ಇಂಗ್ಲೀಷ್‌ ಥ್ರೂ ಫೋಕ್‌ಟೇಲ್ಸ್‌: ಎ ಸೆಲ್ಫ್-ಸ್ಟಡಿ ಬುಕ್‌

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಈ ಪುಸ್ತಕವು ಭಾರತದ ವಿವಿಧ ಭಾಗಗಳ ಹದಿನಾರು ಜಾನಪದ ಕಥೆಗಳನ್ನು ಒಳಗೊಂಡಿದೆ. ಇದು ತುಂಬಾ ಸುಲಭ ಭಾಷೆಯಲ್ಲಿದೆ ಮತ್ತು ಕಥೆಯ ಕೆಲವು ದೃಶ್ಯಗಳನ್ನು ಚಿತ್ರಗಳ ಮೂಲಕ ಚಿತ್ರಿಸಲಾಗಿದೆ, ಇದು ಮಕ್ಕಳಿಗೆ ಆಸಕ್ತಿದಾಯಕವಾಗಿದೆ. ಲೇಖಕರು ಗಮನಿಸಿದಂತೆ, ಮಾಧ್ಯಮಿಕ ಶಾಲಾ ಮಕ್ಕಳ ಉದ್ದೇಶಕ್ಕಾಗಿ ಈ ಪುಸ್ತಕವು ಭಾಷೆಯ ಮೂಲಭೂತ ಕೌಶಲಗಳನ್ನು (ಓದುವುದು, ಬರೆಯುವುದು, ಮಾತನಾಡುವುದು ಮತ್ತು ಕೇಳುವುದು) ಮಾತ್ರವಲ್ಲದೇ ಮೂಲಭೂತ ವ್ಯಾಕರಣ ರಚನೆಗಳನ್ನು ಸಹ ಕಲಿಸುತ್ತದೆ. ಈ ಗುರಿಯನ್ನು ಪೂರೈಸಲು, ಪ್ರತಿಯೊಂದು ಕಥೆಯನ್ನು ನಂತರದ ವ್ಯಾಯಾಮಗಳು (ಟಿಪ್ಪಣಿಗಳು, ಬರಹದ ಪ್ರಶ್ನೆಗಳು, ಭಾಷಾ ಅಧ್ಯಯನ ಮತ್ತು ಸಂವಹನ ಕೌಶಲಗಳು) ಅನುಸರಿಸುತ್ತವೆ. ಟಿಪ್ಪಣಿಗಳು ಶಬ್ದ-ಅರ್ಥಗಳನ್ನು (ಪಠ್ಯದಲ್ಲಿನ ಕಷ್ಟಪದಗಳು) ಕೊಡುತ್ತವೆ, ಮತ್ತು ನಿರ್ದಿಷ್ಟ ಪದವನ್ನು ವಾಕ್ಯದಲ್ಲಿ ಪ್ರದರ್ಶಿಸುತ್ತವೆ. ಇದರ ನಂತರ, ಕಥೆಯನ್ನು ಆಧರಿಸಿ ಬರಹದ ಪ್ರಶ್ನೆಗಳಿವೆ. ಇದನ್ನು ಭಾಷಾ ಅಧ್ಯಯನ ಮತ್ತು ಸಂವಹನ ಕೌಶಲ್ಯಗಳು ಅನುಸರಿಸುತ್ತವೆ. ಹೀಗಾಗಿ, ಈ ಪುಸ್ತಕವು ಇಂಗ್ಲಿಷ್ ಸುಧಾರಣೆಗೆ, ವಿಶೇಷವಾಗಿ ಮಕ್ಕಳಿಗೆ, ಚೆನ್ನಾಗಿದೆ. ಕಥೆಗಳು ಓದಲು ಆಸಕ್ತಿದಾಯಕವಾಗಿವೆ, ಮತ್ತು ಅದೇ ಸಮಯದಲ್ಲಿ, ಕಥೆಗಳು ಮಕ್ಕಳ ಭಾಷಾ ಕೌಶಲ್ಯಗಳನ್ನು ಸುಧಾರಿಸುತ್ತವೆ.

ಭಾರತದಂತಹ ದೇಶದಲ್ಲಿ ಇಂಗ್ಲೀಷ್ ಕಲಿಕೆ. ಮಕ್ಕಳು ಮತ್ತು ವಯಸ್ಕರಿಗೆ ಮುಖ್ಯವಾಗಿದೆ. ಉದ್ದಕ್ಕೂ ಹಿಂದಿ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು, ಕಾಲೇಜು ಅಥವಾ ಸಂಸ್ಥೆಗಳನ್ನು ಸೇರುವಾಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ, ಅದರಲ್ಲೂ ನಿರ್ದಿಷ್ಟವಾಗಿ ಆ ಕೋರ್ಸ್‌ ಇಂಗ್ಲಿಷ್‌ನಲ್ಲಿ ನೀಡಲಾಗುತ್ತಿದ್ದರೆ. ಐಐಟಿಗಳಂತಹ ಸಂಸ್ಥೆಗಳಲ್ಲಿ 1 ನೇ ವರ್ಷದ ವಿದ್ಯಾರ್ಥಿಗಳಿಗೆ ಪರಿಹಾರೋಪಾಯ ತರಗತಿಗಳನ್ನು ನೀಡಲಾಗುತ್ತದೆ, ಏಕೆಂದರೆ ಕೆಲವು ಉಪನ್ಯಾಸಗಳನ್ನು ಅನುಸರಿಸುವಲ್ಲಿ ಅವರು ನಿಜವಾಗಿಯೂ ಸಮಸ್ಯೆಗಳನ್ನು ಎದುರಿಸುತ್ತಾರೆ. ಭಾಷೆಯ ಬೋಧನೆಯ ಹಲವಾರು ವಿಧಾನಗಳಿವೆ, ಮತ್ತು ಕಳೆದ ದಶಕಗಳಲ್ಲಿ ವಿವಿಧ ಸಂಪನ್ಮೂಲಗಳು ಮತ್ತು ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಭಾಷೆಯ ಬೋಧನೆಯಲ್ಲಿ ಜಾನಪದ ಕಥೆಗಳ ಪಾತ್ರವು ಅಜೇಯವಾಗಿ ಉಳಿದಿದೆ. ಜಾನಪದ ಕಥೆಗಳ ಮೂಲಕ ಬೋಧನೆ ಖಂಡಿತವಾಗಿ ಫಲಪ್ರದವಾಗಲಿದೆ ಎಂದು ನಾನು ನಂಬುತ್ತೇನೆ. ಆದ್ದರಿಂದ, ಕಥೆಗಳು ಕುತೂಹಲಕಾರಿಯಾಗಿರುವುದರಿಂದ ಈ ರೀತಿಯ ಪುಸ್ತಕವು ಮಕ್ಕಳಿಗೆ ನಿಜವಾಗಿಯೂ ಮುಖ್ಯವಾದುದು, ಮತ್ತು ಅವುಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಇದಲ್ಲದೆ, ಇದು ವಿಭಿನ್ನ ಪದಗಳು / ಪದಗುಚ್ಛಗಳ ಶಬ್ದಕೋಶ ಮತ್ತು ಬಳಕೆಗಳನ್ನು ಸುಧಾರಿಸುತ್ತದೆ. ಒದಗಿಸಿದ ವ್ಯಾಯಾಮಗಳು ಒಳ್ಳೆಯವು, ಮತ್ತು ಮಕ್ಕಳು ತಮ್ಮ ಇಂಗ್ಲೀಷ್ ಅನ್ನು ಸುಧಾರಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ.

ಅಲ್ಲದೆ, ಹೆಚ್ಚಿನ ಕಥೆಗಳು ಜನರಿಗೆ ತಿಳಿದಿರುವುದರಿಂದ, ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ಈ ಪುಸ್ತಕದಲ್ಲಿ ಆಯ್ಕೆ ಮಾಡಿದ ಕಥೆಗಳು ಮಕ್ಕಳಿಗೆ ಒಳ್ಳೆಯವು ಮತ್ತು ಆಸಕ್ತಿದಾಯಕವಾಗಿವೆ. ಈ ಕಥೆಗಳ ಮಟ್ಟವನ್ನು ಪರಿಗಣನೆಗೆ ತೆಗೆದುಕೊಂಡರೆ ಅದು ಇನ್ನೂ ಉತ್ತಮವಾಗಿರುತ್ತಿತ್ತು ಕೆಲವು ಕಥೆಗಳ ಪ್ರಾಥಮಿಕ ಸ್ವರೂಪವು ಈ ಪುಸ್ತಕದ ಒಟ್ಟು ಪ್ರಭಾವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದಲ್ಲದೆ, ಒದಗಿಸಿದ ವ್ಯಾಯಾಮಗಳು ಸ್ಥಿರವಾಗಿಲ್ಲ. ಉದಾಹರಣೆಗೆ, ಎಲ್ಲಾ ಅಧ್ಯಾಯಗಳು ಕೇವಲ ನಾಲ್ಕು ಕಾರ್ಯಗಳನ್ನು ಹೊಂದಿಲ್ಲ (ಮೇಲೆ ಹೇಳಿದಂತೆ), ಕೆಲವು ಅಧ್ಯಾಯಗಳು ವಿಮರ್ಶಾತ್ಮಕ ಮೆಚ್ಚುಗೆ, ಲಿಖಿತ ಕೌಶಲಗಳು, ಇತ್ಯಾದಿಗಳನ್ನು ಒಳಗೊಂಡಿರುತ್ತವೆ; ಮತ್ತು ಕೆಲವು ಅಧ್ಯಾಯಗಳು ಭಾಷಾ ಕೌಶಲ್ಯಗಳನ್ನು ಒಳಗೊಂಡಿರುವುದಿಲ್ಲ. ಆದ್ದರಿಂದ, ಈ ವ್ಯಾಯಾಮಗಳು ಹೆಚ್ಚು ವ್ಯವಸ್ಥಿತವಾಗಿರಬೇಕು. ಭವಿಷ್ಯದ ಆವೃತ್ತಿಗಳಲ್ಲಿ ಈ ಅಂಶಗಳನ್ನು ಖಂಡಿತವಾಗಿಯೂ ಸುಧಾರಿಸಬಹುದು. ಒಂದು ಭಾಷೆಯನ್ನು ಬೋಧಿಸಲು ಲಭ್ಯವಿರುವ ಶೈಕ್ಷಣಿಕ ಸಂಪನ್ಮೂಲಗಳಲ್ಲಿನ ಅಂತರವನ್ನು ಈ ಪುಸ್ತಕವು ತುಂಬುತ್ತದೆ.

ಕಮಲ್ ಕುಮಾರ್ ಚೌಧರಿ (ಪಿಎಚ್ಡಿ, ಲೈಪ್ಜಿಗ್) ಅವರು ಪಂಜಾಬಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೋಪರ್ನಲ್ಲಿ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಸಹಾಯಕ ಪ್ರೊಫೆಸರ್ ಆಗಿದ್ದಾರೆ. ಡಾ. ಚೌಧರಿ ಅವರ ಅಧ್ಯಯನ ಕ್ಷೇತ್ರಗಳು ನ್ಯೂರೋ / ಸೈಕೋಲಿಂಗ್ವಿಸ್ಟಿಕ್ಸ್, ಸಿಂಟ್ಯಾಕ್ಸ್, ಕಾಗ್ನಿಟಿವ್ ಸೈನ್ಸ್, ಮತ್ತು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ ಈ ಕ್ಷೇತ್ರಗಳಲ್ಲಿ ಇವರು ಇತರರಿಗೆ ಶಕ್ಷಣ ಕೂಡ ನೀಡುತ್ತಾರೆ.