ಚಿಗುರು ೧೫- ನನ್ನ ಇಂದು ಬದಲಾಗಲಿ ಮುಂದು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಾರಾಂಶ

ಕಿಶೋರಿಯರು ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಈ ವಾರದ ಮಾಡ್ಯೂಲ್‌ನ ಸಮಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಇರುವುದರಿಂದ, ಕಿಶೋರಿಯರಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಅವರು ಎಲ್ಲ ಮಹಿಳೆಯರಿಗೂ ಏನನ್ನು ಆಶಿಸುತ್ತಾರೆ ಹಾಗು ಏನು ಬದಲಾದರೆ ಮಹಿಳೆಯರಿಗೆ ಒಳ್ಳೆಯದು ಉತ್ತಮ ಎಂದು ಅವರಿಗೆ ಅನಿಸುತ್ತದೆ ಎಂದು ಬರೆಯುತ್ತಾರೆ. ಇದರ ಜೊತೆಗೆ ಅವರು ಈ ವರ್ಷ ಶಾಲಾ ಗೈರು ಹಾಜರಿಗೆ ಕಾರಣಗಳನ್ನು ಕೂಡ ಬರೆಯುತ್ತಾರೆ.

ಫೆಸಿಲಿಟೇಟರ್‌: ಅಪರ್ಣ,

ಕೊ-ಫೆಸಿಲಿಟೇಟರ್‌ಗಳು: ಅನುಷಾ,  ಕಾರ್ತಿಕ್‌

ಊಹೆಗಳು

1. ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.

2. ಇತ್ತೀಚೆಗೆ ಹಲವರು ಶಾಲೆಗೆ ಗೈರು ಹಾಜರಾಗುವುದು ಹೆಚ್ಚಾಗಿದೆ.

3. ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ.

4. ದಿನೇ ದಿನೇ‌ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.

5. ಗುಂಪುಗಳನ್ನು ನಿಯಂತ್ರಿಸುವ ಕಿಶೋರಿಯರಿದ್ದಾರೆ, ಅವರು ಬೇರೆ ಕಿಶೋರಿಯನ್ನು ಭಾಗವಹಿಸಲು ಬಿಡುತ್ತಿಲ್ಲ. ಅವರನ್ನು ಗಮನಿಸಬೇಕಿದೆ.

6. ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಿಕ್ಷಕರು ಪಾಠಗಳನ್ನು ಮುಗಿಸಲು ನಮಗೆ ನಿಗದಿ ಪಡಿಸಿದ ತರಗತಿಗಳನ್ನು ಉಪಯೋಗಿಸಿಕೊಳ್ಳಬಹುದು. ಇದರಿಂದ ನಮಗೆ ಕಡಿಮೆ ಸಮಯ ಸಿಗಬಹುದು.

ಉದ್ದೇಶ

ಹೊಸ ಹೆಜ್ಜೆ ಹೊಸ ದಿಶೆಯಲ್ಲಿ ಇದುವರೆಗೂ ಆದ ಕಲಿಕೆಯನ್ನು ಪ್ರತಿಬಿಂಬಿಸುವಂತೆ ಮಹಿಳಾ ದಿನಾಚರಣೆಯ ಆಶಯಗಳನ್ನು ವ್ಯಕ್ತಪಡಿಸುವಂತೆ ಮಾಡುವುದು.

ಪ್ರಕ್ರಿಯೆ

ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕರ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು. (೧೦ ನಿಮಿಷ)

ಮಹಿಳಾ ದಿನಾಚರಣೆಯ ಬಗ್ಗೆ ಫೆಸಿಲಿಟೇಟರ್‌ ಮಾತನಾಡುತ್ತಾರೆ.

ಇದಾದ ನಂತರ ಪ್ರತಿ ಕಿಶೋರಿಗೂ ಒಂದೊಂದು ಪೋಸ್ಟ್‌ ಕಾರ್ಡ್‌ಗಳನ್ನು ಕೊಡುವುದು. ಅದರಲ್ಲಿ ಮಹಿಳಾ ದಿನಾಚರೆಣೆಯ ಅಂಗವಾಗಿ ಅವರು ಮಹಿಳೆಯರಿಗಾಗಿ ಏನನ್ನು ಆಶಿಸುತ್ತಾರೆ ಅಥವಾ ಏನು ಬದಲಾದರೆ ಅವರಿಗೆ ಉತ್ತಮ ಎಂದು ಬರೆಯಲು ಹೇಳುವುದು. (೨೦ ನಿಮಿಷ)

ಎಲ್ಲರೂ ಬರೆದಾದ ನಂತರ ಅವರಿಗೆ ಹಾಳೆಗಳನ್ನು ಕೊಟ್ಟು ಅವರು ಈ ಶೈಕ್ಷಣಿಕ ವರ್ಷದಲ್ಲಿ ಅವರು ಯಾವ ಯಾವ ಕಾರಣಕ್ಕೆ ಶಾಲೆಗೆ ಗೈರು ಹಾಜರಾಗಿದ್ದಾರೆ ಎಂದು ಬರೆಯಲು ಹೇಳುವುದು. (೨೦ ನಿಮಿಷ)

ಎರಡೂ ಚಟುವಟಿಕೆಗಳು ಮುಗಿದ ನಂತರ ನಮ್ಮ ಮಾತುಕಥೆಯನ್ನು ಮುಗಿಸುವುದು.

ಬೇಕಾದ ಸಂಪನ್ಮೂಲಗಳು

• ಕ್ಯಾಮೆರಾ ಹಾಗು ಟ್ರೈಪಾಡ್‌ - ೧

• ಪೊಸ್ಟ್‌ ಕಾರ್ಡ್‌ಗಳು - ೨೯

• A4 ಹಾಳೆಗಳು – ೨೯

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು

ಒಬ್ಬ ಮುಖ್ಯ ಫೆಸಿಲಿಟೇಟರ್‌, ಇಬ್ಬರು ಸಹಾಯಕ ಫೆಸಿಲಿಟೇಟರ್‌ಗಳು

ಒಟ್ಟು ಸಮಯ

೫೦ ನಿಮಿಷ

ಇನ್‌ಪುಟ್‌ಗಳು

ಔಟ್‌ಪುಟ್‌ಗಳು

  • ಕಿಶೋರಿಯರು ಬರೆದ ಮಹಿಳಾ ದಿನಾಚರೆಣೆಯ ಆಶಯಗಳು
  • ಕಿಶೋರಿಯರು ಬರೆದ ಗೈರು ಹಾಜರಿಯ ಕಾರಣಗಳು