TIEE ಮುಖ್ಯ ಶಿಕ್ಷಕರ ಕಾರ್ಯಾಗಾರ 2023-24
ಬದಲಾವಣೆ ೧೪:೨೮, ೨೪ ಆಗಸ್ಟ್ ೨೦೨೩ ರಂತೆ Ashayogendra (ಚರ್ಚೆ | ಕಾಣಿಕೆಗಳು) ಇವರಿಂದ
ಕಾರ್ಯಾಗಾರದ ಉದ್ದೇಶಗಳು
- ಸರ್ಕಾರಿ ಶಾಲಾ ಮಖ್ಯ ಶಿಕ್ಷಕರಲ್ಲಿ ಶಾಲಾ ನಾಯಕತ್ವದ ಪರಿಕಲ್ಪನೆ ಮತ್ತು ಪ್ರಕ್ರಿಯೆ ಕುರಿತಂತೆ ಸ್ಪಷ್ಟವಾದ ಅರ್ಥವನ್ನು ಮೂಡಿಸುವುದು.
- ಸರ್ವತೋಮುಖ ಶಾಲಾ ಬೆಳವಣಿಗೆಗೆ ಪೂರಕವಾಗಿರುವ ಪದ್ಧತಿಗಳನ್ನು ಬಲಪಡಿಸುವಲ್ಲಿ ಮತ್ತು ಬಳಸುವಲ್ಲಿ ಮುಖ್ಯಶಿಕ್ಷಕರುಗಳಿಗೆ ಸಹಾಯ ಮಾಡುವುದು
- ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ವಿವಿಧ ತಂತ್ರಾಂಶಗಳನ್ನು ಹಾಗು ಸಂಪನ್ಮೂಲಗಳನ್ನು ಅನ್ವೇಷಿಸುವುದರೊಂದಿಗೆ ಪಾಲುದಾರರೊಂದಿಗಿನ ಸಹಯೋಗ ಮತ್ತು ಸಂವಹನ ಬೆಳೆಸಲು ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
- ತಮ್ಮ ಸಹುದ್ಯೋಗಿ ಶಿಕ್ಷಕರು ಟಿ.ಐ.ಇ.ಇ ಕಾರ್ಯಕ್ರಮದ ಮೂಲಕ ಸಮನ್ವಯ ಶಿಕ್ಷಣದ ವಿಧಾನಗಳನ್ನು ಬಳಸುವಂತೆ ಸಹಕರಿಸಲು ಮುಖ್ಯಶಿಕ್ಷಕರಿಗೆ ಅನುಕೂಲ ಒದಗಿಸುವುದು.
- ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕಾ ಸಮುದಾಯವನ್ನು ನಿರ್ಮಿಸಿ ಅದರ ಮೂಲಕ ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವುದು
ಮುಖ್ಯಶಿಕ್ಷಕರುಗಳ ಕಾರ್ಯಾಗಾರಗಳು - 2023
ಕಾರ್ಯಾಗಾರ 1: ಸೆಪ್ಟೆಂಬರ್ ೨, 2023
ಕಾರ್ಯಾಗಾರದ ಉದ್ದೇಶಗಳು:
- SWOT ಚೌಕಟ್ಟಿನ ಮೂಲಕ ತಮ್ಮ ಶಾಲಾ ಸಂದರ್ಭವನ್ನು ಅನ್ವೇಷಿಸಿ, ಶಾಲೆಯ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಅಪಾಯಗಳ ಸ್ಪಷ್ಟ ಅರಿವನ್ನು ಮೂಡಿಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು.
- ಟಿ.ಐ.ಇ.ಇ ಕಾರ್ಯಕ್ರಮದ ಸಮನ್ವಯ ಶಿಕ್ಷಣವನ್ನು ಬೆಂಬಲಿಸುವ ಉದ್ದೇಶವನ್ನು ಅರ್ಥ ಮಾಡಿಸುವುದು
- ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ ಪ್ರತಿಕ್ರಿಯೆಯ ಅವಕಾಶಗಳನ್ನು ಮೌಲ್ಯಮಾಪಿಸಲು ಕಾಳಜಿ ವಲಯ ಮತ್ತು ಪ್ರಭಾವ ವಲಯದ ಚೌಕಟ್ಟನ್ನು ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
- ತಮ್ಮ ಶಾಲೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯಾವುದಾದರೊಂದು 'ಪ್ರಕಲ್ಪ ಶಾಲಾ ಯೋಜನೆ'ಯನ್ನು ಗುರುತಿಸುವುದು