ಚಿಗುರು ೦೨- ನಮ್ಮ ಸಮಸ್ಯೆಗಳು
ಉದ್ದೇಶ
ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯೆಗಳು ಬರೀ ಒಬ್ಬರದ್ದೇ ಅಲ್ಲ, ಎಲ್ಲರಿಗೂ ಇದೇ ತರಹದ ಸಮಸ್ಯೆಗಳಿವೆ ಎಂದು ತಿಳಿಸುವುದು.
ಪ್ರಕ್ರಿಯೆ
ನಮ್ಮ ಪರಿಚಯವನ್ನು ಇನ್ನೊಮ್ಮೆ ಮಾಡಿಕೊಳ್ಳುವ ಮೂಲಕ ಸೆಶನ್ ಅನ್ನು ಶುರು ಮಾಡುವುದು.
ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. (10 ನಿಮಿಷ)
ಕಿಶೋರಿಯರನ್ನು ೩ ಗುಂಪುಗಳಾಗಿ ಮಾಡಿಕೊಳ್ಳಲು, ೩ ಬೇರೆ ಬೇರೆ ಬಣ್ಣಗಳ ಫ್ರೆಂಡ್ಶಿಪ್ ಬ್ಯಾಂಡ್ ಅನ್ನು ಒಂದು ಡಬ್ಬಿಯಲ್ಲಿ ಹಾಕಿ ಅವರ ಹತ್ತಿರ ಆರಿಸಿಕೊಂಡು ಅದನ್ನು ಕೈಗೆ ಹಾಕಿಕೊಳ್ಳಲು ಹೇಳುವುದು.
ಅವರು ಅದನ್ನು ಬೇರೆಯವರ ಜೊತೆಗೆ exchange ಮಾಡಿಕೊಳ್ಳುವ ಹಾಗಿಲ್ಲ. ಕ್ಲಾಸ್ ಆದ್ಮೇಲೆ ನಿಮಗಿಷ್ಟ ಬಂದ ಹಾಗೆ ಮಾಡಬಹುದು ಆದರೆ ಈಗ ಆಯಾ ಬಣ್ಣದ ಬ್ಯಾಂಡ್ ನವರು ಆಯಾ ಗುಂಪಿನ ಸದಸ್ಯರಾಗಿರುತ್ತಾರೆ ಎನ್ನುವುದನ್ನು ಅರ್ಥ ಮಾಡಿಸುವುದು. ಅವರನ್ನು ಆಯಾ ಗುಂಪಿನಲ್ಲಿ ಕುಳಿತುಕೊಳ್ಳಲು ಹೇಳುವುದು.
ಒಂದೊಂದು ಗುಂಪಿನಲ್ಲೂ ಯಾರು ಬರೆಯುತ್ತಾರೆ ಎಂದು ಗುರುತಿಸಿಕೊಳ್ಳಲು ಹೇಳುವುದು. ಪ್ರತಿ ಗುಂಪಿಗೆ ೩ ಬ್ರೌನ್ ಶೀಟ್ಸ್ ಮತ್ತು ಸ್ಕೆಚ್ ಪೆನ್ಗಳನ್ನು ಕೊಟ್ಟು, ಈ ಕೆಳಗಿನ ಅಂಶಗಳನ್ನು ಚರ್ಚಿಸಿ ಬರೆಯಲು ಹೇಳುವುದು:
ಕಿಶೋರಿಯರಾಗಿ ಅವರಿಗೆ ಈ ಸ್ಠಳಗಳಲ್ಲಿ ಬರುವ ಸವಾಲುಗಳೇನು ಎನ್ನುವುದನ್ನು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಬರೆಯಬೇಕು
- ಕಿಶೋರಿಯರು ಓಡಾಡುವ ಬಸ್ ಹಾಗು ಬಸ್ ನಿಲ್ದಾಣ.
- ಅವರ ಮನೆಯ ಸುತ್ತಮುತ್ತ/ಲೊಕಾಲಿಟಿ.
- ಕಿಶೋರಿಯರ ಮನೆ.
೩ ಜನ ಫೆಸಿಲೇಟಟರ್ಸ್ ೩ ಗುಂಪುಗಳಲ್ಲಿ ಭಾಗವಹಿಸಬೇಕು (35 ನಿಮಿಷ)
ಇದಾದ ನಂತರ ಹಾಳೆಗಳನ್ನು ವಾಪಾಸು ತೆಗೆದುಕೊಂಡು, ಮುಂದಿನ ವಾರ ಇವುಗಳ ಬಗ್ಗೆ ಮಾತನಾಡೋಣ, ನಮಸ್ಕಾರ ಎಂದು ಮಾತುಕತೆಯನ್ನು ಮುಗಿಸುವುದು.
ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು
ಬೇಕಾಗಿರುವ ಸಂಪನ್ಮೂಲಗಳು
- ಫ್ರೆಂಡ್ಶಿಪ್ ಬ್ಯಾಂಡ್ಗಳು - ೩ ಬಣ್ಣಗಳು
- ಫ್ರೆಂಡ್ಶಿಪ್ ಬ್ಯಾಂಡ್ಗಳನ್ನು ಇಟ್ಟುಕೊಳ್ಳಲು ಡಬ್ಬಿ/ಬಾಕ್ಸ್
- ಕ್ಯಾಮೆರ
- ಸ್ಕೆಚ್ ಪೆನ್ಗಳು - ೫ ಸೆಟ್
- ಕಾರ್ಡ್ ಬೋರ್ಡ್ ಶೀಟ್ಗಳು
ಬೇಕಾಗಿರುವ ಸಮಯ
45 ನಿಮಿಷಗಳು
ಇನ್ಪುಟ್ಗಳು
ಔಟ್ಪುಟ್ಗಳು
ಕಿಶೋರಿಯರು ಬರೆದಿರುವ ಸವಾಲುಗಳ ಚಾರ್ಟ್ಗಳು