DSERT ಪಠ್ಯಪುಸ್ತಕ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ

ಕಂಪ್ಯೂಟರ್/ಗಣಕಯಂತ್ರ

ಈ ವಿಭಾಗದಲ್ಲಿ ನೀವು ಕಲಿಯುವ ಅಂಶಗಳು:

  1. ಐ ಸಿ ಟಿ (ICT) ಗಣಕಯಂತ್ರಗಳು
  2. ಗಣಕಯಂತ್ರದ ಇತಿಹಾಸ.
  3. ಗಣಕಯಂತ್ರಗಳ ಬಳಕೆ ಮತ್ತು ಪ್ರಯೋಜನಗಳು
  4. ಗಣಕಯಂತ್ರಗಳ ವಿಧಗಳು
  5. ಯಂತ್ರಾಂಶಗಳು: ಗಣಕಯಂತ್ರಗಳ ಭಾಗಗಳು ಮತ್ತು ವ್ಯವಸ್ಥಾ ಘಟಕ (System Unit)

ಐ ಸಿ ಟಿ ಮತ್ತು ಗಣಕಯಂತ್ರಗಳಿಗೆ ಪೀಠಿಕೆ

ನೀವು ರೇಡಿಯೋ ಕಾರ್ಯಕ್ರಮದಲ್ಲಿ ಕೇಳಿ - ಕಲಿ ಕಾರ್ಯಕ್ರಮವನ್ನು ಶಾಲೆಯಲ್ಲಿ ಕೇಳಿರಬಹುದು ನಾವು ರೇಡಿಯೋ ದೂರದರ್ಶನ, ಟೆಲಿಫೋನ್, ಮೊಬೈಲ್ ಫೋನ್‌ಗಳನ್ನು ದಿನನಿತ್ಯ ಜೀವನದಲ್ಲಿ ಬಳಸುತ್ತೇವೆ. ರೇಡಿಯೋ ಮತ್ತು ದೂರದರ್ಶನ ಮಾಹಿತಿಯನ್ನು ಪ್ರಸಾರ ಮಾಡುತ್ತವೆ. ಹಾಗೆಯೇ ಟೆಲಿಫೋನ್ ಮತ್ತು ಮೊಬೈಲ್ ಕುಟುಂಬದವರೊಡನೆ ಮತ್ತು ಸ್ನೇಹಿತರ ಜೊತೆ ದೂರದಲ್ಲಿದ್ದರೂ ಸಂಪರ್ಕ ಬೆಳೆಸಿ ಮಾತನಾಡಲು ಬಳಸುತ್ತಿದ್ದೇವೆ. ಇವುಗಳನ್ನು ನಾವು ಮಾಹಿತಿ ಮತ್ತು ಸಂಪರ್ಕ ಮಾಧ್ಯಮ ತಂತ್ರಜ್ಞಾನದ ಸಾಧನಗಳೆನ್ನುತ್ತೇವೆ.(Information & Communication Technologies- ICTs)

ಮಾಹಿತಿಯೆಂದರೆ ಅರ್ಥಮಾಡಿಕೊಳ್ಳುವ ಒಂದು ಸಂದೇಶ. ಸಂಪರ್ಕ ಮಾಧ್ಯಮವೆಂದರೆ ಮಾಹಿತಿಯನ್ನು ಫೋನ್ , ಪತ್ರ ಮತ್ತು ಭಾಷಣದ ಮೂಲಕ ಹಂಚಿಕೊಳ್ಳುವ ಒಂದು ಮಾಧ್ಯಮ. ಮಾಹಿತಿಯನ್ನು ಅವಶ್ಯಕತೆಯಿರುವವರೊಂದಿಗೆ ಹಂಚಿಕೊಳ್ಳುವುದು ಸೂಕ್ತ.

ಈ ವಿಭಾಗದಲ್ಲಿ ಹೊಸ ಐಸಿಟಿ (ICT)ಯ ಸಾಧನವಾಗಿರುವ ಗಣಕಯಂತ್ರದ ಬಗ್ಗೆ ತಿಳಿದುಕೊಳ್ಳುತ್ತೇವೆ. ಗಣಕಯಂತ್ರವು ನಮೂದಿಸುವ ದತ್ತಾಂಶಗಳನ್ನು ಸ್ವೀಕರಿಸಿ ಅದನ್ನು ಪ್ರಕ್ರಿಯೆಗೊಳಿಸಿ , ಪಡೆಯುವ ದತ್ತಾಂಶವನ್ನಾಗಿ ನೀಡುತ್ತದೆ. ಈ ರೀತಿ ಪಡೆದ ದತ್ತಾಂಶವನ್ನು ಶೇಖರಿಸಿ ಹಂಚಿಕೊಳ್ಳಬಹುದು.

ICT Phase 3 - Resource Book 8th Standard ENGLISH - 70 Pages html 1f9b3b92.pngSuppose ಗಣಕಯಂತ್ರಕ್ಕೆ ಮಾಹಿತಿ (data)ಯನ್ನು ನಮೂದಿಸುವುದನ್ನು ನಮೂದಿಸುವ ದತ್ತಾಂಶ (INPUT)ಎಂದು ಕರೆಯುತ್ತೇವೆ. ಈ ನಮೂದಿಸುವ ದತ್ತಾಂಶದ ಮಾಹಿತಿ (DATA)ಒಂದು ಚಿತ್ರವಿರಬಹುದು ಅಥವಾಒಂದು ಸೂಚನೆಯಾಗಿರಬಹುದು. ಈ ಡೇಟಾವನ್ನು ಸಂಸ್ಕರಿಸಿದಾಗ ಸಿಗುವ ಉತ್ತರವೇ ಪಡೆಯುವ ದತ್ತಾಂಶ. ಡೇಟಾ ಅಥವಾ ಮಾಹಿತಿಯನ್ನು ಗಣಕಯಂತ್ರದಿಂದ ಪಡೆಯುವುದಕ್ಕೆ ಪಡೆಯುವ ದತ್ತಾಂಶ (OUTPUT)ಎನ್ನುತ್ತೇವೆ . ಈಗ ನೀವು 2 ಮತ್ತು 5 ಅಂಕಿಗಳನ್ನು ಕೂಡಿಸಬೇಕೆಂದು ಊಹಿಸಿಕೊಳ್ಳಿ. ನಮೂದಿಸುವ ದತ್ತಾಂಶವು (INPUT) ಎರಡು ಭಾಗಗಳನ್ನು ಒಳಗೊಂಡಿದೆ, ಅವುಗಳೆಂದರೆ: ಮಾಹಿತಿ ಮತ್ತು ಸೂಚನೆಗಳು.

“2+5” ಇದನ್ನು ನಮೂದಿಸುವ ದತ್ತಾಂಶವೆಂದು, ಅಂಕಿಗಳಾದ 2 ಮತ್ತು 5 ಗಳನ್ನು ಮಾಹಿತಿ ಎಂದು ಮತ್ತು '+' ಚಿಹ್ನೆಯನ್ನು ಸೂಚನೆಯೆನ್ನುತ್ತೇವೆ. CPU ಈ ಅಂಕಿಗಳ ಕೂಡಿಸುವ ಕೆಲಸ ನಿರ್ವಹಿಸುವುದನ್ನು  'ಪ್ರಕ್ರಿಯೆ (Process)' ಎಂದು ಕರೆಯುತ್ತೇವೆ. ನಮೂದಿಸುವ ದತ್ತಾಂಶಗಳ ಉತ್ತರವಾಗಿ ಸಂಖ್ಯೆ  '7' ಅನ್ನು ಪಡೆಯುವುದೇ 'ಪಡೆಯುವ ದತ್ತಾಂಶ'.

https://encrypted-tbn0.gstatic.com/images?q=tbn:ANd9GcQFvnXAT9BiO5Ae15yshgI5aB7W3ZnZVxFERmM8LOvf4bW8Nu5RuA ಒಂದು ಗಣಕಯಂತ್ರವನ್ನು ಪತ್ರ ಬರೆಯಲು ಶೈಕ್ಷಣಿಕವಾಗಿ ಪ್ರಸಾರವಾಗುವ ಸಿನಿಮಾ ನೋಡಲು, ಆಟಗಳನ್ನು ಆಡಲು, ಸಂಗೀತವನ್ನು ಕೇಳಲು ಬಳಸುತ್ತೇವೆ. ಇದಕ್ಕಿಂತ ಹೆಚ್ಚಾಗಿ ಅಂತರ್ಜಾಲದಿಂದ ಮಾಹಿತಿಯನ್ನು ತಿಳಿಯಲು ಬಳಸುತ್ತೇವೆ.

ಗಣಕಯಂತ್ರಗಳ ಇತಿಹಾಸ