ಪೂರ್ವ ಆಲಿಸುವಿಕೆ ಚಟುವಟಿಕೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಆಲಿಸುವಿಕೆಯ ಪೂರ್ವ ಚಟುವಟಿಕೆಗಳು ಯಾವುವು?

ಆಲಿಸುವಿಕೆಯ ಪೂರ್ವ ಚಟುವಟಿಕೆಗಳು ಕಥೆಯನ್ನು ಕೇಳುವ ಮೊದಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಸಹಾಯ ಮಾಡುವ ಕಾರ್ಯಗಳಾಗಿವೆ. ಈ ಚಟುವಟಿಕೆಗಳು ಆಲಿಸುವಿಕೆಯ ಅನುಭವವನ್ನು ಹೆಚ್ಚು ಸುಗಮ ಮತ್ತು ಪರಿಣಾಮಕಾರಿಯನ್ನಾಗಿ ಮಾಡಲು ನಡೆಸಲಾಗುತ್ತದೆ. ಅವು ವಿದ್ಯಾರ್ಥಿಗಳ ಹಿಂದಿನ ಜ್ಞಾನವನ್ನು ಸಕ್ರಿಯಗೊಳಿಸಲು ಪ್ರಮುಖ ಶಬ್ದಕೋಶವನ್ನು ಕಲಿಸಲು ಮತ್ತು ಆಲಿಸುವ ಉದ್ದೇಶವನ್ನು ನಿಗದಿಪಡಿಸಲು ಸಹಾಯ ಮಾಡುತ್ತವೆ.

ಆಲಿಸುವ ಪೂರ್ವ ಚಟುವಟಿಕೆಗಳನ್ನು ಏಕೆ ಬಳಸಬೇಕು?

ಭಾಷಾ ತರಗತಿಯಲ್ಲಿ ಆಲಿಸುವ ಪೂರ್ವ ಚಟುವಟಿಕೆಗಳು ವಿಶೇಷವಾಗಿ ಪ್ರಯೋಜನಕಾರಿಯಾಗಬಲ್ಲವು. ಈ ಚಟುವಟಿಕೆಗಳ ಕೆಲವು ಪ್ರಮುಖ ಪ್ರಯೋಜನಗಳೆಂದರೆ:

   1. ಸಕ್ರಿಯ ಪೂರ್ವಜ್ಞಾನವನ್ನು : ವಿಷಯದ ಬಗ್ಗೆ ಈಗಾಗಲೇ ವಿದ್ಯಾರ್ಥಿಗಳು ಏನನ್ನು ತಿಳಿದಿದ್ದಾರೆ ಎಂಬುದನ್ನು ನೆನಪಿಸಲು ಸಹಾಯ ಮಾಡುತ್ತದೆ.

   2. ಊಹಿಸಲು ಪ್ರೋತ್ಸಾಹ ಮತ್ತು ನಿರೀಕ್ಷಣೆಯ ಉತ್ತೇಜನ: ವಿದ್ಯಾರ್ಥಿಗಳು ಏನನ್ನು ಕೇಳಬೆಕೆಂದು ಯೋಚಿಸುವಂತೆ  ಮಾಡಿ ಮತ್ತು ಆಲಿಸಲು ಸ್ಪಷ್ಟ ಗುರಿಗಳನ್ನು ಹೊಂದಿಸುತ್ತದೆ.

   3. ಸಂಧರ್ಭಕ್ಕೆ ತಕ್ಕ ಸಿದ್ದತೆಯನ್ನು ಪೂರೈಸುವುದು: ಕಥೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಅಗತ್ಯ ಹಿನ್ನೆಲೆ ಮಾಹಿತಿಯನ್ನು ಒದಗಿಸುವುದು.

   4. ಶಬ್ದಕೋಶದ ಪರಿಚಯ: ಸುಲಭವಾಗಿ ಅರ್ಥವಾಗುವಂತೆ ಮಾಡಲು ಕಥೆ ಆಲಿಸುವ ಮೊದಲು ಪ್ರಮುಖ ಪದಗಳನ್ನು ಕಲಿಸುವುದು.

ಆಲಿಸುವ ಪೂರ್ವ ಚಟುವಟಿಕೆಗಳು ಅರಿವಿನ ಬೆಳವಣಿಗೆಗೆ ಸಹ ಸಹಾಯ ಮಾಡಬಲ್ಲದು. ವಿದ್ಯಾರ್ಥಿಗಳಿಂದ ಟಿಪ್ಪಣಿಗಳನ್ನು ತೆಗೆದುಕೊಳ್ಳುವುದು, ಊಹಿಸಲು ಅವಕಾಶ ನೀಡುವುದು, ಕೇಳಿದನ್ನು ಸಾರಾಂಶ ಮಾಡುವುದು ಹೇಗೆ ಎಂದು ಕಲಿಸುವ ಮೂಲಕ ಆಲಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಬಹುದು. ಇದು ಅವರನ್ನು ಹೆಚ್ಚು ಪರಿಣಾಮಕಾರಿ ಕೇಳುಗರನ್ನಾಗಿ ಮಾಡಬಹುದು.

ಪೂರ್ವ ಆಲಿಸುವ ಚಟುವಟಿಕೆಗಳ ಉದಾಹರಣೆಗಳು

ಕೆಳಗಿನ ಚಟುವಟಿಕೆಗಳನ್ನು ವಿವಿಧ ಪ್ರಾವೀಣ್ಯತೆ ಮಟ್ಟಗಳು ಮತ್ತು ತರಗತಿಯ ಸಂದರ್ಭಗಳಿಗೆ ಸರಿಹೊಂದುವಂತೆ ಅಳವಡಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಹೆಚ್ಚು ಆರಾಮದಾಯಕವಾಗುವಂತೆ ಸರಳವಾದ ಕಾರ್ಯಗಳೊಂದಿಗೆ ಪ್ರಾರಂಭಿಸಲು ಮತ್ತು ಕ್ರಮೇಣ ಸಂಕೀರ್ಣತೆಯನ್ನು ಹೆಚ್ಚಿಸಲು ಮರೆಯದಿರಿ.

ಕ್ರ. ಸಂ ಚಟುವಟಿಕೆ ಹೆಸರು ಚಟುವಟಿಕೆ ವಿವರಣೆ ಮಾದರಿ
1 ಒಟ್ಟು ಭೌತಿಕ ಪ್ರತಿಕ್ರಿಯೆ (TPR) ಚಟುವಟಿಕೆಗಳು ಶಿಕ್ಷಕರು ಕಲಿಸುವ ಭಾಷೆಯಲ್ಲಿ ಆಜ್ಞೆಗಳನ್ನು ನೀಡುತ್ತಾರೆ ಮತ್ತು ವಿದ್ಯಾರ್ಥಿಗಳು ಕ್ರಿಯೆಗಳೊಂದಿಗೆ ಪ್ರತಿಕ್ರಿಯಿಸುತ್ತಾರೆ. ಉದಾ:"ಸಲ್ಮಾ ಹೇಳ್ತಾರೆ ನಿಮ್ಮ ಮೂಗು ಮುಟ್ಟಿ' "ಬಾಗಿಲಿಗೆ ಸೂಚಿಸಿ' "ನಿಮ್ಮ ಕೈಗಳನ್ನು ಚಪ್ಪಾಳೆ ತಟ್ಟಿ” (ವಿದ್ಯಾರ್ಥಿಗಳು ಇದಕ್ಕೆ ಪ್ರತಿಕ್ರಿಯಿಸಬಾರದು) ಸಲ್ಮಾ ಹೇಳ್ತಾರೆ ಎಂದಾಗ ಮಾತ್ರ ಪ್ರತಿಕ್ರಿಯಿಸಬೇಕು.
2 ಮೆದುಳು ಮಂಥನ ವಿಷಯವನ್ನು ಪರಿಚಯಿಸಿ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಏನು ತಿಳಿದಿದೆ ಎಂದು ಕೇಳಿ. ಕಥಾ ವಸ್ತುವನ್ನು ವಿದ್ಯಾರ್ಥಿಗಳ ಸ್ವಂತ ಅನುಭವಗಳಿಗೆ ಸಂಬಂದೀಕರಿಸುವುದು. ಉದಾ: ಪ್ರಾಣಿಗಳ ಬಗ್ಗೆ ಕಥೆಯನ್ನು ಕೇಳುವ ಮೊದಲು, ವಿದ್ಯಾರ್ಥಿಗಳಿಗೆ ಎಷ್ಟು ಸಾಧ್ಯವೋ

ಅಷ್ಟು ಪ್ರಾಣಿಗಳನ್ನು ಹೆಸರಿಸಲು ಹೇಳಿ.

3 ಶಬ್ದಕೋಶದ ಪರಿಚಯ ಕಥೆಯ ಸಮಯದಲ್ಲಿ ವಿದ್ಯಾರ್ಥಿಗಳು ಸರಳವಾಗಿ ಅರ್ಥೈಸಿಕೊಳ್ಳಲು ಅನುವು ಮಾಡಿಕೊಡುವ ಪದಗಳನ್ನು ಪರಿಚಯಿಸಿ. ಉದಾ: ಕಾಡಿನಲ್ಲಿ ಸಾಹಸದ ಕಥೆಯನ್ನು ಕೇಳುವ ಮೊದಲು "ಅರಣ್ಯ" "ಪತ್ತೆಹಚ್ಚು" ಮತ್ತು "ಭೇಟೆ" ಮುಂತಾದ ಪದಗಳನ್ನು ಪರಿಚಯಿಸಿ.
4 ಉದ್ದೇಶವನ್ನು ರೂಪಿಸುವುದು ವಿದ್ಯಾರ್ಥಿಗಳು ಅನುಸರಿಸಲು ನಿರ್ದೇಶನಗಳ ಸರಣಿಗಳನ್ನು ನೀಡುವುದು. ಮುಖ್ಯ ಪಾತ್ರಗಳು ಮತ್ತು ಕಥೆಯಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಯನ್ನು ಸೂಕ್ಷ್ಮವಾಗಿ ಆಲಿಸಲು ವಿದ್ಯಾರ್ಥಿಗಳಿಗೆ ಹೇಳಿ.
5 ಚಿತ್ರ ಪ್ರದರ್ಶನ ಕಥೆಗೆ ಸಂಬಂಧಿಸಿದ ಚಿತ್ರಗಳನ್ನು ಪ್ರದರ್ಶಿಸಿ ಮಕ್ಕಳೊಂದಿಗೆ ಚರ್ಚಿಸುವುದು. ನಗರದಲ್ಲಿನ ಕಥೆಯನ್ನು ಕೇಳಿಸುವ ಮೊದಲು ಬಿಡುವಿಲ್ಲದ ಬೀದಿಗಳು, ಕಟ್ಟಡಗಳು ಮತ್ತು ಉದ್ಯಾನವನಗಳ ಚಿತ್ರಗಳನ್ನು ತೋರಿಸಿ.

ಸಂಬಂಧಿಸಿದ ಪುಟಗಳು ಮತ್ತು ಚಟುವಟಿಕೆಗಳು