ಚಿಗುರು ೦೧ - ಪರಿಚಯದ ಹೊಸ ಹೆಜ್ಜೆ
ಉದ್ದೇಶ ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯಮಾಡಿ, ಅದರಲ್ಲಿ ಭಾಗವಹಿಸಲು ಅವರಿಗೆ ಖುಶಿ ಮತ್ತು ಉತ್ಸಾಹ ಮೂಡುವಂತೆ ಮಾಡುವುದು.
ಪ್ರಕ್ರಿಯೆ :
(ನಾವು ಅವರಿಗೆ ಕೊಡುವ ಸ್ಟೈಲ್ ಥೈಲಿ - ಸ್ಟಿಕ್ಕರ್, ಚಾಕ್ಲೇಟ್) (೧೦ ನಿಮಿಷ)
ಮೊದಲಿಗೆ ಕಾರ್ತೀಕ್ ತಮ್ಮ ಹೆಸರು ಮತ್ತೆ ತಮಗಿಷ್ಟವಾದ ತಿಂಡಿ ಹೇಳುವುದರೊಂದಿಗೆ ಪರಿಚಯ ಮಾಡಿಕೊಂಡು, ಕಿಶೋರಿಯರನ್ನು ತಮ್ಮ ಪರಿಚಯ ಹಂಚಿಕೊಳ್ಳಲು ಹೇಳುತ್ತಾರೆ. ೩೦ ಜನರ ಪರಿಚಯ ಆದ ನಂತರ ಶ್ರೇಯಸ್, ೬೦ ಜನರ ಪರಿಚಯ ಆದ ನಂತರ ಅನುಶ ಪರಿಚಯ ಮಾಡಿಕೊಳ್ಳುತ್ತಾರೆ. (೨೦ ನಿಮಿಷ)
ನಂತರ ಒಬ್ಬಬ್ಬರೂ ಒಂದೊಂದು ಕಟ್ಟುಪಾಡುಗಳನ್ನು ಕಿಶೋರಿಯರ ಮುಂದೆ ಹೇಳುವುದು, ೧. ನಾವೆಲ್ಲಾರೂ ಸೆಶನ್ ಅಲ್ಲಿ ಪಾಲ್ಗೊಳ್ಳುತ್ತೇವೆ (participation) ೨. ನಾವು ಇನ್ನೊಬ್ರು ಮಾತಾಡಬೇಕಿದ್ರೆ ಅದುನ್ನ ಕಟ್ ಮಾಡೋದ್ ಬೇಡ, ಅವ್ರು ಮಾತಾಡಿದ್ ಮೇಲೆ ನಾವು ಮಾತಾಡೋಣ. ೩. ಇನ್ನೊಬ್ರು ಮಾತಾಡಬೇಕಿದ್ರೆ ಆಡಿಕೊಳ್ಳೋದು, ಅಣಕ ಮಾಡೋದು, ಗದರಿಸೋದು ಇವೆಲ್ಲಾ ಮಾಡಲ್ಲ. ೪. ಎಲ್ಲಾರ ಅಭಿಪ್ರಾಯಗಳು ಇಲ್ಲಿ ವ್ಯಾಲಿಡ್. ೫. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವು ಅದುನ್ನ ಕೊಡಿ ೬. ಒಂದು ವೇಳೆ, ನೀವು ತುಂಬಾ ಗಲಾಟೆ ಮಾಡಿದ್ರೆ ನಾವು ಸೈಲೆಂಟ್ ಆಗ್ತೀವಿ. ನೀವು ಮತ್ತೆ ಸೈಲೆಂಟ್ ಆಗೋವರ್ಗೂ ಮುಂದಕ್ಕೆ ಮಾತಾಡಲ್ಲ. ಹಾಗಾಗಿ ನಿಮ್ಮ ಗಮನ ನಮ್ಮ ಮೇಲಿರಲಿ. (೫ ನಿಮಿಷ)
೧ ಗುಂಪಿನ ಚಟುವಟಿಕೆ : ೨ ಬೇರೆ ಬಣ್ಣದ ಚೀಟಿಗಳನ್ನು ಕೊಡುವುದು ಅಥವ ರೆಕಾರ್ಡರ್ ನಲ್ಲಿ ರೆಕಾರ್ಡ್ ಮಾಡುವ ಆಯ್ಕೆಯನ್ನು ಅವರಿಗೆ ನೀಡುವುದು. ತಂಡದ ಇಬ್ಬರು ವಾಯ್ಸ್ ರೆಕಾರ್ಡರ್ ಗಳೊಂದಿಗೆ, ಸೂಕ್ತ ಸ್ಥಳದಲ್ಲಿ ಕಿಶೋರಿಯರ ರೆಕಾರ್ಡಿಂಗ್ ಮಾಡಬೇಕು
ನಿಮ್ಮ ಪ್ರಕಾರ, ನಿಮ್ಮ ವಯಸ್ಸಿನ ಹುಡುಗಿಯರು ಯಾವ ವಿಷ್ಯದ ಬಗ್ಗೆ ತಿಳ್ಕೋಳೋದು ಇಂಪಾರ್ಟೇಂಟ್ ಅಥವ ಯಾವ ವಿಷ್ಯ ತಿಳ್ಕೊಂಡ್ರೆ ಒಳ್ಳೆಯದು ಅಂತ ನಿಮಗೆ ಅನ್ಸುತ್ತೆ ? ನೀವು ನಿಮಗೆ ಕೊಟ್ಟಿರುವ ಚೀಟಿಯಲ್ಲಿ ಬರೆಯಿರಿ.
- ದಯವಿಟ್ಟು ನಾಚಿಕೊಳ್ಳದೇ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ನಿಮ್ಮ ವಯಸ್ಸಿನ ಹೆಣ್ಣುಮಕ್ಕಳು ಮೊಬೈಲ್ ಫೋನಿನಲ್ಲಿ ಏನೇನೆಲ್ಲಾ ಆಪ್‌ಗಳು, ಚಟುವಟಿಕೆಗಳನ್ನ ಮಾಡೋಕೆ ಇಷ್ಟ ಪಡ್ತಾರೆ ಅಂತ ಹೇಳ್ತೀರ? ಅದುನ್ನ ನೀವು ಇನ್ನೊಂದು ಚೀಟಿಯಲ್ಲಿ ಬರೆಯಿರಿ. ಅದುನ್ನ ನೀವು ಬರೀಬಹುದು ಅಥ್ವ ಅದರ ಬಗ್ಗೆ ಮಾತನಾಡಬಹುದು. ನೀವು ಹೇಳುವ ವಿಷ್ಯಗಳನ್ನ, ನಿಮ್ಮ ಧ್ವನಿಯ ರೆಕಾರ್ಡಿಂಗನ್ನು ನಾವು ನಿಮ್ಮ ಟೀಚರ್ಸುಗಳಿಗೆ ತೋರಿಸಲ್ಲ ಎಂದು ಕಿಶೋರಿಯರಿಗೆ ಹೇಳುತ್ತೇವೆ.
(೧೫ ನಿಮಿಷಗಳು)
ಈ ಕೆಳಗಿನ ವಿಷಯವನ್ನು ಕಿಶೋರಿಯರಿಗೆ ತಿಳಿಸುವುದು; ಇವಾಗ ಹೈ ಸ್ಕೂಲು ತುಂಬಾ ಮುಖ್ಯವಾದ ಹಂತ ಅನ್ನೋದು ನಿಮಗೆ ಗೊತ್ತಿರೋದೆ. ಇಲ್ಲಿ ನಿಮಗೆ ಅನಿಸಿದ್ದನ್ನ ನೀವು ಹೇಳಿದ್ದೀರಿ, ನಿಮ್ಮ ಥರಾನೇ ಬೇರೆ ಬೇರೆ ಶಾಲೆಗಳಲ್ಲಿ ಕಿಶೋರಿಯರು ಮಾತಾಡಿದಾರೆ, ನಾವೂನೂ ಬೇರೆ ಬೇರೆ ಕಡೆ ಕೆಲಸ ಮಾಡಿರೋದ್ರಿಂದ ಈ ವಿಷ್ಯಗಳ ಬಗ್ಗೆ ನಮಗೂನೂ ಕೆಲವು ಅಂಶಗಳು ಇದಾವೆ. ಅವುನ್ನೆಲ್ಲಾ ಮಾತಾಡಿಕೊಂಡು ಮುಂದೆ ನಾವು ಒಂದಿನ ವಿಡಿಯೋ ನೋಡ್ಕೊಂಡು ಮಾತಾಡಬಹುದು, ಒಂದಿನ ಆಡಿಯೋ ಕ್ಲಿಪ್ ಕೇಳಿಸ್ಕೊಬಹುದು, ನಾವು ಪ್ರತೀ ______ವಾರ ___________ ಪೀರಿಯಡ್‌ನಲ್ಲಿ ನಿಮ್ಮ ಜೊತೆ ಈ ರೀತಿಯ ಚಟುವಟಿಕೆಗಳನ್ನ ಮಾಡೋಣ ಅಂದುಕೊಂಡೀದ್ದೀವಿ. ಇವೆಲ್ಲಾ ನಾವು ಸುಮ್ಮನೆ ಮಾತಾಡೋ ಥರ ಮಾಡೋದು ಬೇಡ ಅಲ್ವಾ? ನೀವು ಹೇಳಿದ ವಿಷಯಗಳ ಜೊತೆಗೆ ನಮಗೆ ನಿಮ್ಮ ಹತ್ತಿರ ಹಂಚಿಕೊಳ್ಳಬೇಕು ಎನ್ನುವ ವಿಷಯಗಳ ಬಗ್ಗೆ ಈ ಯೋಜನೆ ರೂಪುಗೊಂಡಿದೆ. ಈ ಯೋಜನೆಯ ಹೆಸರು ಹೊಸ ಹೆಜ್ಜೆ ಹೊಸ ದಿಶೆ. ಈ ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ಈ ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩ ಡಿಜಿಟಲ್ ಕಥೆಯ ಸಂಕಲನಕಾರರು ಇಬ್ಬರು (೨). ಈ ಸಾಮರ್ಥ್ಯ ಮೇಲಿನ ಫೆಸಿಲಿಟೇಟರ್‌ಗಳಲ್ಲೇ ಇರಬಹುದು. Resources Required Projector Camera Sketch pens - 4 sets Sheet to write - 90 A4 sheets - 20 88 set of pouches with chocolates and stickers in it 3 Recorder and spare batteries Module printout - yarg beko avarge Time required 45 minutes Inputs Outputs Writing and recordings from Kishoris