ಭಿನ್ನರಾಶಿಗಳ ಪರಿಚಯಿಸುವಿಕೆ
Jump to navigation
Jump to search
ಉದ್ದೇಶಗಳು:
- ಭಿನ್ನರಾಶಿ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವುದು
- ಭಿನ್ನರಾಶಿಗಳನ್ನು ವಿವಿಧ ರೀತಿಗಳಲ್ಲಿ ನಿರೂಪಿಸುವುದು
- ಅಂಶ, ಛೇದಗಳನ್ನು ಅರ್ಥಮಾಡಿಕೊಳ್ಳುವುದು
- ಏಕಾಂಶ ಭಿನ್ನರಾಶಿಗಳ ಅರ್ಥ, ಅವುಗಳ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು
ತರಗತಿ ಚಟುವಟಿಕೆ:
Download this geogebra file from this link.
Credit : Resource Author:Daniel Mentrard
ಅನುವಾದ : ಐಟಿ ಫಾರ್ ಚೇಂಜ್
- ಮಕ್ಕಳು ಇಲ್ಲಿಯವರೆಗೆ ಭಿನ್ನರಾಶಿಗಳ ಬಗ್ಗೆ ಏನೆಲ್ಲ ಕಲಿತಿದ್ದಾರೆ ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ತರಗತಿಯನ್ನು ಪ್ರಾರಂಭಿಸಿ
- ಅಂಶ, ಛೇದ, ಭಾಗ, ಈ ಪದಗಳ ಅರ್ಥಗಳನ್ನು ಚರ್ಚಿಸಿ
- Fractions: Intro ಸಿಮ್ಯುಲೇಶನ್ನ Intro ಪರದೆಯನ್ನು ಬಳಸಿ
- ಭಿನ್ನರಾಶಿಯ ಛೇದ ಸಂಖ್ಯೆಯನ್ನು ಮಾತ್ರ ಹೆಚ್ಚಿಸುತ್ತಾ, ಮಕ್ಕಳಿಗೆ ಚಿತ್ರದಲ್ಲಿ ಏನಾಗುತ್ತಿದೇ ಎಂದು ಗಮನಿಸಲು ಹೇಳಿ (ಚಿತ್ರವನ್ನು ಸಮಭಾಗಗಳಾಗಿ ಮಾಡಲು ಹಾಕುವ ಗುರುತುಗಳು ಕಡಿಮೆಯಾಗುತ್ತಿದೆ ಹಾಗು ಬುಟ್ಟಿಯಲ್ಲಿರುವ ತುಂಡುಗಳ ಗಾತ್ರ ಕಡಿಮೆಯಾಗುತ್ತಿದೆ)
- ಮೇಲಿರುವ ಇತರ ಆಕಾರಗಳ ಬಟನ್ ಗಳನ್ನು ಸಹ ಒತ್ತಿ ಬೇರೆ ಬೇರೆ ಆಕಾರಗಳನ್ನು ಭಾಗ ಮಾಡುವ ವಿಧಾನಗಳನ್ನು ತೋರಿಸಿ
- ಮಕ್ಕಳಿಗೆ ಒಂದೆರೆಡು ಸಂಖ್ಯೆಗಳನ್ನು ಹೇಳಿ, ಬೇರೆ ಬೇರೆ ಆಕಾರಗಳನ್ನು ಆ ಸಂಖ್ಯೆಗೆ ಅನುಗುಣವಾಗಿ ಭಾಗ ಮಾಡಲು ಹೇಳಿ. ಉದಾ: 5 – ವ್ರುತ್ತ, ಆಯತ, ರೇಖಾಖಂಡ, ಸಿಲಿಂಡರ್ ಇವುಗಳನ್ನು ೫ ಸಮಭಾಗಗಳಾಗಿ ವಿಭಾಗಿಸಿ
- ಈಗ, ಸಿಮ್ಯುಲೇಶನ್ ನಲ್ಲಿ ಅಂಶದ ಸಂಖ್ಯೆಯನ್ನು 1 ಮಾಡಿ. ಇತರ ಆಕಾರಗಳಲ್ಲಿ 1 ಭಾಗ ಹೇಗೆ ಇರುತ್ತದೆ ಎಂದು ತೋರಿಸಿ.
- ಮಕ್ಕಳಿಗೆ ತಾವು 5 ವಿಭಾಗಗಳನ್ನು ಗುರುತಿಸಿರುವ ತಮ್ಮ ಚಿತ್ರದಲ್ಲಿ 1 ವಿಭಾಗವನ್ನು ಛಾಯೆಗೊಳಿಸಲು/ ಬಣ್ಣ ಹಚ್ಚಲು ಹೇಳಿ
- ಈಗ ಮಕ್ಕಳಿಗೆ ಕೆಳಗಿರುವ ಟೇಬಲ್ ಅನ್ನು ತಮ್ಮ ಪುಸ್ತಕಗಳಲ್ಲಿ ನಕಲಿ ಮಾಡಿ, ಬರ್ತಿಸಲು ಹೇಳಿ
1/2 | |||
---|---|---|---|
1/4 | |||
1/6 | |||
1/8 |
- ಮಕ್ಕಳು ಏನನ್ನು ಗಮನಿಸಿದ್ದಾರೆ ಎಂದು ಚರ್ಚಿಸಿ. ಛೇದ ಹೆಚ್ಚಾದಂತೆ ಭಾಗದ ಗಾತ್ರ ಕಡಿಮೆಯಾಗುವುದನ್ನು ಒತ್ತಾಯಿಸಿ ಹೇಳಿ
- ಈಗ ಸಿಮ್ಯುಲೇಶನ್ ನಲ್ಲಿ ಒಂದು ಛೇದಕ್ಕೆ ಅಂಶವನ್ನು / ಅಂಶದ ಸಂಖ್ಯೆಯನ್ನು ಹೆಚ್ಚಿಸಿ. ಮಕ್ಕಳು ಏನು ಗಮನಿಸುತ್ತಿದ್ದಾರೆ ಎಂದು ಪ್ರಶ್ನಿಸಿ. ಬೇರೆ ಬೇರೆ ಛೇದಗಳಿಗೆ ಇದನ್ನು ಪುನಃ ಮಾಡಿ, ಮಕ್ಕಳೊಂದಿಗೆ ಚರ್ಚಿಸಿ
- ಈಗ ಇನ್ನು ಕೆಲವು ಭಿನ್ನರಾಷಿಗಳನ್ನು ಕೊಟ್ಟು, ಮಕ್ಕಳು ತಮ್ಮ ಪುಸ್ತಕದಲ್ಲಿ ಬರೆದಿರುವ ಕೋಷ್ಟಕ/ಟೇಬಲ್ ಅನ್ನು ಪುನಃ ಬರ್ತಿ ಮಾಡಲು ಹೇಳಿ
- ಈಗ ತಾವು ಬರೆದಿರುವ ಭಿನ್ನರಾಷಿಗಳಲ್ಲಿ ಕೆಲವು ಜೋಡಿಗಳನ್ನು ಆಯ್ಕೆಮಾಡಿ, ಅವನ್ನು ಹೋಲಿಸಿದಾಗ ಯಾವುದು ದೊಡ್ಡದು ಮತ್ತು ಯಾವುದು ಚಿಕ್ಕದಾಗಿರುತ್ತದೆ ಎಂದು ಪ್ರಶ್ನಿಸಿ
- ದೊಡ್ಡದು/ಚಿಕ್ಕದನ್ನು ಹೇಗೆ ಗುರುತಿಸಬಹುದು ಎಂಬುದರ ಬಗ್ಗೆ ಚರ್ಚಿಸಿ
ಭಿನ್ನರಾಶಿ ಎಂದರೇನು?
ಒಂದು ಪೂರ್ಣದ ಭಾಗವನ್ನು ಪ್ರತಿನಿಧಿಸುವ ಸಂಖ್ಯೆಯೇ ಭಿನ್ನರಾಶಿ. ಈ ಪೂರ್ಣ ಒಂದು ವಸ್ತುವಾಗಿರಬಹುದು ಅಥವಾ ವಸ್ತುಗಳ ಗುಂಪು ಆಗಿರಬಹುದು.
, ಇದನ್ನು ನಾವು ಹತ್ತನೇ ನಾಲ್ಕು ಎಂದು ಓದುತ್ತೇವೆ. ಇಲ್ಲಿ '10' - ಒಂದು ಪೂರ್ಣವನ್ನು ಸಮಭಾಗಗಳನ್ನಾಗಿ ಮಾಡಿದ ಸಂಖ್ಯೆಯಿದು, '4' - ತೆಗೆದುಕೊಂಡ ಸಮಭಾಗಗಳ ಸಂಖ್ಯೆ. 10 ನ್ನು ಛೇದವೆಂದೂ ಕರೆಯುತ್ತೇವೆ, 4 ನ್ನು ಅಂಶವೆಂದೂ ಕರೆಯುತ್ತೇವೆ.