ಭಿನ್ನರಾಶಿಗಳ ಪರಿಚಯಿಸುವಿಕೆ
Jump to navigation
Jump to search
ಸಮ ಭಿನ್ನರಾಶಿಗಳು
ಸಮ ಭಿನ್ನರಾಶಿಯು ಪೂರ್ಣ ಭಾಗವನ್ನು ಪ್ರತಿನಿಧಿಸುವ ಒಂದು ಸಂಖ್ಯೆ. ಸಮ ಭಿನ್ನರಾಶಿಯಲ್ಲಿ ಛೇದವು ಪೂರ್ಣವನ್ನು ಎಷ್ಟು ಸಮಭಾಗಗಳಾಗಿ ವಿಭಾಗಿಸಿದೆ ಎಂಬುದನ್ನು ಸೂಚಿಸಿದರೆ, ಅಂಶವು ಅವುಗಳಲ್ಲಿ ಪರಿಗಣಿಸಿದ ಭಾಗಗಳ ಸಂಖ್ಯೆಯನ್ನು ಸೂಚಿಸುತ್ತದೆ. ಆದುದರಿಂದ ಸಮ ಭಿನ್ನರಾಶಿಯಲ್ಲಿ ಯಾವಾಗಲೂ ಅಂಶವು ಛೇದಕ್ಕಿಂತ ಚಿಕ್ಕದಾಗಿರುತ್ತದೆ.
ಉದ್ದೇಶಗಳು:
• ಭಿನ್ನರಾಶಿಗಳನ್ನು ವಿವಿಧ ರೀತಿಗಳಲ್ಲಿ ನಿರೂಪಿಸುವುದು
• ಅಂಶ, ಛೇದಗಳನ್ನು ಅರ್ಥಮಾಡಿಕೊಳ್ಳುವುದು
• ಏಕಾಂಶ ಭಿನ್ನರಾಶಿಗಳ ಅರ್ಥ, ಅವುಗಳ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು
• ಸಮ ಭಿನ್ನರಾಶಿಗಳ ಅರ್ಥ, ಅವುಗಳ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು
• ಏಕಾಂಶ ಹಾಗು ಸಮ ಭಿನ್ನರಾಶಿಗಳನ್ನು ಹೋಲಿಸುವುದು
ತರಗತಿ ಚಟುವಟಿಕೆ:
- ಮಕ್ಕಳು ಇಲ್ಲಿಯವರೆಗೆ ಭಿನ್ನರಾಷಿಗಳ ಬಗ್ಗೆ ಏನೆಲ್ಲ ಕಲಿತಿದ್ದಾರೆ ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ತರಗತಿಯನ್ನು ಪ್ರಾರಂಭಿಸಿ
- ಅಂಶ, ಛೇದ, ಭಾಗ, ಈ ಪದಗಳ ಅರ್ಥಗಳನ್ನು ಚರ್ಚಿಸಿ
- Fractions: Intro ಸಿಮ್ಯುಲೇಶನ್ನ Intro ಪರದೆಯನ್ನು ಬಳಸಿ
- ಭಿನ್ನರಾಶಿಯ ಛೇದ ಸಂಖ್ಯೆಯನ್ನು ಮಾತ್ರ ಹೆಚ್ಚಿಸುತ್ತಾ, ಮಕ್ಕಳಿಗೆ ಚಿತ್ರದಲ್ಲಿ ಏನಾಗುತ್ತಿದೇ ಎಂದು ಗಮನಿಸಲು ಹೇಳಿ (ಚಿತ್ರವನ್ನು ಸಮಭಾಗಗಳಾಗಿ ಮಾಡಲು ಹಾಕುವ ಗುರುತುಗಳು ಕಡಿಮೆಯಾಗುತ್ತಿದೆ ಹಾಗು ಬುಟ್ಟಿಯಲ್ಲಿರುವ ತುಂಡುಗಳ ಗಾತ್ರ ಕಡಿಮೆಯಾಗುತ್ತಿದೆ)
- ಮೇಲಿರುವ ಇತರ ಆಕಾರಗಳ ಬಟನ್ ಗಳನ್ನು ಸಹ ಒತ್ತಿ ಬೇರೆ ಬೇರೆ ಆಕಾರಗಳನ್ನು ಭಾಗ ಮಾಡುವ ವಿಧಾನಗಳನ್ನು ತೋರಿಸಿ
- ಮಕ್ಕಳಿಗೆ ಒಂದೆರೆಡು ಸಂಖ್ಯೆಗಳನ್ನು ಹೇಳಿ, ಬೇರೆ ಬೇರೆ ಆಕಾರಗಳನ್ನು ಆ ಸಂಖ್ಯೆಗೆ ಅನುಗುಣವಾಗಿ ಭಾಗ ಮಾಡಲು ಹೇಳಿ. ಉದಾ: 5 – ವ್ರುತ್ತ, ಆಯತ, ರೇಖಾಖಂಡ, ಸಿಲಿಂಡರ್ ಇವುಗಳನ್ನು ೫ ಸಮಭಾಗಗಳಾಗಿ ವಿಭಾಗಿಸಿ
- ಈಗ, ಸಿಮ್ಯುಲೇಶನ್ ನಲ್ಲಿ ಅಂಶದ ಸಂಖ್ಯೆಯನ್ನು 1 ಮಾಡಿ. ಇತರ ಆಕಾರಗಳಲ್ಲಿ 1 ಭಾಗ ಹೇಗೆ ಇರುತ್ತದೆ ಎಂದು ತೋರಿಸಿ.
- ಮಕ್ಕಳಿಗೆ ತಾವು 5 ವಿಭಾಗಗಳನ್ನು ಗುರುತಿಸಿರುವ ತಮ್ಮ ಚಿತ್ರದಲ್ಲಿ 1 ವಿಭಾಗವನ್ನು ಛಾಯೆಗೊಳಿಸಲು/ ಬಣ್ಣ ಹಚ್ಚಲು ಹೇಳಿ
- ಈಗ ಮಕ್ಕಳಿಗೆ ಕೆಳಗಿರುವ ಟೇಬಲ್ ಅನ್ನು ತಮ್ಮ ಪುಸ್ತಕಗಳಲ್ಲಿ ನಕಲಿ ಮಾಡಿ, ಬರ್ತಿಸಲು ಹೇಳಿ
1/2 | |||
---|---|---|---|
1/4 | |||
1/6 | |||
1/8 |
- ಮಕ್ಕಳು ಏನನ್ನು ಗಮನಿಸಿದ್ದಾರೆ ಎಂದು ಚರ್ಚಿಸಿ. ಛೇದ ಹೆಚ್ಚಾದಂತೆ ಭಾಗದ ಗಾತ್ರ ಕಡಿಮೆಯಾಗುವುದನ್ನು ಒತ್ತಾಯಿಸಿ ಹೇಳಿ
- ಈಗ ಸಿಮ್ಯುಲೇಶನ್ ನಲ್ಲಿ ಒಂದು ಛೇದಕ್ಕೆ ಅಂಶವನ್ನು / ಅಂಶದ ಸಂಖ್ಯೆಯನ್ನು ಹೆಚ್ಚಿಸಿ. ಮಕ್ಕಳು ಏನು ಗಮನಿಸುತ್ತಿದ್ದಾರೆ ಎಂದು ಪ್ರಶ್ನಿಸಿ. ಬೇರೆ ಬೇರೆ ಛೇದಗಳಿಗೆ ಇದನ್ನು ಪುನಃ ಮಾಡಿ, ಮಕ್ಕಳೊಂದಿಗೆ ಚರ್ಚಿಸಿ
- ಈಗ ಇನ್ನು ಕೆಲವು ಭಿನ್ನರಾಷಿಗಳನ್ನು ಕೊಟ್ಟು, ಮಕ್ಕಳು ತಮ್ಮ ಪುಸ್ತಕದಲ್ಲಿ ಬರೆದಿರುವ ಕೋಷ್ಟಕ/ಟೇಬಲ್ ಅನ್ನು ಪುನಃ ಬರ್ತಿ ಮಾಡಲು ಹೇಳಿ
- ಈಗ ತಾವು ಬರೆದಿರುವ ಭಿನ್ನರಾಷಿಗಳಲ್ಲಿ ಕೆಲವು ಜೋಡಿಗಳನ್ನು ಆಯ್ಕೆಮಾಡಿ, ಅವನ್ನು ಹೋಲಿಸಿದಾಗ ಯಾವುದು ದೊಡ್ಡದು ಮತ್ತು ಯಾವುದು ಚಿಕ್ಕದಾಗಿರುತ್ತದೆ ಎಂದು ಪ್ರಶ್ನಿಸಿ
- ದೊಡ್ಡದು/ಚಿಕ್ಕದನ್ನು ಹೇಗೆ ಗುರುತಿಸಬಹುದು ಎಂಬುದರ ಬಗ್ಗೆ ಚರ್ಚಿಸಿ
ಸಮ ಭಿನ್ನರಾಶಿಯಲ್ಲಿ ಛೇದವು ಪೂರ್ಣವನ್ನು ಎಷ್ಟು ಸಮಭಾಗಗಳಾಗಿ ವಿಭಾಗಿಸಿದೆ ಎಂಬುದನ್ನು ಸೂಚಿಸಿದರೆ, ಅಂಶವು ಅವುಗಳಲ್ಲಿ ಪರಿಗಣಿಸಿದ ಭಾಗಗಳ ಸಂಖ್ಯೆಯನ್ನು ಸೂಚಿಸುತ್ತದೆ. ಆದುದರಿಂದ ಸಮ ಭಿನ್ನರಾಶಿಯಲ್ಲಿ ಯಾವಾಗಲೂ ಅಂಶವು ಛೇದಕ್ಕಿಂತ ಚಿಕ್ಕದಾಗಿರುತ್ತದೆ.