ಉಬುಂಟು ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಪರಿಚಯ

ಐ.ಸಿ.ಟಿ ಸಾಮರ್ಥ್ಯ

ಆಪರೇಟಿಂಗ್ ಸಿಸ್ಟಮ್ ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ (GUI , ಉಚ್ಛರಣೆ Goo-ee) ಎನ್ನುವ ಪ್ರೋಗ್ರಾಮ್ ಅನ್ನು ಬಳಸುತ್ತದೆ. ಇದು ಗಣಕಯಂತ್ರದ ಬೇರೆ ಮನವಿಗಳನ್ನು ಮೌಸ್ ಮೂಲಕ ಪ್ರವೇಶಿಸಲು ಸಹಾಯ ಮಾಡುತ್ತದೆ.. ಪ್ರಸಿದ್ಧವಾಗಿರುವ ಆಪರೇಟಿಂಗ್ ಸಿಸ್ಟಮ್‌ಗಳೆಂದರೆ ವಿಂಡೊಸ್ (Windows) ಜಿಎನ್‌ಯು (GNU) /ಲಿನಕ್ಸ್ (Linux) ಮತ್ತು ಮ್ಯಾಕ್ (Mac OSx)ಓಸಕ್ಸ್.

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಮೂಲ ತಂತ್ರಾಂಶವನ್ನು ಬದಲಿಸಿ, ಅಭಿವೃದ್ದಿಪಡಿಸಿ ಅದೂ ಯಾವುದೇ ಲೈಸೆನ್ಸ್ ಅಥವಾ ಪರವಾನಗಿಗೆ ಹಣ ತೆತ್ತದೆ. ಇದೆಲ್ಲದರ ಜೊತೆಗೆ ನಿಮ್ಮ ಭಾಷೆಯಲ್ಲೇ ತಂತ್ರಾಂಶವನ್ನು ಬಳಸುವ ಅವಕಾಶ ಕೂಡ ನಿಮಗೆ ಉಬುಂಟು ಒದಗಿಸುತ್ತದೆ. ಇದನ್ನು ಯಾರು ಬೇಕಾದರೂ ಸುಲಭವಾಗಿ ಬಳಸಬಹುದು ಕೂಡ. ವಿಕಲ ಚೇತನರಿಗೂ ಕೂಡ ಉಪಯೋಗವಾಗುವಂತಹ ಅನೇಕ ತಂತ್ರಾಂಶ ಸವಲತ್ತುಗಳನ್ನು ಉಬುಂಟು ತನ್ನಲ್ಲಿರಿಸಿಕೊಂಡಿದೆ. ಇದು ಉಬುಂಟುವಿನ ಮುಖ್ಯ ಗುರಿ ಕೂಡ. ಪ್ರತಿ ಆರು ತಿಂಗಳಿಗೊಮ್ಮೆ ಹೊಸದಾದ, ಉತ್ತಮ ಮತ್ತು ಸ್ಥಿರವಾದ ಆಪರೇಟಿಂಗ್ ಸಿಸ್ಟಂ ಅನ್ನು ಹೊತ್ತು ತರುವುದರ ಜೊತೆಗೆ, ತಂತ್ರಾಂಶದ ಉಪಯುಕ್ತತೆ, ಅದರ ಬಳಕೆಯ ವಿಧಾನ, ಇನ್ಸ್ಟಾಲೇಶನ್ ಇತ್ಯಾದಿಗಳ ಸರಳೀಕರಣದ ಕಡೆಗೂ ಹೆಚ್ಚಿನ ಗಮನವನ್ನೂ ಹರಿಸುತ್ತದೆ. ಗ್ನು/ಲಿನಕ್ಸ್ ಆಧಾರಿತ ಡೆಬಿಯನ್ ಆಪರೇಟಿಂಗ್ ಸಿಸ್ಟಂನ ಮೂಲವಾಗಿರಿಸಿಕೊಂಡು ಅಭಿವೃದ್ದಿ ಪಡಿಸಲಾಗಿರುವ, ಸ್ವತಂತ್ರ ತಂತ್ರಾಂಶದ ಸ್ವಾತಂತ್ರ್ಯದ ಸವಿಯನ್ನು ಪ್ರಪಂಚದೆಲ್ಲೆಡೆ ಎಲ್ಲ ಕಂಪ್ಯೂಟರ್ ಬಳಕೆದಾರರಿಗೂ ಹಂಚುವುದಕ್ಕೆಂದೇ ಇರುವ ಉಬುಂಟು ಇಂಥದ್ದೊಂದು ತಂತ್ರಾಂಶ. ಶೈಕ್ಷಣಿಕವಾಗಿ ಬಳಸಬಹುದಾದ ಹಲವು ಶೈಕ್ಷಣಿಕ ಪರಿಕರಗಳನ್ನು ಉಬುಂಟಿ ಹೊಂದಿದೆ. ಹಾಗು ಪ್ರಾದೇಶಿಕ ಭಾಷೆಯಲ್ಲಿ ಕಂಪ್ಯೂಟರ್‌ ಬಳಸು ಅನುವು ಮಾಡಿಕೊಡುತ್ತದೆ. ಸುಮಾರು 50ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಯಲ್ಲಿ ಉಬುಂಟು ಲಭ್ಯವಿದೆ. ORCA ಸ್ಕ್ರೀನ್‌ ರೀಡರ್‌ನಂತಹ ಅನ್ವಯಕಗಳು ವಿಶೇಷ ಅಗತ್ಯವುಳ್ಳ, ದೃಷ್ಟಿದೋಷವುಳ್ಳ ಮಕ್ಕಳಿಗೆ ಸಹಾಯಕವಾಗುತ್ತವೆ.

ಆವೃತ್ತಿ

ಉಬುಂಟು ತಂತ್ರಾಂಶ ಪ್ರತೀ ವರ್ಷದಲ್ಲಿ ಎರಡುಬಾರಿ ನವೀಕರಣಗೊಳ್ಳುತ್ತಿರುತ್ತದೆ, ಅಂದರೆ ವರ್ಷದ ಮಾರ್ಚ್ ಮತ್ತು ಆಕ್ಟೋಬರ್ ತಿಂಗಅಳಲ್ಲಿ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಅದರಲ್ಲಿ ಎರಡು ವರ್ಷಕ್ಕೆ ಒಮ್ಮೆ ಎಲ್.ಟಿ.ಸ್(LTS- Long Term Support) ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಈಗ ಪ್ರಸ್ತುತ ಉಬುಂಟು ಎಲ್.ಟಿ.ಸ್ 16.04 ಆವೃತ್ತಿಯು ಚಾಲನೆಯಲ್ಲಿದೆ. ಕಳೆದ ಎಲ್.ಟಿ.ಸ್ ಉಬುಂಟು 14.04 ಅಥವ ಯಾವುದೆ ಆವೃತ್ತಿಯನ್ನು ಬಳಸುತ್ತಿರುವವರು, ಈ 16.04 ಆವೃತ್ತಿಗೆ ನವೀಕರಣ ಮಾದಿಕೋಳ್ಳುವ ಮೂಲಕ ಎಲ್ಲಾ ಅನ್ವಯಕಗಳೂ ಸಹ ನವೀಕರಣಗೊಳ್ಳುತ್ತವೆ ಹಾಗು ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಪರಿಹರಿಸಲ್ಪಟ್ಟಿರುತ್ತವೆ.

ಸಂರಚನೆ

ಪ್ರೊಸೆಸರ್: 2 GHz ಡ್ಯುಯಲ್ ಕೋರ್ ಪ್ರೊಸೆಸರ್ ಮೆಮೋರಿ: 1GB of RAM (2GB recommended) ಡಿಸ್ಕ್: ಕನಿಷ್ಟ 30GB ಹಾರ್ಡ್‌ಡಿಸ್ಕ್ ಸ್ಥಳಾವಕಾಶ ಗ್ರಾಫಿಕ್ : ನೆಟ್‌ಬುಕ್ ಇಂಟರ್ಪೆಸ್ ಬಳಸುತ್ತಿದ್ದಲ್ಲಿ 3D acceleration ಗ್ರಾಫಿಕ್ ಅವಶ್ಯಕವಾದುದು. ಉಬುಂಟು ಅನುಸ್ಥಾಪನೆ ಮಾಡುವ ಮೊದಲು, ನಿಮ್ಮ ಕಂಪ್ಯೂಟರ್‌ 64 ಬಿಟ್ ಅಥವಾ 32 ಬಿಟ್ ಆವೃತ್ತಿಯದು ಎಂಬುದನ್ನು ತಿಳಿದು ಆಯಾ ಆವೃತ್ತಿಗೆ ಸೂಕ್ತವಾಗುವ ಉಬುಂಟುವನ್ನು ಡೌನ್‌ಲೋಡಿ ಮಾಡಿ ಅಥವಾ ಡಿವಿಡಿ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಿ.

ಲಕ್ಷಣಗಳ ಮೇಲ್ನೋಟ

ಉಬುಂಟು ಮೂಲಕ ಸಾವಿರಾರು ಅನ್ವಯಕಗಳನ್ನು ಡೌನ್‌ಲೊಡ್‌ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬಹುತೇಕ ಅನ್ವಯಕಗಳು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಾಗಿದ್ದು, ಕಂಪ್ಯೂಟರ್‌ಗಳಿಗೆ ಸುಲಭವಾಗಿ ಅನುಸ್ಥಾಪನೆ ಮಾಡಿಕೊಳ್ಳಬಹುದಾಗಿದೆ. ಸುರಕ್ಷಿತವಾದ, ವೆಚ್ಚರಹಿತವಾದ, ವಿಧ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ ಆಡಳಿತಗಾರರು ಸುಲಭವಾಗಿ ಬಳಸಬಹುದಾದ ವಿಸ್ತಾರವಾದ ಶೈಕ್ಷಣಿಕ ತಂತ್ರಾಂಶಗಳನ್ನು ಉಬುಂಟು ಒದಗಿಸುತ್ತದೆ.

ಇತರೇ ಸಮಾನ ಅನ್ವಯಕಗಳು

ವಾಸ್ತವದಲ್ಲಿ, ನೂರಾರು ಲಿನಕ್ಸ್‌ ತಂತ್ರಾಂಶಗಳು ಲಭ್ಯವಿದ್ದು. ಅದರಲ್ಲಿಪ್ರಮುಖವಾಗಿ ಬಳಸುವ ಕೆಲವು ತಂತ್ರಾಂಶಗಳನ್ನು ಇಲ್ಲಿ ಹೆಸರಿಸಲಾಗಿದೆ. ಮಿಂಟ್, ಡಿಬೈನ್, ಉಬುಂಟು, ಓಪನ್‌ಸೂಸ್, ಫೆಡೋರಾ ಮುಂತಾದವು. ಇವುಗಳಲ್ಲಿ ಲಿನಕ್ಸ್ ಮತ್ತು ಉಬುಂಟು ಉತ್ತಮವಾದುವೆಂದು ಅಭಿಪ್ರಾಯಪಡಲಾಗಿದೆ.

ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಅನ್ವಯಕ ಬಳಕೆ

ಕಾರ್ಯಕಾರಿತ್ವ



ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ
ಟರ್ಮಿನಲ್‌ನಿಂದ
ವೆಬ್‌ಪುಟದಿಂದ
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು