ಸ್ಕ್ರೀನ್ ಶಾಟ್ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಪರಿಚಯ

ಸ್ಕ್ರೀನ್‌ಶಾಟ್‌ ಎಂಬುದು ಕಂಪ್ಯೂಟರ್ ಪರದೆಯ ಮೇಲಿರುವ ವಿಷಯದ ಚಿತ್ರವನ್ನು ತೆಗೆದುಕೊಳ್ಳುವ ಒಂದು ವಿಧಾನವಾಗಿದೆ. ಒಂದು ಕಾರ್ಯಕ್ರಮವನ್ನು ಪ್ರಸ್ತುತಿಪಡಿಸಲು, ಅಥವಾ ಯಾವುದಾದರು ತಾಂತ್ರಿಕ ಸಮಸ್ಯೆಯ್ನು ಬೇರೆಯವರಿಗೆ ವಿವರಿಸಲು ಸ್ಕ್ರೀನ್‌ಶಾಟ್‌ ಬಳಸಬಹುದು.

ಐ.ಸಿ.ಟಿ ಸಾಮರ್ಥ್ಯ

ಇದು ಸಾರ್ವತ್ರಿಕ ಚಿತ್ರ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಯಾವುದಾದರು ಒಂದು ವಿಷಯವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದಿದ್ದಾಗ, ಅದನ್ನಯ ಚಿತ್ರವಾಗಿ ತೆಗೆದುಕೊಂಡು ವಿವರಿಸಬಹುದು.

ಆವೃತ್ತಿ

Currently we are using screenshot 3.18.0 version.

ಸಂರಚನೆ

ಸ್ಕ್ರೀನ್‌ಶಾಟ್‌ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Accessories → Screenshot ಮೂಲಕ ತೆರೆಯಬಹುದಾಗಿದೆ.

ಲಕ್ಷಣಗಳ ಮೇಲ್ನೋಟ

  1. ಸ್ಕ್ರೀನ್‌ಶಾಟ್‌ ಚಿತ್ರಗಳನ್ನು ತೆಗೆದುಕೊಳ್ಳಲು ಹಲವು ಪ್ರೋಗ್ರಾಂಗಳು ಲಭ್ಯವಿವೆ, ಆದರೆ ಉಬುಂಟು ಸ್ಕ್ರೀನ್‌ಶಾಟ್‌ ನಲ್ಲಿ ಯಾವುದೇ ಪ್ರೊಗ್ರಾಮಿಂಗ್ ಸಹಾಯವಿಲ್ಲದೇ ಬಳಸಬಹುದು.
  2. ಪರದೆಯ ಮೇಲಿರುವ ಹಾಗು ಮುದ್ರಿಸಲು ಸಾದ್ಯವಾಗದ ವಿಷಯವನ್ನು ಸ್ಕ್ರೀನ್‌ಶಾಟ್‌ ಮೂಲಕ ಚಿತ್ರವಾಗಿ ತೆಗೆದುಕೊಳ್ಳಬಹುದು.

ಇತರೇ ಸಮಾನ ಅನ್ವಯಕಗಳು

  1. ಎವರ್‌ನೋಟ್‌ ವೆಬ್‌ ಕ್ಲಿಪ್ಪರ್ ಐಕಾನ್ (Evernote Web Clipper icon)
  2. ಮೊನೊಸ್ನಾಪ್ (Monosnap)
  3. ವೆಬ್‌ಕ್ಯಾಪ್ಚರ್ (Web-capture)
  4. ಜೆಟ್‌ ಸ್ಕ್ರೀನ್‌ಶಾಟ್

ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಅನ್ವಯಕ ಬಳಕೆ

ಕಾರ್ಯಕಾರಿತ್ವ

ಕೀಲಿಮಣೆಯ ಪ್ರಿಂಟ್‌ ಸ್ಕ್ರೀನ್ ಬಟನ್ ಮೂಲಕವು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದು. ಆದರೆ ಇಲ್ಲಿ ನಮ್ಮ ಕಂಪ್ಯೂಟರ್‌ನ ಗಣಕತೆರೆಯ ಪೂರ್ಣ ಪರದೆಯು ಸ್ಕ್ರೀನ್‌ಶಾಟ್‌ನಲ್ಲಿ ಬರುತ್ತದೆ. ಯಾವುದೇ ರೀತಿಯ ಆಯ್ಕೆಗಳಿರುವುದಿಲ್ಲ.


ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಸ್ಕ್ರೀನ್‌ಶಾಟ್‌ ತೆಗೆದುಕೊಂಡ ಚಿತ್ರಗಳು .png ನಮೂನೆಯಲ್ಲಿ ಉಳಿಯುತ್ತವೆ

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

  1. ಸ್ವಯಂಚಾಲಿತವಾಗಿ ಕಡತಕ್ಕೆ ಸಮಯ ಮತ್ತು ದಿನಾಂಕದ ಮಾಹಿತಿಯುಳ್ಳ ಹೆಸರಿನಿಂದ ನಿರ್ಧಿಷ್ಟ ಕಡತಕೋಶಕ್ಕೆ ಚಿತ್ರವನ್ನು ಉಳಿಸುತ್ತದೆ.
  2. ಸ್ಕ್ರೀನ್‌ಶಾಟ್‌ ತೆಗೆಯಲು ನಿರ್ಧರಿಸಿದ ಪುಟದಲ್ಲಿ ಅವಶ್ಯಕವಿರುವ ಪುಟವನ್ನು ಅಥವಅ ಮಾಹಿತಿಯನ್ನು ತೆರೆಯಲು ಅನುಕೂಲಕವಾಗುವಂತೆ ಸ್ಕ್ರೀನ್‌ಶಾಟ್‌ಗೆ ಸಮಯ ನಿಗದಿ ಮಾಡಬಹುದು.
  3. ಮೌಸ್‌ ಕರ್ಸರ್‌ ಒಳಗೊಳಿಸಲು ಅಥವ ಒಳಗೊಳ್ಳಿಸದಿರಲು ಆಯ್ಕೆ ಇದೆ.

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ Type "screenshot" in search bar and then click Install
ಟರ್ಮಿನಲ್‌ನಿಂದ sudo apt-get install screenshot
ವೆಬ್‌ಪುಟದಿಂದ Steps
ವೆಬ್‌ಆಧಾರಿತ ನೊಂದಣಿ Not Applicable

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಆಂಡ್ರಾಯಿಡ್ ಮೊಬೈಲ್ಗಳಲ್ಲಿ ಹಲವಾರು ಸ್ಕ್ರೀನ್‌ಶಾಟ್‌ ಅನ್ವಯಕಗಳಿವೆ. ಅವುಗಳಲ್ಲಿ:- 1. Screenshot
2. Touchshot
3. Screenshot Touch
4. Quick Screenshot
ಕೆಲವು ಆಂಡ್ರಾಯಿಡ್‌ಗಳಲ್ಲಿ, ಮೊಬೈಲ್‌ನ Power key ಕೀಯನ್ನು ಒತ್ತಿಹಿಡಿದಿಟ್ಟುಕೊಳ್ಳುವ ಮೂಲಕವಯ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದಾಗಿದೆ.

ಸಂಪನ್ಮೂಲ ರಚನೆಯ ಆಲೋಚನೆಗಳು

ಕಂಪ್ಯೂಟರ್‌ ಪರದೆಯ ಮೇಲೆ ಮೂಡುವ ವಿಷಯದ ಚಿತ್ರವನ್ನು ತೆಗೆದುಕೊಳ್ಳಬಹುದು, ಬೇರೊಬ್ಬರಿಗೆ ಯಾವುದಾದರೊಂದು ಪ್ರಕ್ರಿಯೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಬಹುದು. ಸ್ಕ್ರೀನ್‌ಶಾಟ್‌ ಸಾಮನ್ಯವಾದ ಚಿತ್ರವಾಗಿದ್ದು ಇದನ್ನು ಸುಲಭವಾಗಿ ಇತರರಿಗೆ ಇಮೇಲ್ ಮೂಲಕ ಹಂಚಿಕೊಳ್ಳಬಹುದು.

ಆಕರಗಳು