ಚೌಕವನ್ನು ರಚಿಸುವುದು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೬:೦೩, ೨೧ ಫೆಬ್ರುವರಿ ೨೦೨೨ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (added Category:ಚತುರ್ಭುಜಗಳು using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಉದ್ದೇಶಗಳು

  • ಪರಿಪೂರ್ಣ ಚೌಕದ ರಚನೆ.
  • ರಚನೆಯ ಶಿಷ್ಟಾಚಾರದಲ್ಲಿ ಚೌಕದ ಸಮವಾದ ಬಾಹುಗಳನ್ನು ಪಡೆಯಲು ಸಮ ತ್ರಿಜ್ಯ ಕಂಸಗಳನ್ನು ಬಳಸಿ.
  • ಲಂಬ ರೇಖೆಗಳನ್ನು ಬಳಸಿ ಚೌಕದ ಬಾಹುಗಳನ್ನು ಎಳೆಯಿರಿ .

ಅಂದಾಜು ಸಮಯ

40 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡಿಜಿಟಲ್ ಅಲ್ಲದ: ಪೇಪರ್, ಕೋನಮಾಪಕ, ಪೆನ್ಸಿಲ್ ಮತ್ತು ಅಳತೆಪಟ್ಟಿ

ಈ ಚಟುವಟಿಕೆಯನ್ನು ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ: http://jwilson.coe.uga.edu/EMT668/EMAT6680.2000/Mylod/Math7200/Project/Square.html

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  1. ನಿರ್ದಿಷ್ಟ ಉದ್ದದ ಚೌಕವನ್ನು ರಚಿಸಲು, ನಿರ್ದಿಷ್ಟ ಉದ್ದದ AB ರೇಖಾಖಂಡವನ್ನು ಎಳೆಯಿರಿ.
  2. A ಬಿಂದುವಿನಲ್ಲಿ AB ಲಂಬರೇಖೆಯನ್ನು ಎಳೆಯಿರಿ.
  3. AB ಯನ್ನು ತ್ರಿಜ್ಯವಾಗಿ ತೆಗೆದುಕೊಳ್ಳುವುದರಿಂದ A ಯನ್ನು ಕೇಂದ್ರವಾಗಿಟ್ಟುಕೊಂಡು ವೃತ್ತವನ್ನು ಎಳೆಯಿರಿ.
  4. ವೃತ್ತವು ಒಂದು ಬಿಂದುವಿನಲ್ಲಿ ಲಂಬರೇಖೆಯನ್ನು ಛೇದಿಸುತ್ತದೆ. ಛೇದಕ ಬಿಂದುವನ್ನು C ಎಂದು ಹೆಸರಿಸಿ.
  5. ಅದೇ ರೀತಿ C ಯಲ್ಲಿ AC ಲಂಬರೇಖೆಯನ್ನು ಎಳೆಯಿರಿ,ನೀವು ಚೌಕದ ಮೂರನೇ ಬಾಹುವನ್ನು ಪಡೆಯುತ್ತೀರಿ.
  6. ಚೌಕದ ನಾಲ್ಕನೇ ಬಾಹುವನ್ನು ಪಡೆಯಲು AB ಗೆ ಲಂಬವಾಗಿ B ಅಲ್ಲಿ ಎಳೆಯಿರಿ.
  7. ಛೇದಿಸುವ ಎರಡು ಲಂಬರೇಖೆಗಳನ್ನು D ಎಂದು ಹೆಸರಿಸಿ.
  8. ABCD ಅಗತ್ಯವಿರುವ ಚೌಕವಾಗಿದೆ.

ಅಭಿವೃದ್ಧಿ ಪ್ರಶ್ನೆಗಳು:

  1. ನೀವು ಯಾವ ಅಳತೆಗಾಗಿ ಚೌಕವನ್ನು ಎಳೆಯುತ್ತಿದ್ದೀರಿ?
  2. ಲಂಬ ರೇಖೆ ಎಂದರೇನು?
  3. ಚೌಕವನ್ನು ರಚಿಸಲು, ನಾವು ಲಂಬ ರೇಖೆಗಳನ್ನು ಏಕೆ ರಚಿಸುತ್ತಿದ್ದೇವೆ?
  4. ವೃತ್ತವನ್ನು ಎಳೆಯುವ ಉದ್ದೇಶವೇನು?
  5. ಚೌಕದ ನಾಲ್ಕನೆಯ ಶೃಂಗವನ್ನು ನಾವು ಹೇಗೆ ನಿರ್ಧರಿಸುತ್ತೇವೆ?

ಮೌಲ್ಯ ನಿರ್ಣಯ ಪ್ರಶ್ನೆಗಳು

  • ಲಂಬ ರೇಖೆಗಳು ಯಾವುವು?
  • ವೃತ್ತವನ್ನು ಏಕೆ ಎಳೆಯಲಾಗುತ್ತಿದೆ? ಇದು ಯಾವ ಉದ್ದೇಶವನ್ನು ಪರಿಹರಿಸುತ್ತದೆ?

ಪ್ರಶ್ನೆ ಕಾರ್ನರ್

  • ಕೋನಮಾಪಕ ಬಳಸದೆ ಚೌಕವನ್ನು ನಿರ್ಮಿಸಬಹುದೇ?