ಫೈರ್ಫಾಕ್ಸ್ ಕಲಿಯಿರಿ
ಪರಿಚಯ
ಮೊಜಿಲ್ಲಾ ಫೈರ್ಫಾಕ್ಸ್ ಒಂದು ಉಚಿತ ಮತ್ತು ತೆರೆದ ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್ಫಾಕ್ಸ್ ಜಿಎನ್ಯು/ಲಿನಕ್ಸ್, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಇನ್ನಿತರ ಯುನಿಕ್ಸ್-ನಂತಹ ಆಪರೇಟಿಂಗ್ ಸಿಸ್ಟಮ್ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ. ಅಂಡ್ರಾಯಿಡ್ ಮೊಬೈಲ್ ಪೋನ್ಗಳಲ್ಲಿಯೂ ಸಹ ಫೈರ್ಫಾಕ್ಸ್ ಕಾರ್ಯನಿರ್ವಹಿಸುತ್ತದೆ.
ಐ.ಸಿ.ಟಿ ಸಾಮರ್ಥ್ಯ
ಇದನ್ನು ವೆಬ್ ಬ್ರೌಸರ್ ಆಗಿ ಬಳಸುತ್ತಿದ್ದು, ಶೈಕ್ಷಣಿಕ ಮಾಹಿತಿಯನ್ನು ಅಂತರ್ಜಾಲದಲ್ಲಿ ಶೋಧಿಸಲು ಈ ವೆಬ್ಬ್ರೌಸರ್ ನ್ನು ಬಳಸಬಹುದು.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಈ ಬ್ರೌಸರ್ ಮೂಲಕ ಹಲವು ಸಂಪನ್ಮೂಲಗಳನ್ನು, ಅನ್ವಯಕಗಳನ್ನು, ತಂತ್ರಾಂಶಗಳನ್ನು ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ಲಭ್ಯವಾಗಿಸಿಕೊಳ್ಳಬಹುದಾಗಿದೆ.
ಆವೃತ್ತಿ
Firefox 49.02
ಸಂರಚನೆ
ಲಕ್ಷಣಗಳ ಮೇಲ್ನೋಟ
ಫೈರ್ಫಾಕ್ಸ್ ವೆಬ್ಬ್ರೌಸರ್ xHTML, CSS, PNG ನಂತಹ ಎಲ್ಲಾ ಉನ್ನತ ನಮೂನೆಗಳ ಜೊತೆ ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ಎಕ್ಸ್ಪ್ಲೋರರ್ ಮತ್ತು ನೆಟ್ಸ್ಕೆಪೆ ಗೆ ಹೋಲಿಸಿದಲ್ಲಿ ಫೈರ್ಫಾಕ್ಸ್ ವೆಬ್ಬ್ರೌಸರ್ ಸರಿಯಾದ ವೆಬ್ಪುಟಗಳನ್ನು ಒದಗಿಸುತ್ತದೆ. .
ಇತರೇ ಸಮಾನ ಅನ್ವಯಕಗಳು
Google Chrome - ಗೂಗಲ್ ರವರಿಂದ ಉಚಿತವಾಗಿ ಅಭಿವೃದ್ದಿಗೊಂಡಿದೆ. ಸುರಕ್ಷತೆ, ವೇಗ ಹಾಗೂ ದೃಢತೆಯನ್ನು ಇನ್ನಷ್ಟು ಸುಧಾರಿಸುವುದು ಗೂಗಲ್ ಕ್ರೋಮ್ನ ಬಹುಮುಖ್ಯ ಉದ್ದೇಶ. ಉತ್ತಮಗೊಳಿಸಿದ ಜಾವಾಸ್ಕ್ರಿಪ್ಟ್ ಕಾರ್ಯನಿರ್ವಹಣೆ, ಬ್ರೌಸರ್ ಕಾರ್ಯನಿರ್ವಹಣೆ ಸಿಂಕ್ರೊನೈಜಿಂಗ್, ಎಚ್ಟಿಎಂಎಲ್5ನ ಹೆಚ್ಚಿನ ಬೆಂಬಲ(ಜೊಯೋಲೊಕೇಶನ್ APIಗಳು, ಆಯ್ಪ್ ಕ್ಯಾಶ್, ವೆಬ್ ಸಾಕೆಟ್ಸ್, ಮತ್ತು ಕಡತ ಎಳೆಯುವುದು -ಮತ್ತು-ಬಿಡುವುದು), ಪುನಃನವೀಕರಿಸಿದ ಬುಕ್ಮಾರ್ಕ ಮ್ಯಾನೇಜರ್, ಎಡೋಬ್ ಫ್ಲ್ಯಾಶ್ ಪ್ಲೇಯರ್ ಸೇರಿಸಲಾಗಿದೆ Opera – ಇದು ವಿಂಡೋಸ್ ತಂತ್ರಾಂಶದಲ್ಲಿ ಬಳಸುವ ಮತ್ತೊಂದು ವೆಬ್ಬ್ರೌಸರ್ ಆಗಿದೆ. ಉತ್ತಮವಾದ ಅಂತರ್ಜಾಲ ಶೋಧನಾ ಅನುಭವವನ್ನು ಒದಗಿಸುವುದು ಈ ಬ್ರೌಸರ್ ನ ಮುಖ್ಯ ಉದ್ದೇಶವಾಗಿದೆ.
ಅಭಿವೃದ್ದಿ ಮತ್ತು ಸಮುದಾಯ ಸಹಾಯ
Mozilla Foundation and contributors - Mozilla Corporation
ಅನ್ವಯಕ ಬಳಕೆ
ಕಾರ್ಯಕಾರಿತ್ವ
- Image
ಹಂತ 1-ಮೊಜಿಲ್ಲಾ ಫೈರ್ಫಾಕ್ಸ್ನ್ನು ಈ ಮೂಲಕ ತೆರೆಯಬಹುದು. Applications > Internet >Firefox Web Browser.
- Image
ಹಂತ 2-ಈ ವೆಬ್ಬ್ರೌಸರ್ನ್ನು ತೆರೆದ ನಂತರ ಈ ಮೇಲಿನ ರೀತಿಯ ವಿಂಡೋ ಕಾಣಬಹುದು. ಇದರಲ್ಲಿ ನೀವು ಶೋಧಿಸ ಬೇಕಿರುವ ಮಾಹಿತಿಯ ಅಂತರ್ಜಾಲ ಪುಟದ ವಿಳಾಸ ತಿಳಿದಿದ್ದಲ್ಲಿ ನೇರವಾಗಿ ಅಡ್ರೆಸ್ಬಾರ್ನಲ್ಲಿ ನಮೂದಿಸಬಹುದು. Ex; www.upsc.gov.in
- Image
ಹಂತ 3-ನಿಮಗೆ ಸರಿಯಾದ ಅಂತರ್ಜಾಲ ಪುಟದ ವಿಳಾಸ ಗೊತ್ತಿರದಿದ್ದರೆ, ನೀವು ಹುಡಕಬೇಕಿರುವ ವಿಷಯವನ್ನು ಸರ್ಚ್ ಬಾರ್ನಲ್ಲಿ ನಮೂದಿಸಬಹುದು. Ex;UPSC.
- Image
ಹಂತ 4ನೀವು ಶೋಧನೆ ಅರಂಭಿಸಿದ ಮೇಲೆ ಈ ಮೇಲಿನ ಚಿತ್ರದ ರೀತಿಯ ವಿಂಡೋ ನೋಡಬಹುದು. ಇಲ್ಲಿನ ನೀಲಿ ಬಣ್ಣದ ಪಠ್ಯದ ಮೇಲೆ ಕ್ಲಿಕ್ ಮಾಡುವ ಮೂಲಕ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು.
- Image
ಹಂತ 5 ಬುಕ್ಮಾರ್ಕ್ಗಳು -ಇತ್ತೀಚೆಗಿನ ಎಲ್ಲಾ ಆಧುನಿಕ ವೆಬ್ ಬ್ರೌಸರ್ಗಳಲ್ಲಿ ಬುಕ್ಮಾರ್ಕ್ ಸೌಲಭ್ಯವಿರುತ್ತದೆ. ಇವುಗಳನ್ನು ಫೇವರಿಟ್ಸ್ ಮತ್ತು ಇಂಟರ್ನೆಟ್ ಶಾರ್ಟ್ಕಟ್ಗಳು ಎಂದು ಸಹ ಕರೆಯುತ್ತಾರೆ. ಬುಕ್ ಮಾರ್ಕ್ ಸೇರಿಸಲು: ಮೊದಲಿಗೆ ನೀವು ಅತಿ ಹೆಚ್ಚು ತೆರೆಯುವ ಅಥವಾ ತುಂಬಅ ಉಪಯುಕ್ತವಾದ ವೆಬ್ಪುಟವನ್ನು ತೆರೆಯಿರಿ ನಂತರ ಮೆನುಬಾರ್ನಲ್ಲಿನ “Bookmarks” > "add this to bookmarks" ನಲ್ಲಿ ಕ್ಲಿಕ್ ಮಾಡಿ ಈಗ ಆ ಪುಟವು ಬುಕ್ಮಾರ್ಕ್ ಆಗಿರುತ್ತದೆ. ಬುಕ್ಮಾರ್ಕ್ ಮಾಡಿದ ಪುಟವು ಮೆನುಬಾರ್ನಲ್ಲಿನ “Bookmarks” > ನಲ್ಲಿ ಕಾಣುತ್ತದೆ.
- Image
ಹಂತ 7 ಇಂಟರ್ನೆಟ್ ಇಲ್ಲದಾಗಲೂ ಸಹ ಕೆಲವು ವೆಬ್ಪುಟಗಳನ್ನು ಬಳಸಲು ಅನುಕೂಲವಾಗುವಂತೆ ಆಪ್ಲೈನ್ನಲ್ಲಿ ಉಳಿಸಬಹುದು. ಇದಕ್ಕಾಗಿ ಮೆನುಬಾರ್ನಲ್ಲಿ File > "Save Page As" ನ್ನು ಕ್ಲಿಕ್ ಮಾಡಿ. ಅಥವಾ ನೀವು ತೆರೆದಿರುವ ಪುಟದ ಮೇಲೆ ಬಲಕ್ಲಿಕ್ ಮಾಡುವ ಮೂಲಕವೂ "Save Page As" ಆಯ್ಕೆ ನೋಡಬಹುದು. ನಂತರ ತೆರೆಯುವ ವಿಂಡೋದಲ್ಲಿ file formatಎಂಬಲ್ಲಿ "Web Page Complete" ನ್ನು ಆಯ್ಕೆ ಮಾಡಿ ನಂತರ SAVE ಕ್ಲಿಕ್ ಮಾಡಿ. ಈಗ .html ನಮೂನೆಯಲ್ಲಿ ಈ ಕಡತವು ಉಳಿಯುತ್ತದೆ. ಇದನ್ನು ಕ್ಲಿಕ್ ಮಾಡುವಮೂಲಕ ಆಪ್ಲೈನ್ನಲ್ಲೂ ನೀವು ಈ ಪುಟವನ್ನು ನೋಡಬಹುದು.
ಕಡತ ರೂಪ
ಕಡತ ಉಳಿಸಿಕೊಳ್ಳುವುದು
ಕಡತಗಳ ನಿರ್ಯಾತ (ಎಕ್ಸ್ಪೋರ್ಟ್) ಮತ್ತು ಪ್ರಕಟಣೆ
ಉನ್ನತೀಕರಿಸಿದ ಲಕ್ಷಣಗಳು
ಸ್ವತಂತ್ರ-ಮುಕ್ತ ಮೂಲದ ಮೊಜಿಲ್ಲಾ ಫೈರ್ಫಾಕ್ಸ್ ವೆಬ್ ಬ್ರೌಸರ್ ಜಗತ್ತಿನಾದ್ಯಂತ ಅಭಿವೃದ್ದಿಗಾರರು ಇದರ ಕಾರ್ಯಗಳನ್ನು ಹೆಚ್ಚಿಸುವುದಕ್ಕಾಗಿ ಹಲವು ಕೋಡ್ಗಳನ್ನು ನಿರಂತರವಾಗಿ ನೆರವು ನೀಡುತ್ತಿರುತ್ತಾರೆ.
ಆಡ್-ಆನ್ ಗಳು - ಮೊಜಿಲ್ಲಾ ಫೈರ್ಫಾಕ್ಸ್ ಹಲವಅರು ಆಡ್ ಆನ್ ಆಯ್ಕೆಗಳ ಸಂಗ್ರಹವನ್ನು ಹೊಂದಿದ್ದು ಅವಶ್ಯಕವಾದ ಆಡ್ ಆನ್ನ್ನು ಸುಲಭವಾಗಿ ಸೇರಿಸಬಹುದಾಗಿದೆ.
ಸುರಕ್ಷತೆ- ಮೊಜಿಲ್ಲಾ ಫೈರ್ಫಾಕ್ಸ್ ಹಲವು ಟೂಲ್ಗಳನ್ನು ಹೊಂದಿದ್ದು ಅನವಶ್ಯಕ ವೆಬ್ಪುಟಗಳಿಂದ ಸುರಕ್ಷಿಸುತ್ತದೆ.
ಇತ್ತೀಚಿನ ಫೈರ್ಫಾಕ್ಸ್ ಟ್ಯಾಬ್ಡ್ ಬ್ರೌಸಿಂಗ್, ಪದ ಪರೀಕ್ಷಕ, ಇನ್ಕ್ರಿಮೆಂಟಲ್ ಫೈಂಡ್, ಲೈವ್ ಬುಕ್ಮಾರ್ಕಿಂಗ್, ಒಂದು ಡೌನ್ಲೋಡ್ ನಿರ್ವಾಹಕ, ಖಾಸಗಿ ಬ್ರೌಸಿಂಗ್, ಪ್ರದೇಶ-ಅರಿವಿನ ಬ್ರೌಸಿಂಗ್ ಗಳನ್ನು ಹೊಂದಿದೆ.
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |
---|---|
ಉಬುಂಟು ಸಾಪ್ಟ್ವೇರ್ ಸೆಂಟರ್ನಿಂದ | |
ಟರ್ಮಿನಲ್ನಿಂದ | |
ವೆಬ್ಪುಟದಿಂದ | |
ವೆಬ್ಆಧಾರಿತ ನೊಂದಣಿ |