ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು
2014-15 ಸಾಲಿನ STF-KOER ಕಾರ್ಯಕ್ರಮ ಪ್ರಸ್ತಾವನೆಗಳು
ಈ ಪ್ರಸಕ್ತ ಸಾಲಿನಲ್ಲಿ 'ಎಸ್.ಟಿ.ಎಪ್' ಕಾರ್ಯಕ್ರಮವನ್ನು ಉಳಿದ ಶೈಕ್ಷಣಿಕ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದ್ದು, ಈ ವರ್ಷದ STF-KOER ಕಾರ್ಯಕ್ರಮ ಪ್ರಸ್ತಾವನೆಗಳುಈ ಕೆಳಕಂಡಂತಿವೆ
- 10ನೇ ತರಗತಿ ಹೊಸ ಪಠ್ಯಕ್ರಮಕ್ಕೆಸಂಪನ್ಮೂಲ ಶಿಕ್ಷಕರ ತಂಡದಿಂದ ಸಂಪನ್ಮೂಲಗಳ ರಚನೆ.
10ನೇ ತರಗತಿ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿದ 25 ಶಿಕ್ಷಕರು ಮತ್ತು 5 DIET/CTE ಸಂಪನ್ಮೂಲ ವ್ಯಕ್ತಿಗಳು ಸೇರಿ ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ ಪೂರಕ ಸಾಮಾಗ್ರಿಗಳ ತಯಾರಿಕೆ ಕಾರ್ಯಾಗಾರ ಮಾಡುವುದು. ಈ ಸಂಪನ್ಮೂಲ ವ್ಯಕ್ತಿಗಳ ಗುಂಪಿಗೆ 5+3+3ದಿನಗಳ 3 ಹಂತದ ಕಾರ್ಯಾಗಾರಗಳನ್ನು ಮಾಡಲಾಗುತ್ತದೆ.ಈ ಕಾರ್ಯಾಗಾರದಲ್ಲಿ 10ನೇ ತರಗತಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ವಿಷಯದ ಸಂಪನ್ಮೂಲಗಳ ಬಳಕೆ,ಪುನರ್ರಚನೆ ಮತ್ತು ವಿಶ್ಲೇಷಣೆ ಚಟುವಟಿಕೆ ನಡೆಸಲಾಗುತ್ತದೆ. - STF ಮತ್ತು HTFಕಾರ್ಯಕ್ರಮಗಳ ವಿಸ್ತರಣೆ. ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳನ್ನು34 ಶೈಕ್ಷಣಿಕ ಜಿಲ್ಲೆಗಳ ಎಲ್ಲಾ ಫೇಸ್-3ಶಾಲೆಗಳ ಶಿಕ್ಷಕರಿಗೆ ನಡೆಸಲಾಗುವುದು.
- ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ ಆಯ್ದ ಶೈಕ್ಷಣಿಕ ಜಿಲ್ಲೆಗಳ ಎಲ್ಲಾ ಶಾಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.
- ಮುಖ್ಯ ಶಿಕ್ಷಕರ ವೇದಿಕೆಯ ರಚನೆ. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳ ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ ಆಯ್ದ ಶೈಕ್ಷಣಿಕ ಜಿಲ್ಲೆಗಳ ಎಲ್ಲಾ ಶಾಲೆಗಳಲ್ಲಿ ಮುಖ್ಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು.
2013-14 ಸಾಲಿನ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು. ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.