ಸರಳರೇಖಾ ಚಲನೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೧:೧೯, ೨೨ ಅಕ್ಟೋಬರ್ ೨೦೨೦ ರಂತೆ Roshan (ಚರ್ಚೆ | ಕಾಣಿಕೆಗಳು) ಇವರಿಂದ (added Category:ಭೌತಶಾಸ್ತ್ರ using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search
ಇ ಚಿತ್ರವು ಸರಳಾರೇಖಾ ಚಲನೆಯನ್ನು ಸುಚಿಸುತ್ತದೆ

ಸರಳರೇಖಾ ಚಲನೆ :- ಸರಳರೇಖಾ ಚಲನೆಯು ಚಲನೆಯ ಒಂದು ವಿಧವಾಗಿದೆ. ಇಲ್ಲಿ ಚಲಿಸುವ ವಸ್ತು ಒಂದೇ ದಿಕ್ಕಿನಲ್ಲಿ ಸಾಗುತ್ತಿರುತ್ತದೆ ಅಂದರೆ ಅದು ಚಲಿಸುವಾಗ ತನ್ನ ದಿಕ್ಕನ್ನು ಬದಲಾಯಿಸುವುದಿಲ್ಲ ಮತ್ತು ವಕ್ರ ವಕ್ರವಾಗಿ ಚಲಿಸುವುದಿಲ್ಲ.ಇದನ್ನು ರೇಖಿಯ ಚಲನೆ ಅಂತಲೂ ಕರೆಯುತ್ತಾರೆ.

ಈ ಸರಳರೇಖಾ ಚಲನೆ ಯಲ್ಲಿ ನಾವು ಎರಡು ವಿಧಗಳನ್ನು ಕಾಣಬಹುದು

1) ಏಕರೂಪದ ಚಲನೆ

2) ಏಕರೂಪವಲ್ಲದ ಚಲನೆ

೧) ಏಕರೂಪ ಚಲನೆ:- ಇದರಲ್ಲಿ ವಸ್ತುವು ಒಂದು ನಿರ್ದಿಷ್ಟ ಸಮಯದಲ್ಲಿ ಸಮಾನ ಅಂತರವನ್ನು ಕ್ರಮಿಸಿ ರುತ್ತದೆ.

ಏಕರೂಪದ ಚಲನೆ

ಉ.ದಾ:- ಒಂದು ಚಲಿಸುತ್ತಿರುವ ಕಾರು ಒಂದು ನಿಮಿಷದಲ್ಲಿ ಒಂದು ಕಿಲೋಮೀಟರ್ ತಲುಪಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಅದು ಮತ್ತೆ ಒಂದು ಕಿಲೋಮೀಟರ್ ತಲುಪಿದರೆ ಆ ಕಾರು ಏಕರೂಪ ಚಲನೆ ಯಲ್ಲಿ ಇದೆ ಎಂದು ಹೇಳಬಹುದು.

೨) ಏಕರೂಪವಲ್ಲದ ಚಲನೆ :-

ಈ ರೀತಿಯ ಚಲನೆಯಲ್ಲಿ ಚಲಿಸುವ ವಸ್ತುವು ಒಂದು ನಿರ್ದಿಷ್ಟ ಸಮಯದ ಅವಧಿಯಲ್ಲಿ ಬೇರೆಬೇರೆ ದೂರವನ್ನು ಕ್ರಮಿಸಿ ಇರುತ್ತದೆ.

ಉ.ದಾ :- ನಾವು ಒಂದು ಕ್ರೀಡಾಂಗಣದ ಸುತ್ತ ಸುತ್ತುವಾಗ ಮೊದಲ ಒಂದು ನಿಮಿಷದಲ್ಲಿ ಎರಡು ಸುತ್ತನ್ನು ಸುತ್ತಿ ಮತ್ತೆ ಮುಂದಿನ ಒಂದು ನಿಮಿಷದಲ್ಲಿ ಒಂದು ಸುತ್ತನ್ನು ಸುತ್ತಬಹುದು ಆಗ ವ್ಯಕ್ತಿಯು ಏಕರೂಪವಲ್ಲದ ಚಲನೆಯಲ್ಲಿ ಇರುತ್ತಾನೆ.