ಕನ್ನಡಿಗರ ತಾಯಿ
ಪರಿಕಲ್ಪನಾ ನಕ್ಷೆ
<mm>Flash</mm>
ಹಿನ್ನೆಲೆ/ಸಂದರ್ಭ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು.
ಕಲಿಕೋದ್ದೇಶಗಳು
- ನವೋದಯ ಪದ್ಯವನ್ನು ಪರಿಚಯಿಸುವುದು.
- ಕನ್ನಡ ನಾಡಿನ ಹಿರಿಮೆಯನ್ನು ಪರಿಚಯಿಸುವುದು (ಅರಣ್ಯ ಸಂಪತ್ತಿನ ನೆಲೆ, ಜೀವಿಗಳ ಆಶ್ರಯ ತಾಣ, ಧಾರ್ಮಿಕ ಪುರುಷರ,ಮಹಾನ್ ಕವಿಗಳ ಜನ್ಮಭೂಮಿ, ಶಿಲ್ಪಕಲೆಯ ವೈಭವದ ಬೀಡು)
- ಕನ್ನಡ ನಾಡಿನ ಕೀರ್ತಿಯ ಅರಿವನ್ನು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಕುರಿತು ಅಭಿಮಾನ ಮೂಡಿಸುವುದು( ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಕನ್ನಡ ನೆಲೆಸುವಂತೆ ಪ್ರೇರೇಪಿಸುವುದು)
- ಕನ್ನಡ ನಾಡು -ಸಂಸ್ಕೃತಿಯ ರಕ್ಷಣೆಯ ಮನೋಭಾವ ಬೆಳೆಸುವುದು.
- ಪದ್ಯವನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹಾಡುವ ಕಲೆ ಬೆಳೆಸುವುದು.
ಕವಿ ಪರಿಚಯ
ಶಿಕ್ಷಕರಿಗೆ ಟಿಪ್ಪಣಿ
ಶಿಕ್ಷಕರಿಗೆ ಟಿಪ್ಪಣಿ ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. ೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.
ಮೊದಲನೇ ಅಮೊಘವರ್ಷ
- https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷ
- http://kannada.oneindia.com/nri/article/2011/1013-amoghavarsha-nrupatunga-novel-prakash-
ಕೊಂಡಕುಂದಾಚಾರ್ಯರ ಮಾಹಿತಿಗೆ ಸಂಬಂಧಿಸಿದ ವೆಬ್ ಪುಟಗಳ
- hemavathi-aid0038.html
- http://www.mysoredasara.gov.in/kannada-tourism/kannada-tourism-around-mysore/item/77-kannada-tourism
ಜನ್ನ ಕವಿಯ ಕುರಿತಾದ ಮಾಹಿತಿಗೆ
ಬಸವೇಶ್ವರ ಕುರಿತು
೫.ಮಧ್ವಾಚಾರ್ಯರು
- https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/
- http://madhvakanvamatha.blogspot.in/2014/02/blog-post.html
- ರನ್ನ
- ಪಂಪ
- ಲಕ್ಷ್ಮೀಶ
- http://kanaja.in/archives/10501
- ಷಡಕ್ಷರದೇವ
- [http://kanaja.in/archives/16952
- [http://www.sallapa.com/2013/08/blog-post_5008.html
- [http://kannada.nativeplanet.com/halebid/
- ಬೇಲೂರು
- ಶ್ರವಣಬೆಳಗೊಳ
ಸಾರಾಂಶ
ಪರಿಕಲ್ಪನೆ ೧ ಕವಿ ಪರಿಚಯ
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು. ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.
ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ. ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ. ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು. ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.
ಚಟುಟವಟಿಕೆ-೧ ಮಕ್ಕಳಿಗೆ ಕನ್ನಡ ಕವಿಗಳ ಪರಿಚಯ ಮಾಡಿಕೊಡುವುದು
- ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,
ಮೊದಲ ಕವಿಗಳ ಹೆಸರನ್ನು ಹೇಳುವರು.ಎರಡನೇ ಗುಂಪಿನ ಮಕ್ಕಳು ಅವುಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವರು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವುದುರ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು .ಮತ್ತು ಬೋರ್ಡ್ ,ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
- ಸಮಯ:೧೫ ನಿಮಿಷ
- ಸಾಮಗ್ರಿಗಳು/ಸಂಪನ್ಮೂಲಗಳು: ವೀಡಿಯೋ
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು