ಪರಿಸರ ಮಾಲಿನ್ಯಕಾರಗಳು ಚಟುವಟಿಕೆ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೨೧:೩೯, ೨೬ ಆಗಸ್ಟ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→ಚಟುವಟಿಕೆ - ಚಟುವಟಿಕೆಯ ಹೆಸರು)
ಚಟುವಟಿಕೆ - ಚಟುವಟಿಕೆಯ ಹೆಸರು
ಚಾರ್ಟ ತಯಾರಿಕೆ (ವೈಯುಕ್ತಿಕ ಚಟುವಟಿಕೆ )
ಅಂದಾಜು ಸಮಯ
20 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಗ್ರಂಥಾಲಯ , ಮಾಸಿಕ /ಸಾಪ್ತಾಹಿಕ/ದೈನಿಕ ಪತ್ರಿಕೆಗಳು ,ಅಂತರ್ಜಾಲ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಚಾರ್ಟಗಳ ತಯಾರಿಕೆ ಸುಲಭ ,ಸರಳ ಹಾಗೂ ಅಗ್ಗವಾಗಿರಬೇಕು.ಸ್ವತಃ ವಿದ್ಯಾರ್ಥಿಗಳೇ ತಾಯಾರಿಸಿರಬೇಕು.ಚಾರ್ಟ್ ಒಳಗೊಂಡಿರುವ ಅಂಶಗಳು ಮತ್ತು ಮೌಲ್ಯಮಾಪನ ಮಾನಕಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಮಾಲಿನ್ಯಕಾರಕಗಳ ನಡುವಿನ ವ್ಯತ್ಯಾಸಗಳನ್ನು ಒಳಗೊಂಡಿರುವ ಅಂದವಾದ ಚಾರ್ಟನ್ನು ತಯಾಇರಿಸಿ
- ಮಾಲಿನ್ಯಕಾರಕಗಳ ವಿಧಗಳಿಗೆ ಸಂಬಂಧಪಟ್ಟ ಚಿತ್ರಗಳನ್ನು ಸಂಗ್ರಹಿಸಿ ಅದನ್ನು ಪ್ರತ್ಯೇಕ ಕೋಷ್ಟಕದಲ್ಲಿ ಅಂಟಿಸಿ
- ಚಾರ್ಟ್ ನ ವಿಷಯವು ಮಾಲಿನ್ಯಕಾರಕಗಳು ವಿಧ ,ಪರಿಸರ ಮೇಲಾಗುವ ಪರಿಣಾಮಗಳು ಮತ್ತು ನಿಯಂತ್ರಣ ಕ್ರಮಗಳನ್ನು ಒಳಗೊಂಡಿರಬೇಕು .
- ಚಾರ್ಟ ಒಳಗೊಂಡಿರುವ ಅಂಶಗಳೇ ಮೌಲ್ಯಮಾಪನಕ್ಕೆ ಒಳಗೊಂಡಿರುತ್ತವೆ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ದಿನ ನಿತ್ಯ ಬಳಸುವ ವಸ್ತುಗಳನ್ನು ಪಟ್ಟಿ ಮಾಡಿ
- ನೈಸರ್ಗಿಕ ಹಾಗೂ ಕೃತಕ ವಸ್ತುಗಳನ್ನಾಗಿ ವಿಂಗಡಿಸಿ ಬರೆಯಿರಿ
- ಕೊಳೆಯುವ /ಜೈವಿಕ ವಿಘಟನೆಯಾಗುವ ಹಾಗೂ ಕೊಳೆಯದ /ಜೈವಿಕ ವಿಘಟನೆಯಾಗದ ಮಾಲಿನ್ಯಕಾರಕಗಳ ವ್ಯತ್ಯಾಸಗಳ ಚಾರ್ಟ ತಯಾರಿಸಿ ತರಗತಿಯಲ್ಲಿ ಚರ್ಚಿಸಿ
- ಕೊಳೆಯದ ವಸ್ತುಗಳಿಂದ ಪರಿಸರದ ಮೇಲಾಗುವ ಪರಿಣಾಮಗಳೇನು ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಜೈವಿಕ ವಿಘಟನೆಗೊಳಗಾಗುವ ಮಾಲಿನ್ಯಕಾರಕಗಳ ಬಳಕೆ ಪ್ರೋತ್ಸಾಹಿಸ ಬೇಕು . ಏಕೆ ? ಚರ್ಚಿಸಿ
- ಜೈವಿಕ ವಿಘಟನೆಗೊಳಗಾಗದ ಮಾಲಿನ್ಯಕಾರಗಳ ಬಳಕೆ ಯಿಂದ ಪರಿಸರ ಮೇಲಾಗುವ ಪರಿಣಾಮಗಳ ಬಗ್ಗೆ ಪ್ರಬಂಧ ಬರೆಯಿರಿ
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್