ರೆಕಾರ್ಡ್ ಮೈ ಡೆಸ್ಕ್‌ಟಾಪ್ ಕಲಿಯಿರಿ
ಪರಿಚಯ
ರೆಕಾರ್ಡ್ ಮೈ ಡೆಸ್ಕ್‌ಟಾಪ್' ಎಂಬುದು ಇದರ ಹೆಸರೇ ಸೂಚಿಸುವಂತೆ ಗಣಕ ತೆರೆಯಮೇಲೆ ಮೂಡುತ್ತಿರುವ ಎಲ್ಲಾ ಪ್ರಕ್ರಿಯೆಗಳನ್ನು ಅಗತ್ಯಕ್ಕೆ ತಕ್ಕಂತೆ ಮುದಿಸಿಕ್ಕೊಳ್ಳುವುದೇ ಆಗಿದೆ.
ಐ.ಸಿ.ಟಿ ಸಾಮರ್ಥ್ಯ
ಇದು ಸಾರ್ವತ್ರಿಕ ವೀಡಿಯೋ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ರೆಕಾರ್ಡ್‌ಮೈಡೆಸ್ಕ್‌ಟಾಪ್ ಎಂಬುದು ಗಣಕತೆರೆಯ ಮೇಲೆ ಮೂಡುವ ಎಲ್ಲಾ ರೀತಿಯ ಕಾರ್ಯಚಟುವಟಿಕೆಯನ್ನು ಆಡಿಯೋ ಸಹಿತ ವೀಡಿಯೋ ರೂಪದಲ್ಲಿ ಸೆರೆಹಿಡಿದು ಕೊಡುತ್ತದೆ. ತರಗತಿ ಕೋಣೆಗೆ ಅಗತ್ಯವಿರುವ ವೀಡಿಯೋಗಳನ್ನು ರಚಿಸಲು, ಸ್ಥಳೀಯ ಭಾಷೆಗೆ ಧ್ವನಿಮರುಮುದ್ರಣ ಮಾಡಲು ಈ ಅನ್ವಯಕವನ್ನು ಬಳಸಬಹುದು.
ಆವೃತ್ತಿ
The current version is: recordMyDesktosp : 0.3.8.1
ಸಂರಚನೆ
ರೆಕಾರ್ಡ್‌ಮೈಡೆಸ್ಕ್‌ಟಾಪ್ ಅನ್ವಯಕವು, ಉಬುಂಟು ಕಸ್ಟಮ್ ನ ಭಾಗವಾಗಿದೆ. ಇದನ್ನು Applications → Sound and Video → RecordMyDesktop ಮೂಲಕ ತೆರೆಯಬಹುದಾಗಿದೆ.
ಲಕ್ಷಣಗಳ ಮೇಲ್ನೋಟ
- ವೀಡಿಯೋ ರೆಕಾರ್ಡಿಂಗ್ ಮಾಡುವಾಗ ಮಧ್ಯದಲ್ಲಿ ನಿಲ್ಲಿಸಿ ನಂತರ ಮುಂದುವರೆಸಬಹುದು.
- ಪೂರ್ತಿ ಪರದೆಯನ್ನು ಅಥವಾ ನಮಗೆ ಬೇಕಾದ ವಿಂಡೋವನ್ನು ಆಯ್ಕೆ ಮಾಡಿಕೊಂಡು ರೆಕಾರ್ಡ್ ಮಾಡಬಹುದು.
ಇತರೇ ಸಮಾನ ಅನ್ವಯಕಗಳು
SimpleScreenRecorder SimpleScreenRecorder is a Linux screen recorder that supports X11 and OpenGL. It is easy to use, feature-rich. Kazam Kazam is a simple screen recording program that will capture the content of your screen and record a video file that can be played by any video player that supports VP8/WebM video format. VokoScreen A small program to create screen videos including sound recording.
ಅಭಿವೃದ್ದಿ ಮತ್ತು ಸಮುದಾಯ ಸಹಾಯ
ಅನ್ವಯಕ ಬಳಕೆ
ಕಾರ್ಯಕಾರಿತ್ವ
- Image
ಹಂತ 1- ಅಪ್ಲಿಕೇಷನ್ → ಧ್ವನಿ ಮತ್ತು ವೀಡಿಯೋ → ರೆಕಾರ್ಡ್ ಮೈ ಡೆಸ್ಕ್‌ಟಾಪ್ → ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಇಲ್ಲಿ ವಿಡಿಯೋ ಗುಣಮಟ್ಟವನ್ನು ಮತ್ತು ಶಬ್ದದ ಗುಣಮಟ್ಟವನ್ನು ನಿಗದಿ ಮಾಡಿಕೊಳ್ಳಬಹುದು. Sound Quality ನ್ನ ಆಯ್ಕೆ ಮಾಡದೇ ಬಿಟ್ಟರೆ ಕಂಪ್ಯೂಟರ್ನಲ್ಲಿ ಪ್ಲೇ ಆಗುವ ಯಾವುದೇ ಶಬ್ದವೂ ವೀಡಿಯೋ ಜೊತೆ ರೆಕಾರ್ಡ್ ಆಗುವುದಿಲ್ಲ. ವೀಡಿಯೋ ಮತ್ತು ಶಬ್ದದ ಗುಣಮಟ್ಟವನ್ನು ಹೆಚ್ಚಿಸಿದರೆ, ಆ ವೀಡಿಯೋದ ಕಡತ ಗಾತ್ರವೂ ಹೆಚ್ಚಾಗಿರುತ್ತದೆ.
- ನಂತರ RECORD ಬಟನ್ ಒತ್ತಿದರೆ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
- Image
ಹಂತ 2- ಇದರಲ್ಲಿ ಪೂರ್ತಿ ಪರದೆಯನ್ನು ಅಥವಾ ನಮಗೆ ಬೇಕಾದ ವಿಂಡೋವನ್ನು ಆಯ್ಕೆ ಮಾಡಿಕೊಂಡು ರೆಕಾರ್ಡ್ ಮಾಡಬಹುದು. “Select window” ಆಯ್ಕೆ ಮಾಡಿಕೊಂಡ ನಂತರ, ರೆಕಾರ್ಡ್ ಆಗಬೇಕಿರುವ ವಿಂಡೋವನ್ನು ಆಯ್ಕೆ ಮಾಡಬೇಕು. ನಂತರ RECORD ಬಟನ್ ಒತ್ತಿದರೆ ರೆಕಾರ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
- Image
ಹಂತ 3- ರೆಕಾಡಿಂಗ್ ಮುಗಿದಿದೆ ಎನಿಸಿದಾಗ, ಗಣಕತೆರೆಯ ಪ್ಯಾನೆಲ್ನಲ್ಲಿನ ರೆಕಾರ್ಡ್‌ಮೈಡೆಸ್ಕ್‌ಟಾಪ್ ಸೂಚಕದ ಮೇಲೆ ಒತ್ತಿರಿ. ಅಲ್ಲಿ ನಮಗೆ STOP ಮತ್ತು PAUSE ಅಯ್ಕೆಗಳು ಕಾಣುತ್ತವೆ. ರೆಕಾರ್ಡಿಂಗ್ ಪೂರ್ಣಗೊಳಿಸಲು STOP ಬಟನ್ ಒತ್ತಬೇಕು. ನಂತರ ಚಿತ್ರದಲ್ಲಿರುವಂತೆ ಲೋಡಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಇದು ಪೂರ್ಣಗೊಳ್ಳುವ ವರೆಗೂ ಕಾಯಬೇಕು. ಒಮದು ವೇಳೆ ರೆಕಾರ್ಡಿಂಗ್ ಪ್ರಕ್ರಿಯೆಯನ್ನು ಸದ್ಯಕ್ಕೆ ನಿಲ್ಲಿಸಿ ನಂತರ ಮತ್ತೆ ಮುಂದುವರೆಸುವುದಾದಲ್ಲಿ PAUSE ಬಟನ್ ಒತ್ತಿರಿ. ನಂತರ ಮುಂದುವರೆಸಲು “Continuing Recod” ಒತ್ತಿರಿ.
- Image
ಹಂತ 4- ರೆಕಾರ್ಡಿಂಗ್ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಡತವು ತನ್ನಿಂತಾನೆ ನಿಮ್ಮ ಕಂಪ್ಯೂಟರ್‌ನ "HOME" ಕಡತಕೋಶದಲ್ಲಿ .ogv ನಮೂನೆಯಲ್ಲಿ ಸೇವ್ ಆಗಿರುತ್ತದೆ.
ಕಡತ ರೂಪ
ಕಡತ ಉಳಿಸಿಕೊಳ್ಳುವುದು
ರೆಕಾರ್ಡಿಂಗ್ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಡತವು ತನ್ನಿಂತಾನೆ ನಿಮ್ಮ ಕಂಪ್ಯೂಟರ್‌ನ "HOME" ಕಡತಕೋಶದಲ್ಲಿ .ogv ನಮೂನೆಯಲ್ಲಿ ಸೇವ್ ಆಗಿರುತ್ತದೆ.
ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್) ಮತ್ತು ಪ್ರಕಟಣೆ
ಉನ್ನತೀಕರಿಸಿದ ಲಕ್ಷಣಗಳು
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |
---|---|
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ | Type "Record My Desktop" in search bar and then click Install |
ಟರ್ಮಿನಲ್‌ನಿಂದ | sudo apt-get install recordmydesktop |
ವೆಬ್‌ಪುಟದಿಂದ | http://recordmydesktop.sourceforge.net/downloads.php visit this webpage to download |
ವೆಬ್‌ಆಧಾರಿತ ನೊಂದಣಿ | Steps |
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ
ಆಂಡ್ರಾಯಿಡ್ ಮೊಬೈಲ್‌ನಲ್ಲಿ ಬಳಸಲು ರೆಕಾರ್ಡ್‌ಮೈಡೆಸ್ಕ್‌ಟಾಪ್ ರೀತಿಯ ಹಲವು ಅನ್ವಯಕಗಳು ಲಭ್ಯವಿವೆ. ಅದರಲ್ಲಿ AZ Screen Recorder, Screen Recorder ಮುಂತಾದವುಗಳಿವೆ. Ideas for resource creation ತರಗತಿ ಕೋಣೆಗಳಲ್ಲಿ ಬಳಸಲು ಪೂರಕವಾದ ವಿಡಿಯೋಗಳನ್ನುನ ರಚಿಸಿಕೊಳ್ಳಬಹುದು. ತರಗತಿ ಬೋಧನೆಗೆ ಅವಶ್ಯಕವಿರುವ ವೀಡಿಯೋ ಸಂಪನ್ಮೂಲಗಳು ಇತರೇ ಭಾಷೆಯಲ್ಲಿದ್ದಾಗ, ಅದನ್ನ ರೆಕಾರ್ಡ್‌ಮೈಡೆಸ್ಕ್‌ಟಾಪ್ ಮೂಲಕ ಸ್ಥಳೀಯ ಭಾಷೆಯನ್ನು ಧ್ವನಿಮುದ್ರಣದ ಮೂಲಕ ನೀಡಬಹುದು.