ಜನಸಂಖ್ಯಾಸ್ಫೋಟ ಚಟುವಟಿಕೆ
ಚಟುವಟಿಕೆ - ಚಟುವಟಿಕೆಯ ಹೆಸರು
ಜನಸಂಖ್ಯಾ ಸ್ಫೋಟ ಪರಮಾಣು ಬಾಂಬ್ ಸ್ಪೋಟಕ್ಕಿಂತ ಅಪಾಯಕಾರಿ ಹೇಗೆ ? ಚರ್ಚಿಸಿ
ಅಂದಾಜು ಸಮಯ
೧೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಾಗದ ,ಪೆನ್ನು ,ಗ್ರಂಥಾಲಯ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ವಿದ್ಯಾರ್ಥಿಗಳಿಗೆ ಜನಸಂಖ್ಯಾಸ್ಫೋಟದ ವಿಷಯ ಕುರಿತು ಪರಿಸರ ಸಮಸ್ಯೆಗಳ ಮೊದಲನೆ ಪರಿಕಲ್ಪನೆ ಯ ವಿಚಾರ ಸಂಕೀರ್ಣ ಪ್ರಾರಂಭಿಸುವ ಎರಡು ದಿನಗಳ ಮುಂಚೆ ತಯಾರಗಿರಲು ತಿಳಿಸಬೇಕು.ಮೌಲ್ಯಮಾಪನ ಆಂಶಗಳನ್ನು ತಿಳಿಸಬೇಕು.
ಜನಸಂಖ್ಯಾ ಸ್ಫೋಟ : ನಿಸರ್ಗದ ಪರಿಸರ ವ್ಯವಸ್ಥೆಗಳಲ್ಲಿ ಒಂದು ನಿರ್ದಿಷ್ಟವಾದ ಸಮತೋಲನ ಮತ್ತು ಪರಸ್ಪರಾವಲಂಬನೆ ಇರುತ್ತದೆ ಮಾನವ ತನ್ನ ಅನುಕೂಲಕ್ಕಾಗಿ ವಿಜ್ಞಾನ-ತಂತ್ರಜ್ಞಾನಗಳಿಂದಾಗಿ ನಿಸರ್ಗವನ್ನು ದುರ್ಬಲ ಮಾಡುತ್ತಿದ್ದಾನೆ .ಅಲ್ಲದೆ ಕೃತಕ ವಸ್ತುಗಳನ್ನು ,ತ್ಯಾಜ್ಯ ವಸ್ತುಗಳನ್ನು ಪರಿಸರಕ್ಕೆ ಬಿಡುಗಡೆ ಮಾಡಿ ಪರಿಸರ ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದ್ದಾನೆ..
ಭೂಮಿಯನ್ನು ಸುಡುತ್ತಿದೆ ಜನಸಂಖ್ಯಾ ಸ್ಫೋಟದ ಬೆಂಕಿ : ಬಹುತೇಕ ಜನಸಂಖ್ಯಾ ತಜ್ಞರ ಪ್ರಕಾರ ಈ ಭೂಮಿಗೆ ಒಂದು ಸಾವಿರ ಕೋಟಿ ಜನರನ್ನು ಸಲಹುವ ಸಾಮರ್ಥ್ಯ ಇದೆ. ಹಾಗೆಂದು ಜನಸಂಖ್ಯೆ ಬೆಳೆಯಲು ಬಿಡುವುದು ಜಾಣತನವೇ ?
ನಿತ್ಯ 2.18 ಲಕ್ಷ ಶಿಶುಗಳ ಜನನ. ಅಂದರೆ ವಿಶ್ವದ ಜನಸಂಖ್ಯೆ ಪ್ರತಿವರ್ಷ 8 ಕೋಟಿ ಹೊಸ ಮಾನವನ ಜೀವಿಗಳ ಸೇರ್ಪಡೆ .ಇಷ್ಟೋದು ಬಾಯಿಗಳಿಗೆ ತುತ್ತು ಒದಗಿಸುವ ಹೊಣೆಗಾರಿಕೆ , ವಿಶ್ವದ ಅಹಾರ ದಾಸ್ತಾನಿನಲ್ಲಿ ಇಳಿಕೆ ಮತ್ತು ಕ್ಷಿಪ್ರಗತಿಯ ಪರಿಸರ ನಾಶದ ನಡುವೆ ಜನಸಂಖ್ಯೆ ಮೀತಿಮೀರುತ್ತಿರುವುದು ಅಪಾಯದ ಸೂಚನೆ 2008ರಲ್ಲಿ ಗಮನ ಸೆಳೆದಿತ್ತು.ಈ ಭೂಗ್ರಹದ ಜನಸಂಖ್ಯೆ 700 ಕೋಟಿ ತಲುಪುವ ದಿನಗಳು ಬಹಳ ದಿನವಿಲ್ಲ.
ಜನಸಂಖ್ಯೆ ಎನ್ನವುದು ಬರೀ ಅಂಕಿ ಅಂಶಗಳ ಲೆಕ್ಕಾಚಾರವಾಗಷ್ಠೇ ಉಳಿದಿಲ್ಲ. ಬಹಳ ಹಿಂದಿನಿಂದಲೂ ಮಾನವ ಸಮಾಜದಲ್ಲಿ ಆಂತಕ ಮೂಡಿಸುತ್ತಲೇ ಬಂದಿದೆ. ಅದಕ್ಕೊಂದು ಉದಾಹರಣೆ ಎಂದರೆ ಕ್ರಿ.ಪೂ.4ನೇ ಶತಮಾನದಲ್ಲಿ ವಿಶ್ವದ ಜನಸಂಖ್ಯೆ ಕೇವಲ 20 ಕೋಟಿ ಇದ್ದಾಗಲೆ ಪ್ಲೇಟೋ ಮತ್ತು ಅರಿಸ್ಟಾಟಲ್ ನಂತಹ ದಾರ್ಶನಿಕರು ಕಟ್ಟು ನಿಟ್ಟಿನ ಜನನ ನಿಯಂತ್ರಣ ಕ್ರಮಗಳಿಗೆ ಸಲಹೆ ಮಾಡಿದ್ದರು . 1950 ರಲ್ಲಿ 300 ಕೋಟಿಯಿದ್ದ ವಿಸ್ವದ ಜನಸಂಖ್ಯೆ 2000 ಇಸ್ವಿಯಲ್ಲಿ 610 ಕೋಟಿಗೆ ತಲುಪಿ ಇನ್ನೂ ಎರುತ್ತಲೇ ಇದೆ ..!
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಗ್ರಂಥಾಲಯ ಹಾಗೂ ಸ್ಥಳೀಯ ಹಿರಿಯರಿಂದ ಮಾಹಿತಿ ಸಂಗ್ರಹಿಸುವುದು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ಜನಸಂಖ್ಯಾ ಸ್ಫೋಟದ ಪರಿಣಾಮಗಳು ,ಅದರ ಅಂಕಿ ಅಂಶಗಳ ಪ್ರಮಾಣವನ್ನು ಸಂಕ್ಷಿಪ್ತವಾಗಿ ಲೇಖನವು ಕನ್ನಡಲ್ಲಿದೆ . ಈ ವೆಬ್ ವಿಳಾಸಕ್ಕೆ ಕ್ಲಿಕ್ ಮಾಡಿ http://www.panjumagazine.com/?p=7855
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ತರಗತಿಯಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪು ವಿಚಾರ ಸಂಕೀರ್ಣ ತಂಡಕ್ಕೆ ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳನ್ನು , ಇನ್ನೊಂದು ಗುಂಪು ಆ ಸೆಮಿನಾರ್ ಮಾಡುವ ವಿದ್ಯಾರ್ಥಿಗಳ ಮೌಲ್ಯಮಾಪನ ತಂಡವಾಗಿ ಬಳಸಬೇಕು.ಮೌಲ್ಯಮಾಪನ ಆಂಶಗಳನ್ನು ತಿಳಿಸಬೇಕು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳು
- ಜನಸಂಖ್ಯಾಸ್ಫೋಟ ಎಂದರೇನು ?
- ಜನಸಂಖ್ಯಾ ಸ್ಪೋಟ ಬೆಳೆದ ಬಂದ ಹಾದಿ ಹೇಗೆ ?
- ಜನಸಂಖ್ಯಾಸ್ಫೋಟಕ್ಕೆ ಕಾರಣಗಳೇನು ?
- ಜನಸಂಖ್ಯಾಸ್ಫೋಟದ ಪರಿಣಾಮಗಳೇನು ?
- ಜನಸಂಖ್ಯಸ್ಫೋಟದ ನಿಯಂತ್ರಣ ಕ್ರಮಗಳೇನು ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ವಿಚಾರ ಸಂಕೀರ್ಣ ಮಾಡುವ ತಂಡದ ಮೌಲ್ಯಮಾಪನ ಮಾನಕಗಳು :
- ವೇದಿಕೆಯ ನಿರ್ವಹಣೆ ; ಅತ್ಯುತ್ತಮ - ಉತ್ತಮ-ಸಾಧಾರಣ
- ವಿಷಯ ಮಂಡನೆ : ಅತ್ಯುತ್ತಮ - ಉತ್ತಮ-ಸಾಧಾರಣ
- ವಿಷಯದ ತಯಾರಿ : ಅತ್ಯುತ್ತಮ - ಉತ್ತಮ-ಸಾಧಾರಣ
- ನಿಗದಿ ಪಡಿಸಿದ ಎಲ್ಲಾ ಅಂಶಗಳಿರುತ್ತವೆ : ಅತ್ಯುತ್ತಮ - ಉತ್ತಮ-ಸಾಧಾರಣ
- ವಿಷಯದ ತಯಾರಿ : ಅತ್ಯುತ್ತಮ - ಉತ್ತಮ-ಸಾಧಾರಣ
ವಿಚಾರ ಸಂಕೀರ್ಣ ಮೌಲ್ಯಮಾಪನ ತಂಡದ ಮೌಲ್ಯಮಾಪನ ಮಾನಕಗಳು :
- ಮೌಲ್ಯಮಾಪನ ಮಾಡಿದ ರೀತಿ : ಅತ್ಯುತ್ತಮ - ಉತ್ತಮ-ಸಾಧಾರಣ
- ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆ :ಅತ್ಯುತ್ತಮ - ಉತ್ತಮ-ಸಾಧಾರಣ
- ತೀರ್ಪು : ಅತ್ಯುತ್ತಮ - ಉತ್ತಮ-ಸಾಧಾರಣ
- ಮೌಲ್ಯಮಾಪನ ನಿರ್ವಹಣೆ : ಅತ್ಯುತ್ತಮ - ಉತ್ತಮ-ಸಾಧಾರಣ
- ಎಲ್ಲಾ ಮೌಲ್ಯಮಾಪನ ಹಂತಗಳ ಪಾಲನೆ : ಅತ್ಯುತ್ತಮ - ಉತ್ತಮ-ಸಾಧಾರಣ
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ಪರಿಸರ ಸಮಸ್ಯೆಗಳು]