ಪ್ರವೇಶದ್ವಾರ:ಸಮಾಜ ವಿಜ್ಞಾನ/ಪ್ರಸಿದ್ಧ ಸಮಾಜ ವೈಜ್ಞಾನಿಕರು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೦:೦೭, ೨೨ ಜುಲೈ ೨೦೧೩ ರಂತೆ Geetha (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: left|200px ಫುಲೆ-ಅಂಬೇಡ್ಕರ್ ತಾತ್ವಿಕತೆಗಳ ಸಂಪರ್ಕಕ್ಕೆ ಬಂದು ಅವುಗಳ ...)
Jump to navigation Jump to search
Sharmila (1).jpg

ಫುಲೆ-ಅಂಬೇಡ್ಕರ್ ತಾತ್ವಿಕತೆಗಳ ಸಂಪರ್ಕಕ್ಕೆ ಬಂದು ಅವುಗಳ ನಿಜ ಸತ್ವ ಎದೆಗಿಳಿದರೆ ಜಾತಿ/ವರ್ಗದ ಹಂಗಿಲ್ಲದೆ, ಮಹಿಳಾವಾದದ ತರಬೇತಿಯಿಲ್ಲದೆ, ಎಂಥ ದಿಟ್ಟ ಹೆಣ್ಣುಜೀವಗಳು ತಯಾರಾಗುತ್ತವೆ ಎನ್ನುವುದಕ್ಕೆ 1885ರ ಸುಮಾರಿನ ತಾರಾಬಾಯಿ ಶಿಂಧೆಯಿಂದ ಹಿಡಿದು ಇತ್ತೀಚೆಗೆ ನಿಧನರಾದ ಶರ್ಮಿಳಾ ರೇಗೆ ತನಕ ಉದಾಹರಣೆಗಳು ಸಿಗುತ್ತವೆ. ಬದುಕಿದಷ್ಟು ದಿನ ಶರ್ಮಿಳಾ- ಅಂಬೇಡ್ಕರ್ ಮತ್ತು ಫುಲೆ ತಾತ್ವಿಕತೆ ಸೃಷ್ಟಿಸಿದ ದಿಟ್ಟ, ಸ್ಪಷ್ಟ ಆಲೋಚನೆಗಳಿದ್ದ ಮಹಿಳಾ, ದುರ್ಬಲ ಪರ, ಮಾನವಪರ ಕಾಳಜಿಯ ಚಿಂತಕಿ ಹಾಗೂ ಹೋರಾಟಗಾರ್ತಿ ಆಗಿದ್ದರು. ಜಾತಿ ಮತ್ತು ಲಿಂಗಪ್ರಜ್ಞೆ ಎರಡೂ ಒಂದಕ್ಕೊಂದು ಸಂಬಂಧ ಹೊಂದಿರುವುದೆಂದು ಪ್ರತಿಪಾದಿಸಿದ ಮಹಿಳಾ ರಾಜಕೀಯ ಚಳವಳಿಯ ಗಟ್ಟಿಧ್ವನಿಯಾಗಿದ್ದ ಅವರು. ಪುಣೆ ವಿಶ್ವವಿದ್ಯಾಲಯದ `ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಮಹಿಳಾ ಅಧ್ಯಯನ ಕೇಂದ್ರ'ದ ಮುಖ್ಯಸ್ಥೆಯಾಗಿ ನೂರಾರು ವಿದ್ಯಾರ್ಥಿಗಳ ಸ್ಫೂರ್ತಿದಾಯಕ ಗುರುವಾಗಿದ್ದರು. ಮಹಿಳಾ ಚಳವಳಿಯಲ್ಲಿ ಸಕ್ರಿಯವಾಗಿರುವ ಹೋರಾಟಗಾರರ ಹಾಗೂ ಸಂಶೋಧಕರ ಆಪ್ತ ಜೊತೆಗಾರರಾಗಿದ್ದರು.

ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ