ಶಿಕ್ಷಕರ ಕಲಿಕಾ ಸಮುದಾಯ ೨೦೧೮
ಶಿಕ್ಷಕರ ಕಲಿಕಾ ಸಮುದಾಯ ಗಣಿತ ಪುಟ
ಕಾರ್ಯಗಾರದ ಗುರಿಗಳು
- ನಿರಂತರ ಕಲಿಕೆಗಾಗಿ ಗಣಿತ ಶಿಕ್ಷಕರ ಸಮುದಾಯಕ್ಕೆ ಪರಿಚಿತವಾಗುವುದು
- ಶಿಕ್ಷಕರ ನಿರಂತರ ಕಲಿಕೆಗೆ ತಂತ್ರಜ್ಞಾನ ಹೇಗೆ ಪ್ರೋತ್ಸಾಹಿಸುತ್ತದೆ ಎಂಬ ಮೆಚ್ಚುಗೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
- ಡಿಜಿಟಲ್ ಪರಿಕರಗಳು ಹಾಗು ಪ್ರಕ್ರಿಯೆಗಳ ಬಗ್ಗೆ ಮೂಲಭೂತ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
- ಅಂತರ್ಜಾಲದಲ್ಲಿ ಹೇಗೆ ಕಲಿಕಾ ಸಂಪನ್ಮೂಲಗಳನ್ನು ಹುಡುಕುವುದು ಹಾಗು ಮೌಲ್ಯಮಾಪನ ಮಾಡುವುದು ಎನ್ನುವುದನ್ನು ಅರ್ಥೈಸುವುದು.
- ಮಿಂಚಂಚೆ ಆಧಾರಿತ ಹಾಗು ಮೊಬೈಲ್ ಆಧಾರಿತ ಸಮುದಾಯಗಳ ಜೊತೆಗಿನ ಒಡನಾಟಗಳಿಗೆ ಕೌಶಲ್ಯಗಳನ್ನು ಹೊಂದುವುದು.
- ಜಿಯೋಜಿಬ್ರಾ ಬಳಸಿ ಬೋಧನಾ ಕಲಿಕೆಗೆ ಸಂಪನ್ಮೂಲಗಳನ್ನು ಸೃಷ್ಟಿಸುವುದು.
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು | ನಿರೀಕ್ಷಿತ ಫಲಿತಾಂಶಗಳು |
ದಿನ 1 | ||||
9.30 – 10.00 | ಸ್ವಾಗತ ಮತ್ತು ಪರಿಚಯ | ನೋಂದಣಿ ಹಾಗು ಪರಿಚಯಿಸಿಕೊಳ್ಳುವುದು
ಕಾರ್ಯಗಾರದ ಪರಿಕರಗಳು |
ಭಾಗಿದಾರರ ಕೈಪತ್ರದಲ್ಲಿ ಕಾರ್ಯಗಾರದ ಕಾರ್ಯಸೂಚಿ ಹಾಗು ಸುತ್ತೋಲೆಯ ಪ್ರತಿ | ಎಲ್ಲಾ ಶಿಕ್ಷಕರು ಹಾಗು ಸಂಪನ್ಮೂಲ ವ್ಯಕ್ತಿಗಳು ಪರಸ್ಪರ ಪರಿಚಯಿಸಿಕೊಳ್ಳುವುದು |
10.00 – 11.00 | ಕಾರ್ಯಕ್ರಮಕ್ಕೆ ಪರಿಚಯ | ಸಂದರ್ಭದ ಹಂಚಿಕೆ ಹಾಗು ನಿರೀಕ್ಷೆಗಳ ಮತ್ತು ಯೋಜನೆಗಳ ಮಾಹಿತಿ
ಟಿಕಾಲ್ ಕಾರ್ಯಕ್ರಮದ ವ್ಯಾಪ್ತಿ. ಚಟುವಟಿಕೆಗಳನ್ನು ಸೂಚಿಸುವ ಅಭ್ಯಾಸಕ್ರಮ ಮತ್ತು ವೇಳಾಪಟ್ಟಿ. |
ಕಾರ್ಯಕ್ರಮದ ಯೋಜನೆಯ ಬಗ್ಗೆ ಪ್ರಸ್ತುತಿ (ODP)
ಗಣಿತ ಕಾರ್ಯಕ್ರಮದ ಬಗ್ಗೆ KOER ಪುಟ |
ಗಣಿತ ಬೋಧನೆ ಕಲಿಕೆಯಲ್ಲಿ ತಂತ್ರಜ್ಞಾನ ಸಂಯೋಜನೆಯಿಂದ ಆಗುವ ಸಾಧ್ಯತೆಗಳ ಬಗ್ಗೆ ಹಾಗು ಅದರ ಪ್ರಸಕ್ತತೆಯ ಬಗ್ಗೆ ಹಂಚಿಕೊಳ್ಳುವುದರ ಮೂಲಕ ಅರ್ಥೈಸುವುದು |
11.00 – 1.30 | ಸಂಪರ್ಕ ಹಾಗು ಕಲಿಕೆಗಾಗಿ ತಂತ್ರಜ್ಞಾನ | . ವೈಯಕ್ತಿಕ ಡಿಜಿಟಲ್ ಗ್ರಂಥಾಲಯದ ಸೃಷ್ಟಿ – ಸ್ವಕಲಿಕೆಗಾಗಿ ಹಾಗು ಬೋಧನೆ ಕಲಿಕೆಗಾಗಿ
2. ಅಂತರ್ಜಾಲದಲ್ಲಿ ಸಂಪನ್ಮೂಲಗಳನ್ನು ಹುಡುಕುವುದು ಹೇಗೆ ಹಾಗು ಡಿಜಿಟಲ್ ಸಂಪನ್ಮೂಲಗಳ ಸೃಷ್ಟಿ, ಸಂಪಾದನೆ, ಜೋಡಣೆ ಮತ್ತು ಬಳಕೆಯ ಬಗ್ಗೆ. 3. ಗಣಿತ ಬೋಧನೆ ಕಲಿಕೆಯಲ್ಲಿ ಹಲವಾರು ಸಂಪನ್ಮೂಲಗಳ ಹುಡುಕಾಟ ಹಾಗು ಮೌಲ್ಯಮಾಪನ 4. ವೆಬ್ನಲ್ಲಿ ಕೃತಿಸ್ವಾಮ್ಯ ಹಾಗು ಪರವಾನಿಗೆ - ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು (ಮುಶೈಸಂ) |
1. ಉಬುಂಟು ಪರಿಚಯ
2. ಫೈರ್ಫಾಕ್ಸ್ ಪರಿಚಯ 3. ವೈಯಕ್ತಿಕ ಡಿಜಿಟಲ್ ಗ್ರಂಥಾಲಯದ ಸೃಷ್ಟಿ 4. ಉಪಯುಕ್ತ ವೆಬ್ ಸಂಪನ್ಮೂಲಗಳನ್ನು ಬೇರೆ ಬೇರೆ ಬಳಕೆಗಾಗಿ ವಿಭಾಗಿಸಿದೆ. |
1. ಭಾಗಿದಾರರು ಸ್ವತಂತ್ರರಾಗಿ ಗಣಕಯಂತ್ರದೊಂದಿಗೆ ಕೆಲಸ ಮಾಡಬಲ್ಲರು. ಕಡತಕೋಶಗಳನ್ನು ಸೃಷ್ಟಿಸಿ ಬಳಸಬಲ್ಲರು.
2. ಭಾಗಿದಾರರು ಜಾಲತಾಣದಿಂದ ಸಂಪನ್ಮೂಲಗಳನ್ನು ಹುಡುಕಬೇಕು ಹಾಗು ಅವುಗಳನ್ನು ಪರಿಶೀಲಿಸಿ ತಮ್ಮ ಕೆಲಸಗಳಿಗೆ ಬಳಸಬೇಕು - ಜಾಲತಾಣದ ಕೊಂಡಿಗಳನ್ನು ಹಂಚಬೇಕು ಹಾಗು ತಮ್ಮ ಕಡತಕೋಶಗಳಲ್ಲಿ ಬಳಸಬೇಕು - ಚಿತ್ರಗಳು, ದೃಶ್ಯಾವಳಿಗಳು, ಪುಟಗಳನ್ನು (ಕಾನೂಬದ್ಧ ರೀತಿಯಲ್ಲಿ ನೀಡಿದಾಗ ) ತೆಗೆದುಕೊಳ್ಳುವುದು - ಕಡತಕೋಶಗಳಲ್ಲಿ ಜೋಡಿಸುವುದು - ಪಠ್ಯ ದಸ್ತಾವೇಜಿನಲ್ಲಿ ದಾಖಲಿಸುವುದು. 3. ಭಾಗಿದಾರರು ಮುಶೈಸಂ ಅನ್ನು ಗುರುತಿಸಬಲ್ಲರು. |
2.15 – 4.00 | ಗಣಿತ ಕಲಿಕೆಯಲ್ಲಿ ಜಿಯೋಜಿಬ್ರಾ | 1. ಗಣಿತ ಕಲಿಕೆಗೆ ಜಿಯೋಜಿಬ್ರಾ ಹೇಗೆ ಪ್ರಯೋಜನಕಾರಿಯಾಗಿದೆ.
2. ಜಿಯೋಜಿಬ್ರಾ ಬಳಸಿ ಚಿತ್ರಿಸುವುದನ್ನು ಪರಿಚಯ ಮಾಡಿಕೊಳ್ಳುವುದು. |
1. ಪಠ್ಯಪುಸ್ತಕಗಳು
2. TPCK ಯ ದಸ್ತಾವೇಜುಗಳು 3. ಜಿಯೋಜಿಬ್ರಾ ಪರಿಚಯ |
1. ಭಾಗಿದಾರರು ಸಾಂಪ್ರದಾಯಿಕ ಗಣಿತ ಬೋಧನೆಯಲ್ಲಿ ಗಣಿತ ಕಲಿಕೆಗೆ ಜಿಯೋಜಿಬ್ರಾ ಹೇಗೆ ಉತ್ತೇಜಿಸಬಲ್ಲದು ಎಂದು ನೋಡಿದ್ದಾರೆ.
2. ಭಾಗಿದಾರರು ಇವನ್ನು ಮಾಡುತ್ತಾರೆ - ಜಿಯೋಜಿಬ್ರಾ ಕಡತವನ್ನು ತೆರೆಯುವುದು - ತೆರೆಯ ಮೇಲಿನ ಆಯ್ಕೆಗಳನ್ನು ಬಳಸುವುದು - ಜಿಯೋಜಿಬ್ರಾ ಬಳಸಿ ಚಿತ್ರಿಸುವುದು - ಟೆಕ್ಸ್ಟ್ ಬಾಕ್ಸ್, ಚಿತ್ರದ ರಫ್ತು ಆಯ್ಕೆಗಳ ಬಳಕೆ - ಜಿಯೋಜಿಬ್ರಾ ಕಡತವನ್ನು ಉಳಿಸುವುದು - ಇನ್ಪುಟ್ ಬಾರ್ ಬಳಕೆ. |
ದಿನ 2 | ||||
9.30 – 11.30 | ಸಂಪರ್ಕ ಹಾಗು ಕಲಿಕೆಗಾಗಿ ತಂತ್ರಜ್ಞಾನ | 1. ವೈಯಕ್ತಿಕ ಡಿಜಿಟಲ್ ಗ್ರಂಥಾಲಯದ ಸೃಷ್ಟಿ – ಸ್ವಕಲಿಕೆಗಾಗಿ ಹಾಗು ಬೋಧನೆ ಕಲಿಕೆಗಾಗಿ
2. ಗಣಿತ ಸಂಪನ್ಮೂಲ ಭಂಡಾರಗಳನ್ನು ಹುಡುಕುವುದು ಹಾಗು ಗುರುತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕಡತಕೋಶಗಳನ್ನು ಸೃಷ್ಟಿಸುವುದು. 3. ಮಿಂಚಂಚೆ ಹಾಗು ಮೊಬೈಲ್ ಆಧಾರಿತ ಗುಂಪುಗಳಲ್ಲಿ ಪಾಲ್ಗೊಳ್ಳುವುದು. |
ಮೇಲಿನ ಸಂಪನ್ಮೂಲಗಳು.
ಈಮೇಲ್ (ಮಿಂಚಂಚೆ ) ಕಲಿಯಿರಿ |
1. ಭಾಗಿದಾರರು ಸ್ವತಂತ್ರರಾಗಿ ಗಣಕಯಂತ್ರದೊಂದಿಗೆ ಕೆಲಸ ಮಾಡಬಲ್ಲರು. ಕಡತಕೋಶಗಳನ್ನು ಸೃಷ್ಟಿಸಿ ಬಳಸಬಲ್ಲರು.
2. ಭಾಗಿದಾರರು ಜಾಲತಾಣದಿಂದ ಸಂಪನ್ಮೂಲಗಳನ್ನು ಹುಡುಕಬೇಕು ಹಾಗು ಅವುಗಳನ್ನು ಪರಿಶೀಲಿಸಿ ತಮ್ಮ ಕೆಲಸಗಳಿಗೆ ಬಳಸಬೇಕು- ಜಾಲತಾಣದ ಕೊಂಡಿಗಳನ್ನು ಹಂಚಬೇಕು ಹಾಗು ತಮ್ಮ ಕಡತಕೋಶಗಳಲ್ಲಿ ಬಳಸಬೇಕು- ಚಿತ್ರಗಳು, ದೃಶ್ಯಾವಳಿಗಳು, ಪುಟಗಳನ್ನು (ಕಾನೂಬದ್ಧ ರೀತಿಯಲ್ಲಿ ನೀಡಿದಾಗ ) ತೆಗೆದುಕೊಳ್ಳುವುದು - ಕಡತಕೋಶಗಳಲ್ಲಿ ಜೋಡಿಸುವುದು- ಪಠ್ಯ ದಸ್ತಾವೇಜಿನಲ್ಲಿ ದಾಖಲಿಸುವುದು. 3. ಭಾಗಿದಾರರು ಮಿಂಚಂಚೆಗಳನ್ನು ಕಳಿಸಬಲ್ಲರು ಹಾಗು ಲಗತ್ತುಗಳನ್ನು ಬಳಸಬಲ್ಲರು. 4. ಮಿಂಚಂಚೆ ಹಾಗು ಮೊಬೈಲ್ನಲ್ಲಿ ಟೆಲಿಗ್ರಾಮ್ ಆಧಾರಿತ ಗುಂಪುಗಳಲ್ಲಿ ಪಾಲ್ಗೊಳ್ಳುವುದು. |
11.30 – 1.30 | ಗಣಿತ ಕಲಿಕೆಯಲ್ಲಿ ಜಿಯೋಜಿಬ್ರಾ | 1. ತರಗತಿಗಳನ್ನು ನೆಡೆಸುವಲ್ಲಿ ಜಿಯೋಜಿಬ್ರಾ ಬಳಕೆ.
2. ಸಂಪನ್ಮೂಲಗಳ ಸೃಷ್ಟಿಯಲ್ಲಿ ಜಿಯೋಜಿಬ್ರಾ ಬಳಕೆ. |
1. ಪಠ್ಯಪುಸ್ತಕಗಳು
2. TPCK ಯ ದಸ್ತಾವೇಜುಗಳು 3. ಜಿಯೋಜಿಬ್ರಾ ಪರಿಚಯ |
1. ಭಾಗಿದಾರರು ಜಿಯೋಜಿಬ್ರಾ ಬಳಸಿ ಪಾಠದ ಯೋಜನೆಯನ್ನು ಅಭಿವೃದ್ಧಿ ಮಾಡಿರುವರು. (ಗುಂಪಿನಲ್ಲಿ ಕೆಲಸ ಮಾಡುತ್ತಾ)
2. ಭಾಗಿದಾರರು ಸಾಂಪ್ರದಾಯಿಕ ಗಣಿತ ಬೋಧನೆಗಿಂತ ಜಿಯೋಜಿಬ್ರಾ ಮೂಲಕ ನೆಡೆಸಿದ ಗಣಿತ ಕಲಿಕೆಯಲ್ಲಿ ಹೆಚ್ಚು ಪ್ರಯೋಜನವಿದೆ ಎಂದು ನೋಡಿದ್ದಾರೆ. 3. ಜಿಯೋಜಿಬ್ರಾದಲ್ಲಿ ಸ್ಲೈಡರ್ ಹಾಗು ಇನ್ಪುಟ್ ಬಾರ್ ಆಯ್ಕೆಗಳನ್ನು ಬಳಸಿ ಅನಿಮೇಶನ್ಗಳನ್ನು ಸೃಷ್ಟಿಸುವುದು. |
2.15 – 3.15 | ಗಣಿತ ಕಲಿಕೆಯಲ್ಲಿ ಜಿಯೋಜಿಬ್ರಾ | ಜಿಯೋಜಿಬ್ರಾ ಪಾಠಗಳನ್ನು ಹಂಚಿಕೊಳ್ಳುವುದು
ಜ್ಯಾಮಿತಿಗಾಗಿ ಸೃಷ್ಟಿಸಿದ ಉದಾಹರಣಾ ಸಂಪನ್ಮೂಲಗಳನ್ನು ಪ್ರದರ್ಶಿಸುವುದು. |
ಜ್ಯಾಮಿತಿಗಾಗಿ ಸಂಪನ್ಮೂಲ ದಸ್ತಾವೇಜು
ಜಿಯೋಜಿಬ್ರಾ ಕಡತಗಳು, ಚಟುವಟಿಕೆಗಳು ಹಾಗು ಕಾರ್ಯ ದಾಖಲೆಗಳನ್ನು ಅಭಿವೃದ್ಧಿಸುವುದು |
1. ಭಾಗಿದಾರರು ಒಂದು ಉದಾಹರಣಾ ಸಂಪನ್ಮೂಲವನ್ನು ನೋಡಿ ಹೇಗೆ ಪಾಠಗಳನ್ನು ಮಾಡಬಹುದೆಂದು ನೋಡಿದ್ದಾರೆ.
2. ಭಾಗಿದಾರರು ಕಾರ್ಯಗಾರಕ್ಕೆ ಮುಂಚೆ ಹಾಗು ಅದರ ಸಮಯದಲ್ಲಿ ಸೃಷ್ಟಿಸಿದ ಸಂಪನ್ಮೂಲಗಳನ್ನು ನೋಡುತ್ತಾರೆ. |
3.15 – 4.00 | ಹಿಮ್ಮಾಹಿತಿ ಹಾಗು ಮುಂದಿನ ಯೋಜನೆಗಳು | ವಲಯಮಟ್ಟದ ಕಾರ್ಯಕ್ರಮಕ್ಕೆ ಭಾಗಿದಾರರ ಪಠ್ಯಕ್ರಮ ಅಭಿವೃದ್ಧಿ | ಮುಖ್ಯ ಶಿಕ್ಷಕರ ಕಾರ್ಯಗಾರದಲ್ಲಿ ಹಂಚಿದ ಸೂಚಕ ಪಠ್ಯಕ್ರಮ | ಕಲಿಕೆಗಾಗಿ ಅಭ್ಯಾಸಕ್ರಮದ ಅಭಿವೃದ್ಧಿಯ ರೂಪುರೇಷೆ. |
ಕಾರ್ಯಗಾರದ ಸಂಪನ್ಮೂಲಗಳು
NCERT ಗಣಿತ ಪಠ್ಯಪುಸ್ತಕಗಳು
ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು
[ಕೆಲವು ಪ್ರಮುಖ ಗಣಿತ ವಿಷಯ ತಾಣಗಳು]
ಮುಂದಿನ ಯೋಜನೆಗಳು
- ಈಮೇಲ್ ಹಾಗು ಟೆಲಿಗ್ರಾಮ್ ಸಂವಹನದ ಮೂಲಕ ಪಾಠ ಯೋಜನೆಗಳು/ ಶಾಲಾ ಮಟ್ಟದ ಚಟುವಟಿಕೆಗಳು
- ಶಾಲಾ ಮಟ್ಟದ ಡೆಮೊ ತರಗತಿಗಳು
- ವೃತ್ತಿಪರ ಕಲಿಕಾ ಸಮುದಾಯ - ಜಿಯೋಜಿಬ್ರಾ ಕಡತಗಳನ್ನು ಒಳಗೊಂಡಂತೆ ಗಣಿತ ಸಂಪನ್ಮೂಲಗಳನ್ನು ಟಿಕಾಲ್ ಗಣಿತ ಟೆಲಿಗ್ರಾಮ್ ಗುಂಪು ಹಾಗು ಟಿಕಾಲ್ ಅನುದಾನಿತ ಶಾಲೆಗಳ ಈಮೇಲ್ ಪಟ್ಟಿಗಳಿಗೆ
- ಎರಡನೇ ವಲಯ ಮಟ್ಟದ ಕಾರ್ಯಗಾರ
ಕಾರ್ಯಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ