳು ೩. ಪುಟವನ್ನು ಉಳಿಸಿ ,ಚಿತ್ರಗಳು , ವೀಡಿಯೊಗಳು ೪. ದಾಖಲೆ ಗಳನ್ನು( ಡಾಕ್ಯುಮೆಂಟ) ಸೇರಿಸಿ ೫.ದಾಖಲೆ ಗಳನ್ನು (ಡಾಕ್ಯುಮೆಂಟ) ಕೊಂಡಿಗಳನ್ನು ಸೇರಿಸಿ. ೬.ದಾಖಲೆ ಗಳ (ಡಾಕ್ಯುಮೆಂಟ) ಸ್ವರೂಪ ವನ್ನು ಮಾಡುವುದು.
- Make a folder on the computer by topic
- Create a 'meta' document which will provide your thoughts on the topic and link the resources you have collected to these thoughts
- Access relevant resources from Internet
- Save pages, images, videos
- Insert into document
- Copy links of the resources you find useful, and which you would like to refer to in your document
- Paste / insert links into document
- Add your own comments, suggestions in the meta document, and connect the resources accessed and shared, with your ideas to create a resource document on the selected topic.
- Format the document
Personal Digital Library
The set of resources downloaded in your folders for the given topic, along with your 'meta document' constitutes your personal digital library for the topic. You can build such libraries on any topic you are interested in, and build your own knowledge in a structured manner. Since the internet has resources on almost all topics, you have an opportunity to keep learning, that too on topics of your interest. The topic or area need not be only one of theoretical interest or only to build your knowledge. You can also work on building skills since there are likely to be videos available for helping you learn a new language, or even a skill like swimming. You can also share this personal digital library with your colleagues so that they can also benefit. When teachers share their personal digital libraries / resources from their library with their colleagues, cumulatively, it creates a resource rich environment. Try creating a personal digital library on a topic or issue you have always wanted to learn about.
Contributing to the Global Digital Library
You can register on Wikipedia. Create articles in Telugu (http://te.wikipedia.org) and add to existing articles. This will be a valuable contribution to OERs in your language. (You can also do this for Urdu, English, Hindi or any of the Indian languages) as well. You can also register on the TROER and contribute resources. You should also, as a matter of habit, release the resources created by you as OER, by sharing it in the Subject Teacher Forums, or publishing on the internet on the OER repositories mentioned in this chapter.