ಬಿಎಡ್ ಪ್ರಶಿಕ್ಷಣಾರ್ಥಿಗಳ ಐಸಿಟಿ ಕೋರ್ಸ್ ಮೌಲ್ಯಮಾಪನ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಐ.ಸಿ.ಟಿ .ಅಳವಡಿಸಿಕೊಳ್ಳುವ ಅಧ್ಯಯನ ಪ್ರೆಸೆಂಟೇಶನನ ಮಾರ್ಗಸೂಚಿ
SEE IN ENGLISH
ಈ ಅಧ್ಯಯದ ಪ್ರಮುಖ ಉದ್ದೇಶಗಳು ಈ ಅಧ್ಯಯದ ಪ್ರಮುಖವಾದ ಉದ್ದೇಶಗಳೆಂದರೆ,ಹೀಗಿವೆ

  1. ಡಿಜಿಟಲ್(ವಿದ್ಯುನ್ಮಾನ)ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣವನ್ನು ಅರ್ಥಮಾಡಿಕೊಳ್ಳುವುದು .
  2. ವಿಧ ವಿಧದ ಪರಿಕರಗಳನ್ನು ಕಲಿಯುವದು , ಅನ್ವಯಗಳನ್ನು ಮತ್ತು ವಿದ್ಯುನ್ಮಾನ ವಿಧಾನಗಳ ಮೂಲಕ ಅರ್ಥ ಮಾಡಿಕೊಳ್ಳುವುದು .
  3. ಅಂತರ್ಜಾಲದ ವಿವಿಧ ಪುಟಗಳನ್ನು ಪ್ರವೇಶಿಸುವ ಮೂಲಕ ಸ್ವಯಂ ಕಲಿಕೆಗೆ ಸಹಾಯವಾಗುತ್ತದೆ.
  4. ಕಲಿಕೆಯು ಸಹಯೋಗದ ಸಮುದಾಯಗಳ ಮೂಲಕ ಒಬ್ಬರಿಂದ ಇನ್ನೊಬ್ಬರ ಕಲಿಕೆಗೆ ಐಸಿಟಿ ಅನುವುಮಾಡಿಕೊಡುತ್ತವೆ.
    ೧.ಕಲಿಕೆಯನ್ನು ಹಂಚಿಕೊಳ್ಳಲು ಬೆಂಬಲ ಮತ್ತು ಮಾರ್ಗದರ್ಶಿಯಾಗಿದೆ.
    ೨.ಮಾರ್ಗದರ್ಶನ ಪಡೆಯುವ ಮೂಲಕ ಕಲಿಕೆಗೆ ಸಹಾಯ ಮಾಡುತ್ತದೆ.
  5. ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಐಸಿಟಿ ಅಳವಡಿಸಿಕೊಂಡು ಬೋಧನಾ ಕಲಿಕಾ ಸಂಪನ್ಮೂಲಗಳನ್ನು ಸೃಷ್ಟಿಸುವುದು .
    ೧.ಅಂತರ್ಜಾಲ(ವೆಬ್) ಆಧಾರಿತ ಸಂಪನ್ಮೂಲಗಳು ಬಳಸುವುದು.
    ೨.ಪಠ್ಯ ಸಂಪನ್ಮೂಲ,ಚಿತ್ರಪಟ,ವೀಡಿಯೊಗಳು,ಪರಿಕಲ್ಪನಾ ನಕ್ಷೆಯನ್ನು ರೂಪಿಸುವ ಪರಿಕರಗಳನ್ನು ಬಳಸುವುದು.
    ೩.ಶೈಕ್ಷಣಿಕ ತಂತ್ರಾಂಶಗಳ ಅನ್ವಯಕಗಳನ್ನು ಬಳಸುವುದು.

ಮೌಲ್ಯಮಾಪನ ಅವಶ್ಯಕತೆಗಳು
ಮೌಲ್ಯಮಾಪನವು ಎರಡು ಭಾಗಗಳನ್ನು ಒಳಗೊಂಡಿದೆ.

  1. ಸಂಪನ್ಮೂಲ ಗ್ರಂಥಾಲಯ ಮತ್ತು ಪಾಠ - ೮೦ ಅಂಕ
  2. ಭಾಗವಹಿಸುವಿಕೆ ಚರ್ಚೆಗಳು (ತರಗತಿಯ ಮತ್ತು ವರ್ಚುವಲ್ ವೇದಿಕೆಗಳು) - ೨೦ ಅಂಕ

ಸಂಪನ್ಮೂಲ ಗ್ರಂಥಾಲಯ / ಘಟಕ ಯೋಜನೆಯನ್ನು ಸಲ್ಲಿಸುವದು . ವಿದ್ಯಾರ್ಥಿಗಳು ಅಂತರ್ಜಾಲದ ಸಂಶೋಧನೆ ಮಾಡುವುದು, ಸಂಬಂಧಿತ ವಿವಿಧ ಸ್ವರೂಪಗಳಲ್ಲಿ ಸಂಪನ್ಮೂಲಗಳನ್ನು ಒಗ್ಗೂಡಿಸಿ ರಚಿಸುವುದು. ಮತ್ತು ಐಸಿಟಿ ಸಮಗ್ರ ಘಟಕ ಯೋಜನೆಗಳನ್ನು ರಚಿಸುವುದು. ಈ ಮೂರು ಭಾಗಗಳಿಂದ ಒಟ್ಟುಗೂಡಿದ ಮೌಲ್ಯಮಾಪನ (ಸಹಜವಾಗಿ ಮೂರು ಘಟಕಗಳಿಗೆ ಅನುಗುಣವಾದ ಮೂರು ಭಾಗಗಳು ಇರುತ್ತವೆ).

ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಸಲ್ಲಿಸಿದ ನಿಗದಿಪಡಿಸಿದ ಮತ್ತು ಎಲ್ಲಾ ಮೂರು ಭಾಗಗಳ ಶ್ರೇಣಿಯಲ್ಲಿ ನಡೆಯಲಿದೆ.
ಭಾಗ ೧ - ಅಂತರ್ಜಾಲದ ಹುಡುಕಾಟ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ (ಘಟಕ ೧ರ ಕಲಿಕೆಯ ಲಿಂಕ್)
ಭಾಗ ೨ - ಐಸಿಟಿ ಸಂಪನ್ಮೂಲಗಳನ್ನು ರಚಿಸುವುದು (ಘಟಕ ೨ರ ಕಲಿಕೆಯ ಲಿಂಕ್)
ಭಾಗ ೩ - ಐಸಿಟಿ ಯ ಸಮಗ್ರ ಘಟಕ ಯೋಜನೆಗಳು ಮತ್ತು ಪಾಠ ಯೋಜನೆಗಳು ಅಭಿವೃದ್ಧಿ (ಘಟಕ ೩ರ ಕಲಿಕೆಯ ಲಿಂಕ್)

ಅಸೈನ್ಮೆಂಟ್ ಸಲ್ಲಿಸುವ ಕ್ರಮಗಳು :

  1. ವಿದ್ಯಾರ್ಥಿಗಳು ಈ ರೀತಿಯಾಗಿ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು> ಆ ಕಡತದ ಒಳಗೆ ಮತ್ತೆ ೨ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು><ಪಾಠದ ಹೆಸರು> ವಿಷಯದ ಮೇಲೆ ರಚಿಸಿರುವ ಸಂಪೂರ್ಣ ಕಡತ,ಅದರಲ್ಲಿ ವಿವಿಧ ಡಿಜಿಟಲ್‌ ಸಂಪನ್ಮೂಲಗಳನ್ನು ಒಳಗೊಂಡಿರಬೇಕು(ಧ್ವನಿ ಕಡತಗಳು, ವೀಡಿಯೋ ಕಡತಗಳು, ಪರಿಕಲ್ಪನಾ ನಕ್ಷೆ, ಸ್ಲೈಡ್ಸ್ ಗಳ ಪ್ರದರ್ಶನ, ಶೈಕ್ಷಣಿಕ ಉಪಕರಣ ಆಧಾರಿತ ಸಂಪನ್ಮೂಲಗಳು , ವೆಬ್ ತಾಣಗಳು ಇತರೆ) ಮತ್ತು ಮೆಟಾ ದಾಖಲೆ (ಘಟಕ ಯೋಜನೆಯನ್ನು ಹೊಂದಿರುವ ಪಠ್ಯ ಕಡತಗಳು, ವಿವಿಧ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದು ಅಥವಾ ಆನ್ ಲೈನ್ ಕೊಂಡಿಗಳು ) ಅಧ್ಯಾಪಕರ ಒಂದು ಪೆನ್ ಡ್ರೈವ್‌ನಲ್ಲಿ ಹಂಚಲಾಗುತ್ತದೆ. ನಿಯೋಜನೆಯನ್ನು ಇಂಗ್ಲೀಷ್ ಅಥವಾ ಕನ್ನಡದಲ್ಲಿ ಸಲ್ಲಿಸುವುದು.ಅಸೈನ್ಮೆಂಟ್ ಫೆಬ್ರುವರಿ ೨ನೇ ದಿನಾಂಕ ಸಮಯ ಸಾಯಂಕಾಲ ೫ಗಂಟೆ ಮುಂಚಿತವಾಗಿ ಸಲ್ಲಿಸಬೇಕು .
  2. ವಿಧ್ಯಾರ್ಥಿಗಳು ೨ ಪಾಠಗಳನ್ನು ತೆಗೆದುಕೊಳ್ಳಬೇಕು ಮತ್ತು ಸಲ್ಲಿಸಬೇಕು (ಒಂದೊಂದು ವಿಧಾನದಲ್ಲಿ ಒಂದು). ಆದರೆ ಕೇವಲ ಒಂದು ಪಾಠಕ್ಕೆ ಮಾತ್ರ ಮೌಲ್ಯಮಾಪನ ಮತ್ತು ಶ್ರೇಣಿ ನೀಡಲಾಗುವುದು.
  3. ಮೌಲ್ಯಮಾಪನ ಸಂಪನ್ಮೂಲ ಮೆಟಾ ಡಾಕ್ಯುಮೆಂಟ್‌ಅನ್ನು ರಚಿಸುವುದು .ಈ ಡಾಕ್ಯುಮೆಂಟ್ ಎಲ್ಲಾ ಮೂರು ಭಾಗಗಳಿಗೆ ಮುಂದುವರೆಯುತ್ತದೆ . ಇದು ಪಠ್ಯ ಡಾಕ್ಯುಮೆಂಟ್ ಆಗಿರುವುದರಿಂದ ಇದರಲ್ಲಿ ಘಟಕ ಯೋಜನೆ ಯ ಜೊತೆಗೆ ಹೈಪರ್ ಲಿಂಕಗಳ ಸಂಪನ್ಮೂಲಗೆ ತಾಳೆ ನೋಡುವುದು . ಇದು ವೆಬ್‌ತಾಣ, ಚಿತ್ರಗಳು ಹಾಗೂ ಡಿಜಿಟಲ್ ಸಂಪನ್ಮೂಲಗಳ ಚಿತ್ರಗಳು, ಕೊಂಡಿಗಳು ಹಾಗೂ ಪರಿಕಲ್ಪನಾ ನಕ್ಷೆ ,ವೀಡಿಯೋ, ಆಡಿಯೋ ತುಣುಕುಗಳು , ಚಿತ್ರಗಳು ಇತರೆ .

ಈ ದಾಖಲೆಗೆ ಈ ರೀತಿಯಾಗಿ ಹೆಸರಿಸಿರಬೇಕು <ವಿದ್ಯಾರ್ಥಿಯ ಹಾಜರಾತಿ ಸಂಖ್ಯೆ> + <ವಿದ್ಯಾರ್ಥಿಯ ಹೆಸರು> - < ಪಾಠದ ಹೆಸರು>.odt

ಭಾಗ ೧ – ಅಂತರ್ಜಾಲದಲ್ಲಿ ಹುಡುಕಾಟ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ

  1. ಅಂತರ್ಜಾಲದ ಹುಡುಕಾಟ ಮತ್ತು ಸಂಪನ್ಮೂಲ ಕಡತವನ್ನು ತಯಾರಿಸುವುದು,ಪ್ರತಿ ವಿಷಯದಲ್ಲಿ ಒಂದು ಕಡತ
  2. ಎಲ್ಲಾ ವೆಬ್ ಸಂಪನ್ಮೂಲಗಳನ್ನು ಮಂಡಿಸಬೇಕು ಮತ್ತು ಪರೀಕ್ಷೆಗೊಳಪಡಿಸಿದ ಒಂದು ಡಾಕ್ಯುಮೆಂಟ್‌ನ್ನು ರಚಿಸಿ. ಪ್ರತಿ ವಿಷಯಕ್ಕೆ ಒಂದು ಡಾಕ್ಯೂಮೆಂಟ್‌ಅನ್ನು ತಯಾರಿಸಲೇಬೇಕು.
  3. ಅಧ್ಯಯನ ಮಾಡಿದ ಒಂದು ಪಾಠದ ಮೇಲೆ ಪ್ರತಿಯೊಂದು ಪರಿಕಲ್ಪನಾ ನಕ್ಷೆಯನ್ನು ರಚಿಸಬೇಕು . ಪಾಠದ ಹೆಸರಿನಲ್ಲಿ ಮೈಂಡ್ ಮ್ಯಾಪ್‌ನ್ನು ಉಳಿಸಬೇಕು ಮತ್ತು ಚಿತ್ರವನ್ನು ಎಕ್ಸ್ಪೋರ್ಟ್(Export) ಮಾಡಬೇಕು ಮತ್ತು ಅದನ್ನು ಡಾಕ್ಯುಮೆಂಟ್‌ಗೆ ಸೇರಿಸಬೇಕು.

ಪ್ರತಿಯೊಂದು ಸಂಪನ್ಮೂಲ ವಿಷಯಗಳನ್ನು ಕೆಳಗಿನ ರೂಪದಲ್ಲಿ ಮೌಲ್ಯಮಾಪನ ಮಾಡಬೇಕು (ಈ ಪ್ರತಿಯೊಂದು ವಸ್ತುಗಳ ಮೆಟಾ ಡೇಟಾವನ್ನು ರೂಪಿಸುತ್ತದೆ)

Screenshot from 2015-01-28 07-50-10.png
ಈ ಟೆಬಲ್ ಕೆಳಗೆ , ವಿದ್ಯಾರ್ಥಿಗಳು ಪ್ಯಾರಾದಲ್ಲಿ ವಿವರಣೆ ನೀಡಬೇಕು ಹಾಗು ಸಂಪನ್ಮೂಲ ಹೇಗೆ ಉಪಯುಕ್ತ ಎಂಬುವದನ್ನು ಬರೆಯಬೇಕು .

ಭಾಗ ೧ ಶ್ರೇಣಿಕೃತ ಮಾನದಂಡ (ಕ್ರೈಟೀರಿಯಾ)

  1. ಸಂಬಂಧಿಸಿದ ಕನಿಷ್ಠ ೫ ವೆಬ್ ಸಂಪನ್ಮೂಲ ಒದಗಿಸಬೇಕು ಮತ್ತು ಚರ್ಚಿಸಬೇಕು . ಘಟಕ ೧ರ ಕಲಿಕೆಗೆ ಅನುರೂಪವಾಗಿದೆ.
  2. ಮೆಟಾ ಡೇಟಾ ಟಿಪ್ಪಣಿಯು ಹೇಗೆ ದಾಖಲಾಗಿದೆ .
  3. ಸ್ವಯಂ ಕಲಿಕೆಗೆ ವಿಮರ್ಶಾತ್ಮಕವಾಗಿ ಹಾಗೂ ಕಲಿಸುವ ಸಾಮರ್ಥ್ಯ ಸಂಪನ್ಮೂಲದ ಮೌಲ್ಯಮಾಪನ , ಸಂಪನ್ಮೂಲಗಳು ಮತ್ತು ಘಟಕ ಯೋಜನೆ ತಯಾರಿಕೆಯಲ್ಲಿ ಅವುಗಳ ಬಳಕೆಯಲ್ಲಿನ ನಿಯೋಜನೆ ಮಾಡಿದ ಕಾಮೆಂಟ್‌ಗಳು ಸಾಕ್ಷಿಯಾಗಿದೆ.

ಅ) ವಿದ್ಯಾರ್ಥಿಯು ಒಂದು ಸಂಪನ್ಮೂಲ ಮೌಲ್ಯಮಾಪನಕ್ಕೆ ನಿಯತಾಂಕಗಳನ್ನು ಪತ್ತೆಹಚ್ಚಿದ್ದಾರೆಯೇ ?
ಬ) ಮಾನದಂಡಗಳೇನು?/ಮೌಲ್ಯಮಾಪನ ತೂಕಗಳೇನು?
ಕ) ಸಂಪನ್ಮೂಲಗಳ ಮೌಲ್ಯಮಾಪನ ಮಾಡಲಾಗಿದೆಯೆ?

ಭಾಗ ೨ - ಐಸಿಟಿ ಸಂಪನ್ಮೂಲಗಳನ್ನು ರಚಿಸುವುದು

  1. ಚಿತ್ರ /ಫೋಟೋ ಪ್ರಬಂಧ - ಇದು ಒಂದು ಕಥೆ ಮಾಡಬಹುದು / ನಿರೂಪಣೆ/ ವಿವರಣೆಯು ಚಿತ್ರ ಮತ್ತು ಪಠ್ಯವನ್ನು ತುಲನೆ ಮಾಡುವುದು . ಚಿತ್ರಗಳು,ಛಾಯಾಚಿತ್ರಗಳನ್ನು ಮಾಡಬಹುದು(ವಿದ್ಯಾರ್ಥಿಯು ತೆಗೆದ)ತಯಾರಿಸಿದವರು ಉಚಿತವಾಗಿ ಅಂತರ್ಜಾಲದಲ್ಲಿ ಅಥವಾ ರೇಖಾಚಿತ್ರಗಳನ್ನು ದಾಖಲಿಸಿದವರು ."ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ"ಚಿತ್ರವನ್ನು ಕಾಫಿ ರೈಟ್ ಮಾಡುವದನ್ನು ದೂರವಿಡಿ.
  2. ವೀಡಿಯೋ ಕಡತ -- ಈ ಪ್ರಸ್ತುತಿಯಲ್ಲಿ( presentation) ಚಿತ್ರಗಳನ್ನು ಮಾಡಬಹುದು ಮತ್ತು ಧ್ವನಿ/ಸಂಗೀತ ಸೇರಿಸುವ ಮತ್ತು ವೀಡಿಯೋವನ್ನು ರಚಿಸುವುದು ಅಥವಾ ವೀಡಿಯೊ ಡಬ್ ಮಾಡುವುದು ಅಥವಾ ಒಂದು ವಿವರಣೆಯನ್ನು ಸೇರಿಸುವುದು ಮತ್ತು ಒಂದು ಸಿಮ್ಯುಲೇಶನ್ ಅಥವಾ ಒಂದು ಜಿಯೋಜಿಬ್ರಾ ಕಡತದಿಂದ ವೀಡಿಯೋವನ್ನು ಮಾಡುವುದು .

ಭಾಗ ೨ ಶ್ರೇಣಿಕೃತ ಮಾನದಂಡ
a) ಸ್ಪಷ್ಟತೆ ಮತ್ತು ಸಂಪನ್ಮೂಲಗಳ ಸುಸಂಬದ್ಧತೆ
b) ವ್ಯಾಪಕವಾಗಿ ಎಲ್ಲಾ ವಿಷಯವಸ್ತುಗಳ ಸಂಪನ್ಮೂಲಗಳನ್ನು ಒಟ್ಟಾಗಿ ವಿವರಿಸಬೇಕು
c) ಪಠ್ಯದ ಗುಣಮಟ್ಟ,ಪರಿಕಲ್ಪನಾ ನಕ್ಷೆ , ಚಿತ್ರಗಳು ಮತ್ತು ವೀಡಿಯೋ ಸಂಪನ್ಮೂಲಗಳು
d) ಪ್ರೆಸೆಂಟೇಶನ್ನಿನ ಶೈಲಿಯು ಸರಳವಾಗಿ ಮತ್ತು ಪರಿಣಾಮಕಾರಿಯಾಗಿರಬೇಕು
e) ಸಂವಹನದ ತಿಳುವಳಿಕೆ/ ಸರಳತೆ ಸಂವಹನವಾಗಿರಬೇಕು
f) ಪ್ರಯತ್ನವು ಸಂಕೀರ್ಣತೆಗೆ ಸಾಗುತ್ತಿರಬೇಕು.
g) ಸಂಪನ್ಮೂಲಗಳ ಸಾಮರ್ಥ್ಯವು ಅನೇಕ ಸ್ವರೂಪಗಳಲ್ಲಿ ಒಂದಾಗಿವೆ - ಪಠ್ಯ / ಧ್ವನಿ; ಪಠ್ಯ / ಚಿತ್ರ; ಇತ್ಯಾದಿ
h) ಸಂಬಂಧಿಸಿದ ಮತ್ತು ಸಂಪನ್ಮೂಲಗಳ ಬಳಕೆ

ಭಾಗ ೩ – ಐಸಿಟಿಯ ಸಮಗ್ರ ಪಾಠ ಯೋಜನೆಯ ಬೆಳವಣಿಗೆ :

  1. ಘಟಕ ಯೋಜನೆಯು ಬೆಳವಣಿಗೆಯಲ್ಲಿ ಆಯ್ಕೆ ಮಾಡಿಕೊಂಡಿರುವ ವಿಷಯದ ವಿವಿಧ ಉಪಕರಣಗಳ ಏಕೀಕರಣಗೊಂಡ ಘಟಕ ಯೋಜನೆ .

- ನಾನು ಕಲಿಸಲು ಒಂದು ಪಠ್ಯಕ್ರಮದ ವಿಶ್ಲೇಷಣೆ ಉಂಟಾಗಬೇಕಾದ ಅಗತ್ಯವೇನಿದೆ ?, ಇದರ ಬಗ್ಗೆ ನನಗೆ ಏನು ಗೊತ್ತು? ಮತ್ತು ಅದನ್ನು ನಾನು ಹೇಗೆ ಬೋಧನೆ ಮಾಡಬೇಕು?.
- ನೀವು ಕಲಿಸುವ ಸಂಪನ್ಮೂಲಗಳ ಅವಶ್ಯಕತೆಯನ್ನು ನಿರ್ಧರಿಸಿ .

ಭಾಗ ೩ ಶ್ರೇಣಿಕೃತ ಮಾನದಂಡ a)ವಿಷಯ ಕಲಿಸಲು ಒಂದು ಸ್ಪಷ್ಟ ಘಟಕ ಯೋಜನೆಯನ್ನು ಹೊಂದಿರುವ, ಯಾವ ಸಂಪನ್ಮೂಲ ಮತ್ತು ಉಪಕರಣಗಳು ಯಾವಾಗ ಮತ್ತು ಯಾವ ರೀತಿಯಲ್ಲಿ ಬಳಸಬೇಕು .
b)ಐಸಿಟಿ ಉಪಕರಣಗಳು ಮತ್ತು ಸಂಪನ್ಮೂಲಗಳು ಹೇಗೆ ಹೊಂದಿಕೊಳ್ಳುತ್ತವೆ?
c)ಕಲಿಕಾ ಪ್ರಕ್ರಿಯೆಯ ಯಾವ ಹಂತಗಳಲ್ಲಿ ನೀವು ಐಸಿಟಿ ಯನ್ನು ಬಳಸಬಹುದು - ಮೌಲ್ಯಮಾಪನ ಸಹ ಒಳಗೊಂಡಿರಬೇಕು?
d)ಪ್ರಸ್ತುತ ಸಂದರ್ಭಗಳಲ್ಲಿ ನಮ್ಮ ಒಂದು ತರಗತಿಯನ್ನು ಹೇಗೆ ಇದನ್ನು ಅಳವಡಿಸಬಹುದು?
e)ಐಸಿಟಿ ಕಲಿಕೆಯಿಂದ ಏನು ಸಾಧ್ಯ ಹಾಗೂ ಐಸಿಟಿ ಇಲ್ಲದೆ ಇದ್ದರೆ ಏನಾಗುತ್ತೆ ? ಯಾಕೆ ? ಸ್ಪಷ್ಟವಾಗಿ ವಿವರಣೆ ಕೊಡಬೇಕು

ಭಾಗವಹಿಸುವಿಕೆಯ ವರ್ಗ ಮತ್ತು ವರ್ಚುವಲ್ ವೇದಿಕೆಗಳು

  1. ಭಾಗವಹಿಸುವಿಕೆಯವರ ವರ್ಗ ಚರ್ಚೆಗಳು,ಕಲ್ಪನೆಗಳು/ಅನುಭವಗಳನ್ನು ಹಂಚಿಕೊಳ್ಳುವುದು,
  2. ಸ್ವಯಂ ಸೇವಕರಿಗೆ ಕಾರ್ಯಗಳನ್ನು/ಜವಾಬ್ದಾರಿಗಳನ್ನು ಮತ್ತು ಗೆಳೆಯರೊಂದಿಗೆ ಸಹಾಯ ಮಾಡುವುದು .
  3. ಸಹಯೋಗ ಮತ್ತು ಭಾಗವಹಿಸುವಿಕೆ ಇಮೇಲ್ ವೇದಿಕೆಯಲ್ಲಿ ಪರಸ್ಪರ ಗುಣಮಟ್ಟ ಮತ್ತು ಸಾಕ್ಷಿ
  4. ಇಮೇಲ್ ವೇದಿಕೆಯಲ್ಲಿ ಪರಸ್ಪರ ಗುಣಮಟ್ಟದವು ಮತ್ತು ಪುರಾವೆಗಳ ಸಹಯೋಗದೊಂದಿಗೆ ಮತ್ತು ಭಾಗವಹಿಸುವಿಕೆ .

a)ಇಮೇಲ್‌ಗಳ ಸಂಖ್ಯೆ
b)ಸ್ವರೂಪ ಮತ್ತು ಇಮೇಲ್‌ಗಳ ವಿಷಯ
c)ಭಾಗವಹಿಸುವರ ಸಾಮಾರ್ಥ್ಯ ಮತ್ತು ಮಾರ್ಗದರ್ಶಿ ಗುಂಪು (ಅವರು ಪ್ರಶ್ನೆಗಳನ್ನು ಕೇಳಲಾಗಿದೆ/ ಪ್ರತಿಕ್ರಿಯಿಸುತ್ತಿದ್ದಾರೆ)


ಒಟ್ಟು ಅಂಕಗಳು : ೨೦
ಐ.ಟಿ. ಫಾರ್ ಚೇಂಜ್,ಬೆಂಗಳೂರು
೨೩ ಜನೆವರಿ ೨೦೧೫ .