ಚಿಗುರು ೦೫ ನನ್ನ ದೇಹದ ಅಂಗಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೩:೨೯, ೨೮ ಡಿಸೆಂಬರ್ ೨೦೨೧ ರಂತೆ Anusha (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ಉದ್ದೇಶ : ದೇಹದ ವಿವಿಧ ಅಂಗಗಳ ಹೆಸರೇನು ಮತ್ತು ಅವು ಮಾಡುವ ಕ್ರಿಯೆಗಳೇನು ಎಂದ...)

ಉದ್ದೇಶ : ದೇಹದ ವಿವಿಧ ಅಂಗಗಳ ಹೆಸರೇನು ಮತ್ತು ಅವು ಮಾಡುವ ಕ್ರಿಯೆಗಳೇನು ಎಂದು ಸರಳವಾಗಿ ತಿಳಿಸುವುದು. ಜೊತೆಗೆ ಜನನಾಂಗಗಳು ದೇಹದ ಇತರ ಅಂಗಗಳ ಹಾಗೆ ಒಂದು ಅಂಗ, ಅದರ ಬಗ್ಗೆ ನಿರ್ಭಿಡೆಯಿಂದ ಮಾತನಾಡಲು ಸಾಧ್ಯವಾಗಬೇಕು ಎಂದು ತಿಳಿಸುವುದು.

ಪ್ರಕ್ರಿಯೆ :

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. ಹಿಂದಿನ ವಾರದಲ್ಲಿ ಹೇಳಿದ ಹದಿಹರೆಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಾತನಾಡಿರುವುದನ್ನು ನೆನಪಿಸುವುದು (5 ನಿಮಿಷ)

ಈ ಕೆಳಗಿರುವ ಅಂಗಗಳು ಹಾಗು ಅವುಗಳ ಕಾರ್ಯ ಏನು ಎಂದು ಚಿತ್ರವನ್ನು ತೋರಿಸಿ ಮಾತನಾಡುವುದು. ಆ ಅಂಗಗಳು ಈ ಕೆಳಗಿನಂತಿವೆ ಮೆದುಳು - ನಮ್ಮ ದೇಹದ ಬೇರೆ ಬೇರೆ ಪ್ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ.ಬರ್ತಿದೆ, ಈಗ ನೀವು ಕ್ಲಾಸಲ್ಲಿ ಓಡಾಡೋವಾಗ ಬೆಂಚಿಗೆ ಕಾಲ್‌ ಹೊಡ್ಕೊಂಡು ನೋವು ಮಾಡ್ಕೊಂಡ್ರೆ ನೋವಾಗ್ತಿದೆ ಅಂತ ಹೇಳೋದು, ಬೇಕರಿ ಪಕ್ಕ ಹೋಗೋವಾಗ ಸಕತ್‌ ಸ್ಮೆಲ್‌ ಮೋರಿ ಪಕ್ಕ ಹೋಗೋವಾಗ ಚೀ ಎಷ್ಟು ಕೆಟ್ಟ ವಾಸನೆ ಅಂತ ಮೂಗು ಸಿಂಡ್ರಸೋ ತರ ಮಾಡೋದು, ಏನೋ ಊಟ ಮಾಡಿರೋದು ನಮ್‌ ದೇಹಕ್‌ ಆಗ್ಬರಲ್ಲ ಅಂತ ಹೇಳೋದು, ಆಮೇಲೆ ನಿಮ್‌ ಕ್ಲಾಸ್‌ ಹೊರ್ಗಡೆ ಏನಾದ್ರೂ ಗಲಾಟೆ ಆಗ್ತಾ ಇದ್ರೆ ನೀವೆಲ್ರೂ ಎದ್ದೆದ್‌ ಹೋಗ್ತೀರಲ್ಲ, ಆ ತರ ಹೋಗಿ ಅಂತ ಹೇಳೋದು ಇವೆಲ್ಲಾನೂ ಮೇದುಳೆ ಹೇಳೋದು. ಅದಿಲ್ಲ ಅಂದ್ರೆ ನಾವು ಏನೂ ಮಾಡೋಕಾಗಲ್ಲ

ಥೈರಾಯ್ಡ್‌ ಗ್ರಂಥಿ - ದೇಹದ ಚಯಾಪಚಯವನ್ನು ನಿಗ್ರಹಿಸುತ್ತದೆ.

   ನಮ್‌ ತಿಂದಿರೋ ಕುಡಿದೋರೋ ಏನೇ ಪದಾರ್ಥ ಇದ್ರೂನೂ ಅದರಿಂದ ಬರೋ ಶಕ್ತೀನ ಬಳಸ್ಕೊಂಮಡು ನಮ್‌ ದೇಹದಲ್ಲಿರೋ ಎಲ್ಲಾ ಭಾಗಾನೂ ಚೆನ್ನಾಗಿ ಕೆಲ್ಸ ಮಾಡೋದನ್ನ ಕಂಟ್ರೋಲ್‌ ಮಾಡೋದೇ  ಥೈರಾಯ್ಡ್‌  ಗ್ರಂಥಿ . ಕೆಲವೊಂದ್ಸಲ ಊಟ ಸೇರಲ್ಲ, ಮಂಕಾಗಿರ್ತೀವ, ಒಂದ್‌ ಸ್ವಲ್ಪಪ ನಡದಾಡಿದ್ರೆ ಸಾಕು ಸುಸ್ತಾಗುತ್ತೆ, ಇದಲ್ಲ ಆಗದೆ ಇರೋ ಥರ ಎಲ್ಲಾನೂ ಸರ್ಯಾಗಿ ನಡ್ಯೋಕೆ ಹೆಲ್ಪ್‌ ಮಾಡೋದು ಈ ಭಾಗ

ಶ್ವಾಸಕೋಶ - ಉಸಿರಾಟ - ನಮ್‌ ದೇಹಕ್‌ ಬೇಕಾಗಿರೋ ಆಮ್ಲಜನಕವನ್ನ ಹೀರಿಕೊಂಡು, ಕಾರ್ಬನ್‌ ಡೈಆಕ್ಸೈಡ್‌ (ಇಂಗಾಲಾಮ್ಲ) ಅನ್ನು ಹೊರಗೆ ಬಿಡುತ್ತದೆ ಹೃದಯ - ರಕ್ತವನ್ನು ದೇಹದ ಬೇರೆ ಬೇರೆ ಭಾಗಗಳಿಗೆ ತಲುಪಿಸುತ್ತದೆ.

   ಲಬ್‌ ಡಬ್‌ ಲಬ್‌ ಡಬ್‌ ಅಂತ ಹಾರ್ಟು ಬಡ್ಯೋದನ್ನ ಕೇಳ್ಸಕೊಂಡಿದೀರಲ್ಲ. ಅದು ಸೈಕಲ್‌ ಪಂಪ್‌ ಥರ ನಮ್‌ ಬಾಡಿಲಿ ರಕ್ತನ ಪಂಪ್‌ ಮಾಡೋವಾಗ ಬರೋ ಸದ್ದು ಅದು

ಗುಲ್ಮ - ರಕ್ತವನ್ನು ಶುದ್ಧಿಕರಿಸಲು ಸಹಾಯ ಮಾಡುತ್ತದೆ ಥೈಮಸ್‌ ಗ್ರಂಥಿ - ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಇಮ್ಯನಿಟಿ ಅಂತ ಕೇಳಿರ್ಬೋದು ನೋವು. ನಮ್‌ ದೇಹಕ್ಕೆ ರೋಗಗಳು ಬರ್ದೆ ಇರೋ ತರ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಇದು ಸಹಾಯ ಮಾಡುತ್ತೆ. ಕ್ಲಾಸ್‌ ಉದಾಹರಣೆ ಲಿವರ್‌ - ಯಕೃತ್ತು - ದೇಹಕ್ಕೆ ಬೇಡದೇ ಇರೋ ಪದಾರ್ಥಗಳನ್ನು ದೇಹದಿಂದ ಹೊರಸಾಗಿಸುತ್ತದೆ

   ನಾವು ತಿನ್ನೋ ಆಹಾರದಲ್ಲಿರೋ ಪದಾರ್ಥಗಳಲ್ಲಿ ಬೇಕಾಗಿರೋದು ಯಾವ್ದು ಬೇಡದೇ ಇರೋದು ಯಾವ್ದು ಅಂತ ಡಿಸೈಡ್‌ ಮಾಡಿ ಅವುಗಳನ್ನ ಎಲ್ಲಿಗೆ ಕಳಿಸ್ಬೇಕು ಅಂತ ಡಿಸೈಡ್‌ ಮಾಡೋದು ಲಿವರ್‌. ಇದಷ್ಟೇ ಅಲ್ದೆ ನಮಗೆ ಬೇಕಾಗಿರೋ ವಿಟಮಿನ್‌ಗಳನ್ನು ಕೂಡ ಇದು ಸ್ಟೋರ್‌ ಮಾಡ್ಕೊಳುತ್ತೆ. 

ಪಿತ್ತಕೋಶ - ಆಹಾರವನ್ನು ಜೀರ್ಣ ಮಾಡಲು ಬೇಕಾದ ಪಿತ್ತರಸ (ಬೈಲ್‌) ಅನ್ನು ಸರಬರಾಜು ಮಾಡುತ್ತದೆ ಮೇದೋಜೀರಕಾಂಗ - ಸಣ್ಣ ಕರುಳಿಗೆ ಹೋಗೋದಿಕ್ಕೆ ಮುಂಚೆ ಆಹಾರವನ್ನ ಚಿಕ್ಕ ಚಿಕ್ಕದಾಗಿ ಮಾಡಿ ಅದರಲ್ಲರಿರೋ ಪ್ರೋಟೀನ್‌ಗಳನ್ನ ಹೀರಿಕೊಂಡು ಉಳಿದಿರೋದನ್ನ ಸಣ್ಣ ಕರುಳಿಗೆ ಕಳುಹಿಸುತ್ತದೆ ಹಾಗು ಸಕ್ಕರೆ ಅಂಶಗಳನ್ನ ರೆಗ್ಯುಲೇಟ್‌ ಮಾಡೋಕೆ ಸಹಾಯ ಮಾಡುತ್ತೆ ಜಠರ - ಆಹಾರವನ್ನು ಜೀರ್ಣ ಮಾಡಿಕೊಳ್ಳಲು ಆಹಾರ ಸಂಗ್ರಹಣೆ ಕರುಳು - ದೊಡ್ಡ ಕರುಳು, ಸಣ್ಣ ಕರುಳು\

   ಸಣ್ಣ ಕರುಳು ಲಿವರ್‌ ಯಾವ ಯಾವ ಆಹಾರಾನ ಎಲ್ಲಗೆ ಕಳುಸ್ಬೇಕು ಅಂತ ಡಿಸೈಡ್‌ ಮಾಡ್ತು, ಜಠರ ಅದನ್ನ ಸ್ಟೋರ್‌ ಮಾಡ್ಕೊಂಡು, ಪಿತ್ತಕೋಶ ಆಹಾರನ ಚಿಕ್ಕಚಿಕ್ಕದಾಗಿ ಮಾಡ್ತು, ಈಗ ಜಠರದಲ್ಲಿರೋ ಆಹಾರ, ಮತ್ತೆ ಪಿತ್ತಕೋಶದಿಂದ ಬರೋ ಪಿತ್ತರಸ ಎಲ್ಲವನ್ನೂ ಮಿಕ್ಸ್‌ ಮಾಡಿ ಜೀರ್ಣ ಮಾಡ್ಕೊಂಡು ಅದನ್ನ ರಕ್ತಕೆಕ ಕಳ್ಸುತ್ತೆ, ಅದರ ಜೊತೆಗೆ ಏನ್‌ ಜೀರ್ಣ ಆಗಿಲ್ವೊ ಅದನ್ನ ದೊಡ್ಡ ಕರುಳಿಗೆ ಕಳ್ಸುತ್ತೆ.

ಈ ಜೀರ್ಣ ಆಗ್ದಿರೋ ಪದಾರ್ಥಗಳು ಯಾವ್ದಪ್ಪ ಅಂದ್ರೆ ನೀರಿನಂಶ, ನಾರಿನಂಶ ಮತ್ತು ಉಪ್ಪಿನಂಶ. ಅವೆಲ್ಲಾನೂ ದೊಡ್ಡ ಕರುಳು ಜೀರ್ಣ ಮಾಡ್ಕೊಂಡು ರಕ್ತಕ್ಕೆ ಕಳ್ಸುತ್ತೆ. ಒಂದ್ವೇಳೆ ಇನ್ನೂ ಏನಾದ್ರು ಜೀರ್ಣ ಆಗಿಲ್ಲ ಅಂದ್ರೆ ಅಂದು ಗುದದ್ವಾರದ ಮೂಲಕ ಹೊರಕ್ಕೆ ಹೋಗುತ್ತೆ. ಮೂತ್ರಪಿಂಡ - ಕಿಡ್ನಿ - ತ್ಯಾಜ್ಯ ವಸ್ತುಗಳನ್ನು ಪರಿಷ್ಕರಣೆ

   ಲಿವರ್‌ ಕಳ್ಸಿರೋ ತ್ಯಾಜ್ಯ ವಸ್ತುನ ಇದು ಕ್ಲೀನ್‌ ಮಾಡುತ್ತೆ. 

ಆಲ್ ದ ಬೆಸ್ಟ್ - ಟ್ಯಾಂಕ್ಸು:) ಮೂತ್ರಕೋಶ - ಮೂತ್ರಪಿಂಡದಿಂದ ಬಂದ ತ್ಯಾಜ್ಯಗಳನ್ನು ಸಂಗ್ರಹ ಮಾಡುತ್ತದೆ


ಸ್ತೀ ಸಂತಾನೋತ್ಪತ್ತಿ ವ್ಯವಸ್ಥೆ - ಸ್ತ್ರೀ ಪುರುಷ ಸಂತಾನೋತ್ಪತ್ತಿ ಕ್ರಿಯೆಗೆ ಸಹಾಯ ಮಾಡುತ್ತದೆ.

ಅವರು ಗುರುತಿಸಿಯಾದ ಮೇಲೆ, ನೀವೆಲ್ಲರೂ ಬೇರೆ ಬೇರೆ ಅಂಗಗಳನ್ನು ಗುರುತು ಮಾಡಿದಂತೆ ಸ್ರೀ ಮತ್ತು ಪುರುಷ ಜನನಾಂಗಗಳು ಅವುಗಳ ಭಾಗ. ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಗರ್ಭಕೋಶ ಅಥವ ಗರ್ಭಾಶಯ, ಗರ್ಭ ಕೊರಳು , ಅಂಡಾಶಯ, ಅಂಡನಾಳ, ಅಂಡಾಣು, ಯೋನಿ ಈ ಎಲ್ಲ ಭಾಗಗಳು ಇರುತ್ವೆ. ನಮಗೆ ಹೊರಗಡೆ ಕಾಣ್ಸೋ ಭಾಗಾನೆ ಯೋನಿ

ಗಂಡಿನ ಸಂತಾನೋತ್ಪತ್ತಿ ಅಂಗದಲ್ಲಿ ಶಿಶ್ನ, ವೃಷಣ, ಪ್ರೋಸ್ಟೇಟ್‌, ವಾಸ್‌ ಡಿಫರೆನ್ಸ್‌, ಎಲ್ಲ ಇರುತ್ತೆ. ಶಿಶ್ನ ನಮಗೆ ಹೊರಗಡೆ ಕಾಣ್ಸೋದು..

ಸೋ ಹೆಣ್ಣು ಮತ್ತೆ ಗಂಡಿನ ಬಾಡಿಲಿ ವ್ಯತ್ಯಾಸ ಅಂದ್ರೆ ಬರೆ ಸಂತಾನೋತ್ಪತ್ತಿ ಅಂಗಗಳು.

ನೀವು ಕಿಶೋರಾವಸ್ಥೆನಲ್ಲಿ ಇರೋದ್ರಿಂದ ಈಗ ನಿಮ್ಮಲ್ಲಿ ಸಂತಾನೋತ್ಪತ್ತಿ ಅಂಗ ಆಕ್ಟಿವ್‌ ಆಗಿ ಕಾರ್ಯ ಮಾಡೋಕೆ ಶುರು ಮಾಡಿದೆ. ಅದನ್ನೇ ನಾವು ಮುಟ್ಟಾಗೋದು, ಮ್ಯಾಚ್ಯೂರ್‌ ಆಗೊದು, ಪೀರಿಯಡ್ಸ್ ಅಂತ ಎಲ್ಲ ಕರೆಯೋದು.


ಇದಾದ ನಂತರ 4-5 ಜನರಂತೆ ೮ ಗುಂಪುಗಳನ್ನು ಮಾಡಿಕೊಳ್ಳುವುದು.

ಅವರಿಗೆ ದೇಹದ ಅಂಗಗಳಿರುವ ಒಂದು ಚಿತ್ರವನ್ನು ಹಾಗು ಅಂಗಗಳನ್ನು ದೇಹದಲ್ಲಿ ಸರಿಯಾದ ಜಾಗದಲ್ಲಿ ಕೂಡಿದುವಂತೆ ಮಾಡಲು ಇನ್ನೋದು ಚಿತ್ರವನ್ನು ಕೊಟ್ಟು ಪ್ರತಿ ಅಂಗವನ್ನು ಗುರುತಿಸಿ ಸರಿಯಾದ ಜಾಗಗಳಲ್ಲಿ ಜೋಡಿಸುವಂತೆ ಹೇಳುವುದು.

ಮುಟ್ಟಿನ ಬಗ್ಗೆ, ಮುಟ್ಟಾದಾಗ ದೇಹದಲ್ಲಿ ಏನೇನೆಲ್ಲ ಆಗುತ್ತೆ ಅಂತ ನಿಮಗೆ ತಿಳ್ಕೋಬೇಕು ಅಂದರೆ ನಾವು ಮುಂದಿನ ವಾರ ಅದರ ಬಗ್ಗೆ ತಿಳ್ಕೊಳೋಣ. ಆವಾಗ ಕಾರ್ತಿಕಣ್ಣ ಮತ್ತೆ ಶ್ರೇಯಸಣ್ಣ ನ ಹೊರ್ಗಡೆ ಕಳ್ಸೋಣ ಅಂದ್ರೆ ಅವರು ಹೊರಗಡೆ ಇರ್ತಾರೆ. ಅವ್ರು ಇಲ್ಲೆ ಇದ್ರೆ ಓಕೆ ಅಂದ್ರೆ ಅದೂ ಓಕೆ.

ನೀವೇಂನಂತೀರ?

ಓಕೆ ಹಾಗಿದ್ರೆ ಹೀಗೇ ಇನ್ನೂ ಬೇರೆ ಬೇರೆ ವಿಷಯಗಳನ್ನ ಮುಂದಿನ ವಾರಗಳಲ್ಲಿ ತಿಳ್ಕೊಳೋಣ. ನಮಸ್ಕಾರ

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು - 3 Resources Required Body parts print out Extra A4 sheets

Time required 45 minutes Inputs Body parts Outputs Body parts assembled