ವಿಜಯನಗರ ಸಂತತಿಗಳು ಮತ್ತಷ್ಟು ಮಾಹಿತಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ವೀರ ನರಸಿಂಹ

ಸಾಧನೆಗಳು

ಸಾಂಸೃತಿಕ ಕೊಡುಗೆಗಳು

೨ನೇ ನರಸಿಂಹ

ಸಾಧನೆಗಳು

ಸಾಂಸೃತಿಕ ಕೊಡುಗೆಗಳು

ಶ್ರೀ ಕೃಷ್ಣದೇವರಾಯ

ಶ್ರೀ ಕೃಷ್ಣದೇವರಾಯನ ಬಾವಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಕೃಷ್ಣದೇವರಾಯ ಕ್ರಿ.ಶ.೧೫೦೯ ರಿ೦ದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ.ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.

ಬಾಲ್ಯ ಜೀವನ

ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ. ತಾಯಿ ನಾಗಲಾಂಬಿಕೆ . ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು , ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನರಸನಾಯಕನ ನಂತರ ಕೃಷ್ಣಜನ್ಮಾಷ್ಟಮಿಯಂದು ಪಟ್ಟವೇರಿದ ಕೃಷ್ಣದೇವರಾಯನು ರಾಜಧಾನಿಯಾದ ವಿಜಯನಗರದ ಉಪನಗರವಾಗಿ ನಾಗಲಾಪುರ ಎಂಬ ಸುಂದರ ನಗರವನ್ನು ಕಟ್ಟಿಸಿದನು. ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ ತಿಮ್ಮರಸು, ಆತನು ಪಟ್ಟವೇರಲು ಕಾರಣೀಭೂತನಾಗಿದ್ದಷ್ಟೇ ಅಲ್ಲ , ಅವನ ರಾಜ್ಯಭಾರದ ಕಾಲದಲ್ಲಿ ಪ್ರಧಾನಾಮಾತ್ಯನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದನು. ಮಟ್ಟಸ ಎತ್ತರದವನಾಗಿದ್ದ ಕೃಷ್ಣದೇವರಾಯನಿಗೆ , ದಿನವೂ ಸಾಮು ಮಾಡಿದ್ದರ ಪರಿಣಾಮವಾಗಿ ಕಲ್ಲಿನಂತಹ ದೇಹಧಾರ್ಡ್ಯವಿತ್ತು. ಹಸನ್ಮುಖಿಯಾದರೂ , ಶೀಘ್ರಕೋಪಿಯೂ ಆಗಿದ್ದ ಎಂದೂ ಹೇಳಲಾಗಿದೆ. ಪರದೇಶದ ಪ್ರವಾಸಿಗಳಿಗೆ ಗೌರವ ತೋರಿಸುತ್ತಿದ್ದ. ಸಮರ್ಥ ಆಡಳಿತಗಾರನಾಗಿದದ್ದು ಕಾನೂನು ಪಾಲನೆಯಲ್ಲಿ ಕಟ್ಟರ ಶಿಸ್ತು ಪಾಲಿಸುತ್ತಿದ್ದ. ಅತ್ಯುತ್ತಮ ಸೇನಾನಾಯಕನೂ ಆಗಿದ್ದ ಆತನು, ಸ್ವತಃ ಸೇನೆಯ ಮುಂದಾಳುತ್ವ ವಹಿಸುವದಷ್ಟೇ ಅಲ್ಲ, ಗಾಯಗೊಂಡವರಿಗೆ ಕೈಯಾರೆ ಶುಶ್ರೂಷೆಯನ್ನೂ ಮಾಡುತ್ತಿದ್ದ ಎಂದೂ ಹೇಳಲಾಗಿದೆ. ಕೃಷ್ಣದೇವರಾಯನ ಆಡಳಿತದ ಬಗೆಗಿನ ಬಹಳಷ್ಟು ಮಾಹಿತಿ ಅವನ ಕಾಲದಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್ ಯಾತ್ರಿಕರಾದ ಡೊಮಿಂಗೋ ಪಾಯಸ್ ಮತ್ತು ಫೆರ್ನಾವ್ ನೂನೀಜ್ ಅವರ ಬರಹಗಳಿ೦ದ ತಿಳಿದುಬರುತ್ತದೆ.

ಸಿಂಹಾಸನಾರೋಹಣ

ಪ್ರಾರಂಭಿಕ ಯುದ್ಧಗಳು

ಪ್ರಮುಖ ಕದನಗಳು

ಆಡಳಿತ

ಧಾರ್ಮಿಕ ನೀತಿ

ಆರ್ಥಿಕ ನೀತಿ

ಕಂದಾಯ

ಸಾಹಿತ್ಯ

ಕಲೆ ಮತ್ತು ವಾಸ್ತುಶಿಲ್ಪ

ಸಾಂಸೃತಿಕ ಕೊಡುಗೆಗಳು

ಉಪಸಂಹಾರ

ಅಚ್ಚುತ ರಾಯ

1 ನೇ ವೆಂಕಟರಾಯ

ಸದಾಶಿವರಾಯ

ಮರಳಿ ವಿಜಯನಗರ ಸಂತತಿಗಳು