ಓಜೋನಪದರುನಾಶ ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೨೧:೪೧, ೨೭ ಸೆಪ್ಟೆಂಬರ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→‎ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು))
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಪ್ರಬಂಧ ರಚನೆ : ವಿಷಯ - " ಓಜೋನ್ ಜೀವ ರಕ್ಷಕ ಪೊರೆ -ಅದರ ರಕ್ಷಣೆ ನಮ್ಮ -ನಿಮ್ಮೆಲ್ಲರ ಹೊಣೆ " ಅದು ಹೇಗೆ ?

ಅಂದಾಜು ಸಮಯ

30 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೆನ್ನು ,ಪೇಪರ ಹಾಗೂ ಗ್ರಂಥಾಲಯ , ಅಂತರ್ಜಾಲದಿಂದ ಮಾಹಿತಿ ಸಂಗ್ರಹ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಓಜೋನ್ ಪದರು ನಾಶ : ಪರಿಸರದ ನಾಶ ಮನುಕುಲದ ವಿನಾಶ -- ಮಾರ್ಗೆಟ್ ಮಿಡ್ , ಓಜೋನ್ ಅನಿಲವು ಮೂರು ಆಮ್ಲಜನಕ ಅಣುಗಳಿಂದ ರಚನೆಗೊಂಡಿದೆ.ಇದು ಮಾರಕ ಅತಿನೇರಳೆ ಕಿರಣಗಳನ್ನು ಭೂಮಿಗೆ ಬಿಡದೆ ತಡೆಹಿಡಿದು ಕೇವಲ ಹಿತಕರ ಬೆಳಕನ್ನು ಮಾತ್ರ ಬೀಡುವುದರಿಂದ ಸಕಲ ಜೀವರಾಶಿಗಳನ್ನು ರಕ್ಷಿಸಿಸುತ್ತಿದೆ .ಇಂತಹ ಅಮೂಲ್ಯಜೀವರಕ್ಷಕ ಓಜೋನ್ ಪದರು 1985ರಲ್ಲಿ ಅಂಟಾರ್ಟಿಕ್ ಪ್ರದೇಶದಲ್ಲಿ ಸಾಕಷ್ಟು ಹಾಳಾಗಿದೆ.ಇಂದು ಮಾನವನ ಅತಿ ಬಳಕೆಯ ಭೋಗ ವಸ್ತುಗಳಿಂದಾಗಿ ನಶಿಸಿ ಹೋಗುತ್ತಿದೆ. ಓಜೋನ್ ಖಾರ ವಾಸನೆಯುಳ್ಳ ನೀಲಿ ಬಣ್ಣದ ವಿಷಕಾರಿ ಅನಿಲವು ವಾತಾವರಣದ ಸ್ಟ್ರಾಟೋಸ್ಪೀಯರ್ /ಸ್ತರಗೋಲದಲ್ಲಿ ಭೂಮಿಯಿಂದ 15-40 ಕಿಮೀ ಎತ್ತರದಲ್ಲಿದೆ. ಓಜೋನ್ ಪದರು ನಾಶ ಹೇಗೆ ? : ಹವಾನಿಯಂತ್ರಿತ ಫ್ರಿಜ್ ಇತ್ಯಾದಿಗಳಿಂದ ಬಿಡುಗಡೆಯಾಗುವ ಕ್ಲೋರಿನ್ ಅಣುಗಳು ಮೇಲೇರಿ ಓಜೋನ್ ಅನಿಲದ ಜೊತೆ ಸೇರಿಕೊಂಡು ಸಂಯೋಗ ಹೊಂದಿ ,ಕ್ಲೋರಿನ್ ಮೊನಾಕ್ಸೈಡ್ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.ಅಗ ಬಿಡುಗಡೆಯಾದ ಕ್ಲೋರಿನ್ ಮೊನಾಕ್ಸೈಡ್ ಮತ್ತೊಂದು ಆಮ್ಲಜನಕದ ಜೊತೆ ಸಂಯೋಗ ಹೊಂದಿದಾಗ ,ಹೊಸದೊಂದು ಆಮ್ಲಜನಕ ಅಣು ಹಾಗೂ ಕ್ಲೋರಿನ್ ಪರಮಾಣು ಉತ್ಪತ್ತಿಯಾಗುತ್ತದೆ.ಈ ಕೊಲೆಗಡುಕ ಒಂದು ಕ್ಲೋರೀನ್ ಪರಮಾಣು 5 ಲಕ್ಷ ಓಜೋನ್ ಆಣುಗಳನ್ನು ನಾಶಗೊಳಿಸುತ್ತದೆ. ಅನಿಮೇಶನ್ ಕ್ಲಿಪ್ : ಕ್ಲೋರಿನ್ ಪರಮಾಣುವಿನಿಂದ ಓಜೋನ್ ತುಂಡರಿಸಿವುದು

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಒಂದು ಗುಂಪು " ಓಜೋನ್ ಜೀವ ರಕ್ಷಕ ಪೊರೆ" -ಅದು ಹೇಗೆ ? ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಬಂದ ಬರೆಯುವುದು .ಇನ್ನೊಂದು ಗುಂಪು "ಓಜೋನ್ ಜೀವರಕ್ಷಕ ಪೊರೆಯ ರಕ್ಷಣೆ ನಮ್ಮ-ನಿಮ್ಮೆಲ್ಲರ ಹೊಣೆ " ಅದು ಹೇಗೆ - ವಿಷಯ ಸಂಗ್ರಹಿಸಿ ಪ್ರಬಂಧ ಬರೆಯಲು ತಿಳಿಸುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

" ಓಜೋನ್ ಜೀವ ರಕ್ಷಕ ಪೊರೆ" -ಅದು ಹೇಗೆ ? ತಂಡ ೧ ರ ಮಾನಕಗಳು

  1. ಒಜೋನ್ ಬಗ್ಗೆ ಮಾಹಿತಿ ಸಂಗ್ರಹ
  2. ಓಜೋನ್ ಜೀವ ರಕ್ಷಕ ಪೊರೆಯ ಬಗ್ಗೆ ಮಾಹಿತಿ ಸಂಗ್ರಹ
  3. ಮಾಹಿತಿ ಸಂಗ್ರಹ ಆಕರಗಳ ಬಗ್ಗೆ ತಿಳಿಸಿರುವುದು
  4. ಪ್ರತಿಯೊಬ್ಬ ವಿದ್ಯಾರ್ಥಿಗಳ ಆಸಕ್ತಿ , ವಿವರಣೆ ಕೌಶಲ್ಯ
  5. ಪ್ರಬಂಧದ ಮುಕ್ಯಾಯದ ರೀತಿ

" ಓಜೋನ್ ಜೀವ ರಕ್ಷಕ ಪೊರೆಯ ರಕ್ಷಣೆ ನಮ್ಮ-ನಿಮ್ಮೆಲ್ಲರ ಹೊಣೆ " -ಅದು ಹೇಗೆ ? ತಂಡ ೨ ರ ಮಾನಕಗಳು

  1. ಒಜೋನ್ ಜೈವಿಕ ಮಹತ್ವದ ಬಗ್ಗೆ ಮಾಹಿತಿ ಸಂಗ್ರಹ
  2. ಓಜೋನ್ ಜೀವ ರಕ್ಷಣಾ ವಿಧಾನ ಬಗ್ಗೆ ಮಾಹಿತಿ ಸಂಗ್ರಹ
  3. ಮಾಹಿತಿ ಸಂಗ್ರಹ ಆಕರಗಳ ಬಗ್ಗೆ ತಿಳಿಸಿರುವುದು
  4. ಪ್ರತಿಯೊಬ್ಬ ವಿದ್ಯಾರ್ಥಿಗಳ ಆಸಕ್ತಿ , ವಿವರಣೆ ಕೌಶಲ್ಯ
  5. ಪ್ರಬಂಧದ ಮುಕ್ಯಾಯದ ರೀತಿ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಓಜೋನ್ ಪದರು ನಾಶಕ್ಕೆ ಕಾರಣವಾಗುವ ಮಲಿನಕಾರಗಳ ಬಿಡುಗಡೆಮಾಡುವ ಉಪಕರಣಗಳ ಚಿತ್ರಗಳನ್ನು ಸಂಗ್ರಹಿಸಿರಿ
  2. ಓಜೋನ್ ಪದರಿನ ರಚನೆ ಜೀವಿಗಳ ಉಗಮಕ್ಕೆ ಕಾರಣವಾಯಿತು . ಹೇಗೆ ? ಚರ್ಚಿಸಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ಪರಿಸರ ಸಮಸ್ಯೆಗಳು]