ವಿಜ್ಞಾನ ಯೋಜನೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೪:೨೩, ೫ ನವೆಂಬರ್ ೨೦೧೫ ರಂತೆ Venkatesh (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಪೀಠಿಕೆ

ಮಕ್ಕಳು ವಿವಿಧ ಪರಿಸರದಿಂದ ಬಂದಿರುತ್ತಾರೆ, ಶಾಲೆಯ ಸುತ್ತಮುತ್ತಲಿನ ಪರಿಸರವೂ ಸಹ ಒಂದ ಶೈಕ್ಷಣಿಕ ಸಂಪನ್ಮೂಲವಾಗಿರುತ್ತದೆ. ಶಾಲೆಗೆ ಬಂದು ಕಲಿಯುವುದಕ್ಕಿಂತ ಮೊದಲೇ ಹೊರಗಿನ ಪರಿಸರದಲ್ಲಿನ ಅನೇಕ ಪ್ರಾಕೃತಿಕ ಅಂಶಗಳ ಕಲಿಕೆಯಾಗಿರುತ್ತದೆ. ಶಾಲೆಯ ಒಳಗೆ ನಡೆಯುವ ಪಠ್ಯಕ್ರಮ ಕೇಂದ್ರಿತವಾದ ಕಲಿಕೆಗೂ ಮತ್ತು ಶಾಲಾ ಹೊರಗಿನ ಪರಿಸರದಲ್ಲಿನ ಕಲಿಕೆಗೂ ಭಿನ್ನತೆಗಳಿರುತ್ತವೆ . ಮಕ್ಕಳು ತರಗತಿ ಕೋಣೆಯೋಳಗಿನ ಕಲಿಕೆಯನ್ನು ತಮ್ಮ ಪರಿಸರದ, ತಮ್ಮ ದೈನಂದಿನ ಚಟುವಟಿಕಗೆಳ ಕಲಿಕೆಯೊಂದಿಗೆ ಹೋಲಿಕೆ ಮಾಡಿಕೊಳ್ಳಬೇಕು. ಆಗ ಮಕ್ಕಳಲ್ಲಿ ವಿಮರ್ಶನಾತ್ಮಕ ಚಿಂತನೆ ಬೆಳೆಯುತ್ತದೆ. ಇದು ಮಕ್ಕಳಲ್ಲಿ ಗಮನಿಸುವ, ಅನುಭವಿಸುವ, ಸ್ಪರ್ಶಿಸುವ, ವಾಸನೆ ಮತ್ತು ರುಚಿಯನ್ನು ಗ್ರಹಿಸುವ, ಯೋಚಿಸುವ, ಪ್ರಶ್ನಿಸುವ, ಚರ್ಚಿಸುವ. ಸೃಷ್ಟಿಸುವ ಹಾಗು ತಮಗೆ ತರಗತಿಯಲ್ಲಿ ಕಲಿಸಿರುವ ವಿಷಯಗಳು ಹಾಗು ಸುತ್ತಲು ಇರುವ ವಿಷಯಗಳ ಸಂಬಂಧದ ಬಗ್ಗೆ ತಮ್ಮದೇ ಆದ ಜ್ನಾನವನ್ನು ರೂಪಿಸಿಕೊಳ್ಳುವ ಅವಕಾಶಗಳನ್ನು ಸೃಷ್ಟಿಸುತ್ತದೆ . ಶಾಲೆ ಮತ್ತು ಕಲಿಕೆಯಡೆಗಿನ ಆಸಕ್ತಿಯನ್ನು ಹೆಚ್ಚಿಸುತ್ತದೆ. ಈ ಮೂಲಕ ಮಕ್ಕಳ ಕಲಿಕೆಯನ್ನು ಶ್ರೀಮಂತಗೊಳಿಸಲು ಸಾದ್ಯವಾಗುತ್ತದೆ.

ಎನ್.ಸಿ.ಎಪ್. 4.5.6 ರ “ಇತರ ಸ್ಥಳಗಳು ಮತ್ತು ಅವಕಾಶಗಳು” ಅದ್ಯಾಯದಲ್ಲಿ ಈ ವಿಷಯವನ್ನು ನಿರ್ಧಿಷ್ಟವಾಗಿ ಪ್ರಸ್ತಾಪಿಸಲಾಗಿದೆ. ಶಾಲಾಆವರಣದಿಂದ ಭೌತಿಕವಾಗಿ ಹೊರಗಡೆ ಉಳಿಯುವ ಪಠ್ಯದ ಅಂಶಗಳು ಸಹ ಕಲಿಕೆಗೆ ತುಂಬಾ ಮಹತ್ವದ್ದಾವಗಿವೆ. ಸ್ಥಳೀಯ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳು, ನೈಸರ್ಗಿಕ ಭೌತಿಕ ಪರಿಸರಗಳಾದ ನದಿಗಳು ಹಾಗು ಬೆಟ್ಟಗಳು, ದೈನಂದಿನ ಬಳಕೆಯ ಸ್ಥಳಗಳಾದ ಮಾರುಕಟ್ಟೆ ಮತ್ತು ಅಂಚೆ ಕಛೇರಿಗಳಂತಹ ಸ್ಥಳಗಳು ಇದರಲ್ಲಿ ಸೇರುತ್ತವೆ. ಇಂತಹ ಸಂಪನ್ಮೂಲಗಳ ಪ್ರತಿಭಾಪೂರ್ಣ ಬಳಕೆ ಸಾಧ್ಯವಾಗುವಂತೆ ಶಾಲಾವೇಳಾಪಟ್ಟಿಯನ್ನು ಯೋಜಿಸುವ ಸಾಮರ್ಥ್ಯ ಶಾಲೆಯಲ್ಲಿ ಮಕ್ಕಳು ಪಡೆಯುವ ಶಿಕ್ಣಣದ ಗುಣಮಟ್ಟದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ತರಗತಿ ಚಟುವಟಿಕೆಗಳನ್ನು ಪಠ್ಯ ಪುಸ್ತಕದಲ್ಲಿ ಬರೆದಿರುವ ಅಂಶಗಳಿಗಷ್ಟೆ ಸೀಮಿತಗೊಳಿಸಿದರೆ ಅದು ಮಕ್ಕಳ ಆಸಕ್ತಿ ಮತ್ತು ಸಾಮಾರ್ಥ್ಯದ ಬೆಳವಣಿಗೆಯಲ್ಲಿ ಗಂಭೀರ ತೊಡಕಾಗಿ ಪರಿಣಮಿಸುತ್ತದೆ.

ಪರಿಕಲ್ಪನೆ

ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳಲ್ಲಿ ಶಾಲೆಗೆ ಶೈಕ್ಷಣಿಕ ಮೌಲ್ಯ ಹೊಂದಿರುವ ಸ್ಥಳಗಳು/ವ್ಯಕ್ತಿಗಳು/ಘಟನೆಗಳು/ಸಂಸ್ಥೆಗಳು ಸೇರಿರಬಹುದು. ಸ್ಥಳೀಯವಾಗಿ ಸಣ್ಣ ಅಥವಾ ದೊಡ್ಡ ಮಟ್ಟದ ಕೈಗಾರಿಕೆಗಳು, ಡಯರಿ ಪಾರ್ಮ್ ಗಳು, ಮಾರುಕಟ್ಟೆ, ಗ್ರಾಮಪಂಚಾಯಿತಿ, ಅಂಗನವಾಡಿ, ಬ್ಯಾಂಕುಗಳು, ಕೃಷಿಕೇಂದ್ರಗಳು, ಆಸ್ಪತ್ರೆ, ಮತ್ತು ಅಂಚೆಕಛೇರಿಯಂತಹ ಸಂಸ್ಥೆಗಳಿಗೂ ಭೇಟಿ ನೀಡಬಹುದು. ಈತಿಹಾಸಿಕ ಮಹತ್ವ ಇರುವ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳು, ನಿಸರ್ಗದ ಭಾಗವಾಗಿರುವ ಅರಣ್ಯಗಳು, ನದಿಗಳು, ಬೆಟ್ಟಗಳು, ಸ್ಥಳೀಯ ಜಾತ್ರೆಯಂತಹ ಹಬ್ಬಗಳು, ಸಂತೆಯ ದಿನ ಸಂತೆಗೆ ಭೇಟಿ ನೀಡುವುದನ್ನೇ ಹೊರ ಸಂಚಾರ ಅಥವಾ ಸಮುದಾಯ ಸಮೀಕ್ಷೆ ಎಂದು ಪರಿಗಣಿಸಬಹುದು .

ಸಮೀಕ್ಷೆಯ ವಿಧಗಳು

  1. ಶಾಲಾ- ಸ್ಥಳೀಯ ಪರಿಸರದಲ್ಲಿನ ಸಸ್ಯವರ್ಗ ಸಮೀಕ್ಷೆ