ಭಾರತದ ಸಾರಿಗೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

[೧]

ಸಂಬಂಧ ಪುಸ್ತಕಗಳು

ಸಂಬಂಧ ಪುಸ್ತಕಗಳು

  1. ಭೂಗೋಳ ಸಂಗಾತಿ
  2. ಪ್ರಾಕ್ರತಿಕ ಭೂಗೋಳ ಶಾಸ್ತ್ರ -ರಂಗನಾಥ್
  3. ಭಾರತದ ಆರ್ಥಿಕ ವ್ಯವಸ್ಥೆ -ಕೃಷ್ಣಯ್ಯ ಗೌಡ
  4. ಭಾರತದ ಆರ್ಥಿಕತೆ - ಕೆ ಡಿ ಬಸವ
  5. ಭಾರತದ ಆರ್ಥಿಕ ಅಭಿವೃಧ್ದಿ, ಲೇಖಕರು - ಆರ್.ಆರ್.ಕೆ ಮುದ್ರಣ ೨೦೧೩.
  6. ಭಾರತದ ಆರ್ಥಿಕ ಅಭಿವೃಧ್ದಿ, ಲೇಖಕರು - ಎಚ್ಚಾರ್ಕೆ.ಮುದ್ರಣ ೨೦೧೨.
  7. ಬಾರತದ ಅರ್ಥ ವ್ಯವಸ್ಥೆಯ ಪರಿಚಯ, ಲೇಖಕರು- ಕೆ.ಡಿ.ಬಸವಾ ಮುದ್ರಣ ೧೯೯೯.

ಬೋಧನೆಯ ರೂಪರೇಶಗಳು

ಸಾರಿಗೆ ಎಂದರೇನು ? ಸಾರಿಗೆಯು ಕಾಲಕಾಲಕ್ಕೆ ಹೇಗೆ ಬದಲಾವಣೆ ಹೊಂದಿದೆ ? ಸಾರಿಗೆಯ ವಿವಿಧ ಪ್ರಕಾರಗಳು ಯಾವವು? ಸಾರಿಗೆ ಯ ಮಹತ್ವವೇನು? ಸಾರಿಗೆರಹಿತ ಬದುಕಿನ ಹಾನಿಗಳಾವವು? ಸಾರಿಗೆಯು ನಾಗರಿಕತೆಯ ಬೆಳವಣಿಗೆಗೆ ಸಹಾಯಕವೆ ? ಸಾರಿಗೆಯಿಂದ ಕೃಷಿ ಕೈಗಾರಿಕೆ ಬೆಳವಣಿಗೆ ಹೊಂದುತ್ತವೆಯೆ?

ಪರಿಕಲ್ಪನೆ #1 ಸಾರಿಗೆಯ ಅರ್ಥ

ವಸ್ತುಗಳು ಮತ್ತು ಸೇವೆಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದಕ್ಕೆ ಸಾರಿಗೆ ಎನ್ನುವರು

ಕಲಿಕೆಯ ಉದ್ದೇಶಗಳು

  1. ಸಾರಿಗೆಯ ಅರ್ಥವನ್ನು ತಿಳಿಯುವುದು .
  2. ಸಾರಿಗೆ ಎಂದರೇನು ಎಂದು ತಿಳಿಯುವುದು .
  3. ಸಾರಿಗೆಯ ಇತಿಹಾಸವನ್ನು ತಿಳಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಶಿಕ್ಷಕರು ತಮ್ಮ ಸ್ಥಳೀಯ ಪರಿಸರಕ್ಕೆ ಸಂಬಂದಿಸಿದಂತೆ   ರೈತರು   ಬೆಳೆಯುವ  ಬೆಳೆಗಳು  , ಅವರು   ಅದನ್ನು   ಮಾರಾಟಕ್ಕೆ    ಕೊಂಡುಹೋಗುವ   ಸ್ಥಳ  ,  ಇವುಗಳ  ಉದಾಹರಣೆಯನ್ನು   ತೆಗೆದುಕೊಂಡು   ಸಾರಿಗೆ   ಎಂಬ  ಪರಿಕಲ್ಪನೆಯನ್ನು   ಮನದಟ್ಟು  ಮಾಡಬಹುದು  .

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಸಾರಿಗೆಯ ಅರ್ಥ_ ಚಟುವಟಿಕೆ
  2. ಚಟುವಟಿಕೆ ಸಂ 2,ಸಾರಿಗೆಯ ಮಹತ್ವ

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ ಒಂದು ರಾಷ್ಟ್ರವನ್ನು ಮನುಷ್ಯನ ದೇಹಕ್ಕೆ ಹೋಲಿಸಿದರೆ, ಕೃಷಿ ಮತ್ತು ಕೈಗಾರಿಕೆಗಳು ಅದರ ಮೌಂಸಖಂಡಗಳೆಂದೂ, ಸಾರಿಗೆಯು ಅದರ ನರಮಂಡಲವೆಂದು ಹೇಳಬಹುದು . ಇಂದು ಮಕ್ಕಳಿಗೆ ಸಾರಿಗೆ ಇಲ್ಲದ ಜೀವನ , ವಾಹನಗಳಿಲ್ಲದ ಜೀವನ ಹೇಗಿರುತ್ತೆ ಎಂದು ಕಲ್ಪಿಸಿಕೊಳ್ಳುವ ,ಇಂದು ಸಾರಿಗೆಯು ಎಷ್ಟು ಮಹತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಬೇಕಾಗಿದೆ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

  1. ತರಗತಿಯಲ್ಲಿ ಗುಂಪು ಚಟುವಟಿಕೆಯನ್ನು ಮಾಡಿಸುವುದು.
  2. ರಸ್ತೆ ಸಾರಿಗೆ ಮತ್ತು ವಾಯುಸಾರಿಗೆ -ಯಾವುದು ಉತ್ತಮ ,ಯಾಕೆ ಉತ್ತಮ ಎಂದು ಚರ್ಚೆಯನ್ನು ಏರ್ಪಡಿಸುವುದು.
  3. ಪ್ರಮುಖ ಬಂದರುಗಳು, ಪ್ರಮುಖ ವಿಮಾ ಣ ನಿಲ್ದಾನಗಳನ್ನು ನಕಾಶೆಯಲ್ಲಿ ಗುರುತಿಸುವುದು.
  4. ಚತುಷ್ಕೋನ ರಸ್ತೆಗಳನ್ನು ವಿದ್ಯಾರ್ಥಿಗಳು ಸ್ವತಹ ನಕಾಶೆಯನ್ನು ಬಿಡಿಸಿ ಅದರಲ್ಲಿ ಗುರುತಿಸುವುದು.
  5. ತಮ್ಮ ಊರಿನಲ್ಲಿ ಬರುವ ಪ್ರಮುಖ ರಾಜ್ಯ ರಸ್ತೆ , ರಾಷ್ಟ್ರೀಯ ರಸ್ತೆಗಳನ್ನು ಪಟ್ಟಿ ಮಾಡುವುದು.
  6. ಮಂಗಳೂರು ಬಂದರು ಭೇಟಿಕೊಟ್ಟು ಬಂದರು ವೀಕ್ಷಣೆ ಮಾಡುವುದು.
  7. ವಿಮಾಣ ನಿಲ್ದಾಣಗಳಿಗೆ ಭೇಟಿಕೊಟ್ಟು ವಿಮಾಣ ವೀಕ್ಷಣೆ ಮಾಡುವುದು.
  8. ಅಟ್ಲಾಸ್ ನೊಡಿಕೊಂಡು ಭಾರತದ ಪ್ರಮುಖ ಬಂದರು ,ಪ್ರಮುಖ ವಿಮಾಣ ನಿಲ್ದಾಣ ಗಳನ್ನು ಪಟ್ಟಿ ಮಾಡುವುದು.
  9. ರಸ್ತೆ ನಿಯಂತ್ರಣಾಧಿಕಾರಿಯನ್ನು ಶಾಲೆಗೆ ಕರೆದುಕೊಂಡು ಬಂದು ರಸ್ತೆ ಸಾರಿಗೆ ಬಗ್ಗೆ ಮಾಹಿತಿಯನ್ನು ಕೊಡುವಂತೆ ವಿನಂತಿಸುವುದು.

ಯೋಜನೆಗಳು

  1. ನಿಮ್ಮ ಪ್ರದೇಶದ ಸಾರಿಗೆ ವ್ಯವಸ್ಥೆಯನ್ನು ಕುರಿತು ಟಿಪ್ಪಣಿ ಬರೆಯಿರಿ.

ಈ ಯೋಜನೆಯನ್ನು ಮಾಡುವ ಮೊದಲು ಏನನ್ನು ಬರೆಯಬೇಕು , ಹೇಗೆ ಬರೆಯಬೇಕು, ಎಷ್ಟು ಬರೆಯಬೇಕು , ಸಂಕ್ಷಿಪ್ತವಾಗಿ ವಿದ್ಯಾರ್ಥಿಗಳಿಗೆ ಸೂಚನೆಯನ್ನು ಕೊಡಿ .ವಿದ್ಯಾರ್ಥಿಗಳು ವಾಸ ಮಾಡುವ ಊರಿನ ಸಾರಿಗೆಯ ಸ್ಥಿತಿಗತಿಗಳನ್ನು ಬರೆಯಲು ತಿಳಿಸುವುದು . ಸಾರಿಗೆಯ ಸಮಸ್ಯೆಗಳನ್ನು ಬರೆಯಲು ಹೇಳುವುದು .ಶಿಕ್ಷಕರು ಸ್ಥಳೀಯ ಪರಿಸ್ಥಿತಿಗೆ ಸರಿಯಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಕೊಡಿ .

  1. ಹಳ್ಳಿ ರಸ್ತೆಗಳ ಸ್ಥಿತಿಗತಿ ಬಗೆಗೆ ನಿರ್ವಹಣೆಯ ಅಗತ್ಯತೆಯನ್ನು ಕುರಿತು ವರದಿ ತಯಾರಿಸಿ .

ಈ ಯೊಜನೆಯನ್ನು ಮಾಡುವ ಮೊದಲು ವಿದ್ಯಾರ್ಥಿಗಲನ್ನು ಗುಂಪುಗಳನ್ನಾಗಿ ಮಾಡಿ ಅವರಿಗೆ ಸೂಚನೆಯನ್ನು ಕೊಡುವುದು. ಹಳ್ಳಿ ರಸ್ತೆಗಳು ಯಾಕೆ ಬೇಕು ಎಂದು ಮೊದಲು ಮನದಟ್ಟು ಮಾಡಿಕೊಟ್ಟು , ಅಲ್ಲಿ ಬರುವ ಸಮಸ್ಯೆಗಳನ್ನು ಗುರುತಿಸಲು ಹೇಳುವುದು . ಅದರ ನಿರ್ವಹಣೆಯನ್ನು ಯಾರು ಮಾಡುತ್ತಿದ್ದಾರೆ ಎಂದು ತಿಳಿಸುವುದು. ಅದರ ನಿರ್ವಹಣೆಗೆ ಜನರ ಸಹಕಾರ ಯಾವರೀತಿ ಇರಬೇಕು ಎಂದು ವರದಿಯಲ್ಲಿ ತಿಳಿಸಲು ಹೇಳುವುದು.

  1. ದೇಶದ ಆರ್ಥಿಕಾಭಿವೃದ್ದಿಯಲ್ಲಿ ಸಾರಿಗೆಯ ಪಾತ್ರವನ್ನು ಕುರಿತು ವಿವರ ಸಂಗ್ರಹಿಸಿ .

ಈ ಯೊಜನೆಯನ್ನು ಮಾಡಲು ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡಿ. ಅಂತರ್ಜಾಲದ ಮೂಲಕ ಮಾಹಿತಿಯನ್ನು ಸಂಗ್ರಹಿಸಲು ತಿಳಿಸುವುದು.

ಸಮುದಾಯ ಆಧಾರಿತ ಯೋಜನೆಗಳು

  1. ನಿಮ್ಮ ಗ್ರಾಮದ ನಕಾಶೆಯನ್ನು ಬಿಡಿಸಿ ಗ್ರಾಮದಲ್ಲಿ ಬರುವ ಎಲ್ಲಾ ಪಕ್ಕಾ ರಸ್ತೆಗಳನ್ನು ಗುರುತಿಸುವುದು. ಪ್ರಮುಖ ಕಟ್ಟಡಗಳನ್ನು , ಸರಕಾರಿ ಕಟ್ಟಡಗಳನ್ನು ಸೇರಿಸುವುದು. ನದಿ , ಕೆರೆಗಳನ್ನು ಗುರುತಿಸುವುದು.

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು -ಪಾಠದ ಪ್ರಾರಂಭದ ವಾಕ್ಯದಲ್ಲಿ ಸಾರಿಗೆಯ ಅರ್ಥ .

  1. "ವಸ್ತುಗಳು , ಸೇವೆಗಳು, ಮಾಹಿತಿ, ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಮತ್ತೋಂದು ಸ್ಥಳಕ್ಕೆ ಸಾಗಿಸುವುದನ್ನು ಸಾರಿಗೆ ಎನ್ನುವರು."

ಈ ವಾಕ್ಯದಲ್ಲಿ ವಸ್ತುಗಳು ಮತ್ತು ಸರಕುಗಳು ಎಂಬ ಶಬ್ದ ಒಂದೇ ಅಲ್ಲವೇ?ಹಾಗೆಯೇ ಮಾಹಿತಿ ಎಂಬ ಶಬ್ದ ಸಂಪರ್ಕ ಎಂಬ ವಿಷಯಕ್ಕೆ ಸಂಬಂದಿಸಿದ್ದು ಅಲ್ಲವೇ? ಈ ವ್ಯಾಖ್ಯೆ ಯನ್ನು ಸರಿಪಡಿಸಬೇಕಾಗಿದೆ.