ವಿದ್ಯುನ್ಮಾನ ಕಥೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಕಾರ್ಯಕ್ರಮ

ಪೀಠಿಕೆ :

ನಮ್ಮ ಶಾಲೆಯ ಮಕ್ಕಳು ದಿನ ನಿತ್ಯ ಎನ್ನುವಂತೆ ಶಾಲೆ ಮತ್ತು ಮನೆಯಲ್ಲಿಯೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ . ದಿನನಿತ್ಯದಲ್ಲಿ ಎಷ್ಟೋ ನಮ್ಮ ಪರಿಸರಕ್ಕೆ ಸಂಭಂದಿಸಿದಂತೆ ಹಲವಾರು ವಿಷಯಗಳು ಪಾಠ ಭೋಧನೆಗೆ ಸಂಬಂದಿಸಿದಂತೆ ಹೋರಗಡೆ ನಡೆಯುವ ಮತ್ತು ಪಾಠದಲ್ಲಿ ಬರುವ ವಿಷಯವು ಒಂದಕ್ಕೊಂದು ಸಂಬಂದವಿರುತ್ತದೆ ಆದರೆ ಶಿಕ್ಷಕರಾದ ನಾವೆಲ್ಲ ಕೇವಲ ತರಗತಿ ಕೋಣೆಗೆ ಮಾತ್ರ ಸೀಮಿತವಾಗಿದ್ದೇವೆ . ಪ್ರಮುಖವಾಗಿ ನಾವು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿನ ಕೇಂದ್ರಗಳಾದ , ಸರಕಾರಿ ಆಸ್ಪತ್ರೇ , ಅಂಗನವಾಡಿ ಕೇಂದ್ರ , ಗ್ರಾಮ ಪಂಚಾಯತ, ಬ್ಯಾಂಕುಗಳು , ನಗರಸಭೆ , ಇತರೆ . ಇವೆಲ್ಲವುಗಳ ಹೆಸರನ್ನು ಮಾತ್ರ ಕೇಳಿರುತ್ತೆವೆ ಆದರೆ ಅಲ್ಲಿ ಏನೇನು ಇದೆ , ಯಾವ ರೀತಿಯಾಗಿ ಕರ್ತವ್ಯ ನಿರ್ವ್ವಹಿಸುತ್ತಾರೆ ಏನೆಲ್ಲಾ ಸವಲತ್ತುಗಳು ಇವೆ ಎಂಬುದನ್ನು ಗೊತ್ತಿರದೆ ಇರುವ ವಿಷಯವಾಗಿದೆ . ಇದನ್ನು ಈ ಕೆಳಗಿನಂತೆ ಗಮನಿಸಿದಾಗ ಇವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ತಿಳಿಯಬಹುದು .

ಉದ್ದೇಶಗಳು :

  1. ಸಾರ್ವಜನಿಕ ಸ್ಥಳಗಳ ಮಾಹಿತಿ ಪಡೆಯುವುದು
  2. ಸಾಮಾನ್ಯಜನರ ಬಗ್ಗೆ ಮತ್ತು ಅವರ ಚಟುಟವಿಕೆಗಳ ಬಗ್ಗೆ ಮಾಹಿತಿ ಪಡೆಯುವುದು
  3. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು
  4. ಅಳತೆ, ಪ್ರಾದೇಶಿಕ ವ್ಯಾಪ್ತಿ ಗಳ ಪ್ರಕ್ರಿಯೆಯನ್ನು ತಿಳಿಯುವುದು, ನಕ್ಷೆ ಬಿಡಿಸುವುದು, ಪ್ರದೇಶಗಳನ್ನು ನಕ್ಷೆಯಲ್ಲಿ ಗುರುತಿಸುವುದು.
  5. ಅಂಗನವಾಡಿಯಲ್ಲಿ ಸಿಗುವ ಪೌಷ್ಟೀಕಾಂಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು .
  6. ತಾವು ತಯಾರಿಸಿದ ನಕ್ಷೆಯನ್ನು ಈಗಾಗಲೇ ಇರುವ ಅಂತರ್ಜಾಲಾಧಾರಿತ ವಿದ್ಯುನ್ಮಾನ ನಕ್ಷೆಗಳೊಡನೆ ಹೋಲಿಸುವುದು ಮತ್ತು ವ್ಯತ್ಯಾಸಗಳನ್ನು ಗುರುತಿಸುವುದು.
  7. ನಮ್ಮ ಸ್ಥಳೀಯ/ಪ್ರಾದೇಶಿಕ ಜೀವವೈವಿದ್ಯತೆಗಳನ್ನು ಅರಿಯುವುದು.
  8. ಬ್ಯಾಂಕನೊಂದಿಗೆ ವ್ಯವಹರಿಸುವ ಕೌಶಲ್ಯ ವೃದ್ಧಿಯಾಗುವುದು
  9. ಬಿ.ಬಿ.ಎಂ.ಪಿ ಯ ಕಾರ್ಯಗಳನ್ನು ತಿಳಿದುಕೊಳ್ಳುವರು .

ಶಿಕ್ಷಕರಿಗೆ ಮಾಹಿತಿ:

ಮಕ್ಕಳು ತರಗತಿ ಕೋಣೆಯೋಳಗಿನ ಕಲಿಕೆಯನ್ನು ತಮ್ಮ ಪರಿಸರದ, ತಮ್ಮ ದೈನಂದಿನ ಚಟುವಟಿಕಗೆಳ ಕಲಿಕೆಯೊಂದಿಗೆ ಹೋಲಿಕೆ ಮಾಡಿಕೊಳ್ಳಬೇಕು. ಆಗ ಮಕ್ಕಳಲ್ಲಿ ವಿಮರ್ಶನಾತ್ಮಕ ಚಿಂತನೆ ಬೆಳೆಯುತ್ತದೆ. ಇದು ಮಕ್ಕಳಲ್ಲಿ ಗಮನಿಸುವ, ಅನುಭವಿಸುವ, ಸ್ಪರ್ಶಿಸುವ, ವಾಸನೆ ಮತ್ತು ರುಚಿಯನ್ನು ಗ್ರಹಿಸುವ, ಯೋಚಿಸುವ, ಪ್ರಶ್ನಿಸುವ, ಚರ್ಚಿಸುವ. ಸೃಷ್ಟಿಸುವ ಹಾಗು ತಮಗೆ ತರಗತಿಯಲ್ಲಿ ಕಲಿಸಿರುವ ವಿಷಯಗಳು ಹಾಗು ಸುತ್ತಲು ಇರುವ ವಿಷಯಗಳ ಸಂಬಂಧದ ಬಗ್ಗೆ ತಮ್ಮದೇ ಆದ ಜ್ನಾನವನ್ನು ರೂಪಿಸಿಕೊಳ್ಳುವ ಅವಕಾಶಗಳನ್ನು ಸೃಷ್ಟಿಸುತ್ತದೆ . ಶಾಲೆ ಮತ್ತು ಕಲಿಕೆಯಡೆಗಿನ ಆಸಕ್ತಿಯನ್ನು ಹೆಚ್ಚಿಸುತ್ತದೆ. ಈ ಮೂಲಕ ಮಕ್ಕಳ ಕಲಿಕೆಯನ್ನು ಶ್ರೀಮಂತಗೊಳಿಸಲು ಸಾದ್ಯವಾಗುತ್ತದೆ.

ಸಸ್ಯಗಳು ಮತ್ತು ಪ್ರಾಣಿಗಳು ಬೆಳೆಯುತ್ತವೆ, ಬದಲಾಗುತ್ತಿರುತ್ತವೆ ಹಾಗು ಸಾಯುತ್ತವೆ ಎಂದಷ್ಟೇ ತಿಳಿದಿರುತ್ತೇವೆ. ಆದರೆ ಅವು ಹೇಗೆ ಬೆಳೆಯುತ್ತವೆ ಹೇಗೆ ಕಾಲಕಾಲಕ್ಕೆ ಹೇಗೆ ಬದಲಾಗುತ್ತವೆ ಎಂಬುದನ್ನು ಗಮನಿಸಿದಾಗ ಮಾತ್ರ ಆ ಜೀವವೈವಿದ್ಯತೆಯ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗುತ್ತದೆ. ಮರಗಿಡಗಳು ಸಹ ತಮ್ಮದೇ ಆದ ಜೀವನಚಕ್ರವನ್ನು ಹೊಂದಿರುತ್ತವೆ.. ಈ ಸಸ್ಯವರ್ಗಗಳ ಮತ್ತು ಮರಗಳ ಜೀವನಚಕ್ರ ಶೈಲಿ ಮತ್ತು ಇತರೆ ಪ್ರಾಣಿಗಳ ಜೀವನಚಕ್ರದ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಬಹುದು . . ಮಾನವನ ಜೀವನಕ್ರಮದಲ್ಲಿ ಈ ಸಸ್ಯವರ್ಗಗಳನ್ನು ತುಂಬಾ ಬಳಸಲಾಗುತ್ತದೆ. ಆದರೆ ಎಷ್ಟು ಸಲ ಬಳಸಿದ್ದೇವೆ ಎಂಬುದನ್ನು ಎಲ್ಲಿಯೂ ದಾಖಲಿಸುವುದಿಲ್ಲ. ಸಸ್ಯವರ್ಗಗಳ ಮಹತ್ವ ತಿಳಿಯಬೇಕಾದರೆ ನಾವು ಎಷ್ಟು ಬಳಸುತ್ತೇವೆ ಎಂಬುದನ್ನು ದಾಖಲಿಸಬೇಕು .
ಈ ಸಸ್ಯವರ್ಗ ಸಮೀಕ್ಷೆ ಮೂಲಕ ಯಾವೆಲ್ಲಾ ಸಸ್ಯಗಳಿವೆ, ಹಾಗು ಅವುಗಳ ವಿಶೇಷತೆ ಏನು, ಅವುಗಳ ಉಪಯೋಗ ಏನು ಎಂಬುದನ್ನು ತಿಳಿಯಬಹುದು. ತರಗತಿ ಭೋದನೆಗೆ ಪೂರಕವಾದ ಸಸ್ಯವರ್ಗಗಳ ಚಿತ್ರಗಳನ್ನು ಪಡೆಯಬಹುದು . ಸಮೀಕ್ಷೆ ಸಂದರ್ಭದಲ್ಲಿ ಗುರುತಿಸಿದ ಕೆಲವು ಸಸ್ಯವರ್ಗಗಳ ಬಗೆಗೆ ಅಂತರ್ಜಾಲದ ಮೂಲಕ ಹೆಚ್ಚಿನ ಮಾಹಿತಿ ಸಂಗ್ರಹಿಸಬಹುದು .ಸಾಮಾನ್ಯವಾಗಿ ಹಲವಾರು ಸಸ್ಯಗಳ ಸ್ಥಳೀಯ ಹೆಸರನ್ನು ಮಾತ್ರವೇ ನಾವು ತಿಳಿದುಕೊಂಡಿರುತ್ತೇವೆ, ಆದರೆ ಆ ಸಸ್ಯಗಳ ವೈಜ್ಞಾನಿಕ ಹೆಸರುಗಳು ತಿಳಿದಿರುವುದಿಲ್ಲ. ಅಂತರ್ಜಾಲದ ಮೂಲಕ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಈ ಮೂಲಕ ಕಣ್ಮರೆಯಾಗುತ್ತಿರುವ ಕೆಲವು ಸಸ್ಯವರ್ಗ/ಮರಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಬಹುದು ಈ ಮೂಲಕ ಪರಿಸರ ಸಂರಕ್ಷಣೆಯ ಅರಿವನ್ನು ಮಕ್ಕಳಲ್ಲಿ ಮೂಡಿಸಬಹುದು.

ಸರಕಾರಿ ಪಸು ಆಸ್ಪತ್ರೇ :

ಉದ್ದೇಶಗಳು

  • ಪಶುವೈದ್ಯಕೀಯ ಆಸ್ಪತ್ರೆಯಿಂದ ಜಾನುವಾರುಗಳಿಗಿರುವ ಚಿಕಿತ್ಸೆ ಮತ್ತು ಸೌಲಭ್ಯ ತಿಳಿಯಲು.
  • ಜಾನುವಾರುಗಳಿಗೆ ಬರುವ ಕಾಯಿಲೆಗಳನ್ನು ತಿಳಿಯಲು.
  • ಜಾನುವಾರುಗಳ ಆಸ್ಪತ್ರೆಯಲ್ಲಿರುವ ಸಮಸ್ಯೆ ಮತ್ತು ಸೌಲಭ್ಯ ತಿಳಿಯಲು.
  • ಜಾನುವಾರುಗಳ ಸಮಸ್ಯೆಗಳನ್ನು ನಿವಾರಿಸುವ ಬಗೆಯನ್ನು ತಿಳಿಯಲು.
  • ಆಸ್ಪತ್ರೆಯಲ್ಲಿರುವ ಹೊಸ ಹೊಸ ಟೆಕ್ನಾಲಜಿಯನ್ನು ತಿಳಿಯಲು.

ಆಸ್ಪತ್ರೆಯಲ್ಲಿ ಏನೇನು ಸವಲತ್ತುಗಳು ಇದೆ , ಯಾವ ಯಾವ ರೋಗಗಳು ಇರುತ್ತವೆ , ಅವುಗಳ ಲಕ್ಷಣಗಳೆನು , ಅವುಗಳಿಗೆ ಪರಿಹಾರಗಳೇನು , ರಕ್ತ ಪರೀಕ್ಷೆ , ಮೂತ್ರ ಪರೀಕ್ಷೆ ಏಕೆ ಮಾಡುತ್ತಾರೆ ? ಹೀಗೆ ಹಲವಾರು ವಿಷಯಗಳು ಮಕ್ಕಳಿಗೆ ಗೊತ್ತೆ ಇರುವದಿಲ್ಲ ಇದನ್ನು ಒಮ್ಮೆ ಆಸ್ಪತ್ರೆಗೆ ಭೇಟಿ ನಿಡಿ ಮಾಹಿತಿಯನ್ನು ಪಡೆಯುವುದು . ಕೆಲವು ಪ್ರಶ್ನೇಗಳು ಈ ಕೆಳಗಿನಂತಿವೆ -ವೈದ್ಯಾಧಿಕಾರಿಯನ್ನು ಉದ್ದೇಶಿಸಿ ಮಾಹಿತಿ ಸಂಗ್ರಹಿಸುವುದು .

  • ಈ ಗ್ರಾಮದಲ್ಲಿ ಕಂಡುಬರುವ ಪಶು ತಳಿಗಳು ಯಾವುವು?
  • ನೀವು ಈ ಆಸ್ಪತ್ರಯಲ್ಲಿ ಎಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೀರಿ?
  • ಈ ಸಂಸ್ಥೆಯ ಉದ್ದೇಶಗಳೇನು?
  • ಸಾಮಾನ್ಯವಾಗಿ ಜಾನುವಾರುಗಳಿಗೆ ಬರುವ ರೋಗಳು ಯಾವುವು?
  • ಜಾನುವಾರುಗಳಿಗೆ ಜ್ವರ ಬಮದಿರುವುದನ್ನು ಹೇಗೆ ತಿಳಿದುಕೊಳ್ಳುವಿರಿ?
  • ಜಾನುವಾರುಗಳಿಗೆ ಬೇಕಾದ ಔಷಧಿಗಳನ್ನು ಎಲ್ಲಿ ಎಲ್ಲಿ ಪಡೆಯುತ್ತೀರಿ?
  • ಪಶುಗಳಲ್ಲಿ ಜೀರ್ಣಕ್ರಿಯೆ ಹೇಗೆ ನಡೆಯುತ್ತದೆ?
  • ಇತ್ತೀಚೆಗೆ ನಿಮ್ಮ ಸಂಸ್ಥೆಯಲ್ಲಾದ ಬದಲಾವಣೆ ಏನು?
  • ಜಾನುವಾರುಗಳಿಗೆ ಚಿಕಿತ್ಸೆ ಕೊಡಲು ಯಾವುದಾದರು ಹೊಸ ತಂತ್ರಜ್ಞಾನಗಳಿವೆ?
*ಜಾನುವಾರುಗಳಿಗೆ ಚಿಕಿತ್ಸೆ ನಿಡಲು ಹೊಸ ತಂತ್ರಜ್ಞಾನದ ಬಳಕೆಯಾಗುತ್ತಿದೆಯೇ?
  • ಪಶುಗಳಿಗೆ ಆಸ್ಪತ್ರೆಯಲ್ಲಿ ಟೆಕ್ನಾಲಜಿಯಲ್ಲಿ ಮುಂದುವರಿದಿರುವ ಜಿಲ್ಲೆ?
  • ಪಶುಗಳಲ್ಲಿ ರಕ್ತ ಪರೀಕ್ಷೆ ಎಲ್ಲಿ ಮಾಡಿಸುತ್ತಾರೆ?
  • ಪಶುಗಳಲ್ಲಿ ಮನುಷ್ಯರ ಹಾಗೆ ರಕ್ತ ಪರೀಕ್ಷೆ ಮಾಡುತ್ತಾರೆಯೇ?

ಅಂಗನವಾಡಿ :

ಇಲ್ಲಿ ೫ ವರ್ಷದ ಮಕ್ಕಳಿಗೆ ಭೊಧನೆಯ ಜೋತೆಗೆ ಉತ್ತಮವಾದ ಪೌಷ್ಟೀಕಾಂಶಭರಿತವಾದ ಆಹರವನ್ನು ನೀಡಲಾಗುತ್ತಿದೆ . ಮುಖ್ಯವಾಗಿ ಮಕ್ಕಳಿಗೆ ಪೌಷ್ಟೀಕಾಂಶ ಕೋರತೆ ಇರುವ ಮಕ್ಕಳು ಹೆಚ್ಚಾಗಿ ಕಂಡುಬರುತ್ತಾರೆ ಅದಕ್ಕಾಗಿ ಸರಕಾರ ಆ ಪೌಷ್ಟೀಕಾಂಶ ಕೋರತೆಯನ್ನು ಹೋಗಲಾಡಿಸಲು ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ . ಇದರಿಂದ ಮಕ್ಕಳಿಗೆ ಉತ್ತಮವಾದ ಪೌಷ್ಟೀಕಾಂಶದಿಂದ ದೇಹವು ಸದೃಢವಾಗಿ ಬೆಳೆಯುತ್ತದೆ ಮತ್ತು ಬೆಳವಣೆಗೆಯು ಚನ್ನಾಗಿ ಆಗುತ್ತದೆ . ಅಲ್ಲಿ ಸಿಗುವ ಸವಲತ್ತುಗಳು ಬಗ್ಗೆ ಅಲ್ಲಿಗೆ ಭೇಟಿ ನೀಡಿದಾಗ ದೊರೆಯುತ್ತದೆ .

ಬ್ಯಾಂಕುಗಳು

ಪ್ರತಿಯೊಬ್ಬರು ತಮ್ಮದೆ ಆದ ಬ್ಯಾಂಕನಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಇದರಲ್ಲಿ ಏನೇನು ಯಾವ ಯಾವ ಖಾತೆಯನ್ನು ತೆಗೆಯಬೇಕು , ಹೇಗೆ ಹಣವನ್ನು ಸಂಗ್ರಹಿಸಿ ಇಡಬೆಕು , ಬ್ಯಾಂಕನಲ್ಲಿ ಚೆಕ್ ಗಳ ಬಗ್ಗೆ ತಿಳಿಯುವುದು . ಯಾವ್ಯಾವ ತರಹದ ಚೆಕ್ ಗಳನ್ನು ಇರುತ್ತವೆ , ಅಸಲಿ ಮತ್ತು ನಕಲಿ ನೋಟುಗಳನ್ನು ಹೇಗೆ ಪತ್ತೆ ಹಚ್ಚುವುದನ್ನು ತಿಳಿದುಕೊಳ್ಳುವುದು . ಅಲ್ಲದೆ ಎ.ಟಿ.ಎಂ ಹೇಗೆ ಕಾರ್ಯಾನಿರ್ವಹಿಸುತ್ತೆದೆ ಎಂಬುದವದರ ಬಗ್ಗೆ ಚರ್ಚಿಸಬೇಕು .

ಅಂಚೆ ಕಛೇರಿ

ಇಲ್ಲಿ ಮುಖ್ಯವಾಗಿ ವಿಧ ವಿಧದ ಅಂಚೆ ಚೀಟಿಗಳನ್ನು ನೋಡಬಹುದು ಯಾವ ಯಾವ ಅಂಚೆ ಚೀಟಿಗಳನ್ನು ಯಾರಿಗೆ ಕಳುಹಿಸಬೇಕು ಮತ್ತು ಅದನ್ನು ಸ್ವದೇಶಕ್ಕೆ ಅಥವಾ ವಿದೇಶಕ್ಕೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದು . ಅಲ್ಲದೆ ಅಲ್ಲಿರುವ ಖತೆಗಳ ಬಗ್ಗೆ ಪರಿಚಯಮಾಡಿಕೊಳ್ಳುವುದು .
ಇಲ್ಲಿ ಯಾವದಾದರು ಸಾಮಾಗ್ರಿಯನ್ನು ಇನ್ನೊಬ್ಬರಿಗೆ ಕಳುಹಿಸಬಹುದು - ಮತ್ತೆ ಇದರಲ್ಲಿ ಸ್ಪ್ಪೀಡ್ ಪೋಸ್ಟ ಮೂಲಕ ಅದರ ಬಗ್ಗೆ ಮತ್ತು ಅದು ಎಷ್ಟು ಗ್ರಾಂ ತೂಕ ಎಂಬುವದರ ಮೇಲೆ ಅವಲಂಬಿತವಾಗಿರುತ್ತದೆ .

ಮೇಡಿಕಲ್ ಸ್ಟೋರ್

ಇಲ್ಲಿ ಮುಖ್ಯವಾಗಿ ನಾವು ಔಷದಿಯನ್ನ್ನು ತೆಗೆದುಕೊಳ್ಳುವ ಮುನ್ನ ಡಾಕ್ಟರ್ ಬರೆದುಕೊಟ್ಟಿರುವ ಔಷದಿನಾ ಅಥವಾ ಬೇರೆ ಇದೇನಾ ಎಂಬುವದನ್ನು ಗಮನಿಸಬೇಕು . ಅಲ್ಲದೆ ಇವರಿಗೆ ಔಷದಿಯ ಮೇಲೆ ಇರುವ ಅವಧಿ ಮುಕ್ತಯದ ದಿನಾಂಕವನ್ನು ಕಡ್ಡಾಯವಾಗಿ ನೋಡಿ ಅವಧಿ ಮುಗಿಯುವ ಮುಂಚಿನ ಔಷಧಿಗಳನ್ನು ಮಾತ್ರ ತೆಗೆದುಕೊಳ್ಳಬೇಕು . ಇಲ್ಲಿ ಹಲವಾರು ವಿವಿಧ ರೀತಿಯಾ ಮಾಹಿತಿಯನ್ನು ಪಡೆಯಬಹುದಾಗಿದೆ.

ಗ್ರಾಮ ಪಂಚಾಯತಿ

ಸುತ್ತಮುತ್ತಲಿನ ಪರಿಸರವನ್ನು ಗಮನಿಸುವುದು ಅಲ್ಲದೆ ಗ್ರಾಮ ಪಂಚಾಯಿತಿಯ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯುವುದು . ಅಳತೆ, ಪ್ರಾದೇಶಿಕ ವ್ಯಾಪ್ತಿ ಗಳ ಪ್ರಕ್ರಿಯೆಯನ್ನು ತಿಳಿಯುವುದು, ನಕ್ಷೆ ಬಿಡಿಸುವುದು, ಪ್ರದೇಶಗಳನ್ನು ನಕ್ಷೆಯಲ್ಲಿ ಗುರುತಿಸುವುದು. ಅಳತೆ ಮತ್ತು ಅಭಿವೃದ್ದಿ ಮಾನಕಗಳ ಕೌಶಲ ಹೊಂದುವುದು. ತಾವು ತಯಾರಿಸಿದ ನಕ್ಷೆಯನ್ನು ಈಗಾಗಲೇ ಇರುವ ಅಂತರ್ಜಾಲಾಧಾರಿತ ವಿದ್ಯುನ್ಮಾನ ನಕ್ಷೆಗಳೊಡನೆ ಹೋಲಿಸುವುದು ಮತ್ತು ವ್ಯತ್ಯಾಸಗಳನ್ನು ಗುರುತಿಸುವುದು.
ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಅಧ್ಯಕ್ಷರ ಕಾರ್ಯಗಳನ್ನು ಗುರ್ತಿಸುವುದು . ಮತ್ತು ಅಧಿಕಾರ ಅವಧಿ ಎಷ್ಟು ವರ್ಷಗಳೆಂಬುವದನ್ನು ತಿಳಿದುಕೊಳ್ಳುವುದು .

ವಸ್ತು ಸಂಗ್ರಾಹಾಲಯ

ಸಮೀಪದ ವಸ್ತು ಸಂಗ್ರಾಹಲಯಗಳಿಗೆ ಭೇಟಿ ನೀಡಿ ಅಲ್ಲಿರುವ ವಸ್ತುಗಳ ಬಗ್ಗೆ ಮಾಹಿತಿಯನ್ನು ಪಡೆಯುವುದು ಮತ್ತು ಆ ವಸ್ತು ಯಾವ ಕಾಲದಲ್ಲಿ ಬಳಸುತಿದ್ದರು , ಎಷ್ಟು ಹಳೆಯದಾಗಿದೆ ಮತ್ತು ಅದರ ಉಪಯೋಗ ಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ .
ಅಲ್ಲದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ, ಹೋರಾಡಿದ ಮಹಾನ್‌ ವ್ಯಕ್ತಿಗಳ ಮಾಹಿತಿ ಇಲ್ಲಿ ಸುಲಭವಾಗಿ ಸಿಗುತ್ತದೆ. ಈ ಮ್ಯೂಸಿಯಂ ಒಳಾಂಗಣ ಹಾಗೂ ಹೊರಾಂಗಣ ಗ್ಯಾಲರಿಗಳನ್ನು ನೋಡಬಹುದು , ಪ್ರತ್ಯೇಕ ಚಿತ್ರಗಳನ್ನು ಪ್ರದರ್ಶಿಸುತ್ತಿದೆ. ಸಾಕಷ್ಟು ವಿಧದ ಸಂಗ್ರಹವನ್ನು ಇಲ್ಲಿ ಕಣ್ಮುಂದೆ ತರುವ ಪ್ರಯತ್ನ ಇದರಾದಗಿದೆ .

ಅರಣ್ಯಗಳು

ಅರಣ್ಯದಲ್ಲಿ ಇರುವ ಮರಗಳು , ಔಷದಿಯ ಸಸ್ಯಗಳ , ಪ್ರಾಣಿಗಳ ಬಗ್ಗೆ ಶಿಕ್ಷಕರು ಮಕ್ಕಳಿಗೆ ಅರಣ್ಯದಲ್ಲಿ ನೈಜವಾಗಿ ತೋರಿಸುತ್ತಾ ಮಾಹಿತಿಯನ್ನು ನೀಡುವುದು . ಇದು ಹಳ್ಳಿಯಲ್ಲಿ ಇರುವ ಮಕ್ಕಳಿಗೆ ಹೆಚ್ಚಿನ ಮಾಹಿತಿಯನ್ನು ಗೊತೀರುತ್ತದೆ ಅದರಲ್ಲಿ ಮುಖ್ಯವಾಗಿ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇದರ ಮಾಹತ್ವ ಗೊತ್ತಿರುತ್ತದೆ . ಇಲ್ಲಿ ಅರಣ್ಯಕ್ಕೆ ಸಂಬಂದ ಪಟ್ಟಂತೆ ಹಲವಾರು ಮಾಹಿತಿಯನ್ನು ಹಲವಾರು ಜನರಿಗೆ ಗೊತ್ತೆ ಇರುವದಿಲ್ಲ .