ವಿಷಮ ಭಿನ್ನರಾಶಿ ಮತ್ತು ಮಿಶ್ರ ಭಿನ್ನರಾಶಿಗಳು
ಬದಲಾವಣೆ ೧೬:೦೬, ೨೮ ನವೆಂಬರ್ ೨೦೨೩ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (→ವಿಷಮ ಮತ್ತು ಮಿಶ್ರ ಭಿನ್ನರಾಶಿಗಳು)
ವಿಷಮ ಮತ್ತು ಮಿಶ್ರ ಭಿನ್ನರಾಶಿಗಳು
ಅಂಶವು ಛೇದಕ್ಕಿಂತ ದೊಡ್ಡದಾಗಿರುವ ಭಿನ್ನರಾಶಿಗಳನ್ನು ವಿಷಮ ಭಿನ್ನರಾಶಿಗಳು ಎಂದು ಕರೆಯುತ್ತೇವೆ. ಮುಂತಾದ ಭಿನ್ನರಾಶಿಗಳು ವಿಷಮ ಭಿನ್ನರಾಶಿಗಳು. ವಿಷಮ ಭಿನ್ನರಾಶಿಯನ್ನು ಒಂದು ಪೂರ್ಣ ಹಾಗೂ ಒಂದು ಭಾಗದ ಸಂಯೋಜಿತ ರೂಪದಲ್ಲಿ ಬರೆಯಬಹುದು. ಇಂತಹ ಭಿನ್ನರಾಶಿಗಳನ್ನು ಮಿಶ್ರ ಭಿನ್ನರಾಶಿಗಳೆನ್ನುವರು.
ಉದಾಹರಣೆ:
ಅನ್ನು 3 ಎಂದು ಬರೆಯಲಾಗುತ್ತದೆ.
ಉದ್ದೇಶಗಳು
- ಭಿನ್ನರಾಶಿಯ ಅಂಶವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು
- ಭಿನ್ನರಾಶಿಯ ಛೇದವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು
- ಭಿನ್ನರಾಶಿಯ ಚಿತ್ರವನ್ನು ವಿಷಮ ಮತ್ತು ಮಿಶ್ರ ಭಿನ್ನರಾಶಿಯಾಗಿ ಸಂಖ್ಯೆಯಾಗಿ ಸೂಚಿಸಿಸುವುದು
- ಸಂಖ್ಯೆಗಳು ಮತ್ತು ಚಿತ್ರಗಳನ್ನು ಬಳಸಿಕೊಂಡು ಸರಿಹೊಂದುವ ಭಿನ್ನರಾಶಿಗಳನ್ನು ನಿರ್ಮಿಸುವುದು
ಸಂಪನ್ಮೂಲಗಳು
ಫೆಟ್ ಸಿಮ್ಯೂಲೆಷನ್ :
ಈ ಸಿಮ್ಯೂಲೇಷನ್ ನಲ್ಲಿ ವಿವಿಧ ಭಿನ್ನರಾಶಿಗಳನ್ನು ನಿರ್ಮಿಸಬಹುದು ಮತ್ತು ಅದನ್ನು ವೃತ್ತ, ಆಯತ, ಸಿಲಿಂಡರ್, ಕೇಕ್ ನಲ್ಲಿ ಮತ್ತು ಸಂಖ್ಯಾರೇಖೆಯ ಮೇಲೆ ಪ್ರತಿನಿಧಿಸುವುದನ್ನು ನೋಡಬಹುದು. ಅದರಲ್ಲಿ ಅಂಶ ಮತ್ತು ಛೇದವನ್ನು ಗಮನಿಸಿ, ವಿಷಮ ಭಿನ್ನರಾಶಿಯನ್ನು ಪರಿಚಯಿಸಿ ಹಾಗೇ ಅದನ್ನು ಮಿಶ್ರ ಭಿನ್ನರಾಶಿಯಲ್ಲಿ ಹೇಗೆ ಬರೆಯುವುದೆಂದು ಚರ್ಚಿಸಿ.