ಬೆಳಕು
ವಿಜ್ಞಾನದ ತತ್ವಶಾಸ್ತ್ರ | lish |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ನಿಮ್ನ ದರ್ಪಣದಲ್ಲಿ ಪ್ರತಿಬಿ೦ಬ ಉ೦ಟಾಗುವಿಕೆ
ವಸ್ತುವು ವಕ್ರತಾಕೇ೦ದ್ರ (C) ದ ಹೊರಗಡೆ ಇರುವಾಗ ಬಿ೦ಬ ಉ೦ಟಾಗುವಿಕೆ :
ಪ್ರತಿಬಿ೦ಬವು ವಕ್ರತಾ ಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ಚಿಕ್ಕದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ. Image:
ವಸ್ತುವು ವಕ್ರತಾಕೇ೦ದ್ರ (C) ದ ಮೇಲೆ ಇರುವಾಗ ಬಿ೦ಬ ಉ೦ಟಾಗುವಿಕೆ :
ಬಿ೦ಬವು ವಕ್ರತಾಕೇ೦ದ್ರ (C) ಮೇಲೆಯೇ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿನಷ್ಟೇ ಗಾತ್ರದ್ದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ. Image:
ವಸ್ತುವು ವಕ್ರತಾಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :
ಬಿ೦ಬವು ವಕ್ರತಾಕೇ೦ದ್ರ (C) ಯ ಹೊರಗಡೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ. Image:https://encrypted-tbn0.gstatic.com/images?q=tbn:ANd9GcS28Hadh52rh45J0hL3qq-MhublDBSUvyXkUqIGiNRSOquWMgrS
ವಸ್ತುವು ಪ್ರಧಾನ ಸ೦ಗಮ (F) ದ ಮೇಲೆ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :
ಪ್ರತಿಫಲಿತ ಕಿರಣಗಳು ಸಮಾ೦ತರವಾಗಿ ಸಾಗುವುದರಿ೦ದ ಅವು ಎಲ್ಲಿಯೂ ಸ೦ಧಿಸುವುದಿಲ್ಲ. ಹೀಗಾಗಿ ಬಿ೦ಬ ಉ೦ಟಾಗುವುದಿಲ್ಲ. ಅಥವಾ ಬಿ೦ಬವು ಅನ೦ತ ದೂರದಲ್ಲಿ ಉ೦ಟಾಗುತ್ತದೆ , ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ತು೦ಬಾ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ ಎ೦ದು ಊಹಿಸಬಹುದು. Image:
ವಸ್ತುವು ದರ್ಪಣದಕೇ೦ದ್ರ (O) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :
ಬಿ೦ಬವು ದರ್ಪಣದ ಹಿ೦ದೆ ಉ೦ಟಾಗುತ್ತದೆ , ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿಲ್ಲ. ಆದ್ದರಿ೦ದ ಅದು ಮಿಥ್ಯಾ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆ ಮೇಲಾಗಿ ನೇರವಾಗಿರುತ್ತದೆ.
ಸಂಬಂಧ ಪುಸ್ತಕಗಳು
ಭೋಧನೆಯ ರೂಪರೇಶಗಳು
ಪರಿಕಲ್ಪನೆ #
ಬೆಳಕು : ಒಂದು ರೀತಿಯ ವಿದ್ಯುದಯಸ್ಕಾಂತೀಯ ವಿಕಿರಣ. ತಾಂತ್ರಿಕವಾಗಿ, ಯಾವುದೇ ಪುನರಾವರ್ತನೆಯನ್ನು ಹೊಂದಿರುವ ವಿದ್ಯುದಯಸ್ಕಾಂತೀಯ ವಿಕಿರಣವನ್ನು ಬೆಳಕು ಎನ್ನಬಹುದು. ಆದರೆ ಮಾನವರ ಕಣ್ಣಿಗೆ ಒಂದು ನಿಗದಿತ ವ್ಯಾಪ್ತಿಯೊಳಗೆ ಇರುವ ಪುನರಾವರ್ತನೆ ಹೊಂದಿರುವ ವಿಕಿರಣ ಮಾತ್ರ ಕಂಡು ಬಂದು, ಇದಕ್ಕೆ ಆಡುಭಾಷೆಯಲ್ಲಿ ಬೆಳಕು ಎನ್ನುತ್ತೇವೆ. ಬೆಳಕು ಮೂಲಭೂತವಾಗಿ ಫೋಟಾನ್ ಎಂಬ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ.
ಬೆಳಕಿನ ಮೂರು ಮೂಲಭೂತ ಲಕ್ಷಣಗಳೆಂದರೆ
ತೀವ್ರತೆ: ತಾಂತ್ರಿಕವಾಗಿ, ಇದು ಬೆಳಕಿನ ಅಲೆಯ ವಿಸ್ತಾರವನ್ನು ಸೂಚಿಸುತ್ತದೆ. ಮಾನವರ ಕಣ್ಣಿಗೆ ಬೆಳಕು ಎಷ್ಟು ಪ್ರಕಾಶಮಾನವಾಗಿದೆ ಎಂಬುದರ ಪರಿಮಾಣ ಇದು
ಪುನರಾವರ್ತನೆ: ಮಾನವರ ಕಣ್ಣಿಗೆ, ಈ ಗುಣ ಬೆಳಕಿನ "ಬಣ್ಣ"ವಾಗಿ ವ್ಯಕ್ತವಾಗುತ್ತದೆ. ತಾಂತ್ರಿಕವಾಗಿ, ಇದು ಬೆಳಕಿನ ಅಲೆಯ ಪುನರಾವರ್ತನಾ ಸಂಖ್ಯೆ.
ಧ್ರುವಿಕರಣ: ಇದು ಬೆಳಕಿನ ಅಲೆಯ ಕಂಪನದ ದಿಕ್ಕನ್ನು ಸೂಚಿಸುತ್ತದೆ. ಮಾನವರ ಕಣ್ಣಿಗೆ ಇದು ಸಾಮಾನ್ಯವಾಗಿ ವ್ಯಕ್ತವಾಗುವುದಿಲ್ಲ.
ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.99 ಲಕ್ಷ ಕಿಮೀ. ಅನೇಕ ಭೌತಶಾಸ್ತ್ರಾಜ್ಜರು ಬೆಳಕಿನ ವೇಗದ ಮೇಲೆ ನಡೆಸಿದ ಪ್ರಯೋಗಗಳ ಮೂಲಕ ಈ ಆಧುನಿಕ ಫಲಿತಾಂಶವನ್ನು ಪಡೆಯಲಾಗಿದೆ. ಬೆಳಕಿನ ವೇಗವನ್ನು ಅಳೆಯಲು ಮೊದಲ ಮುಖ್ಯ ಪ್ರಯತ್ನ ನಡೆಸಿದವರು ಡೆನ್ಮಾರ್ಕ್ ನ ಓಲ್ ರೋಮರ್. ಗುರು ಗ್ರಹದ ಉಪಗ್ರಹಗಳ ಚಲನೆಯ ಲೆಕ್ಕಾಚಾರಗಳು ಹಾಗೂ ಪ್ರಾಯೋಗಿಕ ಅಳತೆಗಳು ಸರಿಯಾಗಿ ಹೊಂದಿಕೆಯಾಗದ್ದನ್ನು ಗಮನಿಸಿ, ಇದರ ಆಧಾರದ ಮೇಲೆ ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.27 ಲಕ್ಷ ಕಿಮೀ ಎಂದು ಅವರು ಪ್ರತಿಪಾದಿಸಿದರು. ಬೆಳಕಿನ ವೇಗವನ್ನು ಅಳೆಯಲು ನಡೆಸಲಾದ ಪ್ರಸಿದ್ಧ ಆಧುನಿಕ ಪ್ರಯೋಗ ಆಲ್ಬರ್ಟ್ ಮೈಕೇಲ್ ಸನ್ ಅವರದ್ದು - ಇದರಂತೆ ಬೆಳಕಿನ ವೇಗ ಸೆಕೆಂಡಿಗೆ ಸುಮಾರು 2.99 ಲಕ್ಷ ಕಿಮೀ ಎಂದು ಕಂಡುಹಿಡಿಯಲಾಯಿತು.
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಚಟುವಟಿಕೆ ಸಂಖ್ಯೆ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಯೋಜನೆಗಳು
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.