ಪತ್ರ ರಂಧ್ರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚಟುವಟಿಕೆ - ಪತ್ರ ರಂಧ್ರ

ಸ್ಲೈಡ್-1/slide-1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ /karnataka open educational resources KOER

ಪ್ರೌಢಶಾಲಾ ವಿಜ್ಞಾನ ಪ್ರಯೋಗಗಳ ಮಾಲಿಕೆ /high school science experiments series

ಪ್ರಸ್ತು ತಿ

ವಿಷಯ ಶಿಕ್ಷಕರ ವೇದಿಕೆ /subject teachers forum

ವಿನ್ಯಾಸ ಮತ್ತು ಅನುಷ್ಟಾನ /designed and implimented by

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ/DSERT ಮತ್ತು ಐ.ಟಿ. ಫಾರ್ ಚೇಂಜ್ /IT for change

ಬೆಂಬಲ/ಸಹಕಾರ /support and cooperation

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಯುನಿಸೆ ಫ್


slide-2

ಪ್ರಯೋಗದ ಶೀರ್ಷಿಕೆ /Title of the experiment

ಎಲೆಗಳ ಹೊರದರ್ಮ ಅಂಗಾಂಶದಲ್ಲಿ ಪತ್ರರಂಧ್ರಗಳ ವೀಕ್ಷಣೆ

ಪ್ರಸ್ತುತ ಪಡಿಸುವರು /presented by

ಶಶಿಕುಮಾರ್ ಬಿ.ಎಸ್.

ವಿಳಾಸ /address

ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಯೆಲೆಕ್ಯಾತನಹಳ್ಳಿ ನೆಲಮಂಗಲ ತಾ. ಬೆಂಗಳೂರು ಗ್ರಾ.ಜಿಲ್ಲೆ


slide-3

Caveats/ನಿಬಂಧನೆಗಳು

  1. ಈ ಪ್ರಯೋಗವನ್ನು ಮಾಡುವಾಗ ಏಪ್ರಾನ್ ಧರಿಸುವುದು
  2. ಈ ಪ್ರಯೋಗದಲ್ಲಿ ವರ್ಣದ್ರವ್ಯ ಎಂಬುದರ ಬದಲಿಗೆ ಬಣ್ಣ ಎಂದು ಉಚ್ಚರಿಸಲಾಗಿದೆ, ವರ್ಣದ್ರವ್ಯ ಎನ್ನುವುದು ಸೂಕ್ತವಾದ ಪದ
  3. ನೀಡಲ್ ಬಳಸುವಾಗ ಎಚ್ಚರಿಕೆಯಿಂದ ಬಳಸಿ
  4. ಸ್ಲೈಡ್ ಮೇಲೆ ಕವರ್ ಗ್ಲಾಸ್ ಹಾಕುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರಿಕೆ ವಹಿ

slide-4

ಬೇಕಾಗುವ ಸಾಮಗ್ರಿಗಳು

  1. ಸೂಕ್ಷ್ಮದರ್ಶಕಯಂತ್ರ,
  2. ಗಾಜಿನ ಸ್ಲೈಡ್
  3. ಕವರ್ ಗ್ಲಾಸ್
  4. ನೀಡಲ್
  5. ವರ್ಣದ್ರವ್ಯ (ಸ್ಯಾಫ್ರನಿನ್),
  6. ಪೆನ್ಸಿಲ್
  7. ನೀರು
  8. ಒತ್ತುಕಾಗದ
  9. ಕ್ಯೂಟಿಕಲ್ ಚೆನ್ನಾಗಿ ಪಡೆಯಬಹುದಾದ ಎಲೆ ( ಕಣಗಲೆ, ಕಾಶಿಕಣಗಲೆ, ಎಕ್ಕ, ಕನ್ನೆಗಿಡ, ಇತ್ಯಾದಿ)

slide-5

ಪ್ರಾತ್ಯಕ್ಷಿಕೆಯ ಪ್ರತಿಲಿಪಿ/transcript of demonstration

  1. ಸೂಕ್ಷ್ಮದರ್ಶಕಯಂತ್ರವನ್ನು ಪ್ರಯೋಗ ಶಾಲೆಯ ಕಿಟಕಿ ಬಳಿ ಮೇಜಿನ ಮೇಲೆ ಇಟ್ಟು , ಸೂಕ್ಷ್ಮದರ್ಶಕದ ಮೂಲಕ ಐ ಪೀಸ್ ನ ಮೂಲಕ ಬೆಳಕು ಹಾಯುವಂತೆ ಹೊಂದಾಣಿಕೆ ಮಾಡಿಕೊಳ್ಳುವುದು.
  2. ಗಾಜಿನ ಸ್ಲೈಡ್ ಮೇಲೆ ಒಂದು ಹನಿ ನೀರನ್ನು ಹಾಕಿಡುವುದು
  3. ವೀಕ್ಷಿಸಬಹುದಾದ ಎಲೆಯನ್ನು (ಕಣಗಲೆ ಸಸ್ಯದ ಎಲೆ) ತೋರಿಸುತ್ತಾ , ಎಲೆಯಲ್ಲಿನ ಹೊರದರ್ಮ ಅಂಗಾಂಶದಲ್ಲಿನ ಕ್ಯುಟಿಕಲ್ ಪೊರೆಯನ್ನು ಬಿಡಿಸುವುದು
  4. ಕ್ಯುಟಿಕಲ್ ಪೊರೆಯನ್ನು ತೋರಿಸುತ್ತಾ ಗಾಜಿನ ಸ್ಲೈಡ್ ಮೇಲಿರುವ ನೀರಿನ ಹನಿ ಮೇಲೆ ಹಾಕಿ , ಅದರಲ್ಲಿ ಸಾಂಧ್ರವಾಗಿರುವ ಜೀವಕೋಶಗಳನ್ನು ನೀಡಲ್ ನ ಸಹಾಯದಿಂದ ವಿರಳೀಕರಿಸುವುದು
  5. ವಸ್ತುಕದ ಮೇಲೆ (ಕ್ಯುಟಿಕಲ್) ಒಂದೆರಡು ಹನಿ ಬಣ್ಣ ಹಾಕಿ, ನಿಧಾನವಾಗಿ ಕವರ್ ಗ್ಲಾಸ್ ಬಿಡುವುದು
  6. ಕವರ್ ಗ್ಲಾಸ್ ಬಿಡುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರ ವಹಿಸುವುದು
  7. ಈಗ ವಸ್ತುಕ ತಯಾರಾಗಿದ್ದು , ಅದನ್ನು ಸೂಕ್ಷ್ಮದರ್ಶದ ವೇದಿಕೆ ಮೇಲಿಡುವುದು
  8. ಸೂಕ್ಷ್ಮದರ್ಶಕದ ಐ ಪೀಸ್ ನ ಮೂಲಕ ವೀಕ್ಷಿಸುತ್ತಾ , ಕೋರ್ಸ್ ಅಡ್ಜಸ್ಟಮೆಂಟ್ ಮತ್ತು ಪೈನ್ ಅಡ್ಜಸ್ಟ್ ಮೆಂಟ್ ಬಳಸಿ , ವಸ್ತುಕದ ಸ್ಪಷ್ಟವಾದ ಬಿಂಬ ಪಡೆಯವುದು.
  9. ಬಿಂಬವನ್ನು ಮೊದಲು ಆಬ್ಜೆಕ್ಟಿವ್ ನ 10x ಬಳಸಿ ಪತ್ರ ರಂದ್ರ ವೀಕ್ಷಿಸುವುದು ,
  10. ನಂತರ 40x ಬಳಸಿ ಪತ್ರರಂದ್ರಗ ಳ ಬಿಂಬವನ್ನು ದೊಡ್ಡಗಾತ್ರದಲ್ಲಿ ವೀಕ್ಷಿಸುವುದು

slide-6

supplimentary questions /ಪೂರಕ ಪ್ರಶ್ನೆಗ ಳು

  1. ಪತ್ರರಂಧ್ರದ ಆಕಾರ ಹೇಗಿದೆ?
  2. ಉಳಿದ ಜಿವಕೋಶಗಳಿಗಿಂತ ಪತ್ರರಂದ್ರಗಳ ಆಕಾರ ವಿಭಿನ್ನವಾಗಿದೆಯೆ?
  3. ಪತ್ರ ರಂದ್ರದ ಚಿತ್ರ ಬಿಡಿಸಿ , ಅದರ ಭಾಗಗಳನ್ನು ಹೆಸರಿಸಿ.

slide-7

applications in daily life/ದಿನನಿತ್ಯ ಜೀವನದಲ್ಲಿ ಅನ್ವಯಗಳು

  1. ಸಸ್ಯಗಳ ಲ್ಲಿ ಅನಿಲಗಳ ವಿನಿಮಯ ನಡೆಸಲು ಪತ್ರರಂಧ್ರಗಳು ಸಹಾಯಕವಾಗಿವೆ ಎಂದು ತಿಳಿಯುವುದು
  2. ಬಾಷ್ಪೀಬವನವು ಪತ್ರರಂಧ್ರಗಳ ಮೂಲಕ ನಡೆಯುತ್ತದೆ ಎಂದು ತಿಳಿಯುವುದು
  3. ವಿವಿಧ ಸಸ್ಯಗಳಲ್ಲಿ ವಿವಿಧ ಆಕಾರದ ಮತ್ತು ವಿವಿಧ ಗಾತ್ರದ ಪತ್ರರಂಧ್ರಗಳು ಕಂಡುಬರುತ್ತವೆ ಎಂದು ಕಂಡುಕೊಳ್ಲುವುದು

slide-8

thank you/ಧನ್ಯವಾದಗ ಳು

ವಿಡಿಯೋ ಎಡಿಟ್ ಮಾಡುವವರಿಗೆ ವಿಶೇಷ ಸೂಚನೆ:

  1. ಈ ವಿಡಿಯೋದಲ್ಲಿ ಸಮಯ 3.20 ದಿಂದ 3.35ವರೆಗಿನ ಚಿತ್ರಣ ಮತ್ತು 3.59 ನಿಂದ 4.45 ರವರೆಗೆ ಇರುವ ಚಿತ್ರಣವನ್ನು ಅಳಿಸುವುದು ( ಕಾರಣ ಅನಾವಶ್ಯಕ )
  2. ಪತ್ರರಂಧ್ರಗಳ ಚಿತ್ರಣವನ್ನು ಫೋಲ್ಡರ್ ನಲ್ಲಿ ಹಾಕಲಾಗಿದೆ, ವಿಡಇಯೋದ ಕೊನೆಯಲ್ಲಿ ಅದನ್ನು ಸೇರಿಸಿ.