ರಚನಾ ವಿಜ್ಞಾನ 9 ಮೌಲ್ಯಮಾಪನ ಮಾತುಕತೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೫:೨೧, ೯ ಡಿಸೆಂಬರ್ ೨೦೧೩ ರಂತೆ Shariff (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ==ಮೌಲ್ಯಮಾಪನ - ಮಾತುಕತೆ== ಉದ್ದೇಶಗಳು ಈ ಸಾಹಿತ್ಯ ಓದಿದನಂತರ ನೀವು 1. ನಿರಂತರ ...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಮೌಲ್ಯಮಾಪನ - ಮಾತುಕತೆ

ಉದ್ದೇಶಗಳು


ಈ ಸಾಹಿತ್ಯ ಓದಿದನಂತರ ನೀವು

1. ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ ಮುಖ್ಯ ಆಯಾಮಗಳನ್ನು ತಿಳಿಯುವಿರಿ.

2. ನಿರಂತರ ಹಾಗೂ ಸಮಗ್ರ ಮೌಲ್ಯಮಾಪನದ ವಿವಿಧ ತಂತ್ರಗಳನ್ನು ಪರಿಚಿಯಿಸಿಕೊಳ್ಳುವಿರಿ.

ಪೀಠಿಕೆ

ಕಲಿಯುವಿಕೆ ಮತ್ತು ಕಲಿಸುವಿಕೆ ಅರ್ಥಾತ್ ಕಲಿಕೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಶಿಕ್ಷಕ ಕೇಂದ್ರಿತ ಶಿಕ್ಷಣದಿಂದ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದತ್ತ ಸಾಗಿದ್ದರೂ, ಪ್ರಸ್ತುತ ಬಹು ಚರ್ಚಿತ ವಿಷಯವೆಂದರೆ ಮೌಲ್ಯಮಾಪನ ಪ್ರಕ್ರಿಯೆ. ಶಾಲಾ ದೈನಂದಿನ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ಕ್ರಿಯಾಶೀಲವಾಗಿ ಹಾಗೂ ನಿರಂತರವಾಗಿ ತೊಡಗಿಸಿಕೊಂಡಿದ್ದರೂ ಮೌಲ್ಯಮಾಪನದ ವಿಧಿವಿಧಾನಗಳು, ಸಮರ್ಥ ಸಾಧನಾ ಸಲಕರಣೆಗಳು ಮತ್ತು ಅನುಸರಿಸಬೇಕಾದ ತಂತ್ರಗಳ ಬಗ್ಗೆ ಮತ್ತಷ್ಟು ತಿಳಿಯಬೇಕು. ಎಲ್ಲ ಸನ್ನಿವೇಶಗಳಲ್ಲಿ, ಅದರಲ್ಲಿಯೂ ವಿದ್ಯಾರ್ಥಿ ಸಮೂಹದಲ್ಲಿ ವಿಭಿನ್ನ ಆಸಕ್ತಿ ಸಾಮಥ್ರ್ಯ ಮನೋಧರ್ಮಗಳು ವ್ಯಕ್ತವಾಗುವುದರಿಂದ ಪ್ರತಿ ಮಗು ವಿಶಿಷ್ಟ ಎನಿಸಿಕೊಳ್ಳುತ್ತದೆ. ಎಲ್ಲರನ್ನೂ ಒಂದೇ ಅಳತೆಗೋಲಿನಿಂದ ಅಳೆದು ಪ್ರಗತಿ ಇಂತಿಷ್ಟೇ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಹಾಗಾದರೆ,

ಟ ನಮ್ಮ ವಿದ್ಯಾರ್ಥಿಗಳ ವಿಭಿನ್ನ ಆಸಕ್ತಿ ಮತ್ತು ಕಲಿಕೆಯ ಪ್ರವೃತ್ತಿಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುವುದಾದರೂ ಹೇಗೆ?

ಟ ನಾವು ಕಂಡುಕೊಂಡಿರುವ ಸಾಂಪ್ರದಾಯಿಕ ಹಾಗೂ ತರಗತಿಯ ಪ್ರಯೋಗಗಳಿಗೆ ಸಾಕಷ್ಟು ದೂರವಾಗಿರುವ ಪರೀಕ್ಷೆಗಳನ್ನಷ್ಟೇ ಮೌಲ್ಯಮಾಪನವೆಂದು ಪರಿಗಣಿಸಬೇಕೆ?

ಟ ಆ ಪರೀಕ್ಷೆಗಳನ್ನೇ ವಿಭಿನ್ನವಾಗಿ ನೋಡುವುದಾದರೂ ಹೇಗೆ?

ಟ ಅಗತ್ಯವಿರುವ ತಂತ್ರ ಮತ್ತು ಸಾಧನ-ಸಲಕರಣೆಗಳಾವುವು?

ಟ ಆ ತಂತ್ರ ಮತ್ತು ಸಾಧನಗಳಿಂದ ಪಠ್ಯ, ಸಹಪಠ್ಯದಿಂದ ಮಗುವಿನ ಸಮಗ್ರ ವರ್ತನೆಗಳನ್ನು ಮೌಲ್ಯೀಕರಿಸುವುದು ಹೇಗೆ?

ಇಂತಹ ಜಿಜ್ಞಾಸೆಗಳು ನಮ್ಮೆಲ್ಲರನ್ನೂ ಇಂದಿಗೂ ಕಾಡುತ್ತಿರುವುದು ಸಹಜ. ಕಲಿಕೆಯ ಸನ್ನಿವೇಶದಲ್ಲಿ ಕಲಿಕಾರ್ಥಿಯನ್ನು ನಿರಂತರವಾಗಿ ಮೌಲ್ಯಮಾಪನಕ್ಕೆ ಒಳಪಡಿಸುವ ಮೂಲಕ ಕಲಿಕಾರ್ಥಿಯ ಸಮಗ್ರ ಬೆಳವಣಿಗೆಯನ್ನು ಪ್ರೇರೇಪಿಸಿ, ಕ್ರಿಯಾಶೀಲಗೊಳಿಸಿ, ಅಪೇಕ್ಷಿತ ವರ್ತನೆಯತ್ತ ವಿಕಸಿತಗೊಳಿಸುವಂತೆ ಮಾಡಲೇಬೇಕಾದ ಸಂಪೂರ್ಣ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ವಿದ್ಯಾರ್ಥಿಯ ಕಲಿಕೆಯ ಏರುಪೇರು ಅಧ್ಯಾಯನದ ಯಶಸ್ಸು, ಕೊರತೆ ಮತ್ತು ಪರಿವರ್ತನೆಗಳನ್ನು ಸೂಚಿಸಬಲ್ಲದು.


ಮೌಲ್ಯಮಾಪನ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾವು ಈಗಾಗಲೇ ಸಾಕÀಷ್ಟು ಅಧ್ಯಯನವನ್ನು ಮಾಡಿದ್ದೇವೆ. ತರಗತಿಯಲ್ಲಿ ಮೌಲ್ಯಮಾಪನವನ್ನು ನಿರಂತರಗೊಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇಲಾಖೆಯಿಂದ ಇದಕ್ಕಾಗಿಯೇ ರಚಿಸಿದ ಸಾಹಿತ್ಯಗಳು ಸಹ ನಮ್ಮೊಂದಿಗಿವೆ. ಅವುಗಳನ್ನು ಒಮ್ಮೆ ಅವಲೋಕನಕ್ಕೊಳಪಡಿಸಿದರೆ ಸಾಕಷ್ಟು ಮಾಹಿತಿಯನ್ನು ನಾವು ಗ್ರಹಿಸಲು ಸಾಧ್ಯ. ಈ ಸಾಹಿತ್ಯದ ಮೂಲ ಉದ್ದೇಶ ಈಗಾಗಲೇ ನಾವು ಮಾಡುತ್ತಿರುವ ದೈನಂದಿನ ಮೌಲ್ಯಮಾಪನ ಚಟುವಟಿಕೆಗಳಿಗೆ ಬದಲಾದ ಪಠ್ಯಪುಸ್ತಕಗಳ ಹಿನ್ನೆಲೆಯಲ್ಲಿ ನಿರ್ದಿಷ್ಟತೆಯನ್ನು ಕಂಡುಕೊಳ್ಳುವುದೇ ಆಗಿದೆ. `ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ'ದ ಬಗ್ಗೆ ಚರ್ಚಿಸುತ್ತ ಅದರ ಪ್ರಸ್ತುತತೆಯನ್ನು ಅರ್ಥೈಸಿಕೊಂಡು ಕಲಿಕೆ, ಸಹಪಠ್ಯ ಮತ್ತು ಶಾಲಾ ಸನ್ನಿವೇಶದಲ್ಲಿ ಅದನ್ನು ಮತ್ತಷ್ಟು ದೃಢಗೊಳಿಸಿಕೊಳ್ಳಲು ಪ್ರಯತ್ನಿಸೋಣ.

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಅರ್ಥ

ವಿದ್ಯಾರ್ಥಿಯ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿನ ಸಾಧನೆ, ಶಾಲಾ ಸನ್ನಿವೇಶದಲ್ಲಿ ವಿವಿಧ ಪಾತ್ರ ನಿರ್ವಹಣೆ, ಪಾಲ್ಗೊಳ್ಳುವಿಕೆ ಮತ್ತು ಪ್ರಗತಿಯನ್ನು ವಿವಿಧ ತಂತ್ರಗಳ ಮೂಲಕ ಸಮಗ್ರವಾಗಿ ದಾಖಲಿಸಿಕೊಂಡು, ವಿಶ್ಲೇಷಿಸಿ, ಪಡೆದ ಒಳನೋಟಗಳಿಂದ ಮಗುವಿನ ಸರ್ವಾಂಗೀಣ ಅಭಿವೃದ್ಧಿಯನ್ನು ಅನುಕೂಲಿಸುವ ಪ್ರಕ್ರಿಯೆಗೆ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವೆನ್ನಬಹುದು. ಇಲ್ಲಿ ಮೌಲ್ಯಮಾಪನವು ಕೂಡಾ ಕಲಿಕೆಯನ್ನು ಅನುಕೂಲಿಸುವ ಸಾಧನವೆಂದೇ ಪರಿಗಣಿಸಿದೆ.

ಮೇಲಿನ ವಾಕ್ಯವನ್ನು ಗಮನಿಸಿದರೆ ನಿಮಗೆ ನಿರಂತರ ಮತ್ತು ವ್ಯಾಪಕ ಎಂಬ ಎರಡು ಪದಗಳು (ಮೌಲ್ಯಮಾಪನದ ಆಯಾಮಗಳು) ಗಮನ ಸೆಳೆಯುತ್ತವೆ.

`ನಿರಂತರ' ಮೌಲ್ಯಮಾಪನ

ನಿರಂತರ ಮೌಲ್ಯಮಾಪನವೆಂದರೆ ವಿದ್ಯಾರ್ಥಿಗಳು ಶಾಲೆಯಲ್ಲಿ ನಿರ್ದೇಶಾತ್ಮಕವಾಗಿ ತೊಡಗಿಸಿಕೊಳ್ಳುವ ವಿವಿಧ ಚಟುವಟಿಕೆಗಳಲ್ಲಿನ ಹಾಗೂ ಉಳಿದ ಸಂದರ್ಭಗಳಲ್ಲಿಯೂ ಅವರ ಸಹಜ ವರ್ತನೆಗಳನ್ನು ನಿರಂತರವಾಗಿ ಗಮನಿಸುವುದು. ಇಲ್ಲಿ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳನ್ನು ಪರಿಗಣಿಸಲಾಗುತ್ತದೆ. ಕಲಿಕೆಯ ಬೆಳವಣಿಗೆಯ ದರ ಮತ್ತು ಅದರ ಏರಿಳಿತಗಳ ವಿನ್ಯಾಸ - ಕುತೂಹಲಕಾರಿ.

`ವ್ಯಾಪಕ' ಮೌಲ್ಯಮಾಪನ

ವ್ಯಾಪಕ ಮೌಲ್ಯಮಾಪನವೆಂದರೆ ನಿರ್ದಿಷ್ಟಪಡಿಸಿದ ಪಠ್ಯ ಸಹ ಪಠ್ಯಗಳನ್ನೊಳಗೊಂಡಂತೆ ಮಗುವಿನ ಎಲ್ಲಾ ವರ್ತನೆಗಳನ್ನೂ ಅವಲೋಕಿಸುವುದೇ ಆಗಿದೆ.

ನಿರಂತರ ಮೌಲ್ಯಮಾಪನದಿಂದ ಮಗುವಿನ ದೈಹಿಕ, ಬೌದ್ಧಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆನಯ್ನು ಗಮನಿಸಿ ಪ್ರಗತಿಯನ್ನು ಅದರ ನಿರಂತರತೆಯಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.

ಇದರಿಂದ ಮಗುವಿನ ವ್ಯಕ್ತಿತ್ವ ವಿಕಸನದ ರೀತಿ ಮತ್ತು ವಿಕಸನಕ್ಕೆ ಉಪಯುಕ್ತವಾಗಬಲ್ಲ ಮಧ್ಯವರ್ತನೆಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಬೋಧನೆಯನ್ನು ಮಾರ್ಪಡಿಸಿಕೊಳ್ಳಲೂ ಅವಕಾಶವಿದೆ. ವ್ಯಾಪಕ ಮೌಲ್ಯಮಾಪನದಿಂದ ಪಠ್ಯ-ಸಹಪಠ್ಯ ಸಂಯೋಜಿತ ಹಾಗೂ ಮಗುವಿನ ಸಹಜ ವರ್ತನೆಯ ಕ್ಷೇತ್ರಗಳನ್ನು ಗಮನಿಸಿ ಅವುಗಳನ್ನು ಅಭಿವೃದ್ಧಿಪಡಿಸಬಹುದು. ಒಟ್ಟಾರೆಯಾಗಿ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದಿಂದ ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಅನುಕೂಲಿಸಲು ಸಾಧ್ಯವಾಗುತ್ತವೆ.


ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನಕ್ಕೆ ಇರುವ ಆಯಾಮ/ಕಲಿಕಾ ಕ್ಷೇತ್ರಗಳನ್ನು ಈ ಕೆಳಗಿನ ಚಿತ್ರದಿಂದ ಅರ್ಥೈಸಿಕೊಳ್ಳಬಹುದು.

ಭಾಷೆಗಳು

ದೈಹಿಕ

ಶಿಕ್ಷಣ

ಕೋರ್

ವಿಷಯಗಳ

ಲಲಿತಕಲೆ

ಮತ್ತು

ಸಾ.ಉ.ಉ.ಕ

ಸರ್ವಾಂಗೀಣ

ಬೆಳವಣಿಗೆ


ತುಂಡವರ್ತನೆ

ಶಾಲಾ

ಚಟುವಟಿಕೆಗಳಲ್ಲಿ

ಜೀವನ

ಶಿಕ್ಷಣ

ಮೌಲ್ಯಗಳ

ಅರಿವು

ಟ ಕಲಿಕೆಯ ಕ್ಷೇತ್ರಗಳು ಈ ಎಲ್ಲಾ ಅಂಶಗಳನ್ನೂ ಒಳಗೊಂಡಿರುತ್ತವೆ.

ಟ ಮಗುವಿನ ಕಲಿಕೆಯ ಪ್ರಕ್ರಿಯೆಯನ್ನು ಅರ್ಥೈಸಿಕೊಳ್ಳಲು ವಿವಿಧ ಹಾಗೂ ವಿಭಿನ್ನ ಸಾಧನ ಹಾಗೂ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು.


ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ವಿಧಗಳು

ಪಠ್ಯ ಸಂಯೋಜಿತ ವಿಷಯಗಳ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಮಾಡುವಾಗ ರೂಪಣಾತ್ಮಕ (ಜಿoಡಿmಚಿಣive) ಮತ್ತು ಸಂಕಲನಾತ್ಮಕ (summಚಿಣive) ಎಂಬ ಎರಡು ಮೌಲ್ಯಮಾಪನ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ರೂಪಣಾತ್ಮಕ (ಜಿoಡಿmಚಿಣive) ಮೌಲ್ಯಮಾಪನ

ರೂಪಣಾತ್ಮಕ ಮೌಲ್ಯಮಾಪನ ವರ್ಷಪೂರ್ತಿ ಶಿಕ್ಷಕರು ಕೈಗೊಳ್ಳುವ ಔಪಚಾರಿಕ ಮತ್ತು ಅನೌಪಚಾರಿಕ ಮೌಲ್ಯಮಾಪನವಾಗಿದೆ. ಇದು ನೈದಾನಿಕ ಪರೀಕ್ಷೆ ಹಾಗೂ ಪರಿಹಾರ ಬೋಧನೆಗಳನ್ನೂ ಒಳಗೊಂಡಿರುತ್ತದೆ. ಈ ಮೌಲ್ಯಮಾಪನದಲ್ಲಿ ಕೈಗೊಳ್ಳುವ ಚಟುವಟಿಕೆಗಳೆಂದರೆ ತರಗತಿ ಕಾರ್ಯಗಳು, ರಸಪ್ರಶ್ನೆ, ಗೃಹಪಾಠಗಳು, ಯೋಜನೆ, ನಿಯೋಜಿತ ಕಾರ್ಯಗಳು, ಪರೀಕ್ಷೆಗಳು ಇತ್ಯಾದಿ. ರೂಪಣಾತ್ಮಕ ಮೌಲ್ಯಮಾಪನವು ಮಗುವಿನ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಪ್ರಸ್ತುತವಾಗಿದೆ. ಕಲಿಕೆ ವಿದ್ಯಾರ್ಥಿಯ ಮನದಾಳದಲ್ಲಿ ಸ್ಪಷ್ಟವಾಗಿ ಚಿತ್ರಣಗೊಂಡಿರುವ ಬಗ್ಗೆ ಈ ಮೌಲ್ಯಮಾಪನ.

ಸಂಕಲನಾತ್ಮಕ (summಚಿಣive) ಮೌಲ್ಯಮಾಪನ

ಇದು ವರ್ಷದ ಅಥವಾ ಸೆಮಿಸ್ಟರ್ ಅವಧಿಯ ಕೊನೆಯಲ್ಲಿ ನಡೆಯುತ್ತದೆ. ಇದು ವರ್ಷದ ಅಥವಾ ಒಂದು ನಿರ್ದಿಷ್ಟ ಅವಧಿಯ ಸಮಗ್ರ ಕಲಿಕೆಯನ್ನು ಪರಿಶೀಲಿಸುವುದರೊಂದಿಗೆ ಶಿಕ್ಷಕರಿಗೆ ಮತ್ತು ಪೆÇೀಷಕರಿಗೆ ಈ ಅವಧಿಯಲ್ಲಿ ಆದ ಒಟ್ಟಾರೆ ಕಲಿಕೆಯ ಹಿಮ್ಮಾಹಿತಿಯನ್ನು ನೀಡುತ್ತದೆ. ಇದಕ್ಕೆ ಈ ಕೆಳಗಿನ ತಂತ್ರಗಳನ್ನು ಬಳಸಿಕೊಳ್ಳಬಹುದು. ಒಟ್ಟಾರೆ ಗ್ರಹಿಕೆ ಹಾಗೂ ಪ್ರತಿಕ್ರಿಯ ಸಾಮಥ್ರ್ಯವನ್ನು ಇಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ.

ಟ ಪಠ್ಯಕ್ರಮ ಆಧರಿಸಿ ಶಾಲೆಯಲ್ಲಿ ಬೋಧಿಸುವ ಶಿಕ್ಷಕರೇ ಪ್ರಶ್ನೆಪತ್ರಿಕೆಯನ್ನು ತಯಾರಿಸುವುದು. ಇದಕ್ಕೆ ಪೂರ್ವಭಾವಿಯಾಗಿ ಪ್ರಶ್ನೆಕೋಠಿಯನ್ನು ತಯಾರಿಸುವುದು.

ಟ ಶಾಲಾ ಹಂತದಲ್ಲಿಯೇ ಪರೀಕ್ಷೆ ನಡೆಸುವುದು.

ಟ ಸಹಪಠ್ಯ ಸಂಯೋಜಿತ ವಿಷಯಗಳಿಗೆ ಮಾಪನಗಳನ್ನು ನಿರ್ಧರಿಸಿ (ಉದಾ: 3/5 ಅಂಶಗಳು) ವಿವಿಧ ಸಾಧನಗಳನ್ನು ತಯಾರಿಸಿ ಬಳಸುವುದು ಉದಾ: ದರ್ಜಾಮಾಪನ, ತಾಳೆಪಟ್ಟಿ ಇತ್ಯಾದಿ.

ಈ ಎರಡೂ ರೀತಿಯ ಮೌಲ್ಯಮಾಪನವನ್ನು ಮಗುವಿನ ಸಾಧನೆಯ ನಿರ್ಧಾರಕ್ಕೆ ಪರಿಗಣಿಸಿದಾಗ ಮಾತ್ರ ಮೌಲ್ಯಮಾಪನವು ನಿರಂತರವೂ ವ್ಯಾಪಕವೂ ಆಗುತ್ತದೆ.


ನಿರಂತರ ಮೌಲ್ಯಮಾಪನ ಕಾಲಘಟ್ಟಕ್ಕೆ ಸಂಬಂಧಿಸಿದೆ ಹಾಗೂ ವ್ಯಾಪಕ ಎನ್ನುವ ಪದ ಮೌಲ್ಯಮಾಪನ ಕೈಗೊಳ್ಳಬಹುದಾದ ಆವೃತ್ತಿ ಮತ್ತು ಪರಿಗಣಿಸುವ ಅಂಶಗಳನ್ನು ಸೂಚಿಸುತ್ತದೆ.

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಉದ್ದೇಶಗಳು

ಟ ವಿದ್ಯಾರ್ಥಿಯ ಸಾಧನೆಯನ್ನು ಸಮಗ್ರವಾಗಿ ಅವಲೋಕನಕ್ಕೆ ಒಳಪಡಿಸುವುದು.

ಟ ಪ್ರತಿ ಸಾಮಥ್ರ್ಯದಲ್ಲಿಯೂ ವಿದ್ಯಾರ್ಥಿಯ ಸಾಧನೆಯನ್ನು ದಾಖಲಿಸಿಕೊಳ್ಳುವುದು.

ಟ ನಿರೀಕ್ಷಿತ ಮತ್ತು ಗಳಿಸಿದ ಕಲಿಕೆಯನ್ನು ವಿಶ್ಲೇಷಿಸುವುದು.

ಟ ಅಂಕಗಳ ಬದಲಿಗೆ ಶ್ರೇಣಿ ನೀಡುವ ಮೂಲಕ ಪ್ರಗತಿಯನ್ನು ವ್ಯಕ್ತಪಡಿಸುವುದು.

ಟ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಸಮಯ, ಸಂದರ್ಭಕ್ಕೆ ತಕ್ಕಂತೆ ಬೇಕಾಗುವ ಹಿಮ್ಮಾಹಿತಿ ಪಡೆದುಕೊಳ್ಳುವುದು.

ಟ ಲಿಖಿತ ಪರೀಕ್ಷೆಗಳ (ಪೆನ್ನು, ಪೇಪರ್‍ಗೆ ಸೀಮಿತಗೊಂಡ) ಒತ್ತಡವನ್ನು ಕಡಿಮೆ ಮಾಡುವುದು.

ಟ ಸಾಧನ-ಸಲಕರಣೆಗಳು ಮತ್ತು ಅವಶ್ಯಕ ತಂತ್ರಗಳನ್ನು ಉಪಯೋಗಿಸಿ ಲಿಖಿತ, ಮೌಖಿಕ, ವೀಕ್ಷಣೆ, ಸಂದರ್ಶನ, ದರ್ಜಾಮಾಪನ, ಸಾಂದರ್ಭಿಕ ದಾಖಲೆ, ವೈಯಕ್ತಿಕ ಹಾಗೂ ಗುಂಪು ರಚನೆಯ ಮೂಲಕ ಕಲಿಕೆಯ ಪ್ರಗತಿಯನ್ನು ವಿವಿಧ ಆಯಾಮಗಳಲ್ಲಿ ಒರೆಹಚ್ಚುವುದು.

ಟ ಪರೀಕ್ಷೆಯೆಂಬ ಭಯ ಮತ್ತು ಆತಂಕವನ್ನು ಹೋಗಲಾಡಿಸುವ ಮೂಲಕ ಕಲಿಕೆಯನ್ನು ನಿರಂತರವಾಗಿ ಅವಲೋಕನಕ್ಕೆ ಒಳಪಡಿಸುವುದು.

ಟ ಸಂತಸದಾಯಕ ಮತ್ತು ವಿದ್ಯಾರ್ಥಿ ಸ್ನೇಹಿ ವಿಧಾನಗಳನ್ನು ಅನುಸರಿಸಿ ಮಕ್ಕಳ ಕಲಿಕೆಯನ್ನು ಅರ್ಥಮಾಡಿಕೊಳ್ಳುವುದು.

ಟ ಸಹಪಠ್ಯ ಕ್ಷೇತ್ರಗಳಾದ ಸಾ.ಉ.ಉ.ಕಾ., ಕಲೆ, ದೈಹಿಕ ಶಿಕ್ಷಣ ಮುಂತಾದವುಗಳಲ್ಲಿ ಮಕ್ಕಳ ತೊಡಗಿಸಿಕೊಳ್ಳುವಿಕೆಯನ್ನು ದಾಖಲೆ ವಿಶ್ಲೇಷಿಸುವುದು.

ಟ ವಿದ್ಯಾರ್ಥಿಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವೈಯಕ್ತಿಕ ದಾಖಲೆಯನ್ನು (Iಟಿಜiviಜuಚಿಟ Pಡಿoಜಿiಟe) ಇಡುವುದು.

ಟ ಮಗುವಿನ ಹಾಜರಾತಿ, ವೈಯಕ್ತಿಕ ಶುಚಿತ್ವ, ಕ್ರಮಬದ್ಧತೆ, ಜವಾಬ್ದಾರಿ, ಪ್ರಜಾಸತ್ತಾತ್ಮಕ ಮನೋಧೋರಣೆ, ಪರಿಸರ ಸಂರಕ್ಷಣೆ ಕಾಳಜಿ, ಕರ್ತವ್ಯ ಪ್ರಜ್ಞೆ, ಸ್ವಯಂನಿಯಂತ್ರಣ, ಭಾಗವಹಿಸುವಿಕೆ, ಸಹಕಾರ ಇತ್ಯಾದಿಗಳನ್ನು ಮೌಲ್ಯಮಾಪನದ ಪರಿಧಿಯೊಳಕ್ಕೆ ತರುವುದು.

ಟ ಕಲಿಕೆಯ ಪ್ರಕ್ರಿಯೆಯ ನಿರಂತರ ವಿಶ್ಲೇಷಣೆಯಿಂದ ಕ್ಲಿಷ್ಟ ಕ್ಷೇತ್ರಗಳನ್ನು ಗುರುತಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುವುದು.

ಟ ಮಕ್ಕಳ ಪ್ರಗತಿಯ ಬಗ್ಗೆ ಪೆÇೀಷಕರು ಮತ್ತು ಸಮುದಾಯದ ಸದಸ್ಯರಲ್ಲಿ ಆತ್ಮ ವಿಶ್ವಾಸ ಮೂಡಿಸುವಂತಹ ಹಿಮ್ಮಾಹಿತಿ ನೀಡುವುದು.

ಟ ಮೌಲ್ಯಮಾಪನ ಪ್ರಕ್ರಿಯೆಯಿಂದ ಹೊರಬರುವ ಫಲಿತಗಳು ಧನಾತ್ಮಕ ಬದಲಾವಣೆಗೆ ಹಾಗೂ ಬೆಳವಣಿಗೆಗೆ ಪೂರಕವಾಗಿರುವಂತೆ ನೋಡಿಕೊಳ್ಳುವುದು.

ಟ ಸ್ವಮೌಲ್ಯಮಾಪನ ಮಾಡಿಕೊಳ್ಳುವ ಸಾಮಥ್ರ್ಯವನ್ನು ಅಭಿವೃದ್ಧಿಗೊಳಿಸುವುದು. ಟ ಪರಸ್ಪರ ಮೌಲ್ಯಮಾಪನಕ್ಕೆ ಪ್ರೇರಣೆ. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಪ್ರಾಮುಖ್ಯ

ಟ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಅರ್ಥೈಸಿಕೊಳ್ಳಲು ಸಹಕರಿಸುತ್ತದೆ.

ಟ ಮಕ್ಕಳ ಪ್ರಗತಿಯನ್ನು ಅರ್ಥೈಸಿಕೊಳ್ಳುವ ಸಲುವಾಗಿ ಸಾಧನಾ ಸಲಕರಣೆಗಳನ್ನು ರಚಿಸಿಕೊಳ್ಳಲು ಮತ್ತು ಅದನ್ನು ಪರಿಷ್ಕೃತಗೊಳಿಸಲು ದಾರಿ ತೋರಿಸುತ್ತದೆ.

ಟ ಸಕಾಲದಲ್ಲಿ ಪೆÇೀಷಕರಿಗೆ ಪ್ರಗತಿಯನ್ನು ಅರ್ಥೈಸಲು ಅನುವು ಮಾಡಿಕೊಡುತ್ತದೆ.

ಟ ನಾನು ಎಲ್ಲಿದ್ದೇನೆ, ನಾನು ನೀಡಬೇಕಾದ ಕಲಿಕೆಯ ಅನುಭವಗಳಾವುವು, ನಾನು ಅಳವಡಿಸಿಕೊಂಡ ಬೋಧನಾ ಕಲಿಕೆಯ ಪ್ರಕ್ರಿಯೆ ವಯೋಮಾನಕ್ಕೆ ಅನುಗುಣವಾಗಿದೆಯೇ ಎಂಬ ಹಿಮ್ಮಾಹಿತಿಯನ್ನು ಪಡೆದುಕೊಳ್ಳಲು ಶಿಕ್ಷಕರಿಗೆ ಸಹಾಯಕವಾಗುತ್ತದೆ. ಅಧ್ಯಾಪಕರ ಬೋಧನಾ ಕ್ರಮದ ಸ್ವ ಮೌಲ್ಯಮಾಪನ ಹಾಗೂ ತಿದ್ದುಪಡಿಯ ಕ್ರಮಗಳ ಅರಿವು ಅಧ್ಯಾಪಕರಿಗೆ ಆಗುತ್ತದೆ.

ಟ ವಿದ್ಯಾರ್ಥಿಗೆ ತನ್ನ ಕಲಿಕೆಯ ಬಗ್ಗೆ ಆತ್ಮ ವಿಶ್ವಾಸವನ್ನು ಮೂಡಿಸಲು ಹಾಗೂ ಅಪೇಕ್ಷಿತ ಬೆಳವಣಿಗೆಯ ಕಡೆಗೆ ಮಾರ್ಗದರ್ಶಿಸಲು ನೆರವಾಗುತ್ತದೆ.

ಟ ಯಾವುದೇ ಭಯ, ಆತಂಕಗಳಿಲ್ಲದೆ ಸ್ವಚ್ಛಂದ ಪರಿಸರದಲ್ಲಿ ಮುಕ್ತವಾಗಿ ಕಲಿಕೆಯನ್ನು ಒರೆಹಚ್ಚಲು ಸಾಧ್ಯವಿದೆಯೆಂಬುದನ್ನು ಮನಗಾಣಿಸುತ್ತದೆ.

ಟ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕಾದ ವಿಧಿವಿಧಾನಗಳನ್ನು ಮತ್ತು ಅಗತ್ಯ ನೀತಿ ನಿರೂಪಣೆಗಳನ್ನು ರಚಿಸಿ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತದೆ.

ಟ ಅಪೇಕ್ಷಿತ ಶಾಲಾ ಸನ್ನಿವೇಶವನ್ನು ನಿರ್ಮಾಣ ಮಾಡಿಕೊಳ್ಳುವ ಮೂಲಕ ಶಾಲೆಯ ಸಮಗ್ರ ಅಭಿವೃದ್ಧಿಯತ್ತ ಮುನ್ನಡೆಯಲು ದಾರಿತೋರಿಸುತ್ತದೆ.

ಟ ಗುಣಮಟ್ಟ ಶಿಕ್ಷಣದ ಅಭಿವೃದ್ಧಿಯನ್ನು ಕಾಲಕಾಲಕ್ಕೆ ಖಾತ್ರಿಪಡಿಸಲು ಚಾಲನೆ ನೀಡುತ್ತದೆ.


ಪಠ್ಯ

ಚಟುವಟಿಕೆಗಳು

ಸಹಪಠ್ಯ

ಚಟುವಟಿಕೆಗಳು

ಸಹಜ ವರ್ತನೆಗಳು ಚಟುವಟಿಕೆಗಳು:

ಸಾಂದರ್ಭಿಕವಾಗಿ ನಡೆಯುವ ಮಗುವಿನ ವರ್ತನೆ, ಪ್ರಕ್ರಿಯೆಗಳು

ಕಲಿಕೆಯ ಅವಲೋಕನಗಳು

ಸ್ವಚ್ಛತೆ, ಸ್ಪಂದನೆ, ಕಳಕಳಿ, ಅನುಕಂಪ,ಭಾವನೆ, ಮೌನ, ಪ್ರತಿಫಲನ ಇತ್ಯಾದಿ

ಮೌಲ್ಯಮಾಪನ :

ಅವಲೋಕನ, ಸಂದರ್ಶನ, ಹಿರಿಯರು ಮತ್ತು ಸಹವರ್ತಿಗಳಿಂದ ಅಭಿಪ್ರಾಯ ಸಂಗ್ರಹಣೆ

ದಾಖಲೀಕರಣ :

ಸಾಂದರ್ಭಿಕವಾಗಿ ನಮೂದಿಸಿರುವ ಎಲ್ಲಾ ದಾಖಲೆಗಳು

ಗುಂಪು ಚರ್ಚೆ, ಪ್ರಶ್ನೋತ್ತರ, ಆಟ, ವ್ಯಾಯಾಮ, ಆರೋಗ್ಯ ಕ್ರೀಡೆ, ಹಾಡು, ಕತೆ ಹೇಳುವುದು, ಕೈ ಬರಹ, ಸಂಭಾಷಣೆ, ಸಮೀಕ್ಷೆ, ಯೋಜನೆ, ಚಟುವಟಿಕೆ, ಪ್ರಯೋಗ ಮೊದಲಾದವು

ಕಲಿಕೆಯ ಫಲ:

ವರ್ತನಾ ಬದಲಾವಣೆ, ವೈಜ್ಞಾನಿಕ ಮನೋಭಾವನೆ, ಅಭಿಪ್ರಾಯ ವ್ಯಕ್ತಪಡಿಸುವಿಕೆ, ಪಾಲ್ಗೊಳ್ಳುವಿಕೆ, ಪಾತ್ರ ನಿರ್ವಹಣೆ, ಅನ್ವಯ, ಜ್ಞಾನ ಕಟ್ಟಿಕೊಳ್ಳುವಿಕೆ, ತೀರ್ಮಾನ ಕೈಗೊಳ್ಳುವಿಕೆ ಇತ್ಯಾದಿ.

ಮೌಲ್ಯಮಾಪನ :

ಸಂದರ್ಶನ, ಸಮೀಕ್ಷೆ, ಮೌಖಿಕ, ಸಹವರ್ತಿ ಪರೀಕ್ಷೆ, ಪ್ರತಿಫಲನ, ಅವಲೋಕನ, ವ್ಯಕ್ತಿ ವೃತ್ತಾಂತ ದಾಖಲೆ, ಅಭ್ಯಾಸ ಪುಸ್ತಕ, ಘಟಕ ಪರೀಕ್ಷೆ, ಕಿರು ಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ, ಸೆಮಿಸ್ಟರ್, ವಾರ್ಷಿಕ ಪರೀಕ್ಷೆ

ದಾಖಲೀಕರಣ :

ಆರೋಗ್ಯ ದಾಖಲೆ, ಮಕ್ಕಳ ಫೈಲ್, ತಪಶೀಲುಪಟ್ಟಿ, ಅವಲೋಕನ ಹಾಳೆ, ಸ್ವಮೌಲ್ಯಮಾಪನದ ಹಾಳೆ ಬಳಕೆ, ಪ್ರಗತಿ ಪತ್ರ ನಮೂದಿಸುವಿಕೆ, ಪ್ರಗತಿ ನೋಟ, ಸಂಚಿತ ದಾಖಲೆ, ಮಾಹಿತಿ ಹಂಚಿಕೊಳ್ಳುವಿಕೆ.

ಪ್ರತಿ ದಿನದ ಪ್ರಾರ್ಥನಾ ಸಭೆ, ರಸಪ್ರಶ್ನೆ, ಚರ್ಚೆ, ಯೋಗ, ವ್ಯಾಯಾಮ, ದೈಹಿಕ ಬೆಳವಣಿಗೆ, ಸಾ.ಉ.ಉ.ಕಾ, ಅಭಿನಯ, ಪ್ರತಿಭಾ ಕಾರಂಜಿ, ಶೈಕ್ಷಣಿಕ ಪ್ರವಾಸ, ಗುಂಪು ಚಟುವಟಿಕೆ, ಅಣಕು ಸಂಸತ್ತು, ಶಾಲಾ ಸರ್ಕಾರ, ಯೋಜನೆ ಇತ್ಯಾದಿ

ಕಲಿಕೆಯ ಫಲ :

ಆಸಕ್ತಿ, ಮನೋಧೋರಣೆ, ಪರಿಸರ ಕಾಳಜಿ, ಸಕಾರಾತ್ಮಕ ನಡತೆ, ರಾಷ್ಟ್ರಭಕ್ತಿ, ಗೌರವ, ಜೀವನ ಕೌಶಲಗಳ ರೂಢಿ, ನಾಯಕತ್ವ, ಸಹಕಾರ, ಬಾಂಧವ್ಯ, ಸಹೋದರತ್ವ ಇತ್ಯಾದಿ.

ಮೌಲ್ಯಮಾಪನ :

ದರ್ಜಾ ಮಾಪನ, ಅವಲೋಕನ, ಸಂದರ್ಶನ, ತಪಶೀಲುಪಟ್ಟಿ, ಸ್ನೇಹಿತರಿಂದ, ಸಹಶಿಕ್ಷಕರಿಂದ, ಪೆÇೀಷಕರಿಂದ, ಹಿರಿಯರಿಂದ ಅಭಿಪ್ರಾಯ ಸಂಗ್ರಹಣೆ

ದಾಖಲೀಕರಣ :

ಸೂಚಕಗಳನ್ನು ಆಧರಿಸಿದ ತಪಶೀಲುಪಟ್ಟಿ, ಸಂಚಿತ ದಾಖಲೆ, ಮಾಹಿತಿ ಹಂಚಿಕೊಳ್ಳುವಿಕೆ, ಸಾಂದರ್ಭಿಕ ದಾಖಲೆಗಳು, ದರ್ಜಾ ಮಾಪನ, ತಪಶೀಲುಪಟ್ಟಿ, ಸಂದರ್ಶನ ದಾಖಲೆ



ಮಾಹಿತಿ ಸಂಗ್ರಹಣೆಯ ವಿಧಾನಗಳು, ಮತ್ತು ತಂತ್ರಗಳು

ಪರೀಕ್ಷಾ ವಿಧಾನಗಳು

ಕ್ರಿಯಾತ್ಮಕ ವಿಧಾನಗಳು

ಲಿಖಿತ ಪರೀಕ್ಷೆಗಳು ಅವಲೋಕನ

ಚಿತ್ರಾಧಾರಿತ ಪರೀಕ್ಷೆಗಳು ವ್ಯಕ್ತಿ ವೃತ್ತಾಂತ ದಾಖಲೆ

ಮೌಖಿಕ ಪರೀಕ್ಷೆಗಳು ತಾಳೆ ಪಟ್ಟಿ ನಮೂನೆಗಳು

ಸಾಧನಾ ಪರೀಕ್ಷೆಗಳು ದರ್ಜಾಮಾಪನ ನಮೂನೆಗಳು

ಸಂದರ್ಶನ

ಪ್ರಶ್ನಾವಳಿ

ಪ್ರಾಯೋಗಿಕ ವಿಧಾನ / ಕಾರ್ಯ ನಿರ್ವಹಣೆ

ಯೋಜನಾ ಕಾರ್ಯ

ಸಾಂದರ್ಭಿಕ ದಾಖಲೆ

ಇಲ್ಲಿ ನೀಡಿದ ಪಟ್ಟಿಯಲ್ಲಿರುವಂತೆ ವಿದ್ಯಾರ್ಥಿಯ ಬೆಳವಣಿಗೆಯ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಯಾವುದೇ ಒಂದು ವಿಧಾನ ಅಥವ ತಂತ್ರವನ್ನು ಬಳಸುವುದಕ್ಕಾಗುವುದಿಲ್ಲ. ವಿದ್ಯಾರ್ಥಿಯ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕೆ ವಿಧಾನವೊಂದನ್ನು ಆಯ್ದುಕೊಳ್ಳುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯವಶ್ಯಕ.

1. ಕ್ಷೇತ್ರಗಳ ಸ್ವರೂಪ : ಮಗುವಿನ ಅನುಭವದ ಕ್ಷೇತ್ರಗಳು ವಿಭಿನ್ನ. ಉದಾ-ಭಾಷೆ, ಕೋರ್ ವಿಷಯಗಳು, ಸಹ ಪಠ್ಯ ಚಟುವಟಿಕೆಗಳು, ಆಸಕ್ತಿ, ಮನೋಧೋರಣೆ, ದೈಹಿಕ ಬೆಳವಣಿಗೆ ಆರೋಗ್ಯ.

2. ಕಲಿಕಾ ವಿಧಾನ : ವಿವಿಧ ಕ್ಷೇತ್ರಗಳಲ್ಲಿ ಮಕ್ಕಳು ಪಡೆಯುವ ಕಲಿಕಾ ಅನುಭವಗಳು ಅವುಗಳ ಗುರಿಗಳು ಮತ್ತು ಮಗುವಿನ ಹಿನ್ನೆಲೆಯಿಂದ ವಿಭಿನ್ನವಾಗಿರುತ್ತವೆ.

3. ಕಲಿಕಾ ಗುರಿಗಳು : ಪ್ರತಿ ಕ್ಷೇತ್ರದ ಕಲಿಕಾ ಗುರಿಗಳು ವಿಭಿನ್ನವಾಗಿದ್ದು ಅವು ಕಲಿಕೆಯ ಸಾಧನೆ ಮತ್ತು ಪ್ರಕ್ರಿಯೆಯನ್ನು ರೂಪಿಸುತ್ತವೆ.

4. ಮಗುವಿನ ಹಿನ್ನೆಲೆ : ಪ್ರತಿ ಮಗುವೂ ಭಿನ್ನ ಕೌಟುಂಬಿಕ, ಸಮುದಾಯಿಕ ಹಿನ್ನೆಲೆಯಿಂದ ಶಾಲಾ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳುತ್ತದೆ.

5. ಶಾಲೆ/ತರಗತಿ ಸನ್ನಿವೇಶ : ಪ್ರತಿ ಶಾಲೆ ಮತ್ತು ತರಗತಿಯಲ್ಲಿನ ಸನ್ನಿವೇಶಗಳು, ಮಗುವಿಗೆ ನೀಡಿದ ಭಾವನಾತ್ಮಕ ಅವಕಾಶಗಳು ಮತ್ತು ಮನೋಧೋರಣೆ ರೂಪಿಸುವಂತಹ ಅಂಶಗಳು ಮಗುವಿನ ಪ್ರಗತಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವಲ್ಲಿ ತಮ್ಮದೇ ಪ್ರಭಾವ ಬೀರುತ್ತವೆ.


ಪಠ್ಯ ವಿಷಯಗಳಲ್ಲಿ ಮೌಲ್ಯಮಾಪನ

ನಿರ್ದಿಷ್ಟ ಕ್ಷೇತ್ರ

ತಂತ್ರಗಳು

ಸಾಧನಗಳು

ಅವಧಿ

ವರದಿ

ಎಲ್ಲಾ ಪಠ್ಯ ವಿಷಯಗಳು (ಭಾಷೆಗಳು, ಕೋರ್ ವಿಷಯಗಳು ಮತ್ತು ದೈ.ಶಿ)

ಟ ಮೌಖಿಕ ಪರೀಕ್ಷೆ

ಟ ಲಿಖಿತ ಪರೀಕ್ಷೆ

ಟ ನೈದಾನಿಕ ಪರೀಕ್ಷೆ

ಟ ಯೋಜನಾ ಕಾರ್ಯ

ಟ ಪ್ರಾಯೋಗಿಕ ಪರೀಕ್ಷೆ

ಟ ಅವಲೋಕನ

ಟ ಡೈರಿ ನಿರ್ವಹಣೆ

ಟ ಮೌಖಿಕ ಪ್ರಶ್ನೆಗಳು

ಟ ಅಭ್ಯಾಸ ಪ್ರಶ್ನೆಗಳು

ಟ ಅಭ್ಯಾಸ ಚಟುವಟಿಕೆ

ಟ ಪ್ರಶ್ನೆ ಪತ್ರಿಕೆ

ಟ ನಿಯೋಜಿತ

ಕಾರ್ಯಗಳು

ಅವಲೋಕನ ಪಟ್ಟಿ

ಟ ಪ್ರತಿ ಅವಧಿ

ಟ ಮಾಸಿಕವಾಗಿ/

ಘಟಕವಾಗಿ ಕಿರು

ಟ ಸೆಮಿಸ್ಟರ್/

ಅರ್ಧ ವಾರ್ಷಿಕ

ಟ ವಾರ್ಷಿಕ

ಪ್ರತ್ಯಕ್ಷ /

ಪರೋಕ್ಷ

ಶ್ರೇಣಿಗಳನ್ನು ನೀಡುವುದು

ಸೂಚನೆ : ಮಗು ಮತ್ತು ಶಿಕ್ಷಕರಿಬ್ಬರಿಗೂ ಅರಿವಿರುವ ಸಂದರ್ಭ ಪ್ರತ್ಯಕ್ಷ ಶ್ರೇಣಿ ನೀಡುವುದಕ್ಕೆ ಹಾಗೂ ಶಿಕ್ಷಕರಿಗೆ ಮಾತ್ರ ಅರಿವಿರುವ ಸಂದರ್ಭ ಪರೋಕ್ಷ ಶ್ರೇಣಿ ನೀಡುವುದಕ್ಕೆ


ಸಹ ಪಠ್ಯ ವಿಷಯಗಳಲ್ಲಿ ಮೌಲ್ಯಮಾಪನ

ನಿರ್ದಿಷ್ಟ ಕ್ಷೇತ್ರ

ತಂತ್ರಗಳು

ಸಾಧನಗಳು

ಅವಧಿ

ವರದಿ

1. ಸಾಮಾಜಿಕ ವೈಯುಕ್ತಿಕ ಗುಣಗಳು

ಟ ಪ್ರಾಮಾಣಿಕತೆ/

ಸತ್ಯ ಸಂಧತೆ

ಟ ಸಹಕಾರ

ಟ ಶಿಸ್ತು

ಟ ಜವಾಬ್ದಾರಿ ಸ್ವತಃ ಹೊರುವುದು

ಟ ಆರಂಭಿಸುವಿಕೆ

ಟ ಭಾವನಾತ್ಮಕ ಸಮತೋಲನ

2. ಆಸಕ್ತಿ

ಟ ಸಾಹಿತ್ಯದಲ್ಲಿ

ಟ ವೈಜ್ಞಾನಿಕ ಮನೋಭಾವ

ಟ ಸಂಗೀತ

ಟ ನೃತ್ಯ

ಟ ಚಿತ್ರಕಲೆ

ಟ ಆಟಗಳು/

ಕ್ರೀಡೆಗಳು

ಟ ಅವಲೋಕನ

ಟ ಸಂದರ್ಶನ

ಟ ಅವಲೋಕನ

ಟ ಅವಲೋಕನ ತಪಶೀಲು ಪಟ್ಟಿ

ಟ ದರ್ಜಾಮಾಪಿನಿ/

ತಾಳೆ ಪಟ್ಟಿ

ಟ ಕೃತಿ ಸಂಪುಟ

ಟ ಅವಲೋಕನ

ತಪಶೀಲು ಪಟ್ಟಿ

ಪ್ರತಿ ಅವಧಿ ಮತ್ತು ಪ್ರತಿನಿತ್ಯ

ಶಿಕ್ಷಕರುಗಳಿಂದ

ಪ್ರತಿ ಅವಧಿ

ಮತ್ತು ಪ್ರತಿನಿತ್ಯ

ಶಿಕ್ಷಕರುಗಳಿಂದ

ಚಟುವಟಿಕೆಗಳನ್ನು

ಆಯೋಜಿಸಿ

ಅವಲೋಕಿಸುವುದು.

ನೇರವಾಗಿ

ಶ್ರೇಣಿಗಳನ್ನು

ನೀಡುವಿಕೆ

ಆವರ್ತಗಳಿಗೊಮ್ಮೆ

ನೇರವಾಗಿ

ಶ್ರೇಣಿಗಳನ್ನು

ನೀಡುವುದು

(ಜiಡಿeಛಿಣ

gಡಿಚಿಜiಟಿg)


3. ದೈಹಿಕ ಬೆಳವಣಿಗೆ ವೈದ್ಯಕೀಯ ತಪಾಸಣೆ ವೈದ್ಯಕೀಯ ನೀತಿಗಳನ್ನು ಅನುಸರಿಸುವುದು ವರ್ಷಕ್ಕೊಮ್ಮೆ ಆರೋಗ್ಯ ಸ್ಥಿತಿ

ನಿರ್ದಿಷ್ಟ ಕ್ಷೇತ್ರ

ತಂತ್ರಗಳು

ಸಾಧನಗಳು

ಅವಧಿ

ವರದಿ

4. ಸಹಪಠ್ಯ ಚಟುವಟಿಕೆಗಳು

ಟ ನೃತ್ಯ, ನಾಟಕ

ಟ ಚರ್ಚೆ, ರಸಪ್ರಶ್ನೆ

ಟ ಸೃಜನಶೀಲ ಬರವಣಿಗೆ

ಟ ಕಂಪ್ಯೂಟರ್

5. ಕಾರ್ಯನುಭವ

(S.U.P.W)

ನೇರವಾಗಿ ಶ್ರೇಣಿ

ನೀಡುವುದು.

ಟ ಅವಲೋಕನ

ಟ ಅವಲೋಕನ

ಟ ಅವಲೋಕನ

ತಪಶೀಲು ಪಟ್ಟಿ

ಟ ಅವಲೋಕನ

ತಪಶೀಲು ಪಟ್ಟಿ

ಶಾಲಾ

ಪಂಚಾಂಗದಂತೆ

ಶಾಲಾ ವೇಳಾ

ಪಟ್ಟಿಯಂತೆ

ನೇರವಾಗಿ ಶ್ರೇಣಿ

ನೀಡುವುದು

ಕಾರ್ಯನುಭವ

ಸಮಯದಲ್ಲಿ



ಮಕ್ಕಳ ಪ್ರಗತಿ ವರದಿ ಮಾಡಲು ಪುಸ್ತಿಕೆಯ (ಕೃತಿ ಸಂಪುಟ) ನಿರ್ವಹಣೆ

ಮಕ್ಕಳ ಕಲಿಕಾ ಪ್ರಕ್ರಿಯೆಗಳನ್ನು ವಿವಿಧ ಆಯಾಮಗಳಲ್ಲಿ ಅರ್ಥಮಾಡಿಕೊಳ್ಳಲು ಅವರ ಕೃತಿ ಸಂಪುಟವು ಸಹಕಾರಿಯಾಗಿದೆ. ಪುಸ್ತಿಕೆಯು ಮಕ್ಕಳ ಕಲಿಕೆಯ ಪ್ರಯತ್ನಗಳನ್ನು ದಾಖಲಿಸುತ್ತವÉ. ಮಕ್ಕಳ ಕೃತಿಗಳು ಇಲ್ಲಿ ದಾಖಲಾಗುವಂತೆಯೇ ಆ ಪುಸ್ತಿಕೆಗಳÀ ಮೌಲ್ಯಮಾಪನ ಕೂಡ ಇಲ್ಲಿ ದಾಖಲಾಗುತ್ತದೆ. ಅಂತೆಯೇ ಮಕ್ಕಳು ತಮ್ಮ ಕಲಿಕೆಯ ಬಗೆಗೆ ಮಾಡಿಕೊಂಡ ಸ್ವಾವಲೋಕನವೂ ಇಲ್ಲಿ ದಾಖಲಾಗುತ್ತದೆ. ಯಾವುದೇ ಸಂದರ್ಭಧಲ್ಲಿ ಮಕ್ಕಳ ಕೃತಿ ಸಂಪುಟಗಳನ್ನು ಗಮನಿಸಿದರೆ ಮಕ್ಕಳ ಕಲಿಕಾ ಪ್ರಕ್ರಿಯೆಗಳಲ್ಲಿ ಯಾವ ರೀತಿ ತೊಡಗಿಕೊಂಡಿದ್ದರು, ಅವರ ಕಲಿಕೆಯ ಗುಣಮಟ್ಟ ಹೇಗಿದೆ, ಅವರಿಗೆ ಯಾವ ರೀತಿಯ ಮಾರ್ಗದರ್ಶನ ಬೇಕಾಗಿದೆ ಎಂಬಿತ್ಯಾದಿ ಸಮಗ್ರ ವಿವರಗಳೂ ಇಲ್ಲಿ ದೊರಕುತ್ತವೆ. ಈ ಎಲ್ಲ ವಿವರಗಳನ್ನೊಳಗೊಂಡ ದಾಖಲೆ, ಫೈಲ್‍ನ್ನು ಮಕ್ಕಳ ವೈಯಕ್ತಿಕ ಪುಸ್ತಿಕೆ ಎನ್ನಬಹುದು.

ಪ್ರತಿ ಮಗುವಿಗೂ ಅದರದೇ ಆದ ಪುಸ್ತಿಕೆಯಿರುತ್ತದೆ. ನಮ್ಮ ಸಂದರ್ಭದಲ್ಲಿ ಪುಸ್ತಿಕೆಯು ಒಂದು ಸರಳವಾದ ಫೈಲ್ ಆಗಿರಬಹುದು. ಪುಸ್ತಿಕೆ ಪರಿಕಲ್ಪನೆಯೇ ನಮಗೆ ಹೊಸದು. ಆದುದರಿಂದ ಸೈದ್ಧಾಂತಿಕವಾಗಿ ಅದರ ಹರವು ಹಾಗೂ ಉಪಯುಕ್ತತೆಗಳನ್ನು ಅರಿತರೂ ಅನುಷ್ಠಾನದ ದೃಷ್ಟಿಯಿಂದ ಈ ಕೆಳಗಿನ ಅಂಶಗಳನ್ನು ಮಕ್ಕಳ ಪುಸ್ತಿಕೆಗಳು ಒಳಗೊಳ್ಳಬಹುದು.

1. ಮಕ್ಕಳ ಬರೆವಣಿಗೆಯ ಸ್ಯಾಂಪಲ್‍ಗಳು

2. ಮಕ್ಕಳು ಬರೆದ ಪರೀಕ್ಷೆ ಪತ್ರಿಕೆಗಳು

3. ಮೌಖಿಕ ಪರೀಕ್ಷೆಗಳಲ್ಲಿ ಮಕ್ಕಳ ನಿರ್ವಹಣೆ ಕುರಿತಾದ ದಾಖಲೆಗಳು ಹಾಗೂ ಗಳಿಸಿದ ಅಂಕಗಳು

4. ಮಕ್ಕಳು ಮನೆಯಲ್ಲಿ ಅಥವಾ ತರಗತಿ ಹೊರಗೆ ನಡೆಸುವ ಯಾವುದಾದರೂ ಚಟುವಟಿಕೆಗಳ ದಾಖಲೆಗಳು

5. ಮಕ್ಕಳ ಕುರಿತಾಗಿ ಶಿಕ್ಷಕರ ಅಭಿಪ್ರಾಯಗಳು, ಇತರ ಯಾವುದೇ ಅಭಿಪ್ರಾಯಗಳು

6. ಮಕ್ಕಳು ತಮ್ಮ ಕಲಿಕೆಯ ಬಗ್ಗೆ ಮಾಡಿಕೊಂಡ ಸ್ವಾವಲೋಕನಗಳು.

7. ಮಕ್ಕಳಿಗೆ ಶಿಕ್ಷಕರು ನೀಡಿರುವ ಹಿಮ್ಮಾಹಿತಿ

8. ಮಕ್ಕಳು ಪೆÇೀಷಕರು ತಮ್ಮ ಮಕ್ಕಳ ಬಗ್ಗೆ ದಾಖಲಿಸಬಹುದಾದ ಅಂಶಗಳು.

ಇವೆಲ್ಲವನ್ನೂ ವ್ಯವಸ್ಥಿತವಾಗಿ ಕೃತಿ ಸಂಪುಟಗಳಲ್ಲಿ ದಾಖಲಿಸಿಕೊಂಡರೆ ಮಕ್ಕಳ ವ್ಯಕ್ತಿತ್ವದ ಕುರಿತಂತೆ ಒಂದು ಹಂತದವರೆಗಿನ ಸಮಗ್ರ ಹಿಮ್ಮಾಹಿತಿ ದೊರಕುತ್ತದೆ. ಇದರ ಹರವನ್ನು ಮುಂದಿನ ದಿನಗಳಲ್ಲಿ ವಿಸ್ತರಿಸಬಹುದು. ಅತ್ಯಂತ ಕಡಿಮೆಯೆಂದರೆ ಮಕ್ಕಳ ಪರೀಕ್ಷೆ ಪತ್ರಿಕೆಗಳ ಸಂಗ್ರಹವಾಗಿ ಆರಂಭವಾಗಬಹುದಾದ ಕೃತಿ ಸಂಪುಟವು ಈ ಮೇಲಿನವುಗಳಲ್ಲಿ ಎಷ್ಟು ಅಂಶಗಳನ್ನು ಒಳಗೊಳ್ಳುತ್ತದೆಯೋ ಅಷ್ಟರ ಮಟ್ಟಿಗೆ ಹೆಚ್ಚು ಸಮಗ್ರವಾಗುತ್ತದೆ ಎಂಬುದನ್ನು ಅರ್ಥಮಾಡಿ ಕೊಳ್ಳಬೇಕಾಗಿದೆ.


ಶಾಲೆಯು ಪೆÇೀಷಕರಿಗೆ ಈ ಕೃತಿ ಸಂಪುಟದ ಆಧಾರದಲ್ಲಿ ಮಕ್ಕಳ ವ್ಯಕ್ತಿಚಿತ್ರವನ್ನು ಕಟ್ಟಿಕೊಡಬೇಕು. ಇದರಿಂದ ಪೆÇೀಷಕರಿಗೆ ತಮ್ಮ ಮಕ್ಕಳ ಕುರಿತಂತೆ, ಅವರ ಬೆಳವಣಿಗೆಯ ಕುರಿತಂತೆ, ಅವರ ಸಾಮಥ್ರ್ಯಗಳ ಕುರಿತಂತೆ, ಅವರ ಭವಿಷ್ಯದ ಸಾಧ್ಯತೆಗಳ ಕುರಿತಂತೆ ಸಂಪೂರ್ಣವಾದ ಅರಿವು ಉಂಟಾಗುತ್ತದೆ. ಮಕ್ಕಳ ಬೆಳವಣಿಗೆಯನ್ನು ಅನುಕೂಲಿಸುವ ಎಲ್ಲರಿಗೂ ಇಂತಹ ಸಮಗ್ರ ಅರ್ಥೈಸಿಕೊಳ್ಳುವಿಕೆ ಅತಿ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ವೈಯಕ್ತಿಕ ಪುಸ್ತಿಕೆ ನಿರ್ವಹಣೆಯೇ ಮುಖ್ಯ ಮೌಲ್ಯಮಾಪನ ಸಾಧನವಾಗಲಿದೆ.

ಈ ಸಾಧನ ಹಾಗೂ ತಂತ್ರಗಳಂತೆಯೇ ಇನ್ನೂ ಕೆಲವು ಆಧಾರಗಳನ್ನು ಇಲ್ಲಿ ನೀಡಿದ್ದು ಅವುಗಳನ್ನೂ ಸಹ ಬಳಸಿಕೊಳ್ಳಬಹುದು.

ಟ ಪ್ರಬಂಧಗಳು - ಮಕ್ಕಳ ಎಲ್ಲ ರೀತಿಯ ಬರಹಗಳನ್ನು ಅವುಗಳ ಅಭಿವ್ಯಕ್ತಿ ಹಾಗೂ ಮಕ್ಕಳು ಯೋಚಿಸುವ ಧಾಟಿಯನ್ನು ಅರ್ಥೈಸಿಕೊಳ್ಳಲು ಬಳಸಬಹುದು. ಆದರೆ ಪ್ರಬಂಧಗಳು ಮಕ್ಕಳು ಸ್ವತಃ ಬರೆದುವೇ ಆಗಿರಬೇಕು.

ಟ ಸ್ವ-ಮೌಲ್ಯಮಾಪನ ಸಾಧನಗಳು

ಮಕ್ಕಳಿಗೆ ತಮ್ಮ ಪ್ರಗತಿಯನ್ನು ತಾವೇ ಅವಲೋಕಿಸಿಕೊಳ್ಳಲು ಅವಕಾಶ ನೀಡಬೇಕು. ಅಂತಹ ಅವಲೋಕನಗಳ ವಿವರಗಳು ಪುಸ್ತಿಕೆಗೂ ಸೇರಬಹುದು. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಒಂದು ಉದ್ದೇಶ ಸ್ವಾವಲೋಕನದ ಮೂಲಕ ಮಕ್ಕಳೇ ತಮ್ಮ ಕಲಿಕೆಗೆ ಜವಾಬ್ದಾರರಾಗುವಂತೆ ಮಾಡುವುದಾಗಿದೆ.

ಟ ಸಹವರ್ತಿ ಮೌಲ್ಯಮಾಪನ ಸಾಧನಗಳು

ಮಕ್ಕಳ ಗೆಳೆಯ/ಗೆಳತಿಯರು ಅವರ ಬಗ್ಗೆ ಮಾಡುವ ಅವಲೋಕನಗಳೂ ಮಕ್ಕಳ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತವೆ. ಇವನ್ನೂ ಪುಸ್ತಿಕೆಗೆ ಸೇರಿಸಿಕೊಳ್ಳಬಹುದು.


ಈ ಮುಂದೆ ನೀಡಿರುವ ಸಾಧನಗಳು ಯಾವ ಮಾಹಿತಿ ನೀಡುತ್ತವೆ ಮತ್ತು ಅವುಗಳನ್ನು ಮೌಲ್ಯಮಾಪನದಲ್ಲಿ ಹೇಗೆ ಬಳಸಬಹುದು ಎಂದು ಯೋಚಿಸಿ.

ಟ ಹಿಮ್ಮಾಹಿತಿ ನಮೂನೆಗಳು

ಟ ಸಂಭಾಷಣೆಗಳು

ಟ ಗಮನ ಕೇಂದ್ರಿತ ಗುಂಪು ಚರ್ಚೆಯ ದತ್ತಾಂಶಗಳು

ಟ ರಸಪ್ರಶ್ನೆ ಮತ್ತಿತರ ಸ್ಪರ್ಧೆಗಳ ದಾಖಲೆಗಳು

ಟ ಪ್ಲಾನಲ್ ಬೋರ್ಡಿನಲ್ಲಿಯ ಪ್ರದರ್ಶನಗಳು

ಟ ಚಿತ್ರಗಳು, ಪತ್ರಗಳು, ಸಂಗ್ರಹಗಳು ಮತ್ತು ಮಾದರಿಗಳು

ಟ ಕಥನ ವರದಿಗಳು.


ಹಿಮ್ಮಾಹಿತಿ

ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ ಜೊತೆ ಜೊತೆಯಲ್ಲಿಯೇ ಸಾಗುವುದು ಹಿಮ್ಮಾಹಿತಿ. ಹಿಮ್ಮಾಹಿತಿ ನೀಡುವುದು ಮತ್ತು ಹಿಮ್ಮಾಹಿತಿ ನೀಡಲು ಅಗತ್ಯ ಸನ್ನಿವೇಶ ಸೃಜಿಸುವುದನ್ನು ಒಂದು ಕೌಶಲವನ್ನಾಗಿಯೇ ನಾವು ಕಲಿಯಬೇಕಿದೆ. ಸಾಮಾನ್ಯವಾಗಿ ನಾವು ಪುಟ್ಟ ಮಕ್ಕಳೆಂದು ಅವರ ಹೃದಯಗಳನ್ನು ಪರಿಗಣಿಸದೇ ಹೇಳಬೇಕಾದ ವಿಷಯವನ್ನು ಬೈದೋ, ತಪ್ಪು ಎಂದು ನೇರವಾಗಿ ಹೇಳುವುದೋ, ಟೀಕಿಸುವುದೋ ಅಥವಾ ಕಡ್ಡಿ ಮುರಿದಂತೆ ಹೇಳುವುದೋ ಮಾಡುತ್ತೇವೆ. ಆದರೆ ದೊಡ್ಡವರಿಗೆ ಹೀಗೆ ಹೇಳುವುದಿಲ್ಲ.

ಹಿರಿಯೊಬ್ಬರ ವರ್ತನೆಯ ಬಗ್ಗೆ ನಮಗೆ ಕಿರಿಕಿರಿ ಎನಿಸಿದೆ. ಅದನ್ನು ಬದಲಾಯಿಸಿಕೊಳ್ಳಲು ಅವರಿಗೆ ಹೇಳಬೇಕೆನಿಸಿದೆ. ಹೀಗೆ ಹೇಳಲು ನಾವು ಮಾಡಿಕೊಳ್ಳುವ ಪೂರ್ವ ಸಿದ್ಧತೆಗಳೇನು ಯೋಚಿಸಿ- ಅದೇ ಕಿರಿಕಿರಿ ಮಕ್ಕಳು ಮಾಡಿದಾಗ ಅವರಿಗೆ ಹೇಗೆ ಹೇಳುತ್ತೇವೆ ಎಂದು ಯೋಚಿಸೋಣ.

ಹಿರಿಯರು ಮತ್ತು ಮಕ್ಕಳೊಂದಿಗಿನ ನಮ್ಮ ವರ್ತನೆಗಳ ವ್ಯತ್ಯಾಸ ಗಮನಿಸೋಣ. ಯಾರಿಗೆ ಹೆಚ್ಚು ಗಮನ ಕೊಟ್ಟು ಮಾಹಿತಿ ತಲುಪಿಸಬೇಕಿದೆ ಎಂದು ಅಂತಾರಾವಲೋಕನ ಮಾಡಿಕೊಳ್ಳೋಣ.

ಶಾಲೆ ಮತ್ತು ತರಗತಿಗಳಲ್ಲಿ ಅಲ್ಲದೇ ಇತರೆ ಕಡೆ ಮಕ್ಕಳು ಮತ್ತು ಇತರ ಭಾಗೀದಾರರು ವಿವಿಧ ರೀತಿ ವರ್ತಿಸುತ್ತಾರೆ. ಅವರಿಗೆ ಈ ವರ್ತನೆ, ಅಭಿವ್ಯಕ್ತಿ ಕುರಿತು ಅವಲೋಕಿಸಿದವರು ನೀಡುವ ವ್ಯವಸ್ಥಿತ ಮಾಹಿತಿಯೇ ಹಿಮ್ಮಾಹಿತಿ.

ಹಿಮ್ಮಾಹಿತಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ವಿಚಾರ ಮತ್ತು ಚಟುವಟಿಕೆ ಅಥವಾ ಕಾರ್ಯಮಾಡಿದ್ದರ ಪ್ರಭಾವ, ಫಲಿತಾಂಶ ಮತ್ತು ಪರಿಣಾಮಗಳ ಬಗ್ಗೆ ನೀಡುವ ವ್ಯವಸ್ಥಿತ ಮಾಹಿತಿ. ಹಿಮ್ಮಾಹಿತಿಯು ಟೀಕೆಯಾಗಬಾರದು. ಟೀಕೆಯೂ ಒಂದು ರೀತಿಯ ಹಿಮ್ಮಾಹಿತಿಯೇ ಆದರೂ ಹಿಮ್ಮಾಹಿತಿಯನ್ನು ಅಲ್ಲಿ ಇನ್ನೂ ವಿಶಾಲಾರ್ಥದಲ್ಲಿ ಬಳಸಿದೆ.


ಟೀಕೆ ಮತ್ತು ಹಿಮ್ಮಾಹಿತಿಗಿರುವ ವ್ಯತ್ಯಾಸ

ಟೀಕೆ ಹಿಮ್ಮಾಹಿತಿ

ಸಮಸ್ಯಾ ವಿಸ್ತರಣೆ ಪರಿಹಾರ ಸೂಚನೆ

ಪ್ರತಿಕ್ರಿಯಾತ್ಮಕ / ಪ್ರತಿಗಾಮಿ ರಚನಾತ್ಮಕ ಪ್ರತಿಕ್ರಿಯೆ

ಪೂರ್ವಗ್ರಹಪೀಡಿತವಾಗಿರಬಹುದು ವಸ್ತು ನಿಷ್ಠವಾಗಿರುತ್ತದೆ

ತಪ್ಪುಗಳನ್ನು ಹುಡುಕುವ ಉದ್ದೇಶ ತಪ್ಪುಗಳಿಂದ ಹೊರಬರಲು ಸಲಹೆ

ಆತ್ಮವಿಶ್ವಾಸ ಕುಂದಿಸುತ್ತದೆ ಆತ್ಮವಿಶ್ವಾಸ ವೃದ್ಧಿಸುತ್ತದೆ.

ಹಿಮ್ಮಾಹಿತಿಯ ಅಗತ್ಯತೆ

ವ್ಯಕ್ತಿಯೊಬ್ಬರು ಅವರ ಕಾರ್ಯಕ್ಷೇತ್ರದಲ್ಲಿ ಬೆಳವಣಿಗೆ ಕಂಡುಕೊಳ್ಳುವುದಕ್ಕಾಗಿ ಅವರ ಕಾರ್ಯಗಳ ಬಗ್ಗೆ ಹಿಮ್ಮಾಹಿತಿ ಪಡೆಯುವುದು ಅಗತ್ಯ. ಶಾಲಾ ಸನ್ನಿವೇಶದಲ್ಲಿ ಶಿಕ್ಷಕರು ಸಹ ಶಿಕ್ಷಕರಿಂದ, ಮಕ್ಕಳಿಂದ, ಸ್ನೇಹಿತರಿಂದ ಹಾಗೂ ಸಮುದಾಯದಿಂದ ಹಿಮ್ಮಾಹಿತಿ ಪಡೆಯುವ ಸನ್ನಿವೇಶಗಳನ್ನು ಸೃಜಿಸಿಕೊಳ್ಳುತ್ತಿದ್ದರೆ ಅದು ಅವರ ವೃತ್ತಿಪರತೆಯನ್ನು ಹೆಚ್ಚಿಸುತ್ತದೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ರಚನಾತ್ಮಕವಾದ ಹಿಮ್ಮಾಹಿತಿ ನೀಡಿದಲ್ಲಿ ಮಕ್ಕಳ ಆತ್ಮಗೌರವ ಕಾಪಾಡಿಯೇ ಅವರ ಪ್ರಗತಿಗೆ ಕಾರಣವಾಗಬಹುದು. ಇವುಗಳಲ್ಲದೇ ಈ ಕೆಳಗಿನ ಅಂಶಗಳು ಹಿಮ್ಮಾಹಿತಿಯು ಅಗತ್ಯವೆಂದು ಹೇಳುತ್ತೇವೆ.

ಟ ಸಂಬಂಧಿಸಿದ ವ್ಯಕ್ತಿಗೆ ಅವರ ಕಾರ್ಯದಲ್ಲಿ ಪ್ರೇರಣೆ ನೀಡಲು, ವೃತ್ತಿಪರತೆ ಬೆಳೆಸಲು ಹಿಮ್ಮಾಹಿತಿ ಅಗತ್ಯ.

ಟ ಕೆಲಸದ ಗುಣಮಟ್ಟ ಹೆಚ್ಚಿಸುವಲ್ಲಿ ಸಂಬಂಧಗಳನ್ನು ಕಟ್ಟಿ ಬೆಳೆಸುವುದಕ್ಕಾಗಿ ಹಿಮ್ಮಾಹಿತಿ ಅವಶ್ಯ.

ಟ ನಿರೀಕ್ಷೆಗಳನ್ನು ಸ್ಪಷ್ಟಪಡಿಸಿ ಊಹಾತ್ಮಕ ಕೆಲಸಗಳನ್ನು ತಡೆಯುತ್ತದೆ.

ಟ ವೈಯಕ್ತಿಕ ಮತ್ತು ಕಲಿಕೆಯ ಕಾರ್ಯಕ್ಷೇತ್ರಗಳಲ್ಲಿ ನಿರಂತರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಕಾಯ್ದುಕೊಳ್ಳಲು ಅಗತ್ಯವಾಗಿದೆ.

ಪರಿಣಾಮಕಾರಿ ಹಿಮ್ಮಾಹಿತಿಯು ಈ ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತದೆ.

ಟ ಸ್ಪಷ್ಟ, ನೇರ ಹಾಗೂ ವಿವರಣಾತ್ಮಕವಾಗಿರುತ್ತದೆ.

ಟ ನಿರ್ದಿಷ್ಟ ಕಾರ್ಯದ ಕಾರ್ಯಕ್ಷಮತೆ ಕೇಂದ್ರಿತವಾಗಿರುತ್ತದೆ.

ಟ ಸಕಾಲಿಕ ಮತ್ತು ನಿಯಮಿತವಾಗಿ ಪರಿಹಾರಗಳನ್ನು ನೀಡುವುದಾಗಿರುತ್ತದೆ.

ಟ ಉತ್ತಮ ಅಂಶಗಳ ಬಗ್ಗೆ ಮೆಚ್ಚುಗೆ ಸೂಚಿಸಿ ಅವುಗಳ ಬೆಳವಣಿಗೆಗೆ ಕಾರಣವಾಗುತ್ತದೆ.

ಟ ರಚನಾತ್ಮಕವಾಗಿದ್ದು ಅಪೇಕ್ಷಣೀಯ ಗುಣಗಳನ್ನು ಬೆಳೆಸುತ್ತದೆ.

ಹಿಮ್ಮಾಹಿತಿ ನೀಡಲು ಬೆಳೆಸಿಕೊಳ್ಳಬೇಕಾದ ಕೌಶಲಗಳು

ಟ ಹಿಮ್ಮಾಹಿತಿ ನೀಡುವವರು ಸರಿಯಾದ ಮಾಹಿತಿಗಳನ್ನು ಪಡೆದು ಇಲ್ಲವೆ ಸಕ್ರಿಯವಾಗಿ ಆಲಿಸಿ ಅವಲೋಕನ ಮಾಡಿರಬೇಕು. ಇದಕ್ಕೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಅಗತ್ಯ ಆಧಾರಗಳನ್ನು ಒದಗಿಸುತ್ತದೆ.

ಟ ವಿಷಯವನ್ನು ಯೋಚಿಸಿ ಸಿದ್ಧತೆಯೊಂದಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸುವ ಕೌಶಲ ಹೊಂದಿರಬೇಕು.

ಟ ಸ್ವ ಜಾಗ್ರತಿಯೊಂದಿಗೆ ಸೂಕ್ತ ಸಮಯದಲ್ಲಿ ಹಿಮ್ಮಾಹಿತಿ ನೀಡುವ ಕೌಶಲ ಹೊಂದಿರಬೇಕು.

ಟ ಬಿಚ್ಚು ಮನಸ್ಸಿನ ಜೊತೆಗೆ ಹಿಂಜರಿಕೆಯಿಲ್ಲದೆ ದೃಢ ನಿಲುವು ತಾಳುವ ವ್ಯಕ್ತಿತ್ವ ಹೊಂದಿರಬೇಕು.

ಹಿರಿಯರಿಗೆ ಹಿಮ್ಮಾಹಿತಿ ನೀಡುವವರಿಗೆ ಹಿಮ್ಮಾಹಿತಿ ನೀಡುವುದರಿಂದ, ಹಿಮ್ಮಾಹಿತಿ ಸಂಗ್ರಹಿಸಿದ ವ್ಯಕ್ತಿಯು ನನ್ನನ್ನು ಇಷ್ಟಪಡುವುದಿಲ್ಲ ಎಂಬ ಹೆದರಿಕೆ ಇರಬಹುದು. ಒಬ್ಬ ವ್ಯಕ್ತಿಯು ಈಗಾಗಲೇ ನೀಡಿದ ಹಿಮ್ಮಾಹಿತಿ ಸಂದರ್ಭದಲ್ಲಿನ ಕಹಿ ಅನುಭವಗಳು ಮತ್ತು ಅಸಂತೃಪ್ತಿ ಭಾವನೆಗಳು ಈ ನಂಬಿಕೆಗೆ ಕಾರಣವಾಗಿರಬಹುದು. ಆದಾಗ್ಯೂ ಹಿಮ್ಮಾಹಿತಿ ನೀಡುವ ವ್ಯಕ್ತಿಯು ಪಡೆದುಕೊಳ್ಳುವವರು ಮತ್ತು ಅವರ ಕಾರ್ಯದ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿರದೇ ನಯವಾಗಿ ಹೇಳಬೇಕಾಗುತ್ತದೆ. ಆದರೆ ಮಕ್ಕಳ ಮಟ್ಟಿಗೆ ನಾವು ಇಷ್ಟೆಲ್ಲಾ ಹೆದರಿಕೆಯನ್ನೇನೂ ಹೊಂದಿರುವುದಿಲ್ಲ. ಆದರೆ ಪುಟ್ಟ ಯೋಜನೆಯಂತೂ ನಮ್ಮಲ್ಲಿರಬೇಕು. ಮಗುವಿನ ಬೆಳವಣಿಗೆಗೆ ಅನುಕೂಲವಾಗುವಂತೆ ಹಿಮ್ಮಾಹಿತಿ ನೀಡಲು ಬಳಸುವ ಭಾಷೆ, ಭಾವ, ಧ್ವನಿ ಮತ್ತು ಆಂಗಿಕ ಭಾಷೆಯನ್ನು ನಾವು ಗಮನಿಸಿಕೊಂಡು ಹಿಮ್ಮಾಹಿತಿ ನೀಡಬೇಕು. ಇದಕ್ಕಾಗಿ ವಿವಿಧ ಸಾಧನ ಮತ್ತು ತಂತ್ರಗಳನ್ನು `ನಿರಂತರ' ಪುಸ್ತಕದಲ್ಲಿ ನೀಡಿದೆ. ಅವುಗಳನ್ನು ಒಮ್ಮೆ ಓದಿಕೊಂಡು ಸ್ನೇಹಿತರೊಂದಿಗೆ ಚರ್ಚಿಸಿರಿ.


ಪದ ವಿವರಣೆ

1. ಮೌಲ್ಯಮಾಪನ (ಇvಚಿಟuಚಿಣioಟಿ)- ಲಭ್ಯವಿರುವ ಎಲ್ಲ ದಾಖಲೆಗಳ ಆಧಾರದಲ್ಲಿ ಒಂದು ಪ್ರಕ್ರಿಯೆ ಅಥವಾ ಫಲಿತಾಂಶದ ಯೋಗ್ಯತೆ ನಿರ್ಣಯ, ಅರ್ಹತೆ ನಿರ್ಧಾರ ಮಾಡುವುದು.

2. ಮೌಲ್ಯಾಂಕನ (ಂssessmeಟಿಣ) - ನಿರ್ದಿಷ್ಟ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿರ್ವಹಣೆಯ ಅಳೆಯುವಿಕೆ, ತೂಗುವಿಕೆ ಅಥವಾ ನಿರ್ಧಾರಣೆ. ಕಲಿಕೆಯ ಸಾಮಥ್ರ್ಯಗಳ ಗಳಿಕೆಯ ಮಟ್ಟದ ಕುರಿತಂತೆ ಮೌಲ್ಯಾಂಕನ ಮಾಡಬಹುದು. ನಿರ್ದಿಷ್ಟ ಕಲಿಕೆಯ ಕುರಿತಂತೆ ಮಾಹಿತಿ ಸಂಗ್ರಹಿಸಿ, ಅರ್ಥೈಸಿ, ವಿಶ್ಲೇಷಿಸಿ ಕಲಿಕೆಯ ಮಟ್ಟವನ್ನು ನಿಗದಿತ ಮಾನದಂಡಗಳಿಗನುಗುಣವಾಗಿ ನಿರ್ಧರಿಸುವುದು.

3. ಮಾಪನ (ಒeಚಿsuಡಿemeಟಿಣ)- ನಿರ್ದಿಷ್ಟ ಕಲಿಕೆಯ ಮಟ್ಟವನ್ನು ಪರಿಮಾಣಾತ್ಮಕವಾಗಿ ಗುರುತಿಸುವುದು. ಉದಾ: ಸಾಮಥ್ರ್ಯ ಗಳಿಕೆಯ ಮಟ್ಟವನ್ನು ಗಮನಿಸಿ ಅಂಕ ಅಥವಾ ಗ್ರೇಡ್‍ಗಳನ್ನು ನೀಡುವುದು.ಮೌಲ್ಯಮಾಪನವು ಮೌಲ್ಯಾಂಕನಕ್ಕಿಂತ ಹೆಚ್ಚು ವ್ಯಾಪಕ. ಮೌಲ್ಯಾಂಕನವು ಮೌಲ್ಯಮಾಪನದ ಒಂದು ಸಾಧನ. ಮಾಪನವು ಮೌಲ್ಯಾಂಕನದ ಸಾಧನ. ಮಾಪನವು ನಿರ್ದಿಷ್ಟ ಕಲಿಕೆಗೆ ಸಂಬಂಧಿಸಿದಂತೆ ವಸ್ತುನಿಷ್ಠವಾದ, ಇತರರೊಂದಿಗೆ ಹೋಲಿಸಬಹುದಾದ ಪರಿಮಾಣಾತ್ಮಕ ಮಾಹಿತಿ ನೀಡುತ್ತದೆ. ಮೌಲ್ಯಾಂಕನವು ನಿರ್ದಿಷ್ಟ ಕಲಿಕೆಗೆ ಸಂಬಂಧಿಸಿದಂತೆ ಮಾಪನ ಅಥವಾ ಇನ್ಯಾವುದೇ ರೀತಿಯಲ್ಲಿ ಮಾಹಿತಿ ಸಂಗ್ರಹಿಸಿ ಅದನ್ನು ವಿಶ್ಲೇಷಿಸಿ ಕಲಿಕೆಯ ಮಟ್ಟವನ್ನು ಅರ್ಥೈಸಿಕೊಳ್ಳುತ್ತದೆ. ಮಾಪನದ ಪರಿಮಾಣಾತ್ಮಕತೆಯಿಂದ ಮೌಲ್ಯಾಂಕನವು ಗುಣಾತ್ಮಕ ನಿರ್ಧಾರಣೆಯತ್ತ ಸಾಗುತ್ತದೆ. ಅಂತಿಮವಾಗಿ ಮೌಲ್ಯಮಾಪನವು ಗುಣಾತ್ಮಕವಾದ ನಿರ್ಧಾರಗಳನ್ನು ಮಾಡುತ್ತದೆ.

4. ಲಿಖಿತ ಪರೀಕ್ಷೆಗಳು - ವಿದ್ಯಾರ್ಥಿಗಳು ಬರೆಯುವ ಮೂಲಕ ತಮ್ಮ ಕಲಿಕೆಯನ್ನು ಅಭಿವ್ಯಕ್ತಿಸುವ ಸಾಧನಗಳು. ನಿರ್ಧಿಷ್ಟ ಕಾಲಘಟ್ಟದಲ್ಲಿ ಮಕ್ಕಳ ಕಲಿಯುವಿಕೆಯ ಮಟ್ಟವನ್ನು ಮಕ್ಕಳದೇ ಆದ ಅಭಿವ್ಯಕ್ತಿಯಲ್ಲಿ ಲಿಖಿತ ಪರೀಕ್ಷೆಗಳ ಮೂಲಕ ದಾಖಲಿಸಿಕೊಳ್ಳಲು ಸಾಧ್ಯ

5. ಮೌಖಿಕ ಪರೀಕ್ಷೆಗಳು - ಲಿಖಿತ ಅಭಿವ್ಯಕ್ತಿಯೊಂದೇ ಕಲಿಕೆಯ ಮಾನದಂಡವಾದರೆ, ಮಗುವಿನ ಅರ್ಥೈಸಿಕೊಳ್ಳುವಿಕೆಯ ಗುಣಾತ್ಮಕ ಆಯಾಮಗಳನ್ನು ಅನಾವರಣಗೊಳಿಸುವುದು ಕಷ್ಟ. ಆದ್ದರಿಂದ ಮಕ್ಕಳ ಮೌಖಿಕ ಅಭಿವ್ಯಕ್ತಿಯನ್ನು ತಿಳಿಯಲು ಸಂದರ್ಶನ, ಚರ್ಚೆ, ಮಾತುಕತೆ, ಪ್ರಶ್ನೋತ್ತರಗಳ ಮೂಲಕ ನಡೆಸುವ ಪರೀಕ್ಷೆ. ಇಲ್ಲಿ ಪರೀಕ್ಷಕರು ಸಾಂದರ್ಭಿಕ ಪ್ರಶ್ನೆಗಳ ಮೂಲಕ ಮಕ್ಕಳ ನೈಜ ಕಲಿಕೆಯನ್ನು ಗುರುತಿಸಲು ಸಾಧ್ಯ.

6. ಹಿಮ್ಮಾಹಿತಿ ನೀಡುವುದು - ಮೌಲ್ಯಮಾಪನದ ಪ್ರಮುಖ ಉದ್ದೇಶ ಇದೇ ಆಗಿದೆ. ಕಲಿಕೆ ಯಾವ ರೀತಿ ಸಾಗುತ್ತಿದೆ, ಯಾವ ಅಂಶಗಳಿಗೆ ಹೆಚ್ಚು ಒತ್ತು ಕೊಡಬೇಕಾಗಿದೆ, ಯಾವ ವಿಷಯಗಳ ಅರ್ಥೈಸಿಕೊಳ್ಳುವಿಕೆ ಇನ್ನೂ ಸ್ಪಷ್ಟವಾಗಬೇಕಾಗಿದೆ, ಎಲ್ಲಿ ತಪ್ಪುಗಳಾಗುತ್ತಿದೆ ಎಂಬಿತ್ಯಾದಿ ವಿಷಯಗಳ ಕುರಿತಂತೆ ಮೌಲ್ಯಮಾಪನ ನಡೆಸಿದ ಬಳಿಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಪ್ರಕ್ರಿಯೆ. ವಿವಿಧ ಪರೀಕ್ಷೆ, ಚಟುವಟಿಕೆಗಳಲ್ಲಿ ಮಕ್ಕಳ ನಿರ್ವಹಣೆಯ ವಿಶ್ಲೇಷಣೆಯೇ ಹಿಮ್ಮಾಹಿತಿ ನೀಡಲು ಮುಖ್ಯ ಆಧಾರ. ನಾವು ನೀಡುವ ಹಿಮ್ಮಾಹಿತಿ ಎಷ್ಟು ವಸ್ತುನಿಷ್ಟ ಹಾಗೂ ವ್ಯಾಪಕವಾಗಿರುತ್ತದೆಯೋ ಅಷ್ಟರಮಟ್ಟಿಗೆ ಅದು ಪರಿಣಾಮಕಾರಿಯಾಗುತ್ತದೆ.

7. ಚಟುವಟಿಕೆ ಆಧಾರಿತ ಮೌಲ್ಯಾಂಕನ - ಮಕ್ಕಳ ಕಲಿಕೆಯನ್ನು ಕಲಿತ ಅಂಶಗಳ ಅಳವಡಿಕೆಯಲ್ಲಿ ಗಮನಿಸುವ ಸಾಧನ. ಚಟುವಟಿಕೆಗಳಲ್ಲಿ ಮಕ್ಕಳು ತಾವು ಕಲಿತ ಅಂಶಗಳನ್ನು ಎಷ್ಟು ಯಶಸ್ವಿಯಾಗಿ ಅಳವಡಿಸಿಕೊಳ್ಳಬಲ್ಲರು ಎನ್ನುವುದನ್ನು ಅವರು ವಿವಿಧ ಚಟುವಟಿಕೆಗಳಲ್ಲಿ ಯಾವ ರೀತಿ ಪಾಲ್ಗೊಳ್ಳುತ್ತಾರೆ ಎಂದು ಗಮನಿಸಿ ಮೌಲ್ಯಾಂಕನ ಮಾಡುವುದು. ಇದಕ್ಕಾಗಿಯೇ ನಿರ್ದಿಷ್ಟ ಚಟುವಟಿಕೆಗಳನ್ನು ವಿನ್ಯಾಸ ಮಾಡಬಹುದು ಅಥವಾ ತರಗತಿಯ ದೈನಂದಿನ ಚಟುವಟಿಕೆಗಳ ಪ್ರಕ್ರಿಯೆಯಲ್ಲಿಯೇ ಮಕ್ಕಳ ಭಾಗವಹಿಸುವಿಕೆಯನ್ನು ಗಮನಿಸಿ ಮೌಲ್ಯಾಂಕನ ಮಾಡಬಹುದು.

8. ನಿರ್ಣಾಯಕಾಂಶಗಳನ್ನು ಆಧರಿಸಿದ ಪರೀಕ್ಷೆಗಳು (ಅಡಿiಣeಡಿioಟಿ ಃಚಿseಜ ಖಿesಣiಟಿg) - ನಿರ್ದಿಷ್ಟಪಡಿಸಿದ ಕಲಿಕಾಂಶಗಳ /ಸಾಮಥ್ರ್ಯಗಳ ಕಲಿಕೆಯ ಮಟ್ಟವನ್ನು ತಿಳಿಯಲು ಆಯಾ ಕಲಿಕಾಂಶ/ಸಾಮಥ್ರ್ಯಗಳನ್ನೇ ಒರೆಗೆ ಹಚ್ಚುವ ಪರೀಕ್ಷೆಗಳು. ಇಲ್ಲಿನ ಮುಖ್ಯ ಉದ್ದೇಶ ಪ್ರತಿ ಮಗುವಿನ ಕಲಿಕೆಯ ಮಟ್ಟವನ್ನು ವೈಯಕ್ತಿಕ ನೆಲೆಯಲ್ಲಿ ತಿಳಿಯುವುದೇ ಆಗಿದೆ. ಇದರಿಂದ ಪ್ರತಿ ಮಗುವಿಗೂ ಗುಣಾತ್ಮಕವಾದ ಹಿಮ್ಮಾಹಿತಿ ನೀಡಲು ಸಾಧ್ಯವಾಗುತ್ತದೆ. ಇಲ್ಲಿ ಅಂಕ ಅಥವಾ ಗ್ರೇಡ್‍ಗಳನ್ನು ನೀಡುವುದೇ ಕೊನೆಯಲ್ಲ ಅಥವಾ ಅದು ಅತ್ಯಂತ ಪ್ರಮುಖ ವಿಷಯವೂ ಅಲ್ಲ. ನಿರೀಕ್ಷಿತ ಮಟ್ಟಕ್ಕೂ ಮಗುವಿನ ಪ್ರಸ್ತುತ ಕಲಿಕೆಯ ಮಟ್ಟಕ್ಕೂ ಇರುವ ವ್ಯತ್ಯಾಸವೇನು ಎಂಬುದನ್ನು ಗುರುತಿಸಿ ಮತ್ತು ಕೊರತೆಗಳನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಈ ಪರೀಕ್ಷೆಗಳು ಅತ್ಯಂತ ಸಹಾಯಕಾರಿ. ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ ಸಂದರ್ಭದಲ್ಲಿ ಈ ರೀತಿಯ ಪರೀಕ್ಷೆಗಳೇ ಮುಖ್ಯವಾಗುತ್ತವೆ.

9. ಗುಂಪಿನೊಡನೆ ಹೋಲಿಸಬಹುದಾದ ಸಾಮಾನ್ಯ ಅಂಶಗಳನ್ನು ಆಧರಿಸಿದ ಪರೀಕ್ಷೆಗಳು (ಓoಡಿm ಃಚಿseಜ ಖಿeಚಿsಣiಟಿg) - ನಿರ್ದಿಷ್ಟ ಗುಣಲಕ್ಷಣಗಳು (ಉದಾ: ತರಗತಿ) ಗುಂಪಿನಲ್ಲಿರುವ ಎಲ್ಲ ವಿದ್ಯಾರ್ಥಿಗಳ ಕಲಿಕೆಯನ್ನು ಪರಿಮಾಣಾತ್ಮಕವಾಗಿ ಮಾಪನ ಮಾಡುವುದು. ಇದರಿಂದ ಒಬ್ಬ ವಿದ್ಯಾರ್ಥಿಯ ಕಲಿಕೆಯ ಮಟ್ಟವನ್ನು ಒಟ್ಟಾರೆ ಗುಂಪಿನ ಕಲಿಕೆಯ ಮಟ್ಟದೊಡನೆ ಅಥವಾ ಇತರ ವಿದ್ಯಾರ್ಥಿಗಳ ಕಲಿಕೆಯ ಮಟ್ಟದೊಡನೆ ಹೋಲಿಸಬಹುದು. ಈ ಪರೀಕ್ಷೆಗಳು ಕಲಿಕೆಯನ್ನು ಕುರಿತಂತೆ ತೀರ್ಪು ನೀಡುತ್ತವೆ. ಪಬ್ಲಿಕ್ ಪರೀಕ್ಷೆಗಳು ಈ ರೀತಿಯ ಪರೀಕ್ಷೆಗಳಿಗೆ ಉತ್ತಮ ಉದಾಹರಣೆ. ಇಲ್ಲಿ ಹಿಮ್ಮಾಹಿತಿ ನೀಡುವುದು ಪ್ರಮುಖ ವಿಷಯವೇನಲ್ಲ. ಒಂದು ದೀರ್ಘ ಕಲಿಕೆಯ ಪ್ರಕ್ರಿಯೆಯ ಕೊನೆಯಲ್ಲಿ ಕಲಿಕೆಯ ಮಟ್ಟದ ಕುರಿತ ದೃಢೀಕರಣ ಪತ್ರ ನೀಡಲು ಇಂತಹ ಪರೀಕ್ಷೆಗಳನ್ನು ನೀಡಲಾಗುತ್ತದೆ.

ತರಗತಿ ಪ್ರಕ್ರಿಯೆಯಲ್ಲಿ ಸಂವಹನ

(ಅommuಟಿiಛಿಚಿಣioಟಿ iಟಿ ಅಟಚಿssಡಿoom Pಡಿoಛಿess)

ಈ ಸಾಹಿತ್ಯ ಓದಿದ ನಂತರ ನಾವು

ಟ ತರಗತಿ ಪ್ರಕ್ರಿಯೆಗಳಲ್ಲಿ ಸಂವಹನದ ಮಹತ್ವ ಅರಿಯುವಿರಿ.

ಟ ವಿವಿಧ ವಿಷಯಗಳ ಕಲಿಕಾ ಪ್ರಕ್ರಿಯೆಗಳಲ್ಲಿ ಯಶಸ್ವಿ ಸಂವಹನ ಸಾಧಿಸುವ ಕಾರ್ಯತಂತ್ರಗಳನ್ನು ತಿಳಿಯುವಿರಿ.

ಪೀಠಿಕೆ

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು -2005 ರಚನಾವಾದಿ (ಅoಟಿsಣಡಿuಛಿಣivisಣ) ನೆಲೆಯನ್ನು ತರಗತಿ ಪ್ರಕ್ರಿಯೆಯ ಮೂಲಸತ್ವವನ್ನಾಗಿ ಪರಿಗಣಿಸಿದೆ. ಹಾಗೂ ಸಮ್ಮಿಳಿತ (Iಟಿಣegಡಿಚಿಣeಜ) ಮಾರ್ಗ ಬಹಳ ಅನುಸರಣೀಯ ಎಂದು ಭಾವಿಸಿದೆ. ಹೀಗಾಗಿ ಸಮ್ಮಿಳಿಕೆಯನ್ನು ಸಾಧಿಸುವ ಬಗ್ಗೆ ಮತ್ತು ವಿಧಾನಗಳ ಕುರಿತು ನಾವೆಲ್ಲರೂ ಅರಿವು ಬೆಳೆಸಿಕೊಳ್ಳಬೇಕಾಗಿದೆ. ಪಠ್ಯ ಮತ್ತು ಸ್ಥಳೀಯತೆ ಹಾಗೂ ವಿವಿಧ ವಿಷಯಾಂಶಗಳನ್ನು ಸಮ್ಮಿತಗೊಳಿಸುವ ವಿಚಾರಗಳ ಚರ್ಚೆ ಪ್ರಸ್ತುತ ಅಗತ್ಯವಾಗಿದೆ. ಈ ಎಲ್ಲಾ ಅಂಶಗಳನ್ನು ಅರ್ಥೈಸಿಕೊಂಡು ಹೊಸ ಪಠ್ಯಪುಸ್ತಕಗಳನ್ನು ಬಳಸಬೇಕು ಹಾಗೂ ಈ ಪುಸ್ತಕಗ¼

ಬಳಕೆಯ ಕುರಿತು ಶಿಕ್ಷಕರು ವಿಧ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಮಾಡಬೇಕು. ಮಗುವಿಗೆ ಶೈಕ್ಷಣಿಕ ಅನುಭವಗಳನ್ನು ನೀಡುವ ಸಂದರ್ಭದಲ್ಲಿ ಸಮ್ಮಿಳಿತ (Iಟಿಣegಡಿಚಿಣeಜ) ಮಾರ್ಗವನ್ನು ಅನುಸರಿಸುವ ಬಗ್ಗೆ ನಾವು ವಿಶೇಷವಾಗಿ ಆಲೋಚಿಸಬೇಕಿದೆ. ಸಮ್ಮಿಳಿತ ಮಾರ್ಗವೆಂದರೆ ಮಗುವು ಕಟ್ಟಿಕೊಳ್ಳಬೇಕಾದ ಜ್ಞಾನದ ಹಿನ್ನೆಲೆಯಲ್ಲಿ ಎಲ್ಲ ವಿಷಯಾಂಶಗಳನ್ನು ನೋಡುವ ಕ್ರಮ. ಇಲ್ಲಿ ವಿಷಯಗಳನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಮಗುವಿಗೆ ದೊರಕುವ ಅನುಭವ ಸಮಗ್ರವಾಗಿರುತ್ತದೆ. ಅದು ಕೇವಲ ಗಣಿತ, ವಿಜ್ಞಾನ, ಸಮಾಜ ವಿಜ್ಞಾನವಲ್ಲ, ಭಾಷೆಯೂ ಅಲ್ಲ, ಇವೆಲ್ಲದರ ಸಮಗ್ರ ರೂಪ. ಒಂದು ಪರಿಕಲ್ಪನೆಯ ವಿವಿಧ ಆಯಾಮಗಳು ಲೆಕ್ಕಾಚಾರ ಮತ್ತು ಅಳತೆ, ವೈಜ್ಞಾನಿಕ ವಿವರಣೆ ಮತ್ತು ಸಾಮಾಜಿಕ ಪರಿಣಾಮಗಳನ್ನು ಹೊಂದಿರಬಹುದು. ಅಲ್ಲದೇ ಈ ಅನುಭವದಿಂದ ಮಗುವಿನ ಭಾಷಾ ಬಳಕೆಯಲ್ಲಿ ಬದಲಾವಣೆಗಳು ಉಂಟಾಗಬಹುದು. ಉದಾ: ವಿಜ್ಞಾನ ವಿಷಯದಲ್ಲಿ ಆಮ್ಲಗಳು ಎಂಬುದು ಅಧ್ಯಾಯವಾದರೆ, ತರಗತಿ ಅನುಭವ ನೀಡುವಾಗ ಆಮ್ಲದ ಅಳತೆ, ಉಪಯೋಗಗಳು, ರಾಸಾಯನಿಕ ಲಕ್ಷಣಗಳು ಮತ್ತು ಸಾಮಾಜಿಕ ದುರಂತಗಳಲ್ಲಿ ಆಮ್ಲದ ಪಾತ್ರ ಕುರಿತಂತೆ ಚರ್ಚೆಗಳು ಒಳಗೊಳ್ಳಬಹುದು. ಈಗ ಮಗುವಿನ ಕಲಿಕೆ ಸಮಗ್ರವಾಗುತ್ತದೆ. ಇಲ್ಲಿ ಒಟ್ಟೂ ಗ್ರಹಿಕೆಗೆ ಮೂಲವಾಗಿ ಒಂದು ಮುಖ್ಯ ಬುನಾದಿ ಇರುತ್ತದೆ. ಈ ಬುನಾದಿಯ ಮೇಲೆ ಕಲಿಯುವವರು ತಮ್ಮ ವಿವಿಧ ವಿಷಯಗಳ ಕಲಿಕೆಯನ್ನು ಕಟ್ಟಿಕೊಳ್ಳುತ್ತಾರೆ.

ಸಂವಹನವು ನಮ್ಮ ಅರ್ಥೈಸಿಕೊಳ್ಳುವಿಕೆಯ ಸಾಧನ. ಉತ್ತಮ ತರಗತಿ ಸಂವಹನದಲ್ಲಿ ಕಲಿಯುವವರ ಅವಶ್ಯಕತೆಗಳನ್ನು ಗಮನಿಸಿ/ಗುರುತಿಸಿ ಅವುಗಳಿಗೆ ತಕ್ಕ ಕಲಿಕಾ ಅನುಭವಗಳನ್ನು ನೀಡುತ್ತೇವೆ. ವಿದ್ಯಾರ್ಥಿಗಳಲ್ಲಿ ಈಗಾಗಲೇ ಇರುವ ಜ್ಞಾನದ ರಚನೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಹೊಸ ಕಲಿಕೆಯನ್ನು ಸಂಬಂಧೀಕರಿಸಿಕೊಳ್ಳಲು ಸಹಾಯ ಮಾಡುವುದು. ತರಗತಿ ಪ್ರಕ್ರಿಯೆಗಳ ಮುಖ್ಯ ಉದ್ದೇಶ. ಈಗಾಗಲೇ ಇರುವ ರಚನೆಗಳಿಗೆ ಹೊಸ ಜ್ಞಾನವನ್ನು ಸಂಬಂಧೀಕರಿಸಿಕೊಳ್ಳಲು ಅನುಕೂಲಿಸುವ ದೃಷ್ಟಿಯಿಂದ ನಾವು ಸಂವಹನ ಪ್ರಕ್ರಿಯೆಗಳನ್ನು ಅಥೈಸಿಕೊಳ್ಳಬೇಕಾಗಿದೆ. ಎಂದರೆ, ಪ್ರತಿ ವಿಷಯಕ್ಕೆ ಅದರದೇ ಆದ ಪರಿಭಾಷೆಯಿದೆ. ವಿವಿಧ ವಿಷಯಗಳನ್ನು ಅವುಗಳದೇ ಆದ ಪರಿಭಾಷೆಯಲ್ಲಿಯೇ ಗ್ರಹಿಸಬೇಕು. ಬಳಿಕ ಅವುಗಳನ್ನು ಇತರ ವಿಷಯಗಳೊಂದಿಗೆ ಸಂಬಂಧೀಕರಿಸಿಕೊಳ್ಳಬೇಕು. ಅಂತಿಮವಾಗಿ ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆ ಒಂದು ಸಮಗ್ರ ಅನುಭವವಾಗಬೇಕು. ವಿವಿಧ ವಿಷಯಗಳ ಪರಿಭಾಷೆಯೇನು, ಅವುಗಳನ್ನು ಇತರ ವಿಷಯಗಳೊಡನೆ ಸಂಬಂಧೀಕರಿಸಿಕೊಳ್ಳುವುದು ಹೇಗೆ ಎಂಬ ನೆಲೆಯಿಂದ ಸಂಹವನದ ಸಾಧ್ಯತೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.

ವಿವಿಧ ವಿಷಯಗಳನ್ನು ಸಮ್ಮಿಳಿಸಿ ಕಲಿಕೆ ಸಾಧಿಸುವುದಕ್ಕೆ ಅತ್ಯಂತ ಮೂಲವಾದುದು ಔಚಿತ್ಯಪೂರ್ಣ ತರಗತಿ ಸಂವಹನ ಎಂಬ ಪೂರ್ವಕಲ್ಪನೆಯೊಂದಿಗೆ ಈ ಅಧ್ಯಾಯವನ್ನು ಗಮನಿಸಬೇಕಾಗಿದೆ.

ಸಂವಹನ ಎಂದರೇನು?

`ಸಂವಹನ' ಎಂದರೆ ತಲುಪಿಸುವುದು. ಸಾಗಿಸುವುದು ಎಂದರ್ಥ. ಸಂವಹನ ಎಂಬುದು ಮೂಲತಃ ಸಂಸ್ಕೃತ ಶಬ್ದವಾಗಿದ್ದು `ಸಂ' ಎಂದರೆ ಚೆನ್ನಾಗಿ ಅಥವಾ ಪರಿಣಾಮಕಾರಿಯಾಗಿ, `ವಹನ' ಎಂದರೆ ಅಗತ್ಯವಿರುವುದನ್ನು ಸಾಗಿಸುವುದು, ತಲುಪಿಸುವುದು, ವಿತರಿಸುವುದು ಎಂಬ ಅರ್ಥವಿದೆ. ಪ್ರಸ್ತುತ ಸಂವಹನ ಎಂಬುದು ಇಂಗ್ಲೀಷಿನ ಅommuಟಿiಛಿಚಿಣioಟಿ ಎಂಬ ಪದದ ಕನ್ನಡ ಸಂವಾದಿ. ಅommuಟಿiಛಿಚಿಣioಟಿ meಚಿಟಿs ಣo give suಛಿಛಿessಜಿuಟಟಥಿ (ಣhoughಣs, ಜಿeeಟiಟಿgs, Iಜeಚಿs oಡಿ iಟಿಜಿoಡಿmಚಿಣioಟಿ) ಣo oಣheಡಿs ಣhಡಿough sಠಿeeಛಿh, ತಿಡಿiಣiಟಿg, boಜiಟಥಿ movemeಟಿಣs oಡಿ sigಟಿಚಿಟs ಚಿಟಿಜ ಣhe ಚಿಛಿಣ oಜಿ ಛಿommuಟಿiಛಿಚಿಣiಟಿg, exಛಿhಚಿಟಿge oಜಿ iಜeಚಿs, ಛಿoಟಿveಥಿಚಿಟಿಛಿe oಜಿ iಟಿಜಿoಡಿmಚಿಣioಟಿ eಣಛಿ. ಎಂದು ಇಂಗ್ಲೀಷ್ ನಿಘಂಟುಗಳಲ್ಲಿ ಅರ್ಥ ವಿವರಣೆ ನೀಡಲಾಗಿದೆ. (ಸಂವಹನೆಯೆಂದರೆ, ಆಲೋಚನೆ, ಭಾವನೆ, ವಿಚಾರ, ಇಲ್ಲವೆ ಮಾಹಿತಿಯನ್ನು ಮಾತು, ಬರೆವಣಿಗೆ ಮತ್ತು ಅಂಗನ್ಯಾಸಗಳಿಂದ, ಸಂಜ್ಞೆಗಳಿಂದ ರವಾನಿಸುವುದು ಮತ್ತು ಅಭಿಪ್ರಾಯ ವಿನಿಮಯ ಇಲ್ಲವೆ ಮಾಹಿತಿಯ ಸಂಗ್ರಹಣೆ -ಇವೇ ಮೊದಲಾಗಿ) ಮುಂದುವರಿದು ಅommuಣe meಚಿಟಿs ಣo exಛಿhಚಿಟಿge ಎಂದೂ ವಿವರಿಸಲಾಗಿದೆ. ಸಂವಹನದ ಬಗ್ಗೆ ಕೆಲವು ವ್ಯಾಖ್ಯೆಗಳನ್ನು ಪರಿಶೀಲಿಸಿದರೆ ಸಂವಹನವೆಂದರೇನೆಂದು ಅರ್ಥಮಾಡಿ ಕೊಳ್ಳಲು ನಮಗೆ ಸುಲಬವಾಗುತ್ತದೆ.

ಟ ಒಂದು ಮಾಹಿತಿಯನ್ನು ಸ್ವೀಕರಿಸುವವರ ವರ್ತನೆಯಲ್ಲಿ ಮಾರ್ಪಾಡು ತರಲು ಸಂವಹನಕಾರನು ಶಾಬ್ದಿಕ ಸಂಕೇತಗಳನ್ನು ಕಳಿಸುವ ಪ್ರಕ್ರಿಯೆಯೇ ಸಂವಹನ. (ಹ್ಯಾವ್ ಲ್ಯಾಂಡ್ 1964)

ಟ ಸಂವಹನವು ಒಂದು ಉದ್ದೇಶಪೂರ್ವಕ ಪ್ರಕ್ರಿಯೆ. ಇದು (1) ಮಾಹಿತಿಯ ಮೂಲಗಳು, (2) ಮಾಹಿತಿ, (3) ಮಾಧ್ಯಮ, (4) ಸ್ವೀಕರಿಸುವವ ಇವರನ್ನು ಒಳಗೊಂಡಿರುತ್ತದೆ (ರಾಬರ್ಟ್‍ಗೋಯರ್ 1967)

ಟ ಪಾರಸ್ಪರಿಕ ಅರಿವಿನೊಂದಿಗೆ ವಿಚಾರ ಭಾವನೆಗಳನ್ನು ಹಂಚಿಕೊಳ್ಳುವಿಕೆಯೇ ಸಂವಹನವಾಗಿದೆ.

(ಅommuಟಿiಛಿಚಿಣioಟಿ meಚಿಟಿs shಚಿಡಿiಟಿg oಜಿ iಜeಚಿs ಚಿಟಿಜ ಜಿeeಟiಟಿgs iಟಿ ಚಿ sಣಚಿಣe oಜಿ muಣuಚಿಟiಣಥಿ)

ಟ ಸಂವಹನವು ಕೊಡು-ಕೊಳ್ಳುವಿಕೆಯನ್ನು ಪೆÇ್ರೀತ್ಸಾಹಿಸುವ ಅಂತರ್ ಕ್ರಿಯೆ.

(ಅommuಟಿiಛಿಚಿಣioಟಿ iಟಿvoಟves iಟಿಣeಡಿಚಿಛಿಣioಟಿ ತಿhiಛಿh eಟಿಛಿouಡಿಚಿges give ಚಿಟಿಜ ಣಚಿಞe)

ಟ ಪರಿಣಾಮಕಾರಿ ಸಂವಹನವು ಪುಷ್ಟೀಕರಣ ಮತ್ತು ಅಂತರ್ ಕ್ರಿಯೆಗಳನ್ನು ಒಳಗೊಂಡ ದ್ವಿಮುಖ ಪ್ರಕ್ರಿಯೆ

(ಇಜಿಜಿeಛಿಣive ಛಿommuಟಿiಛಿಚಿಣioಟಿ is ಚಿ ಣತಿo ತಿಚಿಥಿ ಠಿಡಿoಛಿess iಟಿಛಿಟuಜiಟಿg ಜಿeeಜbಚಿಛಿಞ ಚಿಟಿಜ iಟಿಣeಡಿಚಿಛಿಣioಟಿ.)

ಈ ಮೇಲೆ ನೋಡಿದ ವ್ಯಾಖ್ಯೆಗಳಿಂದ ಪ್ರತಿಯೊಂದು ಸಂವಹನದಲ್ಲಿ ನಾಲ್ಕು ಅಂಶಗಳು ಇರುತ್ತವೆ ಎಂದು ತಿಳಿದುಬರುತ್ತದೆ. ಅವು ಯಾವುವೆಂದರೆ

1) ಸಂವಹನಕಾರ

2) ಸಂವಾಹಕ ಸಂದೇಶ

3) ಮಾಧ್ಯಮ

4) ಸ್ವೀಕೃತಿದಾರ


ಸಂವಹನ ಕೌಶಲ ಎಂದರೇನು?

ವ್ಯಕ್ತಿತ್ವ ವಿಕಸನದ ರಾಜಮಾರ್ಗವು ಸಂವಹನ ಕಲೆಯೇ ಆಗಿದ್ದು ತಮ್ಮ ಅನುಭವ-ಅನಿಸಿಕೆಗಳನ್ನು ಇನ್ನೊಬ್ಬರಿಗೆ ಚೆನ್ನಾಗಿ ತಿಳಿಸಬಲ್ಲವಂಥವರು, ಶಿಕ್ಷಣದಲ್ಲಿಯೂ ನಂತರ ಅವರ ಮುಂದಿನ ಜೀವನದಲ್ಲಿಯೂ ಯಶಸ್ವಿಯಾಗಬಲ್ಲರೆಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಯಶಸ್ವಿಯಾದ ಹಾಗೂ ಪರಿಣಾಮಕಾರಿಯಾದ ಸಂವಹನ ಕಲೆಯು ಯಾವುದೇ ವ್ಯಕ್ತಿಗೆ ಸ್ವಯಂ ಅಭಿವ್ಯಕ್ತಿಯನ್ನು ಸಾಧ್ಯಮಾಡಿಸುತ್ತದೆ. ಇದರಿಂದ ಆತನ/ಆಕೆಯ ಜ್ಞಾನಸಂಪತ್ತು, ಗ್ರಹಣಸಾಮಥ್ರ್ಯ, ಅಭಿವ್ಯಕ್ತಿ ಕೌಶಲ್ಯಗಳು ಉಳಿದವರಿಗೆ ಅರ್ಥವಾಗಿ ಅದು ಆತನಿಗೆ/ಆಕೆಗೆ ಎಲ್ಲರ ಮನ್ನಣೆ ತಂದುಕೊಡುವ ಏಕೈಕ ಮಾರ್ಗ. ಅರ್ಥಪೂರ್ಣ ಸಂವಹನ ನಡೆಸಲು ಅಗತ್ಯವಾದ ಮಾಹಿತಿಯ ಅರಿವು ಹಾಗೂ ತಾಂತ್ರಿಕ ಪರಿಣತಿಯೇ ಸಂವಹನ ಕೌಶಲವಾಗಿದೆ.

ಸಂವಹನದ ಕಾರ್ಯನಿರ್ವಹಣೆ ಹೇಗೆ?

ಸಂವಹನ ಮಾಡುವವರ ಕಡೆಯಿಂದ ನೋಡುವುದಾದರೆ -

ಟ ಇನ್ನೊಬ್ಬರಲ್ಲಿ ಹಂಚಿಕೊಳ್ಳಬಹುದಾದ ಒಂದು ಆಲೋಚನೆ.

ಟ ಆ ಆಲೋಚನೆಯನ್ನು ಒಂದು ಅರ್ಥಪೂರ್ಣ ಸಂದೇಶವಾಗಿ ರೂಪಿಸುವುದು.

ಟ ರೂಪುಗೊಂಡ ಸಂದೇಶದ ಅಭಿವ್ಯಕ್ತಿಗೆ ಸೂಕ್ತವಾದ ಮಾಧ್ಯಮವನ್ನು ಆಯ್ಕೆಮಾಡುವುದು.

ಟ ಆಯ್ಕೆಯಾದ ಮಾಧ್ಯಮದಲ್ಲಿ ಹೇಳಬೇಕಾದುದನ್ನು ಅಡಕಗೊಳಿಸಿ ಸಂಕೇತವನ್ನು ಸಿದ್ಧಪಡಿಸು ವುದು.

ಟ ಹೀಗೆ ಸಿದ್ಧಗೊಂಡ ಸಂಕೇತವನ್ನು ಬೇಕಾದವರಿಗೆ ತಲುಪಿಸುವುದು.

ಸಂಹವನದ ಸಂದೇಶವನ್ನು ಸ್ವೀಕರಿಸುವವರ ಕಡೆಯಿಂದ ನೋಡುವುದಾದರೆ -

ಟ ಸಂಕೇತಗಳನ್ನು ಸ್ವೀಕರಿಸಿ ಅವುಗಳು ಪ್ರತಿನಿಧಿಸುವ ಸಂದೇಶಗಳನ್ನು ಅರ್ಥಮಾಡಿಕೊಳ್ಳುವುದು.

ಟ ಸಂದೇಶ ಕಳಿಸಿದವರನ್ನು ಗುರುತಿಸುವುದು.

ಟ ಸಂದೇಶವನ್ನು ಸಾಮಾನ್ಯ ಜ್ಞಾನದ ಹಿನ್ನೆಲೆಯಲ್ಲಿ ವಿಮರ್ಶಿಸುವುದು.

ಟ ಸಂದೇಶದ ಉಪಯುಕ್ತತೆ, ಉದ್ದೇಶಗಳನ್ನು ಗುರುತಿಸುವುದು.

ಟ ಸಂದೇಶದ ಅಗತ್ಯ, ಸಾಂದರ್ಭಿಕತೆ ಮತ್ತು ಸ್ವರೂಪವನ್ನು ಅರಿಯುಮದು.

ಟ ಸಂದೇಶವನ್ನು ಸಂದರ್ಭಾನುಸಾರ ಸೂಕ್ತವಾಗಿ ವಿಶ್ಲೇಷಣೆ ಮಾಡುವುದು.

ಟ ಸ್ವೀಕೃತ ಮಾಹಿತಿಯನ್ನು ಅಗತ್ಯಕ್ಕನುಗುಣವಾಗಿ ಗ್ರಹಿಸಿ ಅರ್ಥೈಸಿಕೊಂಡು ಅದರ ಪ್ರಯೋಜನ ಪಡೆಯುವುದು.

ಆಲೋಚಿಸಿ

ತರಗತಿ ಸಂಹವನದಲ್ಲಿ ಸಾಮಾನ್ಯವಾಗಿ ಶಿಕ್ಷಕರು, ಕೇವಲ ಮಾಹಿತಿ ನೀಡುವವರು ಮತ್ತು ವಿದ್ಯಾರ್ಥಿಗಳು ಮಾಹಿತಿ ಪಡೆಯುವವರು ಎಂದು ತಿಳಿಯಲಾಗುತ್ತದೆ. ಇದು ಸರಿಯೇ? ವಿದ್ಯಾರ್ಥಿಗಳು ಕೂಡ ಮಾಹಿತಿ ಕಳುಹಿಸುವುದಿಲ್ಲವೇ? ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಡನೆಯೂ ಸಂವಹನ ನಡೆಸುವರೆ? ಹಾಗಿದ್ದರೆ ತರಗತಿ ಸಂವಹನದ ಸ್ವರೂಪವೇನು? ಯಾರ ಅಭಿವ್ಯಕ್ತಿಗೆ ತರಗತಿ ಹೆಚ್ಚಿನ ಅವಕಾಶಗಳನ್ನು ನೀಡಬೇಕು?


ಸಂವಹನದ ಪ್ರಕಾರಗಳು ಯಾವುವು?

ಸಂವಹನದಲ್ಲಿ ಶಬ್ದದ ಬಳಕೆಯನ್ನು ಆಧರಿಸಿ ಹೇಳುವುದಾದರೆ ಅದರಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳಿವೆ.

ಶಾಬ್ದಿಕ ಸಂವಹನ (ಗಿeಡಿbಚಿಟ ಅommuಟಿiಛಿಚಿಣioಟಿ)

ಶಾಬ್ದಿಕ ಸಂವಹನ ಎಂದರೆ ಯಾವುದಾದರೂ ಒಂದು ಭಾಷೆಯ ಶಬ್ದಗಳನ್ನು ಅಂದರೆ ಮಾತು ಮತ್ತು ಬರಹಗಳನ್ನು ಬಳಸಿ ಸಂವಹನ ಸಾಧಿಸುವುದು. ಪ್ರಸ್ತುತ ಬಳಕೆಯಲ್ಲಿರುವ ಸಂವಹನದಲ್ಲಿ ನೂರಕ್ಕೆ ಎಪ್ಪತ್ತು ಭಾಗ ಸಂವಹನಗಳು ಈ ಪ್ರಕಾರದಲ್ಲಿ ನಡೆಯುತ್ತವೆ. ನಾವು ನಮ್ಮ ನಿತ್ಯಜೀವನದಲ್ಲಿ ಬಳಸುವ ಹೇಳುವ-ಕೇಳುವ, ಓದುವ-ಬರೆಯುವ ಕೌಶಲಗಳ ಮೂಲಕ ಈ ರೀತಿಯ ಸಂವಹನವು ನಡೆಯುತ್ತವೆ. ಶಾಬ್ದಿಕ ಸಂವಹನಕ್ಕೆ ಭಾಷೆಯ ಮಿತಿಯಿದೆ. ಸಂವಹನ ಶಬ್ದದ ಮೂಲಕವಾದರೆ ಮಾತು ಬಳಕೆಯಾಗುತ್ತದೆ. ಅದೇ ಅಕ್ಷರದ ಮೂಲಕವಾದರೆ ಬರಹವು ಬಳಕೆಯಾಗುತ್ತದೆ. ಶಾಬ್ದಿಕ ಸಂವಹನದ ಸ್ವರೂಪವು ಕ್ಷಣಿಕವಾಗಿದ್ದು ಕೆಲವು ಕ್ಷಣಗಳಲ್ಲಿ ಅದು ನಾಶವಾಗುತ್ತದೆ. ಅದೇ ಬರಹದ ರೂಪದಲ್ಲಿ ಸಂದೇಶವು ಕಳಿಸಲ್ಪಟ್ಟಿದ್ದರೆ ಮಾತ್ರ ಅದು ದಾಖಲೆಯಾಗÂ ಉಳಿಯುತ್ತದೆ. ಈ ಕಾರಣದಿಂದಲೇ ನಾವು ಮಹತ್ವದ ಸಂದೇಶಗಳನ್ನು ಲಿಖಿತರೂಪದಲ್ಲಿ ಕಳಿಸಬೇಕಾಗುತ್ತದೆ. ಬರೆವಣಿಗೆ ದೂರ ಸಂವಹನ- ನಮ್ಮಿಂದ ದೂರದಲ್ಲಿರುವವರಿಗೆ, ಮುಂದಿನ ತಲೆಮಾರಿಗೆ ಸಂವಹನ ಮಾಡಲು ಬರವಣಿಗೆ ಅನಿವಾರ್ಯ!

ಶಾಬ್ದಿಕ ಸಂವಹನದಲ್ಲಿ ಭಾಷೆಯ ಮಹತ್ವ

ಶಾಬ್ದಿಕ ಸಂವಹನದಲ್ಲಿ ಭಾಷೆಗೆ ಮಹತ್ವದ ಸ್ಥಾನವಿದೆ. ಭಾಷೆಯ ಅರಿವು ನಿತ್ಯ ಜೀವನದ ಎಲ್ಲ ಸಂವಹನಗಳನ್ನು ಬಹುಪಾಲು ನಿಯಂತ್ರಿಸುವುದರಿಂದ ಅದು ನಮ್ಮ ಎಲ್ಲ ತಿಳುವಳಿಕೆಯ ಮೂಲ.

ಭಾಷೆಯ ಆಲಿಸುವಿಕೆ, ಅಭಿವ್ಯಕ್ತಿ ಮುಂತಾದ ಕೌಶಲಗಳು ಕೊರತೆಯಾದಲ್ಲಿ ಅದು ಗಣಿತ, ವಿಜ್ಞಾನ ಮುಂತಾದವುಗಳ ಕಲಿಕೆಯ ಎಲ್ಲ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಗ್ರಹಿಸುವ ಮತ್ತು ಅರ್ಥೈಸಿಕೊಳ್ಳುವಿಕೆಯ ಸಾಮಥ್ರ್ಯದ ಮೇಲೂ ಪರಿಣಾಮಬೀರಿ ಅವರ ಒಟ್ಟಾರೆ ಸಂವಹನಶೀಲತೆಯನ್ನು ಕುಗ್ಗಿಸುತ್ತದೆ. ಈ ಕಾರಣದಿಂದಲೇ ಭಾಷೆಯ ಅರಿವು ಮತ್ತು ಅದರ ಮೂಲ ಪರಿಣಾಮಕಾರಿ ಸಂವಹನ ಸಾಧಿಸಬಲ್ಲ ಕೌಶಲವು ವ್ಯಕ್ತಿಯ ಯಶಸ್ಸಿಗೆ ಕಾರಣವಾಗುತ್ತದೆÉ. ಅದೇ ವ್ಯಕ್ತಿತ್ವದ ಪ್ರಧಾನ ಅಂಶವಾಗುತ್ತದೆ. ಭಾಷೆಯು ಆಕರ್ಷಕವೂ ಕಲಾತ್ಮಕವೂ ಆಗಿದ್ದರೆ ಗುರಿಸಾಧನೆಗೆ ಅದು ಅನುಕೂಲಕಾರಿ.

ಸಂವಹನಕ್ಕಾಗಿ ಭಾಷೆ, ಆದರೆ ಭಾಷೆಗಾಗಿಯೇ ಸಂವಹನವಲ್ಲ.

ಸಂವಹನಕ್ಕಾಗಿಯೇ ಭಾಷೆ ಹುಟ್ಟಿದೆ. ಆದರೆ ಭಾಷೆಗಾಗಿ ಸಂವಹನ ಉಂಟಾದುದಲ್ಲ ಎಂಬುದನ್ನು ನಾವು ಮರೆಯಬಾರದು. ಭಾಷೆ ಹುಟ್ಟುವುದಕ್ಕಿಂತಲೂ ಮೊದಲಿನಿಂದಲೇ ಸಂವಹನವು ಪ್ರಾಣಿ ಪ್ರಪಂಚದಲ್ಲಿ ಪ್ರಾರಂಭವಾಗಿದೆ. ಸಂವಹನವು ಪ್ರತಿಯೊಬ್ಬರಿಗೂ ಅನಿವಾರ್ಯವಾದುದು. ನಿಸರ್ಗ ಸಹಜ ಸಂಹನವು ಭಾಷೆಯಿಲ್ಲದಿದ್ದಾಗಲೂ ಪರ್ಯಾಯ ಮಾರ್ಗಗಳಿಂದ ಒಬ್ಬರ ಅನಿಸಿಕೆಯನ್ನು ಒಬ್ಬರಿಗೆ ತಲುಪಿಸಿ ಪ್ರಾಣಿಗಳನ್ನೂ, ಹಾಗೆಯೇ ಮನುಷ್ಯರನ್ನೂ ಸಂಘ ಜೀವನದತ್ತ ಕೊಂಡೊಯ್ದಿದೆ.

ಅಶಾಬ್ದಿಕ ಸಂವಹನ (ಓoಟಿveಡಿbಚಿಟ ಅommuಟಿiಛಿಚಿಣioಟಿ)

ಅಶಾಬ್ದಿಕ ಸಂವಹನ ಎಂದರೆ ಸಂಜ್ಞೆ, ಮೌಖಿಕ ಅಭಿವ್ಯಕ್ತಿ, ಅಂಗಾಂಗ ಚಲನೆ, ದೈಹಿಕ ಚಲನ-ವಲನ, ವಸ್ತು ಹಾಗೂ ಸಂಕೇತಗಳಿಂದ ಸಂವಹನ ಮಾಡುವುದು. ಈ ರೀತಿಯ ಸಂವಹನದಲ್ಲಿ ಕಣ್ಣನೋಟ, ಸ್ಪರ್ಶ, ದೈಹಿಕ ಚಲನೆ, ಅಂಗಿಕ ಅಭಿನಯಗಳು ಹಾಗೂ ಧ್ವನಿಯ ಏರಿಳಿತಗಳು ಪ್ರಧಾನ ಪಾತ್ರ ವಹಿಸುತ್ತವೆ. ಈ ರೀತಿಯ ಸಂವಹನಕ್ಕೆ ದೇಶ ಕಾಲಗಳ ಮಿತಿಯಿಲ್ಲ. ಇಂಥ ಸಂದೇಶಗಳು ಸಾರ್ವತ್ರಿಕವಾಗಿದ್ದು ಇವುಗಳಿಗೆ ಭಾಷೆಯ ಗಡಿಗಳನ್ನು ದಾಟಿ ಎಲ್ಲರನ್ನೂ ತಲುಪುವಂತಹ ಸರಳತೆಯನ್ನೂ, ಏಕರೂಪತೆಗಳನ್ನೂ ಪಡೆದಿರುತ್ತವೆ. ಉದಾಹರಣೆಗೆ ಮುಷ್ಟಿ ಹಿಡಿದು ಕೈಯ ಹೆಬ್ಬೆರಳನ್ನು ಮೇಲೆ ಮಾಡಿ ನೀರು ಬೇಕೆಂದು ಸನ್ನೆ ಮಾಡಿದರೆ ಪ್ರಪಂಚದ ಯಾವುದೇ ಭಾಗದವರಿಗೂ ಅದು ಸುಲಭವಾಗಿ ಅರ್ಥವಾಗುತ್ತದೆ.

ಶಾಬ್ದಿಕ ಮತ್ತು ಅಶಾಬ್ದಿಕ ಸಂವಹನಗಳ ಪರಸ್ಪರ ಪೂರಕತೆ

ಶಾಬ್ದಿಕ ಸಂಕೇತಗಳು ಆಲಿಸುವಿಕೆಯ ಮೂಲಕವಾಗಿ ಮತ್ತು ಅಶಾಬ್ದಿಕ ಸಂದೇಶಗಳು ಉಳಿದ ನೋಡುವಿಕೆ, ಮುಟ್ಟುವಿಕೆ, ಬರೆಯುವಿಕೆ ಇತ್ಯಾದಿಗಳ ಮೂಲಕವಾಗಿ ನಮ್ಮಲ್ಲಿ ಹೊಸ ವಿಷಯಗಳ ಕಲಿಕೆಯನ್ನುಂಟುಮಾಡುತ್ತವೆ. ಇಂತಹ ಅಶಾಬ್ದಿಕ ಸಂವಹನ ವಿಧಾನಗಳು ಶಾಬ್ದಿಕ ಸಂವಹನಕ್ಕೆ ಪೂರಕವಾಗಿ ಬಳಸಿದಲ್ಲಿ ಮಾತ್ರ ಮಕ್ಕಳು ತಮ್ಮ ಜ್ಞಾನೇಂದ್ರಿಯಗಳಲ್ಲಿ ಹೆಚ್ಚಿನ ಪ್ರಮಾಣದ ಅವಧಾನವನ್ನು ಬಳಸಿ ಕಲಿಯಲು ಸಾಧ್ಯವಾಗುತ್ತದೆ. ಇದನ್ನು ಅರಿತು ತರಗತಿ ಸಂವಹನ ಸಂಘಟಿಸಿಕೊಂಡಲ್ಲಿ ಕಲಿಕೆಯು ಸುಲಭವೂ ಅರ್ಥಪೂರ್ಣವೂ ಆಗುತ್ತದೆಯಲ್ಲದೆ ಮುಂದೆ ಅದನ್ನು ಜ್ಞಾಪಿಸಿಕೊಳ್ಳಲು ಮಕ್ಕಳಿಗೆ ಸುಲಭವಾಗುತ್ತದೆ.


ಸಂಹವನದ ವಿಧಗಳು ಯಾವುವು?

ಸಂವಹನದಲ್ಲಿ ಅದರ ಬಳಕೆ ಮತ್ತು ಉಪಯುಕ್ತತೆಯ ದೃಷ್ಟಿಯ ಆಧಾರದ ಮೇಲೆ ಅದನ್ನು ಎರಡು ವಿಧವಾಗಿ ಮಾಡಬಹುದು.

1. ಏಕಮುಖ ಸಂವಹನ

2. ದ್ವಿಮುಖ ಸಂವಹ£ À

1. ಏಕಮುಖ ಸಂವಹನದ ಮಿತಿಗಳು ಅದರ ಸಮಯೋಚಿತ ಬಳಕೆ

ಏಕಮುಖ ಸಂವಹನವು ಪ್ರಾಥಮಿಕವಾದದ್ದು. ಇದು ಪೂರ್ಣ ಪ್ರಮಾಣದ ಸಂವಹನವಾಗುವುದಿಲ್ಲ. ಏಕಮುಖ ಸಂವಹನದಲ್ಲಿ ಸಂವಹನಕಾರನು ಮಾಹಿತಿಯನ್ನು ಕಳಿಸುತ್ತಾನೆ. ಆದರೆ ಇನ್ನೊಂದು ಕಡೆಯಿಂದ ಅದಕ್ಕೆ ಯಾವುದೇ ಪ್ರತಿಕ್ರಿಯೆಯು ಬರುವುದಿಲ್ಲ. ಇಲ್ಲಿ ಸ್ವೀಕೃತಿದಾರನಿಂದ ಪಡೆದ ಸಂದೇಶಕ್ಕೆ ಯಾವುದೇ ಹಿಮ್ಮಾಹಿತಿಯು ದೊರಕುವುದಿಲ್ಲ. ಇದರಲ್ಲಿ ಒಬ್ಬರಿಗೆ ಮಾತ್ರ ಪ್ರಯೋಜನವಾಗುತ್ತದೆ. ಇದರಲ್ಲಿ ಸಂವಹನದ ವಿಕಾಸವು ಸಾಧ್ಯವಿಲ್ಲ. ನಮ್ಮ ಸಂವಹನದ ಗುಣಮಟ್ಟವನ್ನು ಇದರಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಇಲ್ಲಿ ಸಂವಹನವು ಸಾಧ್ಯವಾಯಿತೆ? ಸಂದೇಶವು ಸ್ವೀಕೃತವಾಯಿತೇ? ಇಲ್ಲವೇ? ಮುಂದೇನು ಮಾಡಬೇಕೆಂಬ ಮಾಹಿತಿಯೂ ಇಲ್ಲಿ ಲಭ್ಯವಾಗುವುದಿಲ್ಲ. ಉದಾಹರಣೆಗೆ ರೇಡಿಯೋ, ದೂರದರ್ಶನ, ಪತ್ರಿಕೆಗಳಲ್ಲಿ ಆ ಕ್ಷಣಕ್ಕೆ ಏಕಮುಖ ಸಂಹವನವು ಮಾತ್ರ ಸಾಧ್ಯವಾಗುತ್ತದೆ. ಇವುಗಳಲ್ಲಿ ನಾವು ಬೇಕೆಂದರೂ ಕೂಡಲೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ಹಾಗಿದ್ದರೂ ಅನೇಕ ಸಂದರ್ಭಗಳಲ್ಲಿ ರೇಡಿಯೋ, ಟಿವಿ ಮುಂತಾದ ಮಾಧ್ಯಮಗಳಿಂದ ಏಕಮುಖ ಸಂವಹನವು ಅನಿವಾರ್ಯವಾದ ಹಾಗೂ ಉಪಯುಕ್ತವಾದ ಸಂವಹನವಾಗಿಯೇ ಉಳಿದುಬಂದಿದೆ. ಸಮಯೋಚಿತವಾಗಿ ಅವುಗಳ ಪ್ರಯೋಜನವನ್ನು ಪಡೆಯುವುದರಲ್ಲಿ ನಮ್ಮ ಜಾಣತನ ಅಡಗಿದೆ. ಯಾವುದೇ ಚರ್ಚೆ, ಜಿಜ್ಞಾಸೆಗಳಿಲ್ಲದೆ ನೇರವಾಗಿ ಇತರರಿಗೆ ನೀಡಬೇಕಾದ ಮಾಹಿತಿಯ ಸಂವಹನ ಏಕಮುಖವಾಗಿರಬಹುದು. ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡುವುದರಿಂದ ಏಕಮುಖ ಸಂವಹನವನ್ನು ಅರ್ಥಪೂರ್ಣವಾಗಿಸಬಹುದು.

ಆಲೋಚಿಸಿ

ತರಗತಿ ಸಂವಹನವು ಏಕಮುಖವೇ ಅಥವಾ ದ್ವಿಮುಖವೇ? ಶಿಕ್ಷಕರು ಮಾತ್ರ ಮಾತನಾಡುವ ಏಕಮುಖ ಸಂವಹನದ ಮಾದರಿಯಲ್ಲಿ ಬೋಧನೆ ಮುಖ್ಯವಾಗುತ್ತದೆಯೇ ಅಥವಾ ಕಲಿಕೆಯೇ? ಬೋಧನೆಯ ಪ್ರಮಾಣದಷ್ಟೇ ಕಲಿಕೆಯಾಗುತ್ತದೆಯೇ? ಕಲಿಕೆಯನ್ನೇ ಕೇಂದ್ರವಾಗಿ ಯೋಚಿಸಿದಾಗ ತರಗತಿ ಸಂವಹನ ಹೇಗಿರಬೇಕು?

2. ದ್ವಿಮುಖ ಸಂವಹನ ಅಥವಾ ವರ್ತುಲ ಸಂವಹನ (ಖಿತಿo ತಿಚಿಥಿ ಠಿಡಿoಛಿess)

ದ್ವಿಮುಖ ಸಂವಹನದಲ್ಲಿ ಸಂವಹನಕಾರರು ತನಗೆ ಅಗತ್ಯವೆನಿಸಿದ ಮಾಹಿತಿಯನ್ನು ಕಳಿಸುತ್ತಾರೆ. ಪಡೆದ ಸಂದೇಶಕ್ಕೆ ಸೂಕ್ತವಾದ ಪ್ರತಿಕ್ರಿಯೆಯು ಸ್ವೀಕೃತಿದಾರರಿಂದ ತಕ್ಷಣದಲ್ಲಿ ಲಭ್ಯವಾಗುತ್ತದೆ. ಆದ್ದರಿಂದ ದ್ವಿಮುಖ ಸಂವಹನವು ಮುಂದುವರಿದ ಹಂತದ್ದು ಮತ್ತು ಹೆಚ್ಚು ಪರಿಣಾಮಕಾರಿಯಾದದ್ದು. ಇದರಲ್ಲಿ ಸಂವಹನ ಪ್ರಕ್ರಿಯೆಯನ್ನು ಪರಿಷ್ಕರಿಸಲು ಸಾಧ್ಯವಿದೆ. ಈ ರೀತಿಯ ಸಂಹವನದಲ್ಲಿ ಉಭಯತ್ರರಿಗೂ ಪ್ರಯೋಜನವಾಗುತ್ತದೆ. ಇದರಲ್ಲಿ ಸಂವಹನದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಬಹುದಾಗಿದೆ. ದ್ವಿಮುಖ ಸಂವಹನದಲ್ಲಿ ಸಂವಹನಕಾರ್ಯವು ಸಾಧ್ಯವಾಯಿತೆ, ಅದರಲ್ಲಿದ್ದ ಗುಣ-ದೋಷಗಳಾವುವು ಎಂಬುದು ಗೊತ್ತಾಗುತ್ತದೆ. ಸಂವಹನದ ಪರಿಷ್ಕರಣೆಗೆ ಮುಂದೇನು ಮಾಡಬೇಕೆಂಬ ಅಗತ್ಯ ಮಾಹಿತಿಯೂ ಇಲ್ಲಿ ಸಿಗುತ್ತದೆ. ಸಂವಹನ ಸ್ವೀಕರಿಸುವವರಿಗೂ ಪ್ರತಿಕ್ರಿಯಿಸಲು ಅವಕಾಶವಿರುವ ದೂರದರ್ಶನದ `ಪ್ರಶ್ನೆಕೇಳಿ' `ನಿಮ್ಮ ಆರೋಗ್ಯ' ಮುಂತಾದವು ಹಾಗೂ ಆಕಾಶವಾಣಿಯ `ಕೇಳಿಕಲಿ' ರೇಡಿಯೋ ಪಾಠಗಳು ಮುಂತಾದ ಕಾರ್ಯಕ್ರಮಗಳು ಇದಕ್ಕೆ ಉದಾಹರಣೆಗಳಾಗಿವೆ.

ನಿಯತ ಕಾಲದ ಅಂತರದಲ್ಲಿಯೂ ಹಿಮ್ಮಾಹಿತಿ ಪಡೆಯುವುದು ಇನ್ನೊಂದು ಬಗೆ. ದಿಢೀರ್ ಪ್ರತಿಕ್ರಿಯೆಗಿಂತ ಹೆಚ್ಚು ಪ್ರಬುದ್ಧ ಹಿಮ್ಮಾಹಿತಿ ಇದು.

ಆಲೋಚಿಸಿ:

ತರಗತಿ ಸಂಹವನ ಹೇಗಿರಬೇಕು ಎಂದು ಈಗ ಇನ್ನೊಮ್ಮೆ ಅವಲೋಕಿಸಿಕೊಳ್ಳಿ. ಕಲಿಕೆ ಅನುಕೂಲಿಸಲು ಯಾವ ರೀತಿಯ ಸಂವಹನ ಮುಖ್ಯ ಎನಿಸುತ್ತದೆ? ಕಲಿಕಾಂಶಗಳು ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ವಾಗುತ್ತಿವೆಯೇ, ಈಗಾಗಲೇ ಇರುವ ಜ್ಞಾನ ರಚನೆಗಳಿಗೆ ಹೊಸ ಕಲಿಕೆಯನ್ನು ಸಂಬಂಧೀಕರಿಸಿಕೊಳ್ಳಲು ಸಾಧ್ಯವಾಗುತ್ತಿದೆಯೇ ಎನ್ನುವುದನ್ನು ಏಕಮುಖ ಸಂವಹನದಲ್ಲಿ ತಿಳಿಯಲು ಸಾಧ್ಯವೇ? ಅಂತಹ ತಿಳುವಳಿಕೆಯೇ ಇಲ್ಲದ ಸಂವಹನ ಪರಿಣಾಮಕಾರಿಯಾಗಲು ಸಾಧ್ಯವೇ?


ಶಾಲಾ ತರಗತಿಯ ಸನ್ನಿವೇಶಗಳಲ್ಲಿ ಅಗತ್ಯ ಸಂವಹನದ ಸ್ವರೂಪ

ಶಾಲಾ ತರಗತಿಯ ಸನ್ನಿವೇಶಗಳಲ್ಲಿ ಬಳಸಲಾಗುವ ಸಂವಹನವು ದ್ವಿಮುಖ ರೀತಿಯದ್ದು. ಇಲ್ಲಿ ಎರಡೂ ಕಡೆಯಿಂದ ಸಂದೇಶಗಳು ಬುರುವುದು ಹೋಗುವುದು ನಡೆಯುತ್ತದೆ. ಇಲ್ಲಿ ಪ್ರಮುಖವಾಗಿ ಹೇಳುವುದು-ಕೇಳಿಸಿಕೊಳ್ಳುವುದು-ಸ್ಪಂದಿಸುವುದು, ತೋರಿಸುವುದು-ನೋಡುವುದು-ಸ್ಪಂದಿಸುವುದು, ಬರೆಯುವುದು-ಓದುವುದು-ಸ್ಪಂದಿಸುವುದು ಹೀಗೆ ಮೂರು ಹಂತದ ಒಂಭತ್ತು ರೀತಿಯ ಚಟುವಟಿಕೆಗಳ ಮುಖಾಂತರ ಸಂವಹನವು ನಡೆಯುತ್ತದೆ. ತರಗತಿಗಳಲ್ಲಿ ಮುಕ್ತ, ಭಯರಹಿತ ಸಂವಹನವು ಸಾಧ್ಯವಾಗಬೇಕಾದರೆ ಅದಕ್ಕೆ ಶಿಕ್ಷಕರ ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವನೆಯ ಅಗತ್ಯವಿದೆ. ಪರಿಣತ ಶಿಕ್ಷಕರು ತಾವು ಯಾವಾಗಲೂ ಕೇವಲ ಮಾಹಿತಿ ಕಳುಹಿಸುವವರಾಗಿರದೆ ಅದನ್ನು ಸ್ವೀಕಾರ ಮಾಡುವವರೂ ಆಗಿರಬೇಕಾಗುತ್ತದೆ.

ತರಗತಿಗಳಲ್ಲಿ ಅರ್ಥಪೂರ್ಣ ದ್ವಿಮುಖ ಸಂವಹನವನ್ನು ಶಾಬ್ದಿಕ ಮತ್ತು ಅಶಾಬ್ಧಿಕ ಮಾಧ್ಯಮಗಳ ಸೂಕ್ತ ಸಂಯೋಜನೆಯೊಂದಿ ಗೆ ಸಾಧಿಸುವುದು ಅಗತ್ಯ. ತರಗತಿಗಳಲ್ಲಿ ಕಲಿಕೆಗೆ ಅಗತ್ಯವಾದ ಸಮಯೋಚಿತವಾದ ಹಾಗೂ ಆರೋಗ್ಯಕರವಾದ ಸಂವಹನ ಮುಕ್ತತೆಯು ಇಲ್ಲದಿದ್ದಲ್ಲಿ ಸಂವಹನವು ಪರಿಣಾಮಕಾರಿಯಾಗಲಾರದು. ಒತ್ತಡ ಮತ್ತು ಭಯದ ಸನ್ನಿವೇಶಗಳಲ್ಲಿ ಸಂವಹನವು ನಡೆಯುವುದಿಲ್ಲ ಮತ್ತು ಕಲಿಕೆಯೂ ಸಮರ್ಪಕವಾಗಿ ನಡೆಯುವುದಿಲ್ಲ.

ಗಮನಿಸಿ : ವಿದ್ಯಾರ್ಥಿಗಳಿಗೆ ಸಂವಹನ ಮಾಡಲು ಪೆÇ್ರೀತ್ಸಾಹಿಸಿದಾಗ, ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡುವುದು, ಅಧ್ಯಾಪಕರ ಮಾರ್ಗದರ್ಶನ/ ಪ್ರಶ್ನಾವಳಿಗಳ ಮೂಲಕ ಪ್ರೇರಣೆ/ ತಿದ್ದುಪಡಿ ನೀಡಿದ ಸಂವಹನ- ಎಂಬ ಎರಡು ಬಗೆ ಉಂಟು.

ಶಿಕ್ಷಕರು ಮಕ್ಕಳೊಂದಿಗೆ ಸಂವಹನ ಸಾಧಿಸಲು ಪ್ರಯತ್ನಿಸಿದಾಗ ಆ ಮಾಹಿತಿಯು ಸೂಕ್ತ ಮಾಧ್ಯಮದಲ್ಲಿ ರೂಪುಗೊಂಡು ಉತ್ತಮವಾಗಿ ಮೂಡಿಬರುವ ಸಂದರ್ಭದಲ್ಲಿ ಅನಗತ್ಯ ಗದ್ದಲವು ಆತನ ಏಕಾಗ್ರತೆಯನ್ನು ಭಂಗಮಾಡಿ ಸಂವಹನವು ವಿಫಲವಾಗಲು ಕಾರಣವಾಗುತ್ತದೆ. ಎಲ್ಲ ಸಂವಹನ ಪ್ರಕ್ರಿಯೆಗೆ ಗದ್ದಲವು ದೊಡ್ಡ ಅಡತಡೆಯಾಗಿದೆ. ಗದ್ದಲ ಎನ್ನುವುದು ಓಔISಇ ಎನ್ನುವ ತಾಂತ್ರಿಕ ಪದದ ಅನುವಾದ. ಇದು ಕೇವಲ ಶಬ್ದದ ಗದ್ದಲ ಮಾತ್ರವಲ್ಲ. ನಮ್ಮ ಹೊರಗಿನ ಗದ್ದಲದಂತೆಯೇ ನಮ್ಮೊಳಗಿನ ಅಶಾಂತಿ ಮತ್ತು ಅತೃಪ್ತಿಯೂ ಸಂವಹನವನ್ನು ಅಡ್ಡಿಪಡಿಸುತ್ತದೆ. ಇದನ್ನೂ ಗದ್ದಲ ಎಂದೇ ಪರಿಗಣಿಸಬಹುದಾಗಿದೆ. ಯಾವುದು ಸಂವಹನಕ್ಕೆ ಅಡೆತಡೆ ಉಂಟುಮಾಡುತ್ತದೋ ಅದೇ ಗದ್ದಲ. ಗದ್ದಲವೆಂದರೆ ಬೇರೆ ವ್ಯಕ್ತಿ ಅಥವಾ ವಸ್ತುಗಳಿಂದಾಗುವ ಅಡೆತಡೆಗಳು ಮಾತ್ರವಲ್ಲ. ಸಂವಹನಕಾರರ ಅಸ್ಪಷ್ಟತೆ, ವಿಚಾರಶೂನ್ಯತೆ, ಅಸಂಬದ್ಧ ಪ್ರಸ್ತಾಪಗಳೂ ಗದ್ದಲದ ಪರಿಧಿಯಲ್ಲಿ ಬರುತ್ತದೆ. ಇಂದಿನ ವಾಸ್ತವಿಕ ಬದುಕಿನಲ್ಲಿ ಎಲ್ಲ ರೀತಿಯು ಗದ್ದಲಗಳ ನಿರ್ಮೂಲನೆಯು ಸಾಧ್ಯವಾಗದಿರಬಹುದು. ಗದ್ದಲದ ಋಣಾತ್ಮಕ ಪರಿಣಾಮವನ್ನು ಹೋಗಲಾಡಿಸಲು ಪ್ರತಿ ಸಂದೇಶದೊಂದಿಗೂ ಹೆಚ್ಚುವರಿ ಮಾಹಿತಿಯನ್ನು ನೀಡುವುದು ಅಪೇಕ್ಷಣೀಯ. ತಾಂತ್ರಿಕವಾಗಿ ಇದನ್ನು ಡಿeಜuಟಿಜಚಿಟಿಛಿಥಿ ಎಂದು ಕರೆಯಲಾಗಿದೆ. ಇದಕ್ಕಾಗಿಯೇ ಯಾವುದೇ ವಿಷಯ ಹೇಳಿದಾಗಲೂ ಅದಕ್ಕೊಂದು ಉದಾಹರಣೆ ಕೊಡುವುದು. ತಾತ್ವಿಕವಾಗಿ ವಿಷಯ ಸ್ಪಷ್ಟ ನಿರೂಪಣೆ ಸಂವಹನಕ್ಕೆ ಸಾಕಾಗಬೇಕು. ಆದರೆ ಗದ್ದಲವು ಸಂವಹನವನ್ನು ಅಪೂರ್ಣಗೊಳಿಸುವ ಸಾಧ್ಯತೆಗಳಿರುತ್ತವೆ. ಅದಕ್ಕೇ ಉದಾಹರಣೆಗಳ ರೂಪದಲ್ಲಿ ಸ್ವಲ್ಪ ಹೆಚ್ಚುವರಿ ಮಾಹಿತಿ ನೀಡಿದಾಗ ಸಂವಹನವು ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಆಲೋಚಿಸಿ

ಉದಾಹರಣೆಗಳನ್ನು ನೀಡಿದಾಗ ಮಾತ್ರ ಗದ್ದಲ ಋಣಾತ್ಮಕ ಪರಿಣಾಮಗಳನ್ನು ಮೀರಲು ಸಾಕಾಗುತ್ತದೆಯೇ? ಸಂಹವನವನ್ನು ಹೆಚ್ಚು ಅರ್ಥಪೂರ್ಣವಾಗಿಸಲು ಇನ್ನೇನು ಮಾಡಬಹುದು? ಹೆಚ್ಚುವರಿ ಮಾಹಿತಿ ನೀಡಲು ಬೇರೆ ಯಾವ ಯಾವ ಮಾಧ್ಯಮಗಳನನು ಬಳಸಿಕೊಳ್ಳಬಹುದು? ಯಾವ ರೀತಿಯ ಸಂವಹನವು ಕಲಿಕೆಯನ್ನು ಹೆಚ್ಚು ಆಪ್ತವನ್ನಾಗಿಯೂ, ಅರ್ಥಪೂರ್ಣವಾಗಿಯೂ, ಅನುಭವಾತ್ಮಕವಾಗಿಯೂ ಕಟ್ಟಿಕೊಡಬಲ್ಲದು?


ಸಂವಹನದಲ್ಲಿ ಕಂಡುಬರುವ ಸಾಮಾನ್ಯ ದೋಷಗಳು

ಟ ಸ್ವೀಕೃತಿದಾರನಿಗೆ ಅವಧಾನವಿಲ್ಲದಿದ್ದಾಗ, ಆಸಕ್ತಿಯಿಲ್ಲದಿದ್ದಾಗ ಸಂವಹನಮಾಡುವುದು.

ಟ ಸಂದೇಶ ಕಳಿಸಲು/ ಸ್ವೀಕರಿಸಲು ಪೂರ್ವಸಿದ್ಧತೆಯಿಲ್ಲದಿರುವುದು.

ಟ ಸೂಕ್ತರೀತಿಯಲ್ಲಿ ಭಾಷೆಯ ಪದಪ್ರಯೋಗ, ಸಂಬೋಧನೆಗಳಿಲ್ಲದಿರುವುದು.

ಟ ಸೂಕ್ತವಲ್ಲದ ಪರಿಸರದಲ್ಲಿ ಸಂವಹನ, ಅನವಶ್ಯ ವ್ಯಂಗ್ಯಾರ್ಥ ಪ್ರಯೋಗ.

ಟ ಸಂವಹನದ ಸಂದೇಶದಲ್ಲಿ ಖಚಿತತೆ, ಆತ್ಮವಿಶ್ವಾಸವಿಲ್ಲದಿರುವುದು.

ಟ ಸಂವಹನಕಾರನಲ್ಲಿ ಪರಿಣತಿಯಿಲ್ಲದಿರುವುದು.

ಟ ಸಂದೇಶಕ್ಕೆ ಅಗತ್ಯ ಮುಕ್ತತೆ ಹಾಗೂ ಹಿಮ್ಮಾಹಿತಿಯಿಲ್ಲದಿರುವುದು.

ಟ ಸಂವಹನಕಾರ ಮತ್ತು ಸ್ವೀಕರಿಸುವವರ ಸಾಂಸ್ಕೃತಿಕ ಸಾಮಾಜಿಕ ಭಿನ್ನತೆಗಳು.

ಟ ನಮ್ಮಲ್ಲಿರಬಹುದಾದ ಅತಿಯಾದ ಆತ್ಮಪ್ರತ್ಯಯ (ego sಣಚಿಣe)

ಟ ನಿಮ್ಮ ನಿಯಂತ್ರಣ ಮೀರಿದ ಗದ್ದಲ. ಸಂವಹನಕ್ಕೆ ಸೂಕ್ತವಲ್ಲದ ಮನೋವೃತ್ತಿ.

ಟ ದೈಹಿಕ ಮತ್ತು ಮಾನಸಿಕ ಅನಾರೋಗ್ಯ, ಅಂಗಾಂಗಗಳಲ್ಲಿ ಪಟುತ್ವವಿಲ್ಲದಿರುವಿಕೆ.

ಟ ಸಂವಹನದಲ್ಲಿ ಅನಗತ್ಯವಾದ ಭಾವನಾ ತೀವ್ರತೆ, ಉದ್ವೇಗ, ಪೂರ್ವಾಗ್ರಹಗಳನ್ನು ಬೆರೆಸುವಿಕೆ.

ನೀವು ನಿಮ್ಮ ಅನುಭವಗಳ ಆಧಾರದಲ್ಲಿ ಈ ಪಟ್ಟಿಯನ್ನು ಇನ್ನಷ್ಟು ವಿಸ್ತರಿಸಬಹುದು. ಈ ದೋಷಗಳನ್ನು ಮೀರುವ ಬಗೆಯನ್ನು ಯೋಚಿಸಿ.

ನಾವು ಉತ್ತಮ ಸಂವಹನವನ್ನು ಹೇಗೆ ಸಾಧಿಸಬಹುದು?

ಟ ಸ್ಪಷ್ಟವಾದ, ಅರ್ಥಪೂರ್ಣವಾದ, ಆಕರ್ಷಕವಾಗಿ ಸಂದಿಗ್ಧವಾಗಿರದಂತಹ ಮಾತುಗಳ ಬಳಕೆಯಿಂದ.

ಟ ಭಾಷೆಯ ಕಲಾತ್ಮಕ ಬಳಕೆಯಿಂದ

ಟ ಸಂದೇಶದಲ್ಲಿ ಸ್ವೀಕರಿಸುವವನಿಗೆ ಉಪಯುಕ್ತವಾದ ಸಂದೇಶ, ಪ್ರಸ್ತುತತೆಯಿರುವ ಉದಾಹರಣೆಗಳಿರುವುದರಿಂದ.

ಟ ಬರಹದ ರೂಪದಲ್ಲಿದ್ದಲ್ಲಿ ಬರವಣಿಗೆ ಅಂದವಾಗಿ, ಸ್ಪಷ್ಟವಾಗಿ, ಲೇಖನ ಚಿಹ್ನೆಗಳಿಂದ ಕೂಡಿರುವುದರಿಂದ.

ಟ ಪದಪ್ರಯೋಗಗಳು ಸಭ್ಯತೆಯನ್ನು ದಾಟದಂತೆ ಮುಜುಗರವಾಗದಂತೆ ಔಚಿತ್ಯಪೂರ್ಣ ವಾಗಿರುವುದರಿಂದ

ಟ ಸಂವಹನದಲ್ಲಿ ಬಳಸುವ ಶಬ್ದಗಳು ದ್ವಂದ್ವಾರ್ಥದಿಂದ ಅಥವಾ ವ್ಯಂಗ್ಯಾರ್ಥದಿಂದ ಕೂಡಿಲ್ಲದಿರುವುದರಿಂದ ಟ ಸಂಬೋಧನೆಗಳು ಸ್ವೀಕರಿಸುವವರ ವಯಸ್ಸು, ಅನುಭವ, ಅಗತ್ಯತೆ ವಿದ್ಯಾರ್ಹತೆ, ಹುದ್ದೆ, ಸ್ಥಾನಮಾನಗಳಿಗೆ ತಕ್ಕುದಾಗಿರುವುದರಿಂದ

ಟ ಸಂವಹನದಲ್ಲಿ ಹಿಮ್ಮಾಹಿತಿಗೆ ತುಂಬಾ ಮಹತ್ವವಿದೆ. ಪರಸ್ಪರರಿಗೆ ಅಗತ್ಯ ಹಿಮ್ಮಾಹಿತಿಯನ್ನು ನೀಡುವುದರಿಂದ.

ಟ ಸಂವಹನವು ಕೇವಲ ಒಂದು ಸಂದೇಶವಾಗದೇ ಸ್ವೀಕರಿಸುವವವರ ಸ್ಪಂದಿಸುವಿಕೆಗೂ ಮಹತ್ವ ನೀಡುವುದರಿಂದ

ಟ ಸಂವಹನವು ಕೇವಲ ಬುದ್ಧಿಯನ್ನು ಬೆಳೆಸುವ ಮಾಹಿತಿಯಾಗದೇ ಹೃದಯವಂತರನ್ನಾಗಿಸು ವಂತಿರುವುದರಿಂದ.

ಟ ಸಂದೇಶ ಕಳಿಸುವವರು ಅದನ್ನು ಸ್ವೀಕರಿಸುವವರನ್ನು ಗೌರವ ಹಾಗೂ ಸಮಾನತೆಯಿಂದ ಕಾಣುವುದರಿಂದ.

ಟ ಅಶಾಬ್ದಿಕ ಅಭಿವ್ಯಕ್ತಿಗಳಾದ ಕಣ್ಣನೋಟ, ತುಟಿಯ ಮಂದಹಾಸ, ಮುಖದ ಪ್ರಸನ್ನತೆ, ಅಂಗಾಂಗಗಳ ಉಲ್ಲಾಸಯುಕ್ತ ಚಲನೆಗಳು, ಸುಲಲಿತ ಚಲನವಲನಗಳು ಮಾತು-ಬರಹ, ಹಾಡು-ಪಾಡು ಮುಂತಾದವುಗಳನ್ನು ಪೂರಕವಾಗಿ ಬಳಸುವುದರಿಂದ.

ಟ ತರಗತಿಯ ಇತರೇ ಸನ್ನಿವೇಶಗಳಲ್ಲಿ ಸಂಹವನವು ಯಾವಾಗಲೂ ಅಮೂರ್ತವಾಗಿರದೇ ಕಣ್ಣಿಗೆ ಕಾಣುವ, ಮುಟ್ಟಲು ಸಿಗುವ, ಬಿಡಿಸಿ ಬೇಕಾದ್ದನ್ನು ಹುಡುಕಿಕೊಳ್ಳುವಂತಹ ಅಗತ್ಯ ಪೂರಕ ದೃಕ್-ಶ್ರವ್ಯ ಸಾಮಗ್ರಿಗಳಿಂದ ಕೂಡಿರುವುದರಿಂದ.


ಉತ್ತಮ ಸಂವಹನದ ನಿರ್ಣಾಯಕ ಅಂಶಗಳು

ನೀವು ನಮ್ಮ ವೃತ್ತಿಜೀವನದಲ್ಲಿ ಹಲವಾರು ವ್ಯಕ್ತಿಗಳ ಜೊತೆ ಸಂವಹಿಸಿರುತ್ತೀರಿ. ಅವರಲ್ಲಿ ಕೆಲವರು ಉತ್ತಮ ಸಂವಹನಕಾರರು ಎಂದು ತೀರ್ಮಾನಿಸಿರುತ್ತೀರಿ. ಅಂತಹ ಕೆಲವು ಲಕ್ಷಣಗಳಾವುವು ಯೋಚಿಸಿ.

ಟ ಮುಖಭಾವ, ಹಾವಭಾವ, ಅಂಗಿಕ ಚಲನೆ, ಶರೀರಭಾಷೆ, ನಿಲುವುಗಳು, ವಿವಿಧ ಚರ್ಯೆ, ದೃಷ್ಟಿ ಇತ್ಯಾದಿ.

ಟ ಧ್ವನಿ, ಧ್ವನಿಯ ಏರಿಳಿತ, ಧ್ವನಿಯಲ್ಲಿರುವ ವ್ಯಂಗ್ಯ, ಅರ್ಥಗಳು, ಉಚ್ಛಾರಣೆಯ ಸರಳತೆ, ಕೊಂಕು ಇತ್ಯಾದಿ.

ಟ ಸಂವಹನ ಮಾಡುವವರು/ಸ್ವೀಕರಿಸುವವರು ನಂಬಿರುವ ವಿಚಾರಗಳು, ತತ್ತ್ವಗಳು, ಸಿದ್ಧಾಂತಗಳು.

ಟ ಅವರಿರುವ ದೂರ, ಬಳಸುವ ಉಪಕರಣ, ಮಾಧ್ಯಮ, ದೇಶ ಅಲ್ಲಿಯ ಭಾಷೆ, ಸಂದರ್ಭ, ಸಮಯ ಇತ್ಯಾದಿ.

ಟ ಸ್ವೀಕರಿಸುವವರ ಲಿಂಗ, ವಯಸ್ಸು, ಅಂದಿನ ಮಾನಸಿಕ ಸ್ಥಿತಿ ಇತ್ಯಾದಿ.

ಟ ಸಂವಹನದ ಗುರಿ, ಆ ಕ್ಷಣದ ಸಮಸ್ಯೆಗಳು, ಉದ್ದೇಶಗಳು, ಉದ್ಯೋಗ, ವೃತ್ತಿಪರತೆ, ಅನುಭವಗಳು.

ಟ ಸ್ವೀಕರಿಸುವವರ/ಪ್ರೇಕ್ಷಕರ ಭಾಷೆ, ಪದಸಂಪತ್ತು, ಉಚ್ಛಾರಣಾ ಶೈಲಿ, ಸಂಸ್ಕೃತಿ, ಕೌಟುಂಬಿಕ ಹಿನ್ನೆಲೆ.

ಟ ಸೌಜನ್ಯ ಪೂರ್ವಕ ಸಂಬೋಧನೆಗಳು, ಅಭಾರ ಮನ್ನಣೆ ಸಹಕಾರ ನೀಡಿದವರ ನೆನಪು ಇತ್ಯಾದಿ.

ಟ ಸಂವಹನಕ್ಕೆ ಅಗತ್ಯವಾದ ಸಾಹಿತ್ಯ, ಸಲಕರಣೆಗಳು, ಸಹಾಯಕರು, ವಿದ್ಯುತ್ ಸಂಪರ್ಕ ಇತ್ಯಾದಿ,

ಟ ಪರಸ್ಪರ ಸಹಕಾರ.

ಸಂವಹನದಲ್ಲಿ ನಿಲುಗಡೆ (Pಚಿuse)

ಸಂವಹನದಲ್ಲಿ ನಿಲುಗಡೆಯ ಪಾತ್ರ ಬಹಳ ಮುಖ್ಯವಾದುದು. ಕೇಳುಗರಿಗೆ ಆಲಿಸಿದ್ದನ್ನು ಅರ್ಥೈಸಲು ಅಗತ್ಯವಾದಷ್ಟು ಕಾಲಾವಕಾಶ ನೀಡುವುದೇ ನಿಲುಗಡೆ. ಕೆಲವೊಮ್ಮೆ ನಿಲುಗಡೆ ನೀಡುವುದರಿಂದ ಅರ್ಥ ಸ್ಪಷ್ಟತೆ ಹೆಚ್ಚುತ್ತದೆ. ಅನಗತ್ಯ ನಿಲುಗಡೆ ಸಂವಹನವನ್ನು ನೀರಸಗೊಳಿಸುತ್ತದೆ. ಅನಗತ್ಯ ನಿಲುಗಡೆ ಕೆಲವೊಮ್ಮೆ ಗದ್ದಲವಾಗಿಯೂ ವರ್ತಿಸುತ್ತದೆ.

ವಿವಿಧ ವಿಷಯಗಳು ಮತ್ತು ಸಂವಹನ ವೈವಿಧ್ಯತೆ

ವಿಷಯಗಳಲ್ಲಿ ಸಂವಹನ ಎಂದರೆ ಪ್ರತಿ ವಿಷಯಕ್ಕೂ ಇರುವ ವಿಶೇಷ ಲಕ್ಷಣಗಳನ್ನು, ಅದರ ಭಾಷಿಕ ಅಗತ್ಯತೆಗಳನ್ನು ಗುರುತಿಸಿ ಬಳಸುವುದು. ಸಂವಹನಕ್ಕೆ ಸಂಬಂಧಿಸಿದಂತೆ ಪ್ರತಿ ವಿಷಯದ ಸ್ವಭಾವವನ್ನು ಅರಿತುಕೊಳ್ಳಬೇಕಾಗುತ್ತದೆ. ಆಯಾ ವಿಷಯದ ಪರಿಕಲ್ಪನೆಗಳನ್ನು ಮಗುವಿಗೆ ಪರಿಚಯಿಸುವಾಗ ಅದಕ್ಕೆ ಅಗತ್ಯವಾದ ಪದ ಸೃಷ್ಟಿಯಾಗಬೇಕು. ಈ ಪ್ರಕ್ರಿಯೆಯಲ್ಲಿ ಮಗುವು ತೊಡಗಿಕೊಳ್ಳಲು ಅನುವಾಗುವಂತೆ ನಮ್ಮ ಭಾಷೆಯ ಬಳಕೆಯಾಗಬೇಕು. ಒಂದು ಪದ ಕೆಲವೊಮ್ಮೆ ಸ್ಪಷ್ಟತೆಯನ್ನು ಬಯಸಬಹುದು. ಆಯಾ ವಿಷಯದ ಸ್ವರೂಪಕ್ಕೆ ಧಕ್ಕೆಯಾಗದಂತೆ ಸಂವಹನ ನಡೆಯಬೇಕು. ಅಗತ್ಯಬಿದ್ದಾಗ ವೈಜ್ಞಾನಿಕ ವಿವರಣೆಗಳನ್ನೂ ಅರ್ಥಕ್ಕೆ ಕುಂದುಬರದಂತೆ ಎಚ್ಚರವಹಿಸಿ ಆಡುಭಾಷೆಯಲ್ಲಿ ಸಂವಾದಕ್ಕೆ ಬಳಸಬೇಕಾಗಿ ಬರಬಹುದು. ಹೀಗಾದರೆ ಎಷ್ಟು ಚೆನ್ನ ಅಲ್ಲವೆ?

ಈ ರೀತಿಯ ಪ್ರಯತ್ನಗಳು ಬೇರೆ ಬೇರೆ ವಿಷಯಗಳಲ್ಲಿ ಹೇಗೆ ಬರಬಹುದು ಎಂಬುದನ್ನು ಅರ್ಥೈಸಿಕೊಳ್ಳಲು ಕೆಲವೊಂದು ಸಂದರ್ಭಗಳನ್ನು ಗಮನಿಸೋಣ.

ವಿಜ್ಞಾನ ಕಲಿಕಾ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕರು ವಸ್ತುನಿಷ್ಠವಾದ ಅಭಿವ್ಯಕ್ತಿ ಬಳಸುವುದು ಅತ್ಯಂತ ಅಗತ್ಯ. ವಿಜ್ಞಾನದ ಚಟುವಟಿಕೆ ಮಾಡಿಸುವಾಗ ಒಂದಿಷ್ಟು....ತೆಗೆದುಕೊಳ್ಳಿ ಎನ್ನುವುದಕ್ಕೂ 12 ಗ್ರಾಂ.....ತೆಗೆದುಕೊಳ್ಳಿ ಎನ್ನುವುದಕ್ಕೂ ಇರುವ ವ್ಯತ್ಯಾಸ ಗಮನಿಸಿ. ವಿಜ್ಞಾನದ ಭಾಷೆಯೇ

ಹುಡುಕಾಟದ್ದು, ಪ್ರಶ್ನೆಗಳನ್ನು ಕೇಳುತ್ತಾ, ಅಗತ್ಯ ಸಾಕ್ಷಿ, ದಾಖಲೆಗಳ ಆಧಾರದಲ್ಲಿ ಜ್ಞಾನ ಕಟ್ಟಿಕೊಳ್ಳುವಂತಹುದು. ಅನುಭವಕ್ಕೆ ಬಾರದ ಯಾವುದನ್ನೂ ವಿಜ್ಞಾನ ಒಪ್ಪಿಕೊಳ್ಳುವುದಿಲ್ಲ. ಎಂದರೆ ವಿಜ್ಞಾನದಲ್ಲಿ ಕಲಿಕೆ ಅನುಕೂಲಿಸುವಾಗಲೂ ನಮ್ಮ ಭಾಷೆ ಅದಕ್ಕೆ ತಕ್ಕುದಾಗಿರಬೇಕಾಗುತ್ತದೆ.

ಕಲಿಕಾದಾರರ ಘಟನೆಗಳ ವಿವಿಧ ಆಯಾಮಗಳನ್ನು ಪರಿಶೀಲಿಸಿ ತಮ್ಮದೇ ಆದ ನಿರ್ಧಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಲಿಕಾ ಪ್ರಕ್ರಿಯೆಗಳನ್ನು ಸಂಘಟಿಸಬಹುದಾಗಿದೆ.

ತಾರ್ಕಿಕತೆ ಗಣಿತದ ಲಕ್ಷಣ. ತರ್ಕಬದ್ಧವಾದ ಮಾತು ಗಣಿತದಲ್ಲಿ ಅಗತ್ಯ. ಸಮಸ್ಯೆಗಳನ್ನು ಬಿಡಿಸಿ ಬಾಯ್ದೆರೆ ಮಂಡಿಸುವಾಗ ದೃಢತೆಯನ್ನು ವ್ಯಕ್ತಪಡಿಸುವುದು ಮುಖ್ಯ. ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು ಅಗತ್ಯ ಸಂಕೇತಗಳ ಸೃಷ್ಟಿ ಹೇಗಾಗಿದೆ ಎನ್ನುವ ತಿಳುವಳಿಕೆ ಸಹಾಯಕವಾಗಬೇಕು. ಕೆಲವೊಮ್ಮೆ ಮಕ್ಕಳೆ ತರ್ಕದ ಮುಖಾಂತರ ನಿರೂಪಿಸುವ ಅವಕಾಶನೀಡಬೇಕು ಅನ್ಯ ಪದಗಳ ಬಳಕೆ ಕಡಿಮೆಯಾಗಬೇಕು. ಅಂದಾಜು ಮಾಡಬೇಕಾದ ಸಂದರ್ಭಗಳಲ್ಲಿ ಬಳಸುವ ಪದ/ಪರಿಕಲ್ಪನೆಗಳ ಅನುಭವ ಒಂದು ವಿಶಿಷ್ಠ ಸಂವಹನವೇ ಸರಿ. ಉದಾಹರಣೆಗೆ ಸಂಕಲನ ಚಿಹ್ನೆಯು (+) ಹೇಗೆ ಪರಿಕಲ್ಪನೆಯೊಂದಿಗೆ ಸಂಬಂಧ ಹೊಂದಿದೆ ಎಂಬುದು ಚರ್ಚೆಯಾಗಬೇಕು. ಎರಡಕ್ಕೆ ಎರಡು ಕೂಡಿದರೆ ನಾಲ್ಕೇ ಏಕಾಗಬೇಕು, ಐದು ಯಾಕಾಗಬಾರದು ಎಂಬ ಪ್ರಶ್ನೆಗೆ ತಾರ್ಕಿಕವಾಗಿ ಉತ್ತರಿಸಲು ಬರಬೇಕು.

ವಿಷಯಗಳ ಭಾಷಾ ನಿರೀಕ್ಷೆಗಳು ಹೇಗಿದ್ದರೂ ಅವೆಲ್ಲವನ್ನೂ ಸಮನ್ವಯಗೊಳಿಸಿಕೊಳ್ಳಬೇಕಾದ್ದು ಶಿಕ್ಷಕರ ಮುಂದಿರುವ ಸವಾಲು. ಆದ್ದರಿಂದ ಒಟ್ಟಾರೆಯಾಗಿ ತರಗತಿ ಸಂವಹನದಲ್ಲಿ ಪ್ರಶ್ನೆಗಳನ್ನು ಕೇಳುವುದು, ತರ್ಕಮಾಡುವುದು, ಪರಸ್ಪರರನ್ನು ಒಪ್ಪಿಕೊಂಡು ಗೌರವಿಸುವುದು, ವಿವರಣೆಗಳನ್ನು ನೀಡುವುದು, ಹೋಲಿಕೆ ಮತ್ತು ವ್ಯತ್ಯಾಸಗಳನ್ನು ಚರ್ಚಿಸುವುದು, ಯಾರೊಬ್ಬರೂ ತಮ್ಮ ನಿಲುವೇ ಅಂತಿಮ ಎಂಬಂತೆ ವರ್ತಿಸದಿರುವುದು ಮುಖ್ಯವಾಗುತ್ತದೆ. ಸಂವಹನವನ್ನು ವಿಷಯದ ಅಗತ್ಯಕ್ಕನುಗುಣವಾಗಿಯೇ ನಿರ್ಧರಿಸಿ ಕಲಿಕಾ ಅನುಭವಗಳನ್ನು ಒದಗಿಸಿದರೆ ಅದು ಪರಿಣಾಮಕಾರಿ ಯಾಗುತ್ತದೆ. ಅದರಲ್ಲಿ ವೈರುಧ್ಯಗಳು ಉಂಟಾಗಬಾರದು. ಇದು ಮಗು ಜ್ಞಾನ ಕಟ್ಟಿಕೊಳ್ಳಲು ಸಹಕರಿಸುತ್ತದೆ. ಈ ನಿಟ್ಟಿನಲ್ಲಿ ಮಗುವನ್ನು ಸಂವಹನದ ಪ್ರಮುಖ ಭಾಗವಾಗಿ ಪರಿಗಣಿಸಬೇಕು.

ತರಗತಿ ಸಂವಹನದ ಪ್ರಮುಖಾಂಶಗಳು

ಟ ಪೂರ್ವ ನಿರೀಕ್ಷೆ ಇಲ್ಲದೆ, ಖಂಡಿಸದೆ ವಿದ್ಯಾರ್ಥಿಯನ್ನು ಯಥಾವತ್ತಾಗಿ ಮಾನ್ಯಮಾಡುವುದು.

ಟ ವಿದ್ಯಾರ್ಥಿಗೆ ಈಗಾಗಲೇ ಇರುವ ಕುತೂಹಲ ಮತ್ತು ಕಲ್ಪನಾ ಶಕ್ತಿಯನ್ನು ಪೂರ್ಣಪ್ರಮಾಣದಲ್ಲಿ ಬಳಸಬೇಕು, ಬೆಳೆಸಬೇಕು.

ಟ ಸಂವಹನದಲ್ಲಿ ತನ್ನ ಹಿಂದಿನ ಪೀಳಿಗೆಯ ಸಾಂಸ್ಕೃತಿಕ ಜ್ಞಾನ ಪರಂಪರೆಯನ್ನು ಅರಿತು ಹೊಸ ಜ್ಞಾನದ ಸೃಜನೆಗೆ ಅನುವಾಗುವಂತೆ ಸಂವಹಿಸಬೇಕು.

ಟ ಸ್ವೀಕೃತಿ ಕಲೆ, ಸಂವಹನ ಕಲೆಗಳೆರಡನ್ನೂ ವಿದ್ಯಾರ್ಥಿಗಳಲ್ಲಿ ರೂಢಿಸಬೇಕು.

ಟ ವಿದ್ಯಾರ್ಥಿಯು ಸಕ್ರಿಯ ಭಾಗವಹಿಸುವಿಕೆಗೆ ಒತ್ತು ನೀಡುವುದು ಬಹಳ ಮುಖ್ಯ

ಟ ತರಗತಿ ಸಂವಹನವು ಪಠ್ಯಾಧಾರಿತವಾದ ಜ್ಞಾನ ವಿಕಾಸನ ಕ್ರಿಯೆಯಾಗಬೇಕು. ಕೇವಲ ಮಾಹಿತಿ ಸಂಗ್ರಹವಾಗಬಾರದು. ಟ ವಿವಿಧ ಸಾಮಾಜಿಕ ಆಯಾಮಗಳನ್ನು ಸಂಹವನದ ಭಾಗವಾಗಿಸಬೇಕು.

ಟ ವಿಶೇಷ ಕಾಳಜಿಯ ಅಗತ್ಯವುಳ್ಳ ವಿದ್ಯಾರ್ಥಿಗಳ ಸಂವಹನವನ್ನು ಸಾಧ್ಯವಾಗಿಸಬೇಕು.

ಟ ವಿಚಾರಣೆ, ಅನ್ವೇಷಣೆ, ಚರ್ಚೆ, ಅನ್ವಯ ಮತ್ತು ಸ್ವ ಅವಲೋಕನ ಬೆಳೆಸಬೇಕು (ಎನ್.ಸಿ.ಎಫ್-2005) ಇದನ್ನು ಸಾಧಿಸುವಂತೆ ಪಠ್ಯ ಸಂವಹನವಾಗಬೇಕು.

ಟ ಸಂವಹನದ ಬೇರೆ ಬೇರೆ ವಿಧಗಳನ್ನು ಸೂಕ್ತವಾಗಿ ಬಳಸಿ ಗುಂಪು ಮತ್ತು ವೈಯಕ್ತಿಕ ಸಂಹವನದ ಆಧಾರಿತ ಚಟುವಟಿಕೆಗಳನ್ನು ಆಯೋಜಿಸಬೇಕು.

ಟ ಸ್ವತಂತ್ರ ಚಿಂತನೆಗೆ ಪೆÇ್ರೀತ್ಸಾಹ ಮತ್ತು ಅವಕಾಶಗಳನ್ನು ಒದಗಿಸುವ ಸಂವಹನ ಮಾದರಿಯನ್ನು ಬಳಸಬೇಕು.

ಟ ವಿದ್ಯಾರ್ಥಿಗೆ ತಾನು ಪೂರ್ವದಲ್ಲಿ ಹೊಂದಿರುವ ಅನುಭವವನ್ನು ವ್ಯಕ್ತಪಡಿಸಲು ಅವಕಾಶವೀಯಬೇಕು.

ಟ ವಿಮರ್ಶಾಯುಕ್ತ ಶಿಕ್ಷಣ ಕ್ರಮವನ್ನು ಬೆಂಬಲಿಸುವ ಸಂವಹನ ಶಿಕ್ಷಕರ ಗುರಿಯಾಗಬೇಕು.

ಟ ವಿದ್ಯಾರ್ಥಿ ತನ್ನ ಸಂವಹನವನ್ನು ಉತ್ತಮಪಡಿಸಲು ಅಗತ್ಯವಾದ ಟಿಪ್ಪಣಿ ಮಾಡುವ ಮತ್ತು ಗ್ರಹಿಸುವ ಅಭ್ಯಾಸ ನೀಡಬೇಕು.

ಹೀಗೆ ತರಗತಿ ಪ್ರಕ್ರಿಯೆಯಲ್ಲಿ ಸಂವಹನ ಪ್ರಮುಖ ಪಾತ್ರವಹಿಸುತ್ತದೆ. ಶಿಕ್ಷಕರಾಗಿ ನಮ್ಮ ಸಂವಹನವನ್ನು ಸ್ವ-ಅವಲೋಕನ ಮಾಡಿಕೊಳ್ಳುತ್ತಾ ಅದನ್ನು ಉತ್ತಮಪಡಿಸಿಕೊಳ್ಳುವುದು ಅಪೇಕ್ಷಣೀಯ. ಅದಕ್ಕಾಗಿ ಒಂದು ಸ್ವ ಅವಲೋಕನ ದರ್ಜಾಮಾಪಿಯನ್ನು ಈ ಅಧ್ಯಾಯದ ಕೊನೆಯಲ್ಲಿ ನೀಡಿದೆ. ಅದನ್ನು ನೈಜವಾಗಿ ಮತ್ತು ವೃತ್ತಿಪರವಾಗಿ ಬಳಸಿದೆ.


ಸಮ್ಮಿಳಿತ (Iಟಿಣegಡಿಚಿಣeಜ) ಮಾರ್ಗ

ಸಂವಹನದಲ್ಲಿ ಬಳಕೆಯಾಗುವ ವಿಷಯಗಳು ಅನೇಕ ವಿಷಯಗಳಿಗೆ ಸಂಬಂಧಿಸಿರುತ್ತವೆ. ಆದರೆ ವಿಷಯವಾರು ತರಗತಿಗಳಲ್ಲಿ ಕೇವಲ ಒಂದು ಜ್ಞಾನ ಶಿಸ್ತಿನ ಸಂವಹನವೇ ನಡೆಯುತ್ತಿರುತ್ತದೆ. ಆಯಾ ವಿಷಯ ಶಿಕ್ಷಕರು ತಮ್ಮ ವಿಷಯವನ್ನು ಮೇಲರಿಮೆಯಿಂದಲೋ, ಕೀಳರಿಮೆಯಿಂದಲೋ ಸಂವಹಿಸುತ್ತಾರೆ. ಇದು ಆಯಾ ವಿಷಯದ ಪಠ್ಯದಲ್ಲಿದ್ದರೆ ಮಾತ್ರ ಸಂವಹನ ಯೋಗ್ಯತೆ ಪಡೆಯುತ್ತದೆ. ಇದು ಮಗುವಿನ ಕಲಿಕೆಯನ್ನು ವಾಸ್ತವದಿಂದ ದೂರಕ್ಕೆ ಕಂಡೊಯ್ಯುತ್ತದೆ.

ಉದಾಹರಣೆಗೆ ಗಣಿತಕ್ಕೆ ತನ್ನದೇ ಆದ ಭಾಷೆಯಿದೆ. ಆದುದರಿಂದ ಅದಕ್ಕೆ ಬೇರೆ ಭಾಷೆಯ ಅಗತ್ಯವಿಲ್ಲವೆಂಬ ನಂಬಿಕೆ ವಿದ್ಯಾರ್ಥಿಯ ಭಾಷಾಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ. ಗಣಿತದಲ್ಲಿ ಬರುವ ಕೆಲವು ಪರಿಕಲ್ಪನೆಗಳ ಅರ್ಥೈಸುವಿಕೆಗೆ ಸಮರ್ಥ ಭಾಷಾ ಪ್ರಭುತ್ವದ ಅಗತ್ಯವಿದೆ. ಶೀರ್ಷಿಕೆ ಮತ್ತು ದತ್ತ ಪ್ರಮೇಯ ಎಂಬುದನ್ನು ಭಾಷಿಕವಾಗಿ ಅರ್ಥಮಾಡಿಕೊಳ್ಳುವ ಪ್ರಕ್ರಿಯೆ ತರಗತಿಯಲ್ಲಿ ನಡೆಯದಿದ್ದರೆ ಪ್ರಮೇಯ ಸಾಧನೆ ಎಂಬುದು ಯಾಂತ್ರಿಕವಾಗಿಬಿಡುತ್ತದೆ.

ಉದಾಹರಣೆಗೆ ನೀರು ವೈಜ್ಞಾನಿಕ ವಿವರಣೆ ಇರುವಂತೆ ಸಾರ್ವತ್ರಿಕ ದ್ರಾವಕ ಮಾತ್ರವಲ್ಲ ಅದು ಜಗತ್ತಿನ ಜೀವಜಲವೆಂಬ ಅರ್ಥವನ್ನು ಮಗು ಗ್ರಹಿಸಬೇಕು. ಅದರ ಮಹತ್ವ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹೇಗೆ ಬಳಕೆಯಾಗಿದೆ/ಆಗುತ್ತಿದೆ ಎಂಬುದನ್ನು ಸಮಾಜವಿಜ್ಞಾನದಲ್ಲಿ ಕಲಿಯಬೇಕು. ನೀರಿನ ಅಳತೆ ಮತ್ತು ಲೆಕ್ಕಾಚಾರಕ್ಕೆ ಬಳಕೆಯಾಗುವ ಗಣಿತದ ಪರಿಕಲ್ಪನೆಗಳನ್ನು ಮಗು ತನ್ನದಾಗಿಸಿಕೊಳ್ಳಬೇಕು. ಹಾಗಾಗಿ ಮಗು ನೀರು ಎಂಬ ಪರಿಕಲ್ಪನೆಯನ್ನು ಅದರ ಗಣಿತ, ವಿಜ್ಞಾನ, ಸಮಾಜ ವಿಜ್ಞಾನದ ಆಯಾಮಗಳಲ್ಲಿ ಅರ್ಥಮಾಡಿಕೊಂಡು ಅದರ ಕಲಿಕೆ ಕಟ್ಟಿಕೊಳ್ಳುವಂತಿರ ಬೇಕು.

ಈ ರೀತಿಯ ಸಮ್ಮಿಳಿತ ಕೆಲವು ವಿವಿಧ ವಿಷಯಾಂಶಗಳ ಜೊತೆಗೆ ಮಾತ್ರವೇ ಆದರೆ ಸಾಲದು. ಅದು ಎನ್.ಸಿ.ಎಫ್-2005ರ ಆಶಯದಂತೆ ಸಮುದಾಯದ ಜೊತೆಗೂ ಆಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಸ್ತುತ ಲಭ್ಯವಿರುವ ಪಠ್ಯಪುಸ್ತಕಗಳನ್ನು ವಿಮರ್ಶಿಸಬೇಕು. ಎಲ್ಲೆಲ್ಲಿ ಸಮುದಾಯದ ಜ್ಞಾನವನ್ನು ತರಗತಿಯಲ್ಲಿ ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ಬಳಸಲು ಸಾಧ್ಯವಿದೆಯೋ ಅಲ್ಲೆಲ್ಲಾ ಬಳಸಬೇಕು. ಉದಾಹರಣೆಗೆ ವೃತ್ತಿ ಮತ್ತು ಕೃಷಿ ಸಂಬಂಧಿತ ವಿಚಾರಗಳನ್ನು ಮಕ್ಕಳು ಕಲಿಯುವಾಗ ಸ್ಥಳೀಯ ಸಮುದಾಯ ಉತ್ತಮವಾಗಿ ಸ್ಪಂದಿಸಲು ಸಾಧ್ಯವಿದೆ.

ಪ್ರಸ್ತುತ ಲಭ್ಯ ಪಠ್ಯಪುಸ್ತಕಗಳನ್ನು ಮಕ್ಕಳೂ ತಮ್ಮ ದೈನಂದಿನ ಅನುಭವಗಳಿಂದಲೇ ಹೊಸÀ ಒಳನೋಟಗಳನ್ನು ಪಡೆದುಕೊಳ್ಳುವಂತೆ ಬಳಸಬೇಕು. ಯಾವುದೇ ವಿಷಯವಾಗಿರಲಿ ಅದನ್ನು ಸಮಾಜದ ಎಲ್ಲಾ ವಿಭಾಗಗಳಿಗೂ ಅನ್ವಯಿಸಿ ಅದರ ವಿದ್ಯಮಾನಗಳನ್ನು ವಿದ್ಯಾರ್ಥಿಯೇ ನಿರ್ಧರಿಸುವಂತೆ ಪ್ರೇರೇಪಿಸಬೇಕು. ಪಠ್ಯವೆಂಬುದು ಮಗುವಿಗೆ ದೊರೆಯಬೇಕಾದ ಕನಿಷ್ಠತಮ ಅನುಭವದ ಕುರಿತು ತಿಳಿಸುತ್ತದೆ. ಅದನ್ನು ಆಧರಿಸಿ ಸ್ಥಳೀಯವಾಗಿ ಹೇಗೆ ಅದನ್ನು ಪ್ರಸ್ತುತಗೊಳಿ¸



ಬೇಕೆಂಬುದನ್ನು ಶಿಕ್ಷಕರು ನಿರ್ಧರಿಸಬೇಕು. ಹೀಗಾಗಿ ಸಮ್ಮಿಳಿತ ಮಾರ್ಗವನ್ನು ಕಲಿಕಾ ಪ್ರಕ್ರಿಯೆಯಲ್ಲಿ ಬಳಸಿದರೆ ಅದು ಮಕ್ಕಳ ನೈಜ ಕಲಿಕೆಗೆ ಸಹಕಾರಿಯಾಗುತ್ತದೆ.

ಇದನ್ನು ಸಾಧಿಸಲು ತರಗತಿಯಲ್ಲಿ.

ಟ ಜ್ಞಾನವನ್ನು ಸಮಗ್ರವಾಗಿ ಕಟ್ಟಿಕೊಳ್ಳುವ ಅವಕಾಶ ನೀಡಿ.

ಟ ಒಂದೇ ಒಂದು ಸಾರ್ವತ್ರೀಕರಣ ಒದಗಿಸದೇ, ಅವರು ವಿವಿಧ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಪ್ರೇರೇಪಿಸಿ.

ಟ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವಾಗ ವಿವಿಧ ವಿಷಯಗಳನ್ನು ಆಧರಿಸಲು ಅವಕಾಶ ನೀಡಿ.

ಟ ಕಾರ್ಯಕಾರಣ ಸಂಬಂಧವನ್ನು ಗ್ರಹಿಸಲು ಅನುಕೂಲ ಮಾಡಿಕೊಡಿ.

ಟ ತಮ್ಮ ಅರ್ಥೈಸಿಕೊಳ್ಳುವಿಕೆಯನ್ನು ಪ್ರಸ್ತುತಪಡಿಸಲು ಅವಕಾಶ ನೀಡಿ.

ಟ ಕಲಿತ ಪರಿಕಲ್ಪನೆಯನ್ನು ತನ್ನದೇ ಮಾತುಗಳಲ್ಲಿ ವ್ಯಕ್ತಪಡಿಸಲು ಉತ್ತೇಜಿಸಿ.

ಸಮ್ಮಿಳತ ಜ್ಞಾನ ರಚನೆ ಮತ್ತು ಕಲಿಕೆ ಇಂದು ಅಗತ್ಯವಾಗಿದೆ. ಪಠ್ಯದಲ್ಲಿ ಈ ರೀತಿಯ ಅವಕಾಶಗಳನ್ನು ಗುರುತಿಸುವ ಮತ್ತು ಅವುಗಳನ್ನು ವ್ಯವಸ್ಥಿತವಾದ ಕಲಿಕಾ ಕ್ರಮವಾಗಿ ರೂಪಿಸಬೇಕಾದದ್ದು ನಮ್ಮ ಎದುರಿಗಿರುವ ಸವಾಲು. ಇಲ್ಲಿ ಚರ್ಚಿಸಿದ ಹಲವು ಅಂಶಗಳ ಜೊತೆಗೆ ರಚನಾವಾದಿ ಕಲಿಕಾ ಮಾದರಿಗಳನ್ನು ತರಗತಿ ಅನುಭವವಾಗಿ ನೀಡುವ ಮೂಲಕ ಹೊಸ ಪಠ್ಯಪುಸ್ತಕವನ್ನು ಬಳಸುವ ನಾವು ಅಭ್ಯಾಸಮಾಡಿಕೊಳ್ಳಬೇಕಾಗಿದೆ. ಪಠ್ಯಪುಸ್ತಕವನ್ನು ಪೂರ್ಣವಾಗಿ ವಿಶ್ಲೇಷಿಸಿ ಅದರ ಸ್ವರೂಪವನ್ನು ಅರ್ಥೈಸಿ ಸಂವಹನಕ್ಕೆ ಸಿದ್ದಗೊಳಿಸಬೇಕು. ಅನಂತರ ವಿವಿಧ ವಿಷಯಗಳ ಮತ್ತು ಆಂತರಿಕ ವಿಭಾಗಗಳ ಜೊತೆಗೆ ಸಮ್ಮಿಳಿತಗೊಳಿಸಬೇಕು. ಇವೆರಡನ್ನು ಕಟ್ಟಿಕೊಡುವ ಶಿಕ್ಷಣ ಕ್ರಮವನ್ನು ಅಂತಿಮವಾಗಿ ನಾವೇ ನಮ್ಮ ಅನುಭವ ಮತ್ತು ಶಿಕ್ಷಣ ಶಾಸ್ತ್ರದ ಮಾರ್ಗದರ್ಶನದಲ್ಲಿ ನಿರ್ಧರಿಸಬೇಕು.

ಪ್ರಗತಿ ಪ್ರಕ್ರಿಯೆಯಲ್ಲಿ ಸಂವಹನ ಪ್ರಮುಖ ಪಾತ್ರವಹಿಸುತ್ತದೆ ಎಂದು ಇದುವರೆಗು ಚರ್ಚಿಸಿದೆವು. ಶಿಕ್ಷಕರಾಗಿ ಸಂವಹನವನ್ನು ಸ್ವ -ಅವಲೋಕನ ಮಾಡಿಕೊಳ್ಳುತ್ತಾ ಅದನ್ನು ಉತ್ತಮೀಕರಿಸಿಕೊಳ್ಳ ಬೇಕಾದುದು ಅಪೇಕ್ಷಣೀಯ. ಅದಕ್ಕಾಗಿ ಒಂದು ಸ್ವ ಅವಲೋಕನ ದರ್ಜಾಮಾಪನೆಯನ್ನು ನೀಡಿದೆ. ಅದನ್ನು ಬಳಸಿ ನಮ್ಮ ಸಂವಹನ ಕೌಶಲಗಳನ್ನು ಅವಲೋಕಿಸಿಕೊಳ್ಳಿ ತಮ್ಮ ಸಂವಹನ ಕ್ರಮಗಳಲ್ಲಿ ಬದಲಾವಣೆಗಳನ್ನು ತರಬೇಕಾದ ಅವಶ್ಯಕತೆ ಇದೆಯೇ ಎಂದು ಆಲೋಚಿಸಿ.

ಸ್ವ-ಅವಲೋಕನ ಪಟ್ಟಿ

ನಿಮಗೆ ನೀಡಿರುವ ಸಂವಹನ ಕೌಶಲದ ಶ್ರೇಣಿಯನ್ನು ಗುರುತಿಸಬಹುದಾದ ಪಟ್ಟಿಯಲ್ಲಿ ಸಂವಹನ ಸಾಮಥ್ರ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಸಾಮಥ್ರ್ಯಗಳನ್ನು ನೀವೇ ಮೌಲ್ಯಮಾಪನಮಾಡಿಕೊಳ್ಳಿರಿ. ಈ ಕೌಶಲಗಳಲ್ಲಿ ನೀವು ಅತ್ಯುತ್ತಮ ಎಂದಾದರೆ 5 ಅಂಕಗಳನ್ನು ನೀಡಿ, ಏನೂ ಸಾಲದು ಎನಿಸಿದರೆ 1 ಅಂಕ ನೀಡಿ.

ಸ್ವಯಂ ಮೌಲ್ಯಮಾಪನದ ಮಾಡಿಕೊಳ್ಳಲು ಕೀಲಿ ಕೈನ ಹೋಲಿಕೆ

ಪ ಟ್ಟಿ

ಅಂಕಗಳು

ಕ್ರ

ಸಂ.

ವಿಷಯ

1 2 3 4 5

(ಇದರಲ್ಲಿ ನೀಡಿರುವ ಇಪ್ಪತ್ತು ಪ್ರಶ್ನೆಗಳಿಗೆ ತಲಾ ಗರಿಷ್ಠ ಐದರಂತೆ ಒಟ್ಟು ಒಂದು ನೂರು ಅಂಕಗಳಿಗೆ ನೀವು ಪಡೆದ ಅಂಕಗಳು ಇರುತ್ತವೆ. ಎಂಭತ್ತರ ಮೇಲಿದ್ದರೆ ಅತ್ಯುತ್ತಮ, ಅರವತ್ತರ ಮೇಲಿದ್ದರೆ ಉತ್ತಮ, ನಲವತ್ತರ ಮೇಲೆ ಇದ್ದರೆ ಸಮಾಧಾನಕರ ಹಾಗೂ ಮೂವತ್ತರ ಒಳಗಿದ್ದರೆ ಸಾಲದು)

ಆಕರ : 1) ಚೇತನ (ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಶೈಕ್ಷಣಿನಾಯಕತ್ವ ತರಬೇತಿ) ಆರ್ ಎಂ ಎಸ್ ಎ ಬೆಂಗಳೂರು

2) ಶಿಕ್ಷಣದಲ್ಲಿ ಮನೋವಿಜ್ಞಾನ ಲೇಖಕ : ಶ್ರೀ ಎ.ವಿ. ಗೋವಿಂದರಾವ್


1. ವಿದ್ಯಾರ್ಥಿಗಳನ್ನು ಪೂರ್ಣ ಆಲಿಸುತ್ತೇನೆ.

2. ನನಗೆ ತಿಳಿದಿರುವುದನ್ನು ಇನ್ನೊಬ್ಬರಿಗೆ ತಿಳಿಸುವ ಸಾಮಥ್ರ್ಯ

3. ಸಂವಹನದಲ್ಲಿ ಸಂಜ್ಞೆಗಳನ್ನು ಬಳಸುವ ಸಾಮಥ್ರ್ಯ ಇದೆ.

4. ವಿಷಯಕ್ಕೆ ಸೂಕ್ತ ಸಂವಹನ ಮಾಧ್ಯಮದ ಆಯ್ಕೆ ಮಾಡುವ ಸಾಮಥ್ರ್ಯ ಇದೆ.

5. ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಪಾರದರ್ಶಕವಾಗಿ ನೀಡುತ್ತೇನೆ.

6. ಸಂವಹನದಲ್ಲಿ ನೀಡುವ ಸಂದೇಶದ ಉಪಯುಕ್ತತೆ, ಸ್ಪಷ್ಟತೆ/ಖಚಿತತೆ ಇದೆ.

7. ಮೇಲಧಿಕಾರಿಗಳಿಗೆ ವಸ್ತು ನಿಷ್ಟವಾಗಿ ವರದಿ ಮಾಡುವ ಸಾಮಥ್ರ್ಯ ಇದೆ.

8. ಸಂವಹನದಲ್ಲಿ ಸೂಕ್ತ ಧ್ವನಿ, ಮುಖಭಾವ, ಅಂಗಿಕ ಚಲನೆ, ನಿಲುವುಗಳ ಬಳಕೆ ಮಾಡುತ್ತೇನೆ.

9. ಅಂತರ್ಜಾಲ, ಮೊಬೈಲ್, ಕಂಪ್ಯೂಟರ್ ಇತ್ಯಾದಿ ಬಳಸುವ ಸಾಮಥ್ರ್ಯ ಇದೆ.

10. ಪಠ್ಯೇತರ ವಿಚಾರಗಳನ್ನು ಸಂವಹನ ಮಾಡುವ ಸಾಮಥ್ರ್ಯ ಇದೆ.

11. ವಿದ್ಯಾರ್ಥಿಗಳ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ. 12. ಅಗತ್ಯಕ್ಕೆ ತಕ್ಕಂತೆ ದನಿಯಲ್ಲಿ ಏರಿಳಿತಗಳ ಬಳಕೆ ಮಾಡುತ್ತೇನೆ.

13. ನಿರ್ಧಿಷ್ಟ ಸನ್ನಿವೇಶಗಳಲ್ಲಿ ತೀವ್ರತರ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವ ಗುಣಇದೆ.

14. ಮಾತು ಮತ್ತು ಬರಹದಲ್ಲಿ ಅಗತ್ಯವಿದ್ದಲ್ಲಿ ಗಾದೆ, ನುಡಿಗಟ್ಟು, ಸೂಕ್ತಿಗಳನ್ನು ಬಳಸುವ ಸಾಮಥ್ರ್ಯವಿದೆ.

15. ಪ್ರತಿಕೂಲ ಸನ್ನಿವೇಶದಲ್ಲಿಯೂ ಸಂವಹನ ಮುಂದುವರೆಸುವ ಸಾಮಥ್ರ್ಯವಿದೆ.

16. ಗುಂಪು ಅಥವಾ ಸಮೂಹ ಸಂವಹನ ನಿರ್ವಹಣೆ ಮಾಡುವ ಸಾಮಥ್ರ್ಯವಿದೆ.

17. ಅಚ್ಚುಕಟ್ಟಾದ, ತಪ್ಪುಗಳಿಲ್ಲದ ಕೈಬರಹವಿದೆ.

18. ಉಚಿತ ರೀತಿಯ ಸಂಬೋಧನೆಗಳ ಬಳಕೆ ಮಾಡಬಲ್ಲೆ.

19. ಅಗತ್ಯ ಹಿಮ್ಮಾಹಿತಿ ಪಡೆಯುವ ಸಾಮಥ್ರ್ಯವಿದೆ.

20. ಸಂವಹನದಲ್ಲಿ ಹೊಸತನ, ಸೃಜನಶೀಲತೆಯನ್ನು ಬಳಸುವ ಗುಣವಿದೆ.