ಕೋನಗಳ ವಿಧಗಳು
ಬದಲಾವಣೆ ೧೯:೨೮, ೮ ಸೆಪ್ಟೆಂಬರ್ ೨೦೨೦ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (→ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ)
ನಾವು ಈ ಕೆಳಗಿನ ಕೋನಗಳ ವಿಧಾನಗಳನ್ನು ಕಲಿಯುತ್ತೇವೆ: ಲಂಬ ಕೋನಗಳು, ಲಘು ಕೋನಗಳು,ಅಧಿಕ ಕೋನಗಳು, ಸರಳ ಕೋನಗಳು, ಸರಳಾಧಿಕ/ವಿಶಾಲ ಕೋನಗಳು ಮತ್ತು ಪೂರ್ಣ ಕೋನ.
ಉದ್ದೇಶಗಳು
- ಮಕ್ಕಳನ್ನು ವಿವಿಧ ರೀತಿಯ ಕೋನಗಳಿಗೆ ಪರಿಚಯಿಸಿ
ಅಂದಾಜು ಸಮಯ
೩೦ ನಿಮಿಷಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ : "ಕೋನಗಳ ವಿಧಗಳು "
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಸ್ಥಿರವಾದ ಬಿಂದುವಿನ ಸುತ್ತಲು ಎರಡು ದಾರ ಅಥವಾ ಕಡ್ಡಿಗಳನ್ನು ಬಳಸಬಹುದು ಅಥವಾ ದಾರದಿಂದ ಕಟ್ಟಿದ ಎರಡು ಕಡ್ಡಿಗಳನ್ನು ಬಳಸಬಹುದು).
- ರೂಪುಗೊಂಡ ವಿಭಿನ್ನ ಕೋನಗಳನ್ನು ತೋರಿಸಲು ಜಾರುಕವನ್ನು ಬದಲಿಸಿ.
- ಬಾಹುಗಳ ನಿಲುವಿನ ಬದಲಾವಣೆಯೊಂದಿಗೆ ಏನು ಗಮನಿಸಲಾಗಿದೆ
- ಅವುಗಳ ಅಳತೆಗಳನ್ನು ಅವಲಂಬಿಸಿದ ಕೋನಗಳ ವಿಧಾನಗಳನ್ನು ಉಲ್ಲೇಖಿಸಿ
- ಬಾಹುವಿನ ಉದ್ದದಲ್ಲಿನ ಬದಲಾವಣೆಯು ಕೋನದ ಅಳತೆಯನ್ನು ಹೇಗೆ ಬದಲಾಯಿಸುತ್ತದೆ
- ರೂಪುಗೊಂಡ ಕೋನವು ಬಾಹುವಿನ ಉದ್ದದಿಂದ ಸ್ವತಂತ್ರವಾಗಿದೆ/ಸ್ವಾವಲಂಬಿಯಾಗಿದೆ ಎಂದು ತೋರಿಸಲು ಬಾಹುವಿನ ಉದ್ದವನ್ನು ಬದಲಿಸಿ
- ಬಾಹುವಿನ ಉದ್ದಗಳ ಮೌಲ್ಯಗಳು , ಕೋನಗಳ ಮೌಲ್ಯಗಳು ಮತ್ತು ಅವುಗಳ ವಿಧಾನಗಳನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ