ಪ್ರವೇಶದ್ವಾರ:ಸಮಾಜ ವಿಜ್ಞಾನ/ಸುದ್ದಿ
ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಉಪಯುಕ್ತ ತಾಣಗಳು
- ಸಮಾಜವಿಜ್ಞಾನ ಎಸ್.ಟಿ.ಎಫ್ ತಂಡದ ಶಿಕ್ಷಕರು ರಚಿಸಿಕೊಂಡ ಸಮಾಜವಿಜ್ಞಾನಡಿಜಿಟಲ್ ಗ್ರೂಪ್ ಮೂಲಕ ಅಭಿವೃದ್ದಿಪಡಿಸಿದ ಸಮಾಜವಿಜ್ಞಾನ ಸಂಪನ್ಮೂಲಗಳ ಸಮಾಜವಿಜ್ಞಾನ ಡಿಜಿಟಲ್ ಗ್ರೂಪ್ ಬ್ಲಾಗ್
- ಸಮಾಜ ವಿಜ್ಞಾನ ಶಿಕ್ಷಕರಿಂದ ಹಂಚಿಕೊಂಡಿರುವ ಕೆಲವೊಂದು ವೆಬ್ ಸೈಟ್ ಗಳನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ
ಕುತೂಹಲಕಾರಿ ಸುದ್ಧಿ ಮಾಧ್ಯಮದ ವಿಷಯಗಳು
ಸಮಾಜ ವಿಜ್ಞಾನ ಶಿಕ್ಷಕರಿಂದ ಹಂಚಿಕೊಂಡಿರುವ ಸುದ್ಧಿ ಮಾಧ್ಯಮದ ವಿಷಯಗಳನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ
ಆಲಮಟ್ಟಿಯಿಂದ ೨ ಕಿ.ಮೀ. 'ಆಲಮಟ್ಟಿ ಆಣೆಕಟ್ಟು' ಇದೆ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ1705.3272 ft (೨೮೫೮.೬೫ ? )ಅಡಿ. ಕೃಷ್ಣಾ ನದಿಗೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಉದ್ಘಾಟಿಸಿದರು.ಆಲಮಟ್ಟಿ ಆಣೆಕಟ್ಟನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಎಂದು ನಾಮಕರಣ ಮಾಡಲಾಗಿದೆ.ಶಾಸ್ತ್ರೀಯವರು ಆಣೆಕಟ್ಟಿನ ಅಡಿಗಲ್ಲು ಸಮಾರಂಭವನ್ನು ೧೯೬೪ರಲ್ಲಿ ಮಾಡಿದ್ದರು. ಅಣೆಕಟ್ಟೆಯ ಕೆಲಸ ಮುಗಿದ ವರ್ಷ ಜುಲೈ ೨೦೦೫ ಮತ್ತು ಅಣೆಕಟ್ಟೆಯ ಎತ್ತರ - ೫೨.೨೫ ಮಿ., ಉದ್ದ - ೧೫೬೫.೧೫ ಮಿ.
ವಿವಿಧೋದ್ದೇಶ ಯೋಜನೆ ಆಲಮಟ್ಟಿ ಅಣೆಕಟ್ಟು ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಒಂದು ದೊಡ್ಡ ನೀರಾವರಿ ಮತ್ತು ವಿದ್ಯುತ್ ಯೋಜನೆ. ಇದು ಕರ್ಣಾಟಕದ ಉತ್ತರದಲ್ಲಿರುವ ಬಾಗಿಲಕೋಟೆ , ಬೀಜಾಪುರ ಜಿಲ್ಲೆಗಳ ಅಂಚಿನಲ್ಲಿರುವ ಕೃಷ್ಣಾ -ಮೇಲುಭಾಗದ (ಅಪ್ಪರ್-ಕೃಷ್ಣಾ) ಯೋಜನೆ,ಕರ್ನಾಟಕದ ಬೀಜಾಪುರ ಜಿಲ್ಲೆಯಲ್ಲಿದೆ. ಇದು (ಅಪ್ಪರ್-ಕೃಷ್ಣಾ) ಯೋಜನೆಯಲ್ಲಿ ಪ್ರಮುಖವಾದ ಅಣೆಕಟ್ಟು.ಈ ಅಣೆಕಟ್ಟು ಜಲವಿದ್ಯತ್ ಯೋಜನೆಯಲ್ಲಿ ೨೯೦ ಮೆಗಾ ವ್ಯಾಟ್ (ಯೂನಿಟ್) ವಿದ್ಯುತ್ ಉತ್ಪತ್ತಿಯಾಗುತ್ತದೆ; ಉತ್ಪಾದನ ಗುರಿ /ಸಾಮರ್ಥ್ಯ - ೫೬೦ ಎಮ್ ಯು -ಜಿಡಬ್ಲಯು) ಇದರಲ್ಲಿ ಲಂಬ ಕಪ್ಲಾನ್ ಟರ್ಬೈನ್ ಗಳನ್ನು ಉಪಯೋಗಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಅಣೆಕಟ್ಟೆಯ ಬಲಭಾಗದಲ್ಲಿ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ. ಇದರಲ್ಲಿ ೫೫ಮೆ.ವ್ಯಾಟ್ ನ ಐದು ಜನರೇಟರುಗಳೂ ,೧೫ ಮೆವ್ಯಾ.ನ ಒಂದು ಜನರೇಟರೂ-ವಿದ್ಯುತ್ ಉತ್ಪಾದನ ಘಟಕವೂ ಇವೆ. ಹೀಗೆ ವಿದ್ಯುತ್ ಉತ್ಪಾದನೆಯಾಗಲು ಉಪಯೋಗಿಸಿದ ನೀರು ಕೆಳಭಾಗದಲ್ಲಿರುವ ಆಂಧ್ರ ಪ್ರದೇಶದ ನಾರಾಯಣಪುರದ ಜಲಾಶಯಕ್ಕೆ ಹೋಗುತ್ತದೆ.