ಸಂಖ್ಯಾರೇಖೆ
ಉದ್ದೇಶಗಳು:
- ಸಂಖ್ಯಾರೇಖೆಯೆಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು
- ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿಯುವುದು
- ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳ ಗುರುತಿಸುವಿಕೆಯು ಅನಂತವಾಗಿರುತ್ತದೆ ಎಂಬುದನ್ನು ಜಿಯೋಜಿಬ್ರಾ ಬಳಿಸಿ ತೋರಿಸುವುದು
- ಸಂಖ್ಯಾರೇಖೆಯ ಮೇಲೆ ಸಂಕಲನ ಮತ್ತು ವ್ಯವಕಲನ ಮಾಡುವ ಕ್ರಿಯೆಗಳನ್ನು ಅರ್ಥೈಸಿಕೊಳ್ಳುವುದು
ತಿಳಿದಿರಬೇಕಾಗಿರುವ ಪೂರ್ವ ಜ್ಞಾನ:
ಸಂಖ್ಯೆಗಳ ಪರಿಚಯವಿರಬೇಕು
ಸಂಪನ್ಮೂಲಗಳು:
ಜಿಯೋಜಿಬ್ರಾ ಪೈಲ್
ಪ್ರಕ್ರಿಯೆ:
Download this geogebra file from this link.
ತಪ್ಪು ಗ್ರಹಿಕೆಗಳು:
- ಸಂಖ್ಯಾರೇಖೆ ಮೇಲೆ ಗುರುತಿಸಿರುವ ಸಂಖ್ಯೆಗಳ ನಡುವಿನ ಅಂತರ ಸಮವಿರಬೇಕೆಂಬ ಅರ್ಥೈಸುವಿಕೆ
- ಸಂಖ್ಯಾರೇಖೆ ಮೇಲೆ ಒಂದು ಸಂಖ್ಯೆಯಿಂದ ಮತ್ತೊಂದು ಸಂಖ್ಯೆಯೆಡೆಗೆ ಚಲಿಸಲು, ಚಲನೆಯ ಮೌಲ್ಯವನ್ನು ಕೊಟ್ಟಾಗ, ಎಣಿಕೆ ಮಾಡುವುದರಲ್ಲಿ ಗೊಂದಲಕ್ಕೊಳಗಾಗುವುದು. ಉದಾಹರಣೆ, ಪ್ರಾರಂಭದ ಸಂಖ್ಯೆಯಿಂದಲೇ ಚಲನೆಯ ಎಣಿಕೆಯನ್ನು ಮಾಡಿ, ಒಂದು ಹಂತದ ಹಿಂದಿನ ಸಂಖ್ಯೆಯನ್ನು ಗುರುತಿಸುವುದು.
ಟಿಪ್ಪಣಿ: ಉಲ್ಲೇಖಿಸಿರುವ ತಪ್ಪು ಗ್ರಹಿಕೆಗಳು ತರಗತಿಯ ಅಂತ್ಯದಲ್ಲಿ ಮಗುವಿಗೆ ಈ ವಿಷಯಗಳು ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಬೇಕು.