ನ್ಯೂಟನ್ ನ ಎರಡನೇ ನಿಯಮದ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚಟುವಟಿಕೆ - ಚಟುವಟಿಕೆಯ ಹೆಸರು

ನ್ಯೂಟನ್ನ ನ ಎರಡನೇ ನಿಯಮದ ಚಟುವಟಿಕೆ

ಅಂದಾಜು ಸಮಯ

೪೦ ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಗಾಜಿನ ಬೀಕರ್,
ನಾಣ್ಯ
ಕಾರ್ಡ್ ಬೋರ್ಡ್
ಕೇರಂ ಪಾನ್ಸ್
ಸ್ಟ್ರೈಕರ್
ನ್ಯೂಟನ್ನನ ಮೊದಲನೆ ನಿಯಮದ ಮಾದರಿ,
ಉದ್ಧವಾಗಿ ಅರ್ಧ ಕತ್ತರಿಸಿದ ಪಿ.ವಿ.ಸಿ.
ಪೈಪು,
ಅಳತೆ ಪಟ್ಟಿಗಳು,
ಬೇರೆ ಬೇರೆ ಗಾತ್ರದ ಗೋಲಿಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಅರ್ಧ ಕತ್ತರಿಸಿದ ಇಳಿಜಾರಿನಿಂದ ಸಮಗಾತ್ರದ ಎರಡು ಗೋಲಿಗಳನ್ನು ಬಿಡುವುದು. ಅದರ ಮುಂದೆ ಒಂದು ಪಾನ್ ಇಟ್ಟು ಚಲಿಸಿದ ದೂರವನ್ನು ಗಮನಿಸುವುದು. ನಂತರ 2 ಪಾನ್ ಗಳನ್ನು ಇಟ್ಟು ಗೋಲಿ ಬಿಡುವುದು. ಆಗ ದ್ರವ್ಯರಾಶಿ ಹೆಚ್ಚಾದಂತೆ ಚಲಿಸಿದ ದೂರ/ವೇಗೋತ್ಕರ್ಷ ಕಡಿಮೆಯಾಗುವುದನ್ನು ಗಮನಿಸಬಹುದು. ವೇಗೋತ್ಕರ್ಷವು ಕಡಿಮೆ ಆದಂತೆ ದ್ರವ್ಯರಾಶಿ ಹೆಚ್ಚಾಗುತ್ತದೆ. ವೇಗೋತ್ಕಷ ಮತ್ತು ದ್ರವ್ಯರಾಶಿ ವಿಲೋಮಾನುಪಾತ ದಲ್ಲಿದೆ.
  2. ಅದೇ ರೀತಿ ಒಂದು ಪಾನ್ ಇಟ್ಟು ಎರಡು ಬೇರೆ ಬೇರೆ ಗಾತ್ರದ ಗೋಲಿಗಳನ್ನು ಇಳಿಬಿಡುವುದು. ಚಿಕ್ಕಗೋಲಿ ಬಿಟ್ಟಾಗ ಅಂದರೆ ಕಡಿಮೆ ಬಲಪ್ರಯೋಗಿಸಿದಾಗ ಪಾನ್ ಕಡಿಮೆ ದೂರ ಚಲಿಸುತ್ತದೆ. ಮತ್ತು ದೊಡ್ಡ್ ಗೋಲಿ ಬಿಟ್ಟಾಗ ಹೆಚ್ಚು ದೂರ ಚಲಿಸುತ್ತದೆ. ಬಲವು ಹೆಚ್ಚಾದಂತೆ ವೇಗೋತ್ಕರ್ಷ ಹೆಚ್ಚಾಗುತ್ತದೆ. ವೇಗೋತ್ಕರ್ಷಕ್ಕೆ ಬಲವು ನೇರ ಅನುಪಾತದಲ್ಲಿದೆ.

{{#ev:youtube|yyVcjYonX6k| 500|left }}























ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಅಂಗಡಿಯಲ್ಲಿ ಪೇಪರ್ ಮತ್ತು ಬುಕ್ ತೆಗೆದುಕೊಳ್ಳುವಾಗ ಮಧ್ಯದಲ್ಲಿರುವ ಪೇಪರ್/ಬುಕ್ ಎಳೆಯುವುದು.
  2. ಕೇರಂ ಆಡುವಾಗ ಪಾನ್ ಗಳನ್ನು ಗುಳಿಯಲ್ಲಿ ಬೀಳುವಂತೆ ಮಾಡುವುದು. ಎಷ್ಟು ಬಲ ಪ್ರಯೋಗಿಸಬೇಕೆಂದು ತಿಳಿಯುವುದು.
  3. ಕ್ರಿಕೆಟ್ ಆಡುವಾಗ ಬಾಲ್ ಹಿಡಿಯದಿದ್ದಾಗ ಅದು ಚಲಿಸುತ್ತಲೆ ಇರುವುದು.
  4. ಕೆಟ್ಟು ಹೋದ ಕಾರ್ ತಳ್ಳುವಾಗ 2-3 ಜನ ತಳ್ಳುವುದು.
  5. ಚಾಕುವಿಂದ ಹಣ್ಣು ಕತ್ತರಿಸುವಾಗ ಚಾಕನ್ನು ಚಲಿಸುವಂತೆ ಮಾಡುವುದು ಹಣ್ಣು ಜಡತ್ವದಲ್ಲಿ ಇರುವುದು.
  6. ಹಗ್ಗ ಜಗ್ಗಾಟ ಆಟದಲ್ಲಿ ಎಳೆಯುವ ಬಲವನ್ನು ಸಂತುಲಿತ ಗೊಳಿಸುವುದು.

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ನ್ಯೂಟನ್ನನ 2 ನೇಯ ನಿಯಮವನ್ನು ಉದಾಹರಣೆಯೊಂದಿಗೆ ನಿರೂಪಿಸಿ.
  2. ವೇಗೋತ್ಷರ್ಷ ಎಂದರೇನು?
  3. ಬಲ ಎಂದರೇನು?
  4. ಅಸಂತುಲಿತ ಬಲ ಮತ್ತು ಸಂತುಲಿತ ಬಲಗಳಿಗಿರುವ ವ್ಯತ್ಯಾಸ ಗಳೇನು?

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್