ಭಾರತೀಯತೆ
ಪರಿಕಲ್ಪನಾ ನಕ್ಷೆ
ಹಿನ್ನೆಲೆ/ಸಂದರ್ಭ
ಸ್ವಾತಂತ್ರದ ನಂತರ ತನ್ನ ಬಂಧು-ಬಳಗವನ್ನು ಅರಸಿ ಹೊರಟವರ ತುಮುಲವನ್ನು ಬಿಂಬಿಸುವ ಗೀತೆ.”ಕತ್ತಲೆ ತುಂಬಿದ ಬಾನ್ದಳದಂಚಿಗೆ,ಕಾದಿದೆ ಚಂದ್ರಿಕೆ ಬಿಡುಗಡೆಗೆ” – ಇಲ್ಲಿ ತನ್ನ ಪ್ರೀತಿಪಾತ್ರರನ್ನು ಸೇರುವ ತವಕ ವ್ಯಕ್ತನಾಗಿದೆ. ಸ್ವಾತಂತ್ರದ ನಂತರ ದೇಶದ ಪ್ರಜೆಗಳು ಸಂಭ್ರಮಿಸುವ ಗೀತೆ. ತಮ್ಮ ಗೆಲುವನ್ನು ಆಚರಿಸಿದರೂ “ಭಾಷೆ ಬೇರೆ , ಭಾವವೊಂದು ನಾವು ಭಾರತೀಯರು” ಎಂಬ ಸಂದೇಶ ಸಾರುವ ಗೀತೆ.ಇಲ್ಲಿನ ಗೀತೆಗಳ ವಿಸ್ತಾರ ಅಪಾರ - ಸ್ವಾತಂತ್ರ ಪೂರ್ವದಲ್ಲಿನ ಯುವಜನತೆಯ ಕನಸು,ನೋವು-ನಲಿವು, ಸ್ವಾತಂತ್ರದ ಹೋರಾಟ, ಸ್ವಾತಂತ್ರದ ನಂತರದ ಸಂದರ್ಭ
ಕಲಿಕೋದ್ದೇಶಗಳು
ಕವಿ ಪರಿಚಯ
ಕವಿ ಪರಿಚಯ
ನಂತರ ಶಿಕ್ಷಕರು ಕೆ ಎಸ್ ನರಸಿಂಹಸ್ವಾಮಿ ಅವರ ಪರಿಚಯವನ್ನು ಮಾಡಿಕೊಡುವರು. ನರಸಿಂಹಸ್ವಾಮಿಯವರ ಕಾಲ, ಪ್ರಶಸ್ತಿಗಳ ಬಗ್ಗೆ ವಿವರಿಸಿ, ಈ ಕವಿಗಳ ವಿಶೇಷತೆಯ ಬಗ್ಗೆ ತಿಳಿಸುವರು. ಈ ಕವಿಗಳನ್ನು "ಮಲ್ಲಿಗೆಯ ಕವಿ" ಎಂದು ಕರೆಯಲು ಕಾರಣವೇನು ಎಂಬುದನ್ನು ತಿಳಿಸಬೇಕು. ಈ ಕವಿಗಳ ಇತರೇ ಪ್ರಮುಕ ಕೃತಿಗಳು ಹಾಗು ಆ ಕೃತಿಗಳಲ್ಲಿನ ಪ್ರಮುಖ ಸಾರಾಂಶಗಳೇನು ಎಂಬುದನ್ನು ತಿಳಿಸಬಹದು.
ಶಿಕ್ಷಕರು ಪದ್ಯವನ್ನು ವಾಚಿಸಿದ ನಂತರ ಶಿಕ್ಷಕರು ಮಕ್ಕಳಿಗೆ ಈ ಪದ್ಯವನ್ನು ಹಾಡಿನ ರೂಪದಲ್ಲಿ ಹಾಡಲು ಕೇಳುವುರು. ಈ ಮೊದಲು ಮಕ್ಕಳು ಎಲ್ಲಿಯಾದರು ಈ ಪದ್ಯದ ಹಾಡಿನ ರೂಪವನ್ನು ಕೇಳಿದ್ದರೆ ಹಾಡಬಹುದು. ಮಕ್ಕಳು ಹಾಡಿದ ನಂತರ ಅಥವಾ ಯಾರು ಹಾಡದಿದ್ದರೆ, ಶಿಕ್ಷಕರು " ಮೈಸೂರು ಮಲ್ಲಿಗೆ" ಎಂಬ ಸಿನಿಮಾದಲ್ಲಿ ಈ ಪದ್ಯದ ಸಾಲಿಗಳನ್ನು ಹಾಡಿನ ರೂಪದಲ್ಲಿ ಬಳಸಿರುವುದನ್ನು ಮಕ್ಕಳಿಗೆ ತಿಳಿಸಿ ಅದನ್ನು ಕೇಳಿಸಬಹುದು. ಮಕ್ಕಳು ಸಹ ಇದಕ್ಕೆ ದನಿಗೂಡಿಸುವರು
ಚರಣ ೧
.
ಈ ಪದ್ಯದ ಸಾಲುಗಳಲ್ಲಿ ಭಾರತದ ಪ್ರಾಕೃತಿಕ ಸೌಂದರ್ಯ, ಭಾರತದ ಮೇಲ್ಭಾಗದಲ್ಲಿನ ಹಿಮಾಲಯ ಪರ್ವತ, ಕಾಲ್ದಡಿಯಲ್ಲಿ ಮುತ್ತನಿಡುವಂತೆ ಇರುವ ಸರೋವರಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಬಯಲು ಪ್ರದೇಶ, ಆಕಾಶದೆತ್ತರಕ್ಕೆ ಹೊಗೆಯ ಸೂಸುವ ಯಂತ್ರಗಳು ಅದರ ಘೋಷವನ್ನು ವರ್ಣಿಸುತ್ತಾ, ಹಿಮಾಲಯದ ಚಿತ್ರಗಳನ್ನು ಮಕ್ಕಳಿಗೆ ತೋರಿಸುವುದು, ಭಾರತದ ನಕ್ಷೆಯ ಚಿತ್ರವನ್ನು ತೋರಿಸಿ ನಕ್ಷೆಯ ಮುಡಿಯಲ್ಲಿ ಆಕಾಶಕ್ಕೆ ಹೊಂದಿಕೊಂಡಂತಿರುವ ಹಿಮಾಲಯದ ವಿವರಣೆಯನ್ನು ನೀಡುವುದು. ನಂತರ ಭಾರತದ ನಕ್ಷೆಯ ಪಾದದಲ್ಲಿನ ಸಮುದ್ರ, ಕಡಲ ಕಿನಾರೆಯ ಚಿತ್ರಗಳನ್ನು ತೋರಿಸಬಹದು. ಸಮುದ್ರದ ಅಲೆಗಳ ಬಗ್ಗೆ ವಿವರಸಿ ಅಲೆಗಳ ಚಿತ್ರ ಅಥವಾ ವೀಡಿಯೋ ತೋರಿಸಬಹುದು, ಹಾಗೆಯೇ ಬಯಲು ಪ್ರದೇಶದ ಹಚ್ಚ ಹಸಿರಿನ ಕಾನನಗಳು, ಮುಗಿಲೆತ್ತರದ ಕಾರ್ಖಾನೆ ಚಿಲಿಮೆಗಳುನ್ನು ವಿವರಸಿಬಹದು.
ಈ ಚರಣದಲ್ಲಿ ಬಳಸಿರುವ ವಿವಿಧ ವಿಶೇಷ ಪದಗಳನ್ನು ಗುರುತಿಸಿ ಅರ್ಥೈಸಿ ಓದಿ ಪದಗಳ ವಿವರವನ್ನು ಚಿತ್ರಸಹಿತ ಉದಾಹರಣೆಗಳ ಮೂಲಕ ವಿವರರಿಸಬಹುದು.
ಅವಧಿ : ೨ ಚರಣ ೨ಮತ್ತ ೩
.
ಸೈನಿಕರ ಹಾಗು ಭಾರತದ ಗಡಿಭಾಗದ ಬಗೆಗಿನ ವೀಡಿಯೋವನ್ನು ತೋರಿಸುವ ಮೂಲಕ ಹಿಂದಿನ ಅವಧಿಯಲ್ಲಿನ ವಿವರಣೆಯನ್ನು ಪುನರ್ಮನನ ಮಾಡುತ್ತಾ ಹಾಗು ಕವಿಗಳ ಬಗ್ಗೆ ಹಾಗು ವಿವರವಣೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾ ಈ ಅವಧಿಯ ತರಗತಿಯನ್ನು ಪ್ರಾರಂಭಿಸುವರು. ಪದ್ಯದ ಸಾಲುಗಳಲನ್ನು ವಿವರಿಸುವಾಗ ಅಲ್ಲಿನ ಪದಗಳಿಗೆ ಸೂಕ್ತವಾದ ಚಿತ್ರಗಳನ್ನು , ವೀಡಿಯೋಗಳ ನ್ನು ಪ್ರದರ್ಶಿಸುವ ಮೂಲಕ ಮಕ್ಕಳನ್ನು ಆಕರ್ಷಿಸಬಹದು. ಗಡಿಭಾಗದ ಸೈನಿಕರು, ರಾಷ್ಟ್ರ ಧ್ವಜ , ಭಾವೈಕ್ಯತೆ, ಪ್ರೀತಿ ಭಾವನಗೆಳ ಬಗ್ಗೆ ತಿಳಿಸಲಾಗಿದೆ. ಈ ವಿವರಣೆಗಳಿಗೆ ಸಂಬಂಧಿಸಿದ ವೀಡಿಯೋಗಳನ್ನು ಚಿತ್ರಗಳನ್ನು ಮಕ್ಕಳಿಗೆ ತೋರಿಸುವುದು.
ಭಾಷೆ,ವೃತ್ತಿ, ರಾಜ್ಯಗಳೆಲ್ಲಾ ಬೇರೆ ಬೇರೆಯಾದರೂ ಸಹ ನಾವೆಲ್ಲಾ ಒಂದೇ , ನಾವೆಲ್ಲಾ ಭಾರತೀಯರು ಎಂಬ ಬಾವನೆಯನ್ನು ಮಕ್ಕಳಿಗೆ ವಿವರಿಸಬೇಕು.
ದೇಶ ಭಕ್ತಿಗೆ ಸಂಬಂದಿಸಿ ವೀಡಿಯೋ ಅಥವಾ ಹಾಡುಗಳನ್ನು ಮಕ್ಕಳಿಗೆ ಹೇಳಬಹುದು.
ಶಿಕ್ಷಕರಿಗೆ ಟಿಪ್ಪಣಿ
ಹೆಚ್ಚುವರಿ ಸಂಪನ್ಮೂಲ
ಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು