ಕೊಯರ್ ವಿಜ್ಞಾನ 2014-15

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಜುಲೈ 2014 ಕೊಯರ್ ಕಾರ್ಯಾಗಾರ 1

ಜುಲೈ 22 ರಿಂದ26,2014 ಬೆಂಗಳೂರು ನಗರ ಡಯಟ್, ರಾಜರಾಜೇಶ್ವರಿ ನಗರ, ಬೆಂಗಳೂರು

ಕಾರ್ಯಸೂಚಿ

Agenda of workshop

ಸಂಪನ್ಮೂಲಗಳು ಮತ್ತು ಕೈಪಿಡಿಗಳು

ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ

ಅಭಿಪ್ರಾಯ

ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೊದಲ ದಿನದ ಹಿನ್ನೋಟ

ದಿನಾಂಕ 22-7-2014 ರಿಂದ 26-7-2014 ರ ವರೆಗೆ ಐದು ದಿನಗಳ ಕಾಲ ವಿಜ್ಞಾನ ವಿಷಯದಲ್ಲಿ ಸಮಪನ್ಮೂಲಗಳನ್ನು ಸಿದ್ದಪಡಿಸುವ ಸಲುವಾಗಿ ಕಾರ್ಯಾಗಾರವನ್ನುರಾಜರಾಜೇಶ್ವರಿ ನಗರದಲ್ಲಿರುವ ಅರ್ಬನ್ ಡಯಟ್ನಲ್ಲಿ ಆಯೋಜಿಸಲಾಗಿತ್ತು  .  ಮೊದಲ ದಿನದ ಕಾರ್ಯಾಗಾರದಂದು   
ಡಿಎಸ್ಇಆರಟಿ ಮಾನ್ಯ ಉಪನಿರ್ದೇಶಕರಾದ ಶ್ರೀಮತಿ ಲಲಿತಾ ಮೇಡಮ್ ರವರು ಆಗಮಿಸಿದ್ದರು.ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್ಲ ಸಂಪನ್ಮೂಲ ಶಿಕ್ಷಕರು ವಿಜ್ಞಾನ ವಿಷಯದ ಸಂಪನ್ಮೂಲ ತಯಾರಿಸಿ ಕೋಯರ್ ಗೆ ಅಪ್ ಲೋಡ್ ಮಾಡಲು ಉತ್ಸುಕರಾಗಿದ್ದೀರಿ,
ಈ ಐದು ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯಗಳನ್ನು ನಿಮ್ಮ ಶಾಲೆಗೆ ಹೋದ ನಂತರ ಶಾಲೆಯ ಎಲ್ಲ ಶಿಕ್ಷಕರೊಡನೆ ಹಂಚಿಕೊಳ್ಳಲು ತಿಳಿಸಿದರು.ಡಿಎಸ್ಅರಟಿಯ ಮಾನ್ಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮಂಜುನಾಥರವರು ತರಬೇತಿ ಕಾರ್ಯಾಗಾರದ ಮಹತ್ವವನ್ನು
ತಿಳಿಸಿದರು . ಹಾಗೂ ಶಿಕ್ಷಣವಾರ್ತೆಯಂತಹ ಪತ್ರಿಕೆಗಳಲ್ಲಿ ಉತ್ತಮವಾದ ಲೇಖನಗಳನ್ನು ಬರೆಯಲು ಪ್ರೇರೇಪಿಸಿದರು.ನಂತರ ಐಟಿಫಾರ್ ಚೇಂಜ್ ನ ನಿರ್ದೇಶಕರಾದ ಶ್ರೀ ಗುರುಮೂರ್ತಿರವರು ಕಾರ್ಯಾಗಾರದ ಅಜೆಂಡಾ ವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಐಟಿಫಾರ್ ಚೇಂಜ್ ನ ಸೀನಿಯರ್
ಪ್ರೋಗ್ರಾಂ ಅಸೋಸಿಯೇಟ್ ರಾದ ಶ್ರೀಮತಿ ರಂಜನಿ ಮೇಡಮ್ ರವರು ವಿಜ್ಞಾನ ವಿಷಯದ ಉಪಯುಕ್ತ ಅಂತರ್ಜಾಲ ತಾಣಗಳ ವಿಳಾಸಗಳನ್ನುತಿಳಿಸಿದರು ಹಾಗೂ 10 ನೇ ತರಗತಿ ಸಂಪನ್ಮೂಲ ತಯಾರಿಕೆಯ ಕುರಿತಾದ ಪರಿಕಲ್ಪನೆಗಳು ಮತ್ತು ಯೋಜನೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ
ಪ್ರಸ್ತುತ ಪಡಿಸಿದರು. ಊಟದ ವಿರಾಮದ ನಂತರ ಬೆಳಕು ಮತ್ತು ಶಬ್ದದ ಅಧ್ಯಯಗಳಿಗಾಗಿ ಅನುಕ್ರಮವಾಗಿ ಅನೇಕ ಸಂಪನ್ಮೂಲಗಳನ್ನು ಒಳಗೊಂಡ ಘಟಕಯೋಜನೆಯನ್ನು ಡೆಮೋ ಮೂಲಕ ಪ್ರಸ್ತುತ ಪಡಿಸಿದರು.ನಂತರ ಹಂಚಿಕೆ ಮಾಡಿದ ಅಧ್ಯಾಯಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ
ಕಾರ್ಯದಲ್ಲಿ ಎಲ್ಲಾ ಶಿಕ್ಷಕರು ನಿರತರಾದರು.

ಎರಡನೇ ದಿನದ ಹಿನ್ನೋಟ

ಮೂರನೇ ದಿನದ ಹಿನ್ನೋಟ

ಕೊಯರ್ ವಿಜ್ಞಾನ ಕಾರ್ಯಾಗಾರದ ಮೂರನೇ ದಿನದ ಸಂಕ್ಷಿಪ್ತ ವರದಿ ಬೆಳಗಿನ ಅವಧಿಯಲ್ಲಿ ಎಲ್ಲಾ ಶಿಕ್ಷಕರು ತಮಗೆ ವಹಿಸಿದ ಘತಕಗಳಿಗೆ ಸಿದ್ಧಪಡಿಸಿದ ಸಂಪನ್ಮೂಲಗಳನ್ನು koer wipi page ಗಳಲ್ಲಿ ಸಂಪಾದಿಸಲು ಪ್ರಾರಂಭಿಸಿದರು.ಈ ಪ್ರಕ್ರಿಯೆಯಲ್ಲಿ IT for change ನ ಗುರು,ರಂಜನಿ ಮತ್ತು ಅಶೋಕ್ ಶಿಕ್ಷಕರಿಗೆ ಅಗತ್ಯ ನೆರವು ನೀಡಿದರು.ಟೀ ವಿರಅಮದ ನಂತರ ಮಂಡ್ಯದ ಹರೀಶ್ ರವರು ವಿದ್ಯುತ್ಕಾಂತೀಯ ಪ್ರೇರಣೆ ಘಟಕಕ್ಕೆ ತಾವು ಸಿದ್ದಪಡಿಸಿದ ಡಿಜಿಟಲ್ ಪಾಠಯೋಜನೆಯನ್ನು ಪ್ರಸ್ತುತಪಡಿಸಿದರು.ಇತರ ಶಿಕ್ಷಕರು ಹರೀಶ್ ರವರ ಪಾಠಯೋಜನೆಗೆ ಅಗತ್ಯ ಹಿಮ್ಮಾಹಿತಿಯನ್ನು ಒದಗಿಸಿದರು.

ಭೋಜನ ವಿರಾಮದ  ನಂತರ  ರಾಯಚೂರಿನ  ವೈಷಂಪಾಯನ  ಜೋಷಿಯವರು ಶಾಲಾ ಪ್ರಯೋಗಶಾಲೆಯ ರಚನೆ ಮತ್ತು ನಿರ್ವಹಣೆಯ ಬಗ್ಗೆ ತಾವು ಸಿದ್ಧಪಡಿಸಿದ ಯೋಜನೆಯನ್ನು  ಸ್ಲೈಡ್ ಪ್ರಸ್ತುತಿಯ ಮೂಲಕ ಕಾರ್ಯಾಗಾರದಲ್ಲಿ ಹಂಚಿಕೊಂಡರು.  ಇತರೆ ಶಿಕ್ಷಕರು ಅಗತ್ಯ ಹಿಮ್ಮಾಹಿತಿಯನ್ನು ನೀಡಿದರು. 

ನಂತರ ಶಿಕ್ಶಕರು ಕೋಯರ್ ವಿಕಿಯಲ್ಲಿ ತಮ್ಮ ವಿಷಯ ಸಂಪಾದನೆಯನ್ನು ಮುಂದುವರೆಸಿದರು. ಈ ನಡುವೆ ಡಿ.ಎಸ್.ಇ. ಆರ್.ಟಿ. ಜಂಟಿ ನಿರ್ದೇಶಕರಾದ ಶ್ರೀಮತಿ ಚಂದ್ರಮ್ಮ ನವರು ಕಾರ್ಯಾಗಾರಕ್ಕೆ ಭೇಟಿ ನೀಡಿ ಕಾರ್ಯಾಗಾರದ ಆಗು-ಹೋಗುಗಳನ್ನು ಅವಲೋಕಿಸಿದರು. ನಂತರ ಶಿಕ್ಷಕರು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಳಕೆಯ ಬಗೆಗಿನ ನಮೂನೆಯನ್ನು ಗುರು ಸರ್ ರವರಿಂದ ಪಡೆದು ತಮ್ಮ ಅಭಿಪ್ರಾಯಗಳನ್ನು ನಮೂನೆಯಲ್ಲಿ ಭರ್ತಿಮಾಡಿ ಹಿಂತಿರುಗಿಸಿದರು. ಎಲ್ಲಾ ಶಿಕ್ಷಕರು ಸಂಜೆ 6.00 ಗಂಟೆಯವರೆಗೆ ತಮ್ಮ ವಿಷಯ ಸಂಪಾದನೆಯನ್ನು ಮುಂದುವರೆಸಿ ಮೂರನೆಯ ದಿನದ ಕಾರ್ಯಾಗಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ನಾಲ್ಕನೇ ದಿನದ ಹಿನ್ನೋಟ

ಐದನೇ ದಿನದ ಹಿನ್ನೋಟ

ಮುಂದಿನ ಯೋಜನೆಗಳು

ಕೊಯರ್ ಕಾರ್ಯಾಗಾರ 2

ಕಾರ್ಯಸೂಚಿ

ಸಂಪನ್ಮೂಲಗಳು ಮತ್ತು ಕೈಪಿಡಿಗಳು

ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ

ಅಭಿಪ್ರಾಯ

ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಮುಂದಿನ ಯೋಜನೆಗಳು