ಭಾರತೀಯತೆ
ಹಿನ್ನಲೆ ಸ್ವಾತಂತ್ರದ ನಂತರ ತನ್ನ ಬಂಧು-ಬಳಗವನ್ನು ಅರಸಿ ಹೊರಟವರ ತುಮುಲವನ್ನು ಬಿಂಬಿಸುವ ಗೀತೆ.”ಕತ್ತಲೆ ತುಂಬಿದ ಬಾನ್ದಳದಂಚಿಗೆ,ಕಾದಿದೆ ಚಂದ್ರಿಕೆ ಬಿಡುಗಡೆಗೆ” – ಇಲ್ಲಿ ತನ್ನ ಪ್ರೀತಿಪಾತ್ರರನ್ನು ಸೇರುವ ತವಕ ವ್ಯಕ್ತನಾಗಿದೆ. ಸ್ವಾತಂತ್ರದ ನಂತರ ದೇಶದ ಪ್ರಜೆಗಳು ಸಂಭ್ರಮಿಸುವ ಗೀತೆ. ತಮ್ಮ ಗೆಲುವನ್ನು ಆಚರಿಸಿದರೂ “ಭಾಷೆ ಬೇರೆ , ಭಾವವೊಂದು ನಾವು ಭಾರತೀಯರು” ಎಂಬ ಸಂದೇಶ ಸಾರುವ ಗೀತೆ.ಇಲ್ಲಿನ ಗೀತೆಗಳ ವಿಸ್ತಾರ ಅಪಾರ - ಸ್ವಾತಂತ್ರ ಪೂರ್ವದಲ್ಲಿನ ಯುವಜನತೆಯ ಕನಸು,ನೋವು-ನಲಿವು, ಸ್ವಾತಂತ್ರದ ಹೋರಾಟ, ಸ್ವಾತಂತ್ರದ ನಂತರದ ಸಂದರ್ಭ
ಈ ಪದ್ಯವನ್ನು ಹಾಡಿನ ರೂಪದಲ್ಲಿ ಕೇಳಿ
ಸಂಪನ್ಮೂಲಗಳು
- [ http://www.sallapa.com/2013/08/blog-post_9756.html._ಕೆ.ಎಸ್._ನರಸಿಂಹಸ್ವಾಮಿ ನರಸಿಂಹಸ್ವಾಮಿ ಅವರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.]
- ದೇಶಭಕ್ತಿಗೀತೆಗಳಿಗೆ ಇಲ್ಲಿ ಕ್ಲಿಕ್ ಮಾಡಿ
- ದೇಶಭಕ್ತಿಗೀತೆಗಳ ಕವನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
- ಐದು ಬೆರಳು ಕೂಡಿ ಒಂದು ಮುಷ್ಠಿ ಎಂಬ ದೇಶ ಭಕ್ತಗೀತೆಗಾಗಿ ಇಲ್ಲಿ ಕ್ಕಿಕ್ ಮಾಡಿ
- [hp://ushabhat.blogspot.in/2011_08_01_archive.html ಹಲವು ದೇಶ ಭಕ್ತಿ ಗೀತೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ]
- ಬಾರತೀಯ ಪ್ರವಾಸೋದ್ಯಮ ದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
- ಸಂಸ್ಕೃತಿ ಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಪಾಠ ಯೋಜನೆ ಅವಧಿ: ೧ ಶಿಕ್ಷಕರು ಭಾರತೀಯತೆ ಪಧ್ಯ ಇರುವುದು ಭಾರತದ ಏಕತೆಯ ಕುರಿತು ಆಗಿರುವುದರಿಂದ, ಆ ಪದ್ಯ ಮಾಡುವ ಮುಂಚೆ ಅವರು ಈ ತಿಂಗಳು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿದ್ದರಿಂದ ಅದಕ್ಕೆ ಸಂಬಂಧಿಸಿಂದ ಪ್ರಶ್ನೆಗಳನ್ನು ಕೇಳುವುರು.
- ನಾವು ಯಾವೆಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ
- ಆಗಸ್ಟ್ ಮಾಹೆಯಲ್ಲಿ ಯಾವ ಹಬ್ಬವನ್ನು ಆಚರಿಸುತ್ತೇವೆ
- ಸ್ವತಂತ್ರ ಯಾವ ದಿನದಂದು ಸಿಕ್ಕಿತ್ತು?
- ಅದಕ್ಕೂ ಮುಂಚೆ ನಾವು ಸ್ವತಂತ್ರ ರಾಗಿರಲಿಲ್ಲ ಎಂದು ಹೇಗೆ ಹೇಳುವಿರಿ ?
- ಅವರು ನಮ್ಮ ಮೇಲೆ ದಬ್ಬಳಿಕೆ ಮಾಡಲು ಏಕೆ ಅವಕಾಶ ಮಾಡಿಕೊಡಲಾಯಿತು?
- ಬ್ರಿಟಿಷರು ಬಂದ ನಂತರ ಆದ ಪರಿಣಾಮಗಳೇನು?
ನಾವೆಲ್ಲಾ ಒಟ್ಟಾಗಿ ಸೇರಿ ಹೋರಾಡಿದ ಕಾರಣ ನಮಗೆ ಸ್ವತಂತ್ರ್ಯ ಸಿಕ್ಕಿತು ಮ್ಮಲ್ಲಿ ಎಷ್ಟೇ ಬೇದ ಭಾವ ಇದ್ದರು ನಾವೆಲ್ಲಾ ಒಂದು , ಅದೇ ರೀತಿ ನ್ಮಮ ಮನೇಬಾವನೆ ಕೂಡ ಎಂದು ಹೇಳುವ ಪ ದ್ಯ ಕೆ ಎ ಸ್ ನರಸಿಂಹಸ್ವಾಮಿ ಅವರು ಬರೆದ ಭಾರತೀಯತೆ ಪದ್ಯದಲ್ಲಿ ಯಾವ ತರಹ ಹೇಳಿದ್ದಾರೆ ಎಂದು ನೋಡೋಣ.
ಭಾರತದ ಪ್ರಾಕೃತಿಕ ಸೌಂದರ್ಯ, ಹಿಮಾನಂತರ ಶಿಕ್ಷಕರು ಕೆ ಎಸ್ ನರಸಿಂಹಸ್ವಾಮಿ ಅವರ ಪರಿಚಯವನ್ನು ಮಾಡಿಕೊಡುವರು. ಮಾಡಿಕೊಟ್ಟರು. ಪದ್ಯವನ್ನು ಹಾಡಿ ಮಕ್ಕಳನ್ನು ಹಾಡಲು ಹೇಳಿವರು, ಮಕ್ಕಳು ಹಾಡಿದ ನಂತರ ಕಾರಣ ಆಡೀಯೋವನ್ನು ಮಕ್ಕಳಿಗೆ ಕೇಳಿಸುವುದು, ನಂತರ ಶಿಕ್ಷಕರು ಪದ್ಯದ ವಿವರಣೆಯನ್ನು ಮಕ್ಕಳಿಗೆ ತಿಳಿಸುವರು, ಮತ್ತು ಅದರಲ್ಲಿ ಬರುವ ಅರ್ಥೈಸಿ ಓದಿ ಪದಗಳ ವಿವರವನ್ನು ತಿಳಿಸಿದರು.
ಬೋಧನಾ ವಿಧಾನ:
ಶಿಕ್ಷಕರು ಪಧ್ಯವನ್ನು ಮಾಡಿದ ನಂತರ ಅದರಲ್ಲಿ ಕೆಲವು ವಿಷಯಗಳನ್ನು ತೆಗೆದುಕೊಂಡು ಪದ್ಯದ ಸಾರಾಂಶವನ್ನು ಹೇಳುವುದು. ಅದರಲ್ಲಿ ಹಿಮಾಲಯ ಮತ್ತು ಕಡಲು ತೀರ , ಮಿಲಿಟರಿ ಪದ್ದತಿ, ಮತ್ತು ಬಯಲು ಸೀಮೆ ಪ್ರದೇಶ ಇವುಗಳ ವೀಡಿಯೋವನ್ನು ತೋರಿಸಿ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು.
ನಮ್ಮ ದೇಶಕ್ಕೆ ಪ್ರಾಕೃತಿಕ ಸೌಂಧರ್ಯವನ್ನು ನೀಡುವ ಹಿಮಾಲಯ , ಕರವಾಳಿ ಪ್ರದೇಶ ,
1. ಪದ್ಯದಲ್ಲಿ ಹಿಮಾಲಯವನ್ನು ಏಕೆ ಆಕಾಶಕ್ಕೆ ಎಂದು ನಿಂತಿದೆ ಎಂಬ ಹೊಲಿಕೆಯ್ನು ಮಾಡಿದ್ದಾರೆ?
2. ಪದ್ಯದಲ್ಲಿ ಭಾರತದ ಪ್ರಾಕೃತಿಕ ಸೌಂದರ್ಯ ವನ್ನು ಹೇಗೆ ವರ್ಣಿಸಿದ್ದಾರೆ?
3. ನಮ್ಮ ದೇಶದಲ್ಲಿ ಸೈನಿಕರು ಇರದೆ ಹೊದರೆ ಏನಾಗುತ್ತಿತ್ತು?
4. ಪದ್ಯದಲ್ಲಿ ಭಾರತದ ವೈವಿಧ್ಯತೆಯನ್ನು ಹೇಗೆ ವರ್ಣಿಸಿದ್ದಾರೆ?
ಕೊನೆಯಲ್ಲಿ ಪದ್ಯದ ಒಟ್ಟಾರೆ ಸಾರಾಂಶವನ್ನು ಮಕ್ಕಳೀಗೆ ಹೇಳುವುದು.
ಮನೆಗೆಲಸ: ಭಾರತದ ಏಕತೆಯಮೇಲೆ ಬರೆದಿರುವ ಕವನಗಳನ್ನು ಸಂಗ್ರಹಿಸಿ. ಪದ್ಯವನ್ನು ಆಧಾರವಾಗಿಟ್ಟು ಕೊಂಡು ಕವನ , ಚಿತ್ರ ಮತ್ತು ಕಥೆಗಳನ್ನು ಬರೆಯಿರಿ.