ಸಮಾಜ ವಿಜ್ಞಾನದ: ತತ್ವಶಾಸ್ತ್ರ
ಪ್ರಸಿದ್ಧ ಚಿಂತನೆಗಳು
ಒಂದು ಹನಿ ಮೊಸರು ಸೇರಿದರೆ ಹೇಗೆ ಒಂದು ಹಾಲಿನ ಬಟ್ಟಲಿನ ಸಾವಿರ ಹನಿಗಳೂ ಕದಡಿಹೋಗುತ್ತವೆಯೋ ಹಾಗೆ ಸಾವಿರ ಸಕಾರಾತ್ಮಕ ಆಲೋಚನೆಗಳನ್ನೂ ಒಂದು ನಕಾರಾತ್ಮಕ ಯೋಚನೆ ಕದಡಿಬಿಡತ್ತದೆ, ಹಾಗಾಗಿ ನಕಾರಾತ್ಮಕತೆಯಿಂದ ಜಾಗ್ರತೆಯಾಗಿರಬೇಕು - ಅನಾಮಿಕ
ಯಾವ ಒತ್ತಡವೂ ಇಲ್ಲದೆ, ಯಾರೊಂದಿಗೂ ಘರ್ಷಣೆ ಇಲ್ಲದೆ, ಯಾವ ರಸಸ್ಪೂರ್ತಿಯು ಇಲ್ಲದೆ ಬದುಕುವುದು ಒಂದು ಬದುಕೇ ಅಲ್ಲ.
ಪ್ರತಿನಿತ್ಯ ಒಂದು ಜಿಂಕೆ ಹುಲಿಯಿಂದ ತಪ್ಪಿಸಿಕೊಳ್ಳಲು ಮತ್ತು ಆ ಹುಲಿ ಆ ಜಿಂಕೆಯನ್ನು ಹಿಡಿಯಲು, ವೇಗವಾಗಿ ಓಡುತ್ತವೆ. ಬದುಕಿನ ನಿಯಮವೂ ಅಷ್ಟೇ!. ನಾವು ಜಿಂಕೆಯಾಗಲೀ ಅಥವಾ ಹುಲಿಯಾಗಲೀ ಓಡುವುದಂತೂ ತಪ್ಪಿದ್ದಲ್ಲ - ಅನಾಮಿಕ
ಜೀವನದಲ್ಲಿ ದೊಡ್ಡ ಕೆಲಸ, ಕಾರ್ಯವೆಂಬುದು ಇಲ್ಲವೇ ಇಲ್ಲ. ದೊಡ್ಡ ಪ್ರೀತಿಯಿಂದ ಮಾಡಿದ ಎಷ್ಟೇ ಸಣ್ಣ ಕೆಲಸವಾದರೂ ಅದು ದೊಡ್ಡ ಕೆಲಸ, ಕಾರ್ಯವೇ.
ಜೀವನವೆಲ್ಲಾ ಬೇವೂ ಬೆಲ್ಲ ,ಎರಡೂ ಸವಿದವನೇ ಕವಿ ಮಲ್ಲ.. - ಕುವೆಂಪು
ಸರಸ್ವತಿಯೇ, ನಿನ್ನ ಬಳಿ ವಿದ್ಯೆಯೆಂಬ ಅಪರೂಪದ ಭಂಡಾರವೊಂದಿದೆ. ಬೇರೆಲ್ಲ ಸಂಪತ್ತುಗಳೂ ಹಂಚಿಕೊಂಡಷ್ಟೂ ಕ್ಷೀಣಿಸುತ್ತವೆ. ಆದರೆ (ನಿನ್ನ ಬಳಿಯಿರುವ) ವಿದ್ಯೆಯೆಂಬ ಸಂಪತ್ತು ಮಾತ್ರ ಹಂಚಿಕೊಂಡಷ್ಟೂ ವೃದ್ಧಿಸುತ್ತದೆ ಮತ್ತು ಗೋಪ್ಯವಾಗಿಟ್ಟಷ್ಟೂ ಕ್ಷೀಣಿಸುತ್ತದೆ! - ಸಂಸ್ಕೃತ ಸುಭಾಷಿತ
ಕಾದ ಕಾವಲಿಯ ಮೇಲೆ ಬಿದ್ದ ನೀರ ಹನಿಯೊಂದು ಆವಿಯಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ. ಕಮಲದೆಲೆಯ ಮೇಲೆ ಬಿದ್ದ ಅದೇ ನೀರ ಹನಿಯು ಸೂರ್ಯನ ಬೆಳಕಿನಲ್ಲಿ ಮುತ್ತಿನಂತೆ ಕಂಗೊಳಿಸುತ್ತದೆ. ಸ್ವಾತಿ ನಕ್ಷತ್ರದಲ್ಲಿ ಕಪ್ಪೆಚಿಪ್ಪನ್ನು ಪ್ರವೇಶಿಸಿದ ಅದೇ ನೀರ ಹನಿಯು ಅನರ್ಘ್ಯವಾದ ಮುತ್ತೇ ಆಗುತ್ತದೆ. ಹೀಗೆ ಉತ್ತಮ, ಮಧ್ಯಮ ಮತ್ತು ಅಧಮವೆಂಬ ಮೂರು ಗುಣಗಳೂ ಸಹವಾಸದಿಂದ ಉಂಟಾಗುತ್ತವೆ! - ಭರ್ತೃಹರಿಯ ನೀತಿಶತಕ (ಸಂಗ್ರಹ- ರವಿ ಅಹೇರಿ)
ಕಾಗೆ ಕಪ್ಪು. ಕೋಗಿಲೆ ಕೂಡಾ ಕಪ್ಪು. ಹಾಗಾದರೆ ಕಾಗೆ-ಕೋಗಿಲೆಗಳ ನಡುವಣ ವ್ಯತ್ಯಾಸ ತಿಳಿಯುವುದು ಹೇಗೆ? ಬಹಳ ಸುಲಭ; ವಸಂತಮಾಸ ಬಂದೊಡನೆ ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೇ! (ವಸಂತಮಾಸದಲ್ಲಿ ಮಾವು ಚಿಗುರುವುದರಿಂದ ಕೋಗಿಲೆ ಇಂಪಾದ ದನಿಯಲ್ಲಿ ಹಾಡುತ್ತದೆ. ಕಾಗೆಗದು ಅಸಾಧ್ಯ ಎಂಬರ್ಥದಲ್ಲಿ) - ಸಂಸ್ಕೃತ ಸುಭಾಷಿತ (ಸಂಗ್ರಹ- ಶ್ರೀ ರವಿ ಅಹೇರಿ)
ಸಾಧನೆಗೆ ಗುರಿಗಿಂತ ಛಲವೇ ಮುಖ್ಯ
"ಪ್ರತಿಫಲದ ಅಪೇಕ್ಷೆಯಿಲ್ಲದೆ ಮಾಡಿದ ಸಹಾಯ ಎಂದಿಗೂ ದೊಡ್ಡದು ಜೀವನದಲ್ಲಿ ನೀನೊಬ್ಬನೇ ಏನಾದರೂ ಸಾಧಿಸಿ ಮೇಲೆ ಬರುವುದಕ್ಕಿಂತ ಹತ್ತು ಜನರನ್ನ ಮೇಲೆ ತಂದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೊಂದಿ]ಲ್ಲ"ಜೀವನದಲ್ಲಿ ಎಂದೂ ಯಾರಿಂದಲೂ ಸಹಾಯದ ಅಪೇಕ್ಷೆಯನ್ನ ಇಡಬಾರದು. ಯಾಕೆಂದರೆ ನಾವು ಕಷ್ಟದಲ್ಲಿ ಇದ್ದಾಗ ಯಾರಾದರೂ ಸಹಾಯ ಮಾಡದಿದ್ದರೆ ಅದಕ್ಕಿಂತ ದೊಡ್ಡ ಯಾತನೆ ಬೇರೊಂದಿಲ್ಲ.ದೇವರಲ್ಲಿ ಎಂದಿಗೂ ಕೇವಲ ಸ್ವಂತದ ಏಳಿಗೆಯಾಗಲಿ ಅಂತ ಬೇಡಿಕೊಳ್ಳದೆ ಹತ್ತು ಜನರ ಏಳಿಗೆಯಾಗಲಿ ಅಂತ ಬೇಡಿಕೊಳ್ಳಿ ದೇವರ ಕೊಡುವ ವರಕ್ಕಿಂತ ಆ ಹತ್ತು ಜನರನ್ನ ಉದ್ಧಾರ ಮಾಡಿದ ಪುಣ್ಯ ಎಷ್ಟೋ ದೊಡ್ಡ]ದು"ಮನುಷ್ಯನಿಗೆ ಯಾವಾಗ ಒಂದು ವಸ್ತು ಸುಲಭವಾಗಿ ಸಿಗುವ ಹಾಗೆ ಇರುತ್ತೋ ಆಗ ಅದರ ಬೆಲೆ ಗೊತ್ತಿರುವುದಿಲ್ಲ, ಆದರೆ ಯಾವಾಗ ಆ ವಸ್ತುವಿನ ಬೆಲೆ ತಿಳಿಯುತ್ತದೋ ಆಗ ಅದು ಸುಲಭವಾಗಿ ಸಿಗುವುದಿಲ್ಲ."
ಆಗಸಕ್ಕೆ ಹಾರಿದರೂ, ಪಾತಾಳ ಹೊಕ್ಕರೂ, ಇಡೀ ಭೂಮಂಡಲವನ್ನು ಸುತ್ತಿಬಂದರೂ ನಾವು ಕೊಡದೆ ಇದ್ದದ್ದು ನಮಗೆ ದೊರೆಯುವುದಿಲ್ಲ - ಸುಭಾಷಿತ ಮಂಜರಿ
ಭೂಮಿಗೆ ಬಿತ್ತುವ ಒಂದೇ ಒಂದು ಕಾಳು ಸಾಕು ಅದು ತೆನೆ ರೂಪದಲ್ಲಿ ಸಿಗುತ್ತದೆ, ಆಗಸದಿಂದ ಬೀಳುವ ಒಂದೊಂದೇ ಮಳೆ ಹನಿಗಳು ಸೇರಿ ನದಿಯಾಗಿ ಹರಿಯುತ್ತವೆ, ನಾವು ಮಾಡುವ , ಆಡುವ , ಯೋಚಿಸುವ ಒಳ್ಳೆ ಮತ್ತು ಕೆಟ್ಟ ಕೆಲಸಗಳ ಮೇಲೆ ನಮ್ಮ ಮುಂದಿನ ಜೀವನ ನಿರ್ಧಾರವಾಗಿರುತ್ತದೆ !!!
ಮಿತ್ರನನ್ನು ಪಡೆದುಕೊಳ್ಳುವುದು ಸುಲಭವಾಗಿರುತ್ತದೆ, ಹಾಗೆಯೇ ಅದೇ ಮಿತ್ರತ್ವವನ್ನು ಉಳಿಸಿಕೊಳ್ಳುವುದು ಮಾತ್ರ ಕಷ್ಟದಾಯಕ, ನಮ್ಮ ಮನಸ್ಸು ಚಂಚಲವಾಗಿರುವ ಕಾರಣ ಚಿಕ್ಕ ಚಿಕ್ಕ ಕಾರಣಗಳಿಗೂ ಸಹ ಸ್ನೇಹವು ಕೆಟ್ಟುಹೋಗುವ ಸಂಭವನೀಯತೆ ಜಾಸ್ತಿಯಾಗಿರುತ್ತದೆ.
ಮನುಷ್ಯನಾಗಿ ಹುಟ್ಟಿದ್ದಕ್ಕೆ ನಾವು ನಮ್ಮ ''ಪ್ರಾಣ', ಧನ, ಬುದ್ಧಿ ಮತ್ತು ಮಾತು' ಇವುಗಳ ವಿನಿಯೋಗದಿಂದ ಪರರ ಶ್ರೇಯಸ್ಸನ್ನೂ ಸಾಧಿಸಿದರೆ ನಮ್ಮ ಜೀವನವನ್ನು ಸಾರ್ಥಕ ಬದುಕೆಂದುಕೊಳ್ಳಬಹುದು-ಶ್ರೀ ಮದ್ಭಾಗವತ
" ಪರೋಪಕಾರಕ್ಕಾಗಿ ಮರಗಳು ಹಣ್ಣು ಕೊಡುತ್ತವೆ, ನದಿಗಳು ಹರಿಯುತ್ತವೆ, ಹಸುಗಳು ಹಾಲನ್ನು ಕೊಡುತ್ತವೆ. ಈ ದೇಹವಿರುವದು ಪರೋಪಕಾರಕ್ಕಾಗಿ......."
"ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ವಿನಃ ಕೇವಲ ಬಯಕೆಗಳಿಂದಲ್ಲ.ನಿದ್ರಿಸುತ್ತಿರುವ ಸಿಂಹದ ಬಾಯಲ್ಲಿ ಮೃಗಗಳು ತಾವಾಗಿಯೇ ಪ್ರವೇಶ ಮಾಡುವದಿಲ್ಲ..."
"ಕಷ್ಟಗಳು ನಮ್ಮನ್ನು ನಾಶ ಮಾಡಲು ಬರುವದಿಲ್ಲ...
ನಮ್ಮೊಳಗಿನ ಸಾಮರ್ಥ್ಯ, ಬಲವನ್ನು ಪರೀಕ್ಷಿಸಲು ಹಾಗೂ
ಅವುಗಳನ್ನು ನಮಗೆ ಮನದಟ್ಟು ಮಾಡಿಕೊಡಲು ಬರುತ್ತವೆ
ಎಂದು ಭಾವಿಸಿದರೆ ಎಂಥ ಕಷ್ಟವೂ ಕಷ್ಟ ಎಂದೆನಿಸುವುದಿಲ್ಲ..........
" ಈ ಪೈಪೋಟಿ ಯುಗದಲ್ಲಿ ನಮ್ಮ ಪ್ರತಿಸ್ಪರ್ಧಿಗಳು ನಾವು ಮಾಡಿದ್ದನ್ನೆಲ್ಲ ನಕಲು ಮಾಡಬಹುದು...
ಆದರೆ ಒಂದು ಸಂಗತಿ ನೆನಪಿನಲ್ಲಿರಬೇಕು...ನಮ್ಮ ಪರಿಶ್ರಮ, ಜ್ಞಾನ,ಶ್ರದ್ಧೆ, ಯೋಜನೆ, ಕಾಳಜಿಗಳನ್ನು ಮಾತ್ರ ಅವರಿಂದ ನಕಲು ಮಾಡಲು ಸಾಧ್ಯವಿಲ್ಲ........"
"ತಾಳ್ಮೆ ಮತ್ತು ಮೌನ ಇವು ಅತ್ಯಂತ ಶಕ್ತಿಶಾಲಿ ಅಸ್ತ್ರಗಳು.
ತಾಳ್ಮೆಯು ನಮ್ಮನ್ನು ಮಾನಸಿಕವಾಗಿ ಶಕ್ತಿಶಾಲಿಯನ್ನಾಗಿ ಮಾಡಿದರೆ
ಮೌನವು ನಮ್ಮನ್ನು ಭಾವನಾತ್ಮಕವಾಗಿ ಶಕ್ತಿಶಾಲಿಯನ್ನಾಗಿ ಮಾಡುತ್ತದೆ....
" ಒಂದು ನಿಮಿಷ ನಮ್ಮ ಜೀವನವನ್ನು ಬದಲಿಸಲಿಕ್ಕಿಲ್ಲ,
ಆದರೆ ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ
ನಮ್ಮ ಜೀವನವನ್ನು ಬದಲಿಸಬಹುದು.ಆದ್ದರಿಂದ
ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರವಿರಬೇಕು..........