ಭಿನ್ನರಾಶಿಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಗಣಿತದ ಇತಿಹಾಸ

ಗಣಿತದ ತತ್ವಶಾಸ್ತ್ರ

ಗಣಿತದ ಅಧ್ಯಾಪನ

ಪಠ್ಯಕ್ರಮ ಮತ್ತು ಪತ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಉಪಯುಕ್ತ ವೆಬ್ ಸೈಟ್ ಗಳು

ಪರಿಕಲ್ಪನೆಗಳು

ಭಿನ್ನರಾಶಿಗಳ ಪರಿಚಯಿಸುವಿಕೆ

ಒಂದು ಪೂರ್ಣದ ಭಾಗವನ್ನು ಪ್ರತಿನಿಧಿಸುವ ಸಂಖ್ಯೆಯೇ ಭಿನ್ನರಾಶಿ. ಈ ಪೂರ್ಣ ಒಂದು ವಸ್ತುವಾಗಿರಬಹುದು ಅಥವಾ ವಸ್ತುಗಳ ಗುಂಪು ಆಗಿರಬಹುದು.

 , ಇದನ್ನು ನಾವು ಹತ್ತನೇ ನಾಲ್ಕು ಎಂದು ಓದುತ್ತೇವೆ. ಇಲ್ಲಿ '10' - ಒಂದು ಪೂರ್ಣವನ್ನು ಸಮಭಾಗಗಳನ್ನಾಗಿ ಮಾಡಿದ ಸಂಖ್ಯೆಯಿದು, '4' - ತೆಗೆದುಕೊಂಡ ಸಮಭಾಗಗಳ ಸಂಖ್ಯೆ. 10 ನ್ನು ಛೇದವೆಂದೂ ಕರೆಯುತ್ತೇವೆ, 4 ನ್ನು ಅಂಶವೆಂದೂ ಕರೆಯುತ್ತೇವೆ.

ಸಮ ಭಿನ್ನರಾಶಿಗಳು

ಸಮ ಭಿನ್ನರಾಶಿಯು ಪೂರ್ಣ ಭಾಗವನ್ನು ಪ್ರತಿನಿಧಿಸುವ ಒಂದು ಸಂಖ್ಯೆ. ಸಮ ಭಿನ್ನರಾಶಿಯಲ್ಲಿ ಛೇದವು ಪೂರ್ಣವನ್ನು ಎಷ್ಟು ಸಮಭಾಗಗಳಾಗಿ ವಿಭಾಗಿಸಿದೆ ಎಂಬುದನ್ನು ಸೂಚಿಸಿದರೆ, ಅಂಶವು ಅವುಗಳಲ್ಲಿ ಪರಿಗಣಿಸಿದ ಭಾಗಗಳ ಸಂಖ್ಯೆಯನ್ನು ಸೂಚಿಸುತ್ತದೆ. ಆದುದರಿಂದ ಸಮ ಭಿನ್ನರಾಶಿಯಲ್ಲಿ ಯಾವಾಗಲೂ ಅಂಶವು ಛೇದಕ್ಕಿಂತ ಚಿಕ್ಕದಾಗಿರುತ್ತದೆ.

ಕಲಿಕೆಯ ಉದ್ದೇಶಗಳು

  • ಭಿನ್ನರಾಶಿಯ ಅರ್ಥ ತಿಳಿಯುವುದು
  • ಕೊಟ್ಟಿರುವ ಸಂದರ್ಭಕ್ಕೆ ಭಿನ್ನರಾಶಿ ಬರೆಯುವುದು.
  • ಭಿನ್ನರಾಶಿಗಳಿಗೆ ಉದಾಹರಣೆ ಕೊಡುವುದು
  • ಅಂಶ, ಛೇದಗಳನ್ನು ಅರ್ಥಮಾಡಿಕೊಳ್ಳುವುದು

ಚಟುವಟಿಕೆ : ಭಿನ್ನರಾಶಿಗಳ ಪರಿಚಯಿಸುವಿಕೆ

ವಿಷಮ ಭಿನ್ನರಾಶಿ ಮತ್ತು ಮಿಶ್ರ ಭಿನ್ನರಾಶಿಗಳು

ಅಂಶವು ಛೇದಕ್ಕಿಂತ ದೊಡ್ಡದಾಗಿರುವ ಭಿನ್ನರಾಶಿಗಳನ್ನು ವಿಷಮ ಭಿನ್ನರಾಶಿಗಳು ಎಂದು ಕರೆಯುತ್ತೇವೆ. ಮುಂತಾದ ಭಿನ್ನರಾಶಿಗಳು ವಿಷಮ ಭಿನ್ನರಾಶಿಗಳು.

ವಿಷಮ ಭಿನ್ನರಾಶಿಯನ್ನು ಒಂದು ಪೂರ್ಣ ಹಾಗೂ ಒಂದು ಭಾಗದ ಸಂಯೋಜಿತ ರೂಪವೇ ಮಿಶ್ರ ಭಿನ್ನರಾಶಿ.

ಕಲಿಕೆಯ ಉದ್ದೇಶಗಳು

  • ಭಿನ್ನರಾಶಿಯ ಅಂಶವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು
  • ಭಿನ್ನರಾಶಿಯ ಛೇದವನ್ನು ಬದಲಾಯಿಸಿದಾಗ ಭಿನ್ನರಾಶಿಯ ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು
  • ಭಿನ್ನರಾಶಿಯ ಚಿತ್ರವನ್ನು ವಿಷಮ ಮತ್ತು ಮಿಶ್ರ ಭಿನ್ನರಾಶಿಯಾಗಿ ಸಂಖ್ಯೆಯಾಗಿ ಸೂಚಿಸಿಸುವುದು
  • ಸಂಖ್ಯೆಗಳು ಮತ್ತು ಚಿತ್ರಗಳನ್ನು ಬಳಸಿಕೊಂಡು ಸರಿಹೊಂದುವ ಭಿನ್ನರಾಶಿಗಳನ್ನು ನಿರ್ಮಿಸುವುದು

ಚಟುವಟಿಕೆಗೆ : ವಿಷಮ ಭಿನ್ನರಾಶಿ ಮತ್ತು ಮಿಶ್ರ ಭಿನ್ನರಾಶಿಗಳು

ಯೋಜನೆಗಳು

ಗಣಿತ ವಿನೋದ