ವಿದ್ಯುತ್ಕಾಂತೀಯ ಪ್ರೇರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
- 10ನೇ ತರಗತಿ ಪಠ್ಯಪುಸ್ತಕ -2011 ಮತ್ತು 2014
- CONCISE PHYSICS – ICSE BY R.P.Goyal, and S.P.Tripati
- XMEDIA – SCIENCE CLASS X – Published by V.K.Global Publication Pvt, Ltd, Newdelhi-02.
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1 ವಿದ್ಯುತ್ಕಾಂತೀಯ ಪ್ರೇರಣೆ ಅರ್ಥ – ವಿದ್ಯುಚ್ಚಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳು – ಫಾರಡೆಯ ಪ್ರಯೋಗ
ಕಲಿಕೆಯ ಉದ್ದೇಶಗಳು
- ವಿದ್ಯುತ್ಕಾಂತೀಯ ಪ್ರೇರಣೆಯ ಅರ್ಥ ತಿಳಿಯುವುದು
- ವಿದ್ಯುಚ್ಛಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಪ್ರಾಯೋಗಿಕವಾಗಿ ಕಂಡುಹಿಡಿಯುವುದು
- ಫಾರಡೆಯ ಪ್ರಯೋಗವನ್ನು ವಿವರಿಸುವುದು
- ಫಾರಡೆಯ ವಿದ್ಯುತ್ಕಾಂತೀಯ ಪ್ರೇರಣೆಯ ನಿಯಮಗಳನ್ನು ತಿಳಿಯುವರು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ ವಿದ್ಯುತ್ ಕಾಂತೀಯ ಪ್ರೇರಣೆ : ಒಂದು ವಾಹಕದಲ್ಲಿ ವಿದ್ಯುತ್ ಪ್ರವಾಹವು ಉಂಟಾದಾಗ ವಾಹಕದ ಸುತ್ತ ಕಾಂತಕ್ಷೇತ್ರ ಏರ್ಪಡುತ್ತದೆ. ಒಂದು ವಾಹಕ ಸುರುಳಿಯಲ್ಲಿ ಕಾಂತಕ್ಷೇತ್ರವನ್ನು ಬದಲಾಯಿಸಿದಾಗ ಪ್ರೇರಿತ ವಿದ್ಯುತ್ ಚಾಲಕ ಬಲವು ಆ ವಾಹಕದ ತುದಿಗಳಲ್ಲಿ ಉಂಟಾಗುತ್ತದೆ.
ವಿದ್ಯುತ್ ಕಾಂತೀಯ ಪ್ರೇರಣೆಯ ಪ್ರಯೋಗ : ಒಂದು ತಾಮ್ರದ ತಂತಿಯನ್ನು ಸಿಲಿಂಡರ್ ಆಕೃತಿಯ ಪೇಪರ್ ರೋಲ್, ಮರ ಅಥವಾ ಪ್ಲಾಸ್ಟಿಕ್ ಸಿಲಿಂಡರ್ ಸುತ್ತ ಸುರುಳಿಯನ್ನು ಸುತ್ತುವುದು. ಸುರುಳಿ ತಂತಿಯ ತುದಿಗಳನ್ನು ಗ್ಯಾಲ್ವನೋಮೀಟರ್ ಗೆ ಜೋಡಿಸುವುದು. ಸುರುಳಿಯ ಅಕ್ಷಕ್ಕೆ ಸ್ಪಲ್ಪದೂರದಲ್ಲಿ ಒಂದು ದಂಡಕಾಂತವನ್ನು ಚಿತ್ರದಲ್ಲಿರುವಂತೆ ಇಡಿ. ವೀಕ್ಷಣೆ :
- ದಂಡಕಾಂತ ಸ್ಥಿರವಾಗಿದ್ದಾಗ ಗ್ಯಾಲ್ವನೋಮೀಟರ್ ನಲ್ಲಿ ಯಾವುದೇ ಡಿಪ್ಲೆಕ್ಷನ್ ತೋರಿಸುವುದಿಲ್ಲ. ಸೂಚಿಯು ಸೊನ್ನೆ ಆಗಿರುತ್ತದೆ.
- ದಂಡಕಾಂತದ ಉತ್ತರದ್ರುವವನ್ನು ಸುರುಳಿಯ ಹತ್ತಿರ ವೇಗವಾಗಿ ತಂದಾಗ ಗ್ಯಾಲ್ವನೋಮೀಟರ್ ಸೂಚಕವು ಬಲಕ್ಕೆ ಡಿಪ್ಲೆಕ್ಷನ್ ಆಗುತ್ತದೆ. ಸುರುಳಿಯಲ್ಲಿ ಸ್ಪಲ್ಪ ಪ್ರಮಾಣದ ವಿದ್ಯುತ್ ಪ್ರವಾಹ ಉಂಟಾಗಿದೆ.
- ದಂಡಕಾಂತದ ಚಲನೆಯನ್ನು ನಿಲ್ಲಿಸಿದಾಗ ಸೂಚಿಯು ಸೊನ್ನೆ ಆಗಿರುತ್ತದೆ. ಇದರಿಂದ ಸುರುಳಿಯಲ್ಲಿ ವಿದ್ಯುತ್ ಹರಿಯಲು ದಂಡಕಾಂತವನ್ನು ಚಲಿಸುತ್ತಿರಬೇಕು.
- ದಂಡಕಾಂತದ ಉತ್ತರದ್ರುವವನ್ನು ಸುರುಳಿಯಿಂದ ದೂರಕ್ಕೆ ವೇಗವಾಗಿ ಹಿಂತೆಗೆದು ಕೊಂಡರೆ ಗ್ಯಾಲ್ವನೋಮೀಟರ್ ಸೂಚಕವು ಎಡಕ್ಕೆ ಡಿಪ್ಲೆಕ್ಷನ್ ಆಗುತ್ತದೆ. ಸುರುಳಿಯಲ್ಲಿ ಸ್ಪಲ್ಪ ಪ್ರಮಾಣದ ವಿದ್ಯುತ್ ಪ್ರವಾಹ ಉಂಟಾಗಿದೆ.
- ದಂಡಕಾಂತದವನ್ನು ಸುರುಳಿಯ ಹತ್ತಿರ ಮತ್ತು ದೂರಕ್ಕೆ ಅಥವಾ ಸುರುಳಿಯ ಒಳಗೆ ವೇಗವಾಗಿ ಚಲಿಸುವಂತೆ ಮಾಡಿದಾಗ ಗ್ಯಾಲ್ವನೋಮೀಟರ್ ಸೂಚಕವು ಹೆಚ್ಚು ವಿದ್ಯುತ್ ಪ್ರವಾಹದ ಇರುವಿಕೆಯನ್ನು ತೋರಿಸುತ್ತದೆ.
- ದಂಡಕಾಂತವನ್ನು ಸ್ಥಿರವಾಗಿಟ್ಟು ಸುರುಳಿಯನ್ನು ಅದೇ ಅಕ್ಷದಲ್ಲಿ ಚಲಿಸುವಂತೆ ಮಾಡಿದಾಗಲೂ ಸುರುಳಿಯಲ್ಲಿ ವಿದ್ಯುತ್ ಪ್ರವಾಹ ಉಂಟಾಗಿ ಗ್ಯಾಲ್ವನೋಮೀಟರ್ ಡಿಪ್ಲೆಕ್ಷನ್ ತೋರಿಸುತ್ತದೆ.
ತೀರ್ಮಾನ : ಮೇಲಿನ ಪ್ರಯೋಗದ ವೀಕ್ಷಣೆಯಿಂದ ಈ ಮೂರು ತೀರ್ಮಾನಗಳನ್ನು ಹೊಂದಬಹುದು.
- ಸುರುಳಿಯಲ್ಲಿ ವಿದ್ಯುತ್ ಪ್ರವಾಹವು ಉಂಟಾಗಲು ಸುರುಳಿ ಮತ್ತು ದಂಡಕಾಂತಗಳ ನಡುವೆ ಸಾಪೇಕ್ಷ ಚಲನೆ ಇದ್ದಾಗ ಗ್ಯಾಲ್ವನೋಮೀಟರ್ ನಲ್ಲಿ ಡಿಪ್ಲೆಕ್ಷನ್ ಆಗುತ್ತದೆ.
- ಗ್ಯಾಲ್ವನೋಮೀಟರ್ ನಲ್ಲಿ ಡಿಪ್ಲೆಕ್ಷನ್ನ ದಿಕ್ಕು ಕಾಂತವನ್ನು ಧ್ರುವವನ್ನು ಬದಲಾಯಿಸಿದಾಗ ವಿರುದ್ಧದಿಕ್ಕನ್ನು ಸೂಚಿಸುತ್ತದೆ.
- ಸುರುಳಿ ಮತ್ತು ದಂಡಕಾಂತಗಳ ನಡುವೆ ಸಾಪೇಕ್ಷ ಚಲನೆಯ ವೇಗವನ್ನು ಹೆಚ್ಚು ಮಾಡಿದಾಗ, ಇನ್ನೂ ಹೆಚ್ಚಿನ ಪ್ರಬಲ ಕಾಂತವನ್ನು ಬಳಸಿದಾಗ ಮತ್ತು ಸುರುಳಿಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಗ್ಯಾಲ್ವನೋಮೀಟರ್ ನಲ್ಲಿ ಹೆಚ್ಚು ವಿದ್ಯುತ್ ಪ್ರವಾಹ ಉಂಟಾಗುವುದನ್ನು ಸೂಚಿಸುತ್ತದೆ.
ಮೈಕಲ್ ಫಾರಡೆಯ ಪ್ರಯೋಗ ಮತ್ತು ವಿವರಣೆ :
ಫಾರಡೆಯು ರಟ್ಟಿನ ಒಂದು ಕೊಳವೆಯ ಮೇಲೆ ಉದ್ದವಾದ ತಾಮ್ರದ ತಂತಿಯನ್ನು ಸುತ್ತಿದ. ತಂತಿ ಸುರುಳಿಗಳ ನಡುವೆ ಟ್ವೈನ್ ದಾರವನ್ನು ಮತ್ತು ಸುರುಳಿಗಳ ಪದರಗಳ ನದುವೆ ಕ್ಯಾಲಿಕೋ ಬಟ್ಟೆಯನ್ನು ಇರಿಸಿದ. ತಂತಿಯ ತುದಿಗಳನ್ನು ಗ್ಯಾಲ್ವನೋ ಮೀಟರ್ ಗೆ ಜೋಡಿಸಿದ. ದಂಡ ಕಾಂತದ ಒಂದು ದ್ರುವವನ್ನು ಸುರುಳಿಯೊಳಕ್ಕೆ ವೇಗವಾಗಿ ನುಗ್ಗಿಸಿದ. ಗ್ಯಾಲ್ವನೋಮೀಟರ್ ವಿದ್ಯುತ್ ಪ್ರವಾಹ ಉಂಟಾದುದನ್ನು ಸೂಚಿಸಿತು. ಕಾಂತವನ್ನು ಸುರುಳಿಯಿಂದ ಹೊರಗೆಳೆದ. ಗ್ಯಾಲ್ವನೋಮೀಟರ್ ಸೂಚಿಯು ವಿರುದ್ಧದಿಕ್ಕಿನಲ್ಲಿ ವಿಚಲನೆಯನ್ನು ಹೊಂದಿತು. ಕಾಂತದ ವೇಗವನ್ನು ಹೆಚ್ಚಿಸಿದಂತೆಲ್ಲಾ ಸೂಚಿಯ ವಿಚಲನೆಯ ಪ್ರಮಾಣವು ಹೆಚ್ಚಾಯಿತು. ಕಾಂತವು ಸುರುಳಿಯೊಳಗೆ ನಿಶ್ಚಲ ಸ್ಥಿತಿಯಲ್ಲಿದ್ದಾಗ ವಿದ್ಯುತ್ಪ್ರವಾಹವು ಇರುವುದಿಲ್ಲ ಎಂದು ಕಂಡುಕೊಂಡನು. ಕಾಂತವನ್ನು ಸ್ಥಿರವಾಗಿಟ್ಟು, ಸುರುಳಿಯು ಚಲಿಸುವಂತೆ ಮಾಡಿದ. ಫಲಿತಾಂಶ ಮೊದಲಿನಂತೆಯೇ ಇತ್ತು. ಕಾಂತಶಕ್ತಿಯು ಹೇಗೆ ವಿದ್ಯುತ್ತನ್ನು ಉತ್ಪಾದಿಸುತ್ತದೆ. ವಾಹಕ ಮತ್ತು ಕಾಂತಗಳ ನಡುವಿನ ಸಾಪೇಕ್ಷ ಚಲನೆಯಿಂದ ವಾಹಕದಲ್ಲಿ ವಿದ್ಯುತ್ ಉತ್ಪತ್ತಿಯಾಗುತ್ತದೆ ಎನ್ನುವ ಅಂಶವನ್ನು ಕಂಡುಕೊಂಡನು.
ಫಾರಡೆಯ ನಿಯಮಗಳು : ಮೇಲಿನ ಪ್ರಯೋಗಗಳ ಆಧಾರದ ಮೇಲೆ ಫ್ಯಾರಡೆಯು ಕೆಳಕಂಡ ಎರಡು ನಿಯಮಗಳನ್ನು ಪ್ರತಿಪಾದಿಸಿನು.
- ಒಂದು ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುಚ್ಚಾಲಕ ಬಲವನ್ನು ಪ್ರೇರಣೆ ಮಾಡುತ್ತದೆ.
- ಪ್ರೇರಿತ ವಿದ್ಯುಚ್ಛಾಲಕ ಬಲವು ವಾಹಕಕ್ಕೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರಕ್ಕೆ ನೇರ ಅನುಪಾತದಲ್ಲಿರುತ್ತದೆ.
ಪ್ರೇರಿತ ವಿದ್ಯುಚ್ಛಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳು : ಪ್ರೇರಿತ ವಿದ್ಯುಚ್ಛಾಲಕ ಬಲದ ಪರಿಮಾಣವು ಕಾಂತಕ್ಷೇತ್ರದ ಬದಲಾವಣೆಯ ದರಕ್ಕೆ ಸಮನಾಗಿರುತ್ತದೆ. ಪ್ರೇರಿತ ವಿದ್ಯುಚ್ಛಾಲಕ ಬಲ= (ಕಾಂತಕ್ಷೇತ್ರದ ಬದಲಾವಣೆ)/(ಬದಲಾವಣೆಯಾಗಲು ತೆಗೆದುಕೊಂಡ ಕಾಲ)
ಆದ್ದ ರಿಂದ
- ಸುರುಳಿಗಳ ಸುತ್ತುಗಳ ಸಂಖ್ಯೆ ಹೆಚ್ಚಿದಾಗ ಮತ್ತು
- ಸುರುಳಿಗೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರ ಹೆಚ್ಚಿದಾಗ ಪ್ರೇರಿತ ವಿದ್ಯುಚ್ಚಾಲಕ ಬಲ ಹೆಚ್ಚುತ್ತದೆ.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್
ಪರಿಕಲ್ಪನೆ #2 ಪ್ಲೆಮಿಂಗ್ ನ ಬಲಗೈ ನಿಯಮ ಮತ್ತು ಡೈನಮೋದ ಕಾರ್ಯ
ಕಲಿಕೆಯ ಉದ್ದೇಶಗಳು
- ಪ್ಲೆಮಿಂಗ್ ನ ಬಲಗೈ ನಿಯಮವನ್ನು ಅರ್ಥೈಸುವುದು
- ಡೈನಮೋದ ವಿಧಗಳನ್ನು ತಿಳಿಯುವುದು
- ಡೈನಮೋದ ಮುಖ್ಯ ಭಾಗಗಳನ್ನು ತಿಳಿಯುವುದು
- ಡೈನಮೋದ ಕಾರ್ಯವನ್ನು ವಿವರಿಸುವುದು
- ಎ.ಸಿ. ಮತ್ತು ಡಿ.ಸಿ. ಡೈನಮೋದಲ್ಲಿ ಉಂಟಾಗುವ ವಿದ್ಯುತ್ಪ್ರವಾಹದ ದಿಕ್ಕನ್ನು ನಕ್ಷೆಗಳಲ್ಲಿ ಪ್ರತಿನಿಧಿಸುವುದು
- ಎ.ಸಿ. ಮತ್ತು ಡಿ.ಸಿ. ಡೈನಮೋಗಳ ವ್ಯತ್ಯಾಸಗಳನ್ನು ಪಟ್ಟಿಮಾಡುವುದು
- ಡೈನಮೋದ ಅನ್ವಯಗಳನ್ನು ಗುರುತಿಸುವುದು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ ಲೆನ್ಜ್ ನಿಯಮ ಮತ್ತು ಶಕ್ತಿ ಸಂರಕ್ಷಣೆ : ಪ್ರೇರಿತ ವಿದ್ಯುಚ್ಛಾಲಕ ಬಲದ ದಿಕ್ಕು ಯಾವಾಗಲು ಅದನ್ನು ಉತ್ಪತ್ತಿ ಮಾಡುವ ಕಾಂತಕ್ಷೇತ್ರದ ದಿಕ್ಕನ್ನು ಆಕರ್ಷಿಸುವ ಅಥವಾ ವಿಕರ್ಷಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಕಾಂತದ ಉತ್ತರ ದ್ರುವ ಸೋಲಾನಾಯ್ಡ್ ನ ಒಂದು ತುದಿಗೆ ತಂದಾಗ ಉಂಟಾಗುವ ಸೋಲಾನಾಯ್ಡ್ ನಲ್ಲಿ ಉಂಟಾಗುವ ವಿದ್ಯುತ್ ಪ್ರವಾಹದ ಕಾಂತಕ್ಷೇತ್ರ ಕಾಂತದ ಉತ್ತರ ದ್ರುವವನ್ನು ವಿಕರ್ಷಿಸುತ್ತದೆ. ಆದ್ದರಿಂದ ಸೋಲಾನಾಯ್ಡ್ ತುದಿಯಲ್ಲಿ ಉಂಟಾಗುವು ವಿದ್ಯುಚ್ಛಾಲಕ ಬಲದ ದಿಕ್ಕು ಅಪ್ರದಕ್ಷಿಣದಿಕ್ಕಿನಲ್ಲಿರುತ್ತದೆ. ಕಾಂತದ ಉತ್ತರ ದ್ರುವ ಸೋಲಾನಾಯ್ಡ್ ನಿಂದ ಹಿಂತೆಗೆದಾಗ ಉಂಟಾಗುವ ಸೋಲಾನಾಯ್ಡ್ ನಲ್ಲಿ ಉಂಟಾಗುವ ವಿದ್ಯುತ್ ಪ್ರವಾಹದ ಕಾಂತಕ್ಷೇತ್ರ ಕಾಂತದ ದಕ್ಷಿಣ ದ್ರುವವನ್ನು ವಿಕರ್ಷಿಸುತ್ತದೆ. ಆದ್ದರಿಂದ ಸೋಲಾನಾಯ್ಡ್ ತುದಿಯಲ್ಲಿ ಉಂಟಾಗುವು ವಿದ್ಯುಚ್ಛಾಲಕ ಬಲದ ದಿಕ್ಕು ಪ್ರದಕ್ಷಿಣದಿಕ್ಕಿನಲ್ಲಿರುತ್ತದೆ. ಲೆನ್ಜ್ ನ ನಿಯಮ ಶಕ್ತಿ ಸಂರಕ್ಷಣೆಯನ್ನು ಪ್ರತಿಪಾದಿಸುತ್ತದೆ. ಕಾಂತ ಮತ್ತು ಸುರುಳಿಯ ಯಾಂತ್ರಿಕ ಶಕ್ತಿಯು ಸೋಲಾನಾಯ್ಡ್ ನಲ್ಲಿ ವಿದ್ಯುತ್ಪ್ರವಾಹ ಉಂಟಾಗಿ ವಿದ್ಯುಚ್ಚಕ್ತಿಯಾಗಿ ಪರಿವರ್ತಿತವಾಯಿತು. ಚಿತ್ರದಲ್ಲಿ ತೋರಿಸಿರುವಂತೆ 2ಮಿ.ಮಿ. ದಪ್ಪದ ಅಲ್ಯುಮಿನಿಯಂ ಸರಳನ್ನು ಒಂದು ಶಕ್ತಿಶಾಲಿ ಕಾಂತದ ಉತ್ತರ ಮತ್ತು ದಕ್ಷಿಣ ದ್ರುವಗಳ ನಡುವೆ ಬರುವಂತೆ ಜೋಡಿಸಿ. ಮಂಡಲದಲ್ಲಿ ಒಂದು ಸ್ವಿಚ್ ಮತ್ತು ಡಿ.ಸಿ.ಬ್ಯಾಟರಿ ಜೋಡಿಸಿ. ಸ್ವಿಚ್ ಆನ್ ಮಾಡಿದಾಗ ಸರಳಿನಲ್ಲಾಗುವ ವಿಚಲನೆಯ ದಿಕ್ಕು, ವಿದ್ಯುತ್ ಪ್ರವಾಹದ ದಿಕ್ಕು, ಕಾಂತಕ್ಷೇತ್ರದ ದಿಕ್ಕುಗಳನ್ನು ಗಮನಿಸಿ. ಡಿ.ಸಿ.ಬ್ಯಾಟರಿಯನ್ನು ವಿರುದ್ದ ದಿಕ್ಕಿನಲ್ಲಿ ಅಳವಡಿಸಿ ಸ್ವಿಚ್ ಆನ್ ಮಾಡಿ.
ಪ್ಲೆಮಿಂಗ್ನ ಬಲಗೈನಿಯಮ/ಡೈನಮೋನಿಯಮ : ಬಲಗೈನ ಹೆಬ್ಬೆರಳು, ತೋರು ಬೆರಳು ಮತ್ತು ಮಧ್ಯದ ಬೆರಳುಗಳನ್ನು ಪರಸ್ಪರ ಲಂಬವಾಗಿರುವಂತೆ ಹೊಂದಿಸಿ. ತೋರುಬೆರಳು ಕಾಂತಕ್ಷೇತ್ರದ ದಿಕ್ಕನ್ನು, ಹೆಬ್ಬೆರಳು ವಾಹಕದ ಚಲನೆಯ ನೇರವನ್ನು ಸೂಚಿಸಿದರೆ ಆಗ ಮಧ್ಯದ ಬೆರಳು ಪ್ರೇರಿತ ವಿದ್ಯುತ್ಪ್ರವಾಹದ ನೇರವನ್ನು ಸೂಚಿಸುತ್ತದೆ.
ಎ.ಸಿ.ಡೈನಮೋ : ವಿದ್ಯುತ್ಕಾಂತೀಯ ಪ್ರೇರಣೆ ತತ್ವದ ಮೇಲೆ ಇದು ಯಾಂತ್ರಿಕ ಬಲವನ್ನು ವಿದ್ಯುಚ್ಚಕ್ತಿಯನ್ನಾಗಿ ಪರಿವರ್ತಿಸುವ ಸಾಧನವಾಗಿದೆ. 1) ಪರ್ಯಾಯ ಪ್ರವಾಹ ವಿದ್ಯುಜ್ಜನಕ 2) ನೇರ ಪ್ರವಾಹ ವಿದ್ಯುಜ್ಜನಕ ತತ್ವ : ಡೈನಮೋದಲ್ಲಿ ಕಾಂತಕ್ಷೇತ್ರಗಳ ನಡುವೆ ಸುರುಳಿಯು ಸುತ್ತುತ್ತಿರುತ್ತದೆ. ಸುರುಳಿಯು ಸುತ್ತುವಾಗ ಕಾಂತಕ್ಷೇತ್ರದ ಬದಲಾವಣೆಯುಂಟಾಗಿ ಸುರುಳಿಯ ತುದಿಗಳಲ್ಲಿ ವಿದ್ಯುಚ್ಚಾಲಕ ಬಲ ಉಂಟಾಗುತ್ತದೆ. ಆ ತುದಿಗಳನ್ನು ಒಂದು ವಿದ್ಯುತ್ ಉತ್ಪಾದಿಸುವ ಸಾಧನವಾಗಿ ಮಂಡಲಕ್ಕೆ ಜೋಡಿಸಬಹುದಾಗಿದೆ. ಡೈನಮೋದ ರಚನೆ : NS ದ್ರುವಗಳ ನಡುವೆ ABCD ಆಯತಾಕಾರದ ಆರ್ಮೇಚರ್ ಇದೆ. ಆರ್ಮೇಚರ್ ನ A ತುದಿಯನ್ನು P ಉಂಗುರಕ್ಕೂ, D ತುದಿಯನ್ನು Q ಉಂಗುರಕ್ಕೂ ಸಂಪರ್ಕಿಸಿದೆ. L ಬ್ರಷ್ P ಉಂಗುರಕ್ಕೂ ಮತ್ತು M ಬ್ರಷ್ Q ಉಂಗುರಕ್ಕೂ ಸಂಪರ್ಕ ಹೊಂದಿದೆ. L,M ಬ್ರಷ್ ಗಳನ್ನು ಬಾಹ್ಯಮಂಡಲದಲ್ಲಿ R ಬಲ್ಪಿಗೆ ಜೋಡಿಸಿದೆ. ಕಾರ್ಯ : ಬಾಹ್ಯ ಯಾಂತ್ರಿಕ ಶಕ್ತಿಯಿಂದ ಆರ್ಮೇಚರ್ ಅನ್ನು ತಿರುಗಿಸಲಾಗುವುದು. AB ಬಾಹು N ದ್ರುವದ ಕೆಳಗೆ, CD ಬಾಹು S ದ್ರುವದ ಕೆಳಗೆ CD ಬಾಹು S ದ್ರುವದಲ್ಲಿ ಮೇಲೆ ಚಲಿಸುವುದು. ಪ್ಲೇಮಿಂಗ್ ನ ಬಲಗೈ ನಿಯಮದಲ್ಲಿ ಪ್ರೇರಿತ ವಿದ್ಯುತ್ಪ್ರವಾಹ ಆರ್ಮೇಚರ್ ನಲ್ಲಿ DCBA ಮಾರ್ಗವಾಗಿ ಹರಿದು P ಉಂಗುರಕ್ಕೂ ಬಾಹ್ಯಮಂಡಲದಲ್ಲಿ LRM ಮಾರ್ಗವಾಗಿ ಪ್ರೇರಿತ ವಿದ್ಯುತ್ ಪ್ರವಾಹ ಹರಿಯುವುದು. ನಂತರ CD ಬಾಹು N ದ್ರುವದಲ್ಲಿ ಕೆಳಗೆ ಚಲಿಸಿ AB ಬಾಹು S ಧ್ರುವದಲ್ಲಿ ಮೇಲೆ ಚಲಿಸುವುದು. ಈಗ ಪ್ರೇರಿತ ಪ್ರವಾಹ ಆರ್ಮೇಚರ್ ದಲ್ಲಿ ABCD ಮಾರ್ಗವಾಗಿ Q ಉಂಗುರಕ್ಕೂ ಬಾಹ್ಯಮಂಡಲದಲ್ಲಿ MRL ಮಾರ್ಗವಾಗಿ ಪ್ರೇರಿತ ವಿದ್ಯುತ್ ಪ್ರವಾಹ ಹರಿಯುವುದು. ಆರ್ಮೇಚರ್ ಸುರುಳಿ ನಿರಂತರವಾಗಿ ತಿರುಗುವುದರಿಂದ ಮೊಲ ಅರ್ಧ ಸುತ್ತಿನಲ್ಲಿ LRM ಮಾರ್ಗವಾಗಿ ಹರಿದರೆ ನಂತರದ ಅರ್ಧ ಸುತ್ತಿನಲ್ಲಿ MRL ಮಾರ್ಗವಾಗಿ ವಿದ್ಯುತ್ ಪ್ರವಾಹ ಹರಿಯುವುದು. ಸುರುಳಿಯ ಸಮತಲವು ಕಾಂತಕ್ಷೇತ್ರಕ್ಕೆ ಲಂಬವಾದಾಗ ವಿದ್ಯುತ್ ಸೊನ್ನೆಯಾಗಿ ಸಮಾಂತರವಾದಾಗ ಗರಿಷ್ಟವಾಗುವುದು.
ನೇರ ಪ್ರವಾಹ ವಿದ್ಯುಜ್ಜನಕದಲ್ಲಿ ಎರಡು ಪೂರ್ಣ ಉಂಗುರಗಳ ಬದಲಿಗೆ ಸೀಳು ಉಂಗುರಗಳನ್ನು ಅಳವಡಿಸಿದೆ. ಇದಕ್ಕೆ ದಿಕ್ಪರಿವರ್ತಕ ಎಂದು ಹೆಸರು. ಇದು ಬಾಹ್ಯ ಮಂಡಲದಲ್ಲಿ ಪ್ರೇರಿತ ವಿದ್ಯುತ್ಪ್ರವಾಹದ ದಿಕ್ಕು ಒಂದೇ ಆಗುವಂತೆ ಮಾಡುವುದು.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #3 ಪ್ಲೆಮಿಂಗ್ನ ಎಡಗೈ ನಿಯಮ/ಮೋಟಾರ್ ನಿಯಮ ಮತ್ತು ಮೋಟಾರ್ ಕಾರ್ಯ
ಕಲಿಕೆಯ ಉದ್ದೇಶಗಳು
- ಪ್ಲೆಮಿಂಗ್ ನ ಎಡಗೈ ನಿಯಮವನ್ನು ಅರ್ಥೈಸುವುದು
- ಮೋಟಾರ್ ನ ಮುಖ್ಯ ಭಾಗಗಳನ್ನು ತಿಳಿಯುವುದು
- ಮೋಟಾರ್ ನ ಕಾರ್ಯವನ್ನು ವಿವರಿಸುವುದು
- ಮೋಟಾರ್ ಮತ್ತು ಡೈನಮೋಗಳ ವ್ಯತ್ಯಾಸಗಳನ್ನು ಪಟ್ಟಿಮಾಡುವುದು
- ಮೋಟಾರ್ ನ ಅನ್ವಯಗಳನ್ನು ಗುರುತಿಸುವುದು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ ಪ್ಲೆಮಿಂಗ್ನ ಎಡಗೈ ನಿಯಮ/ಮೋಟಾರ್ ನಿಯಮ : ಎಡಗೈನ ಹೆಬ್ಬೆರಳು, ತೋರು ಬೆರಳು ಮತ್ತು ಮಧ್ಯದ ಬೆರಳುಗಳನ್ನು ಪರಸ್ಪರ ಲಂಬವಾಗಿರುವಂತೆ ಹೊಂದಿಸಿ. ತೋರುಬೆರಳು ಕಾಂತಕ್ಷೇತ್ರದ ದಿಕ್ಕನ್ನು, ಮಧ್ಯದ ಬೆರಳು ಪ್ರೇರಿತ ವಿದ್ಯುತ್ಪ್ರವಾಹದ ನೇರವನ್ನು ಸೂಚಿಸಿದರೆ ಆಗ ಹೆಬ್ಬೆರಳು ವಾಹಕದ ಮೇಲೆ ಪ್ರಯೋಗವಾಗುವ ಯಾಂತ್ರಿಕ ಬಲದ ನೇರವನ್ನು ಸೂಚಿಸುತ್ತದೆ. ಮೋಟಾರ್ : ವಿದ್ಯುಚ್ಚಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನವೇ ವಿದ್ಯುತ್ ಮೋಟಾರು. ವಿದ್ಯುತ್ಪ್ರವಾಹವನ್ನು ಹೊಂದಿರುವ ವಾಹಕವು ಕಾಂತಕ್ಷೇತ್ರದಲ್ಲಿ ಯಾಂತ್ರಿಕ ಬಲವನ್ನು ಅನುಭವಿಸುತ್ತದೆ ಎಂಬ ತತ್ವದ ಆಧಾರದ ಮೇಲೆ ಮೋಟಾರ್ ಕೆಲಸ ಮಾಡುತ್ತದೆ. ಡಿ.ಸಿ.ಮೋಟಾರಿನಲ್ಲಿ ಸುರುಳಿಯನ್ನು ABCD ಶಕ್ತಿಶಾಲಿ ಕಾಂತದ N ಮತ್ತು S ಧ್ರುವಗಳ ನಡುವೆ ಬರುವಂತೆ ಜೋಡಿಸಲಾಗಿದೆ. ಸುರುಳಿಯ ತಂತಿಯ ತುದಿಗಳನ್ನು ಸೀಳು ಉಂಗುರದ ಎರಡು ಅರ್ಧಗಳಿಗೆ ಬಂಧಿಸಲಾಗಿದೆ. S1 ಮತ್ತು S2 ಉಂಗುರಗಳು ಬ್ರಷ್ ಗಳಾದ B1 ಮತ್ತು B2 ಗಳಿಗೆ ಸಂಪರ್ಕ ಹೊಂದಿವೆ. ಈ ಬ್ರಷ್ ಗಳನ್ನು ಬ್ಯಾಟರಿಯ ಧ್ರುವಗಳಿಗೆ ಸೇರಿಸಲಾಗಿದೆ. ABCD ಮಾರ್ಗದಲ್ಲಿ ವಿದ್ಯುತ್ಪ್ರವಾಹ ಹರಿಯುವಂತೆ ಮಾಡಿದಾಗ ಯಾಂತ್ರಿಕ ಬಲವು ಸುರುಳಿಯ ಬಾಹುಗಳ ಮೇಲೆ ವಿರುದ್ಧದಿಕ್ಕಿನಲ್ಲಿ ಪ್ರಯೋಗವಾಗುತ್ತದೆ. AB ಮತ್ತು CD ಗಳ ಮೇಲೆ ಪ್ರಯೋಗವಾಗುವ ಬಲಗಳು ಒಂದು ಯುಗ್ಮವನ್ನು ರಚಿಸುತ್ತವೆ. ಆದ್ದರಿಂದ ಸುರುಳಿಯು ತನ್ನ ಅಕ್ಷದ ಮೇಲೆ ಸುತ್ತತೊಡಗಿಸುತ್ತದೆ. ಸುರುಳಿಯು ಮೊದಲ ಅರ್ಧಸುತ್ತು ಸುತ್ತಿದಾಗ, S1 ಅರ್ಧ ಉಂಗುರವು B2 ನೊಡನೆ ಸಂಪರ್ಕ ಹೊಂದುತ್ತದೆ. ಹಾಗೆಯೇ S2 ಅರ್ಧ ಉಂಗುರವು B1 ನೊಡನೆ ಸಂಪರ್ಕ ಹೊಂದುತ್ತದೆ. ಈಗ ವಿದ್ಯುತ್ಪ್ರವಾಹವು ಸುರುಳಿಯಲ್ಲಿ DCBA ಮಾರ್ಗದಲ್ಲಿ ಪ್ರವಹಿಸುತ್ತದೆ. ಉಂಟಾದ ಯುಗ್ಮದ ಪರಿಣಾಮದಿಂದ ಒಂದೇ ದಿಕ್ಕಿನಲ್ಲಿ ತನ್ನ ಸುತ್ತುವಿಕೆಯನ್ನು ಮುಂದುವರಿಸುತ್ತದೆ. ಈ ರೀತಿಯಿಂದ ಒಂದು ಮೋಟಾರು ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತನೆ ಮಾಡುತ್ತದೆ. ಇದು ಏಕಮುಖ ವಿದ್ಯುತ್ ಪ್ರವಾಹದಿಂದ ಕೆಲಸ ಮಾಡುವುದರಿಂದ ಇದನ್ನು DC ಮೋಟಾರ್ ಎನ್ನಲಾಗಿದೆ.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #4 ವಿದ್ಯುತ್ ಕಾಂತೀಯ ಪ್ರೇರಣೆಯ ಅನ್ವಯಗಳು ಟ್ರಾನ್ಸ್ ಫಾರ್ಮರ್ ಮತ್ತು ಪ್ರೇರಣಾ ಸುರುಳಿಗಳು
ಕಲಿಕೆಯ ಉದ್ದೇಶಗಳು
- ಟ್ರಾನ್ಸ್ ಫಾರ್ಮರ್ ನ ಅರ್ಥ ತಿಳಿಯುವುದು
- ಟ್ರಾನ್ಸ್ ಫಾರ್ಮರ್ ನ ವಿಧಗಳನ್ನು ತಿಳಿಯುವುದು
- ಟ್ರಾನ್ಸ್ ಫಾರ್ಮರ್ ನ ಕಾರ್ಯವನ್ನು ತಿಳಿಯುವುದು
- ಟ್ರಾನ್ಸ್ ಫಾರ್ಮರ್ ನ ಅನ್ವಯಗಳನ್ನು ಗುರುತಿಸುವುದು
- ಪ್ರೇರಣಾ ಸುರುಳಿಗಳ ಅರ್ಥ ತಿಳಿಯುವುದು
- ಪ್ರೇರಣಾ ಸುರುಳಿಗಳ ಕಾರ್ಯವನ್ನು ತಿಳಿಯುವುದು
- ಪ್ರೇರಣಾ ಸುರುಳಿಗಳ ಅನ್ವಯಗಳನ್ನು ಗುರುತಿಸುವುದು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು