ವೃತ್ತದ ತ್ರಿಜ್ಯ ಮತ್ತು ವ್ಯಾಸ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ವೃತ್ತದ ತ್ರಿಜ್ಯ ಮತ್ತು ವ್ಯಾಸವನ್ನು ಗುರುತಿಸುವುದು ಮತ್ತು ಅವುಗಳ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು.
ಕಲಿಕೆಯ ಉದ್ದೇಶಗಳು :
- ತ್ರಿಜ್ಯವು ವೃತ್ತದ ಕೇಂದ್ರದಿಂದ ಪರಿಧಿಯ ಯಾವುದೇ ಬಿಂದುವಿಗೆ ಸೇರುವ ನೇರ ರೇಖೆ.
- ಕೈವಾರ ಬಳಕೆಯನ್ನು ಕಲಿಯುವ ಸಾಮರ್ಥ್ಯ.
- ವೃತ್ತವನ್ನು ನಿಖರವಾಗಿ ಚಿತ್ರಿಸುವ ಕೌಶಲ್ಯ.
ಅಂದಾಜು ಸಮಯ:
20 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ವಿಭಿನ್ನ ಬಣ್ಣದ ಕಾಗದಗಳು, ಕೈವಾರ, ಅಳತೆಪಟ್ಟಿ, ಪೆನ್ಸಿಲ್ ಮತ್ತು ಕತ್ತರಿ.
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ಬಿಂದುಗಳು, ರೇಖೆಗಳು ಮತ್ತು ರೇಖಾ ಖಂಡಗಳು ಮತ್ತು ವೃತ್ತದ ರಚನೆಯ ಪೂರ್ವ ಜ್ಞಾನ,.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಶಿಕ್ಷಕರಿಗೆ ಸೂಚನೆಗಳು:
- ಶಿಕ್ಷಕರು ವಿದ್ಯಾರ್ಥಿಗಳಿಗೆ ಕಾಗದವನ್ನು ವಿತರಿಸುತ್ತಾರೆ.
- ಕೈವಾರ ಹೇಗೆ ಬಳಸುವುದು ಮತ್ತು ವೃತ್ತವನ್ನು ಎಳೆಯುವುದು ಎಂಬುದನ್ನು ಅವರಿಗೆ ತೋರಿಸುತ್ತಾರೆ.
- ಪ್ರತಿ ವಿದ್ಯಾರ್ಥಿಯನ್ನು ಮಡಿಸುವ ಮೂಲಕ 2 ಸಮಾನ ಭಾಗಗಳನ್ನಾಗಿ ಮಾಡಲು ಹೇಳಿ.
- ಸಮಾನ ಭಾಗಗಳನ್ನು ಪಡೆಯಲು ಮತ್ತೆ ಅದನ್ನು ಮಡಿಸಿದರೆ ಏನಾಗುತ್ತದೆ?
- ಮಡಿಸಿದ ರೇಖೆಗಳು / ಗುರುತುಗಳನ್ನು ಗುರುತಿಸಲು ವಿದ್ಯಾರ್ಥಿಗಳನ್ನು ಕೇಳಿ
ವಿದ್ಯಾರ್ಥಿಗೆ ಸೂಚನೆಗಳು:
- ಕೊಟ್ಟಿರುವ ತ್ರಿಜ್ಯದ ವೃತ್ತವನ್ನು ಎಳೆಯಿರಿ.
- ವೃತ್ತವನ್ನು ಕತ್ತರಿಸಿ.
- ವೃತ್ತವನ್ನು ಎರಡು ಸಮಾನ ಭಾಗಗಳಾಗಿ ಮಡಿಸಿ.
- ಮತ್ತೆ ಮತ್ತಷ್ಟು ಸಮಾನ ಭಾಗಗಳಾಗಿ ಮಡಿಸಿ.
- ಮಡಿಸಿದ ರೇಖೆಯನ್ನು ಗಮನಿಸಿ ಮತ್ತು ಗುರುತಿಸಿ.
- ವ್ಯಾಸ ಮತ್ತು ತ್ರಿಜ್ಯವನ್ನು ಗುರುತಿಸಿ
ಮೌಲ್ಯ ನಿರ್ಣಯ ಪ್ರಶ್ನೆಗಳು
- ತ್ರಿಜ್ಯ ಮತ್ತು ವ್ಯಾಸವನ್ನು ಗುರುತಿಸುವಲ್ಲಿ ವಿದ್ಯಾರ್ಥಿಯು ಯಶಸ್ವಿಯಾಗಿದ್ದಾನೆಯೇ?
- ಮಡಿಸುವ ಮತ್ತು ಗುರುತಿಸುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಯು ಯಶಸ್ವಿಯಾಗಿದ್ದಾನೆಯೇ?
- ತ್ರಿಜ್ಯ ಮತ್ತು ವ್ಯಾಸವನ್ನು ಸಂಬಂಧಿಸಲು ವಿದ್ಯಾರ್ಥಿಗೆ ಸಾಧ್ಯವಾಯಿತೇ?
ಪ್ರಶ್ನೆ ಕಾರ್ನರ್
- ನಿರ್ದಿಷ್ಟ ವೃತ್ತಕ್ಕೆ ಎಷ್ಟು ತ್ರಿಜ್ಯಗಳು ಮತ್ತು ವ್ಯಾಸಗಳನ್ನು ಎಳೆಯಬಹುದು?