ಪ್ರವೇಶದ್ವಾರ:ಸಮಾಜ ವಿಜ್ಞಾನ/ಪೀಠಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಮಾಜ ವಿಜ್ಞಾನವು ಸಮಾಜ, ಸಮಾಜದ ವ್ಯಾಕ್ತಿಗಳ ನಡುವಿನ ಹೊಂದಾಣಿಕೆ, ಸಮಾಜಗಳ ನಡುವಿನ ಹೊಂದಾಣಿಕೆ ಮತ್ತು ಪರಿಸರದೊಡನೆ ಹೊಂದಾಣಿಕೆ, ಇವುಗಳನ್ನು ಒಳಗೊಂಡಿರುವ ಎಲ್ಲಾ ಕಳಕಳಿಗಳನ್ನು ಸುತ್ತುವರೆದಿರುತ್ತದೆ. ಶಾಲೆಗಳಲ್ಲಿ ಪಠ್ಯ ವಿಷಯವಾಗಿ, ಸಮಾಜ ವಿಜ್ಞಾನವು ಇತಿಹಾಸ, ಭೋಗೋಳ, ರಾಜನೀತಿ ವಿಜ್ಞಾನ, ಅರ್ಥ ಶಾಸ್ತ್ರ, ಸಮಾಜಶಾಸ್ತ್ರ ಇವುಗಳನ್ನು ಹೊಂದಿರುತ್ತದೆ. ಇಂತಹ ಹಲವು ಬಗೆಯ ವಿಷಯಗಳನ್ನು ಅರ್ಥಪೂರ್ಣವಾಗಿ ಶಾಲಾ ಪಠ್ಯಕ್ರಮದೊಡನೆ ಸೇರಿಸುವುದು ಒಂದು ಅವಕಾಶ ಮತ್ತು ಸವಾಲು ಆಗಿರುತ್ತದೆ. ಒಂದು ಮಗುವಿನ ಮತ್ತು ಅದರ ಸಮುದಾಯದೊಡನೆ ಶಿಕ್ಷಣ ಪ್ರಕ್ರಿಯೆ ತೊಡಗಲು ಸಮಾಜ ವಿಜ್ಞಾನವು ನೆರವಾಗುತ್ತದೆ. ಕಲಿಕೆ ಮತ್ತು ಶಾಲೆ ಆ ಮಗುವಿಗೆ ತನ್ನ ಹತ್ತಿರದ ವಿಷಯಗಳೊಡನೆ ತೊಡಗಲು ಸರಿಯಾದ ಸ್ಥಳವೆಂದು ಅನ್ನಿಸಲೂ ಬಹುದು. ಹಾಗೆಯೇ, ಪಠ್ಯಕ್ರಮವನ್ನು ಸೂಕ್ಷ್ಮವಾಗಿ ತಯಾರಿಸದೇ ಇರುವುದು ಅಥವಾ ತಲುಪಿಸದಿರುವುದು ಆದಲ್ಲಿ, ಸಮಾಜ ವಿಜ್ಞಾನದ ತರಗತಿಗಳು ಕೇವಲ ಸಾಮಾಜಿಕ ಪ್ರಸಂಗಗಳು ಮತ್ತು ತೊಂದರೆಗಳನ್ನು ಪುನರ್ವರ್ತಿಸುತ್ತದೆ. ಸಮಾಜ ವಿಜ್ಞಾನದ ಶಿಕ್ಷಕರು ಪಠ್ಯಕ್ರಮ ಮತ್ತು ಪರಿವಿಡಿ ಹೊರತು, ಸಮಾಜದ, ಶಾಲೆಯ ಮತ್ತು ಕಲಿಕೆಯ ಪ್ರಕ್ರಿಯೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಬೇಕು.