ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ - ಮಾಡ್ಯೂಲ್‌ಗಳು 2021-22

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಿಗುರು 0೧ - ಪರಿಚಯದ ಹೊಸ ಹೆಜ್ಜೆ

ಈ ಮಾಡ್ಯೂಲ್‌ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೦೨- ನಮ್ಮ ಸಮಸ್ಯೆಗಳು

ಹದಿಹರೆಯ ಕಿಶೋರಿಯರಲ್ಲಿ ಹಲವಾರು ಪ್ರಶ್ನೆಗಳು, ಗೊಂದಲಗಳು ಹಾಗು ಆತಂಕಗಳನ್ನು ಮೂಡಿಸಿರಬಹುದು. ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ, ಹಾಗೂ ಗುಂಪಿನ ಚರ್ಚೆಗಳ ಮೂಲಕ ಕಿಶೋರಿಯರು ಅವರ ಸವಾಲುಗಳ ಬಗ್ಗೆ ಮಾತನಾಡಿ ಹಂಚಿಕೊಂಡಾಗ ಅವು ಕೇವಲ ಅವರದ್ದೊಂದೇ ಅಲ್ಲ, ಎಲ್ಲರಿಗೂ ಒಂದೇ ತರಹದ ಸವಾಲುಗಳಿವೆ ಎಂದು ಗೊತ್ತಾಗುತ್ತವೆ. ಇದರಿಂದ ಹದಿಹರೆಯವೆಂದರೇನೆಂದು ವ್ಯಾಖ್ಯಾನಿಸಲು ಸುಲಭವಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೦೩ ನನ್‌ ನಮಸ್ಯೆ ನಮ್ಮೆಲ್ಲರ ಸಮಸ್ಯೆ

ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯಗಳು ಬರೀ ಒಬ್ಬರದ್ದೇ ಅಲ್ಲ, ಎಲ್ಲರಿಗೂ ಇದೇ ತರಹದ ಸಮಸ್ಯೆಗಳಿವೆ ಎಂದು ತಿಳಿಸಿ, ಹದಿಹರೆಯದ ವ್ಯಾಖ್ಯಾನವನ್ನು ತಿಳಿಸುವುದು. ಹೆಚ್ಚಿನ ಮಾಹಿತಿಗೆಇಲ್ಲಿ ಕ್ಲಿಕ್ಕಿಸಿ...