ಇಟಲಿಯ ಏಕೀಕರಣ ಮತ್ತಷ್ಟು ಮಾಹಿತಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಇಟಲಿಯ ಮಾಹಿತಿ

ಇಟಲಿಯ ಭೌಗೋಳಿಕ ಲಕ್ಷಣಗಳು

ನಕಾಶೆ ಇಟಲಿ ನಕಾಶೆ ಹೆಚ್ಚಿನ ಮಾಹಿತಿಗೆ ಇಲ್ಲಿ ಒತ್ತಿ

ಇಟಲಿಯ ಪ್ರಮುಖ ಪ್ರವಾಸಿ ಸ್ಥಳಗಳು

ಇಟಲಿ ದೇಶದ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿಗಾಗಿ ಈ ಲಿಂಕ್ ಬಳಸಿರಿ

ಇಟಲಿಯ ಏಕೀಕರಣ

ಪ್ರಾಚೀನ ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ವೈಭವದ ನಾಡಾಗಿದ್ದ & ಪುನರುಜ್ಜೀವನದ ಯುಗದಲ್ಲಿ ಚಿರಸ್ಮರಣೀಯ ಪಾತ್ರವಹಿಸಿದ್ದ ಇಟಲಿಯು ಹದಿನಾರನೆಯ ಶತಕದ ಅತ್ಯಂದ ವೇಳೆಗೆ ತನ್ನ ವಾಣಿಜ್ಯ ಹಾಗೂ ಸಾಂಸ್ಕೃತಿಕ ಹಿರಿಮೆ &ರಾಜಕೀಯ ಶಕ್ತಿಯನ್ನು ಕಳೆದುಕೊಂಡು ಚಿಕ್ಕ ಪುಟ್ಟ ರಾಜ್ಯಗಳಾಗಿ ಹರಿದು ಹಂಚಿಹೋಯಿತು.ರಾಜಕೀಯ ಅನೈಕ್ಯತೆ ಹಾಗೂ ದೌರ್ಬಲ್ಯ ವಿದೇಶಿಯರ ಹಸ್ತಕ್ಷೇಪಕ್ಕೆ ಎಡೆಮಾಡಿಕೊಟ್ಟವು.ಹತ್ತೊಂಬತ್ತನೇ ಶತಮಾನದಲ್ಲಿ ನೆಪೋಲಿಯನ್ನ ನಡೆಸಿದ ಧಾಳಿಯಿಂದ ಇಟಲಿಯಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಲಾರಂಭಿಸಿತು.ಇಟಲಿ ದೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಬಳಸಿರಿ. ಇಟಲಿ ದೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ

ಇಟಲಿ ಏಕೀಕರಣದ ಶಿಲ್ಪಿಗಳು

ಜ್ಯೋಸೆಫ್ ಮ್ಯಾಝಿನಿ (1805-1872) ಇಟಲಿ ಏಕೀಕರಣದ ಶಿಲ್ಪಿಗಳಲ್ಲಿ ಒಬ್ಬನಾದ ಜ್ಯೋಸೆಫ್ ಮ್ಯಾಝಿನಿ ಬಾಲಕನಿರುವಾಗಲೇ ದೇಶಭಕ್ತನಾಗಿದ್ದ.ದೇಶದ ದುಃಸ್ಥಿತಿಗಾಗಿ ತಾನು ಪಡುತ್ತಿದ್ದ ದುಃಖವನ್ನು ತೋರ್ಪಡಿಸಲು ಕಪ್ಪು ಬಣ್ಣದ ಉಡುಪು ಧರಿಸುತ್ತಿದ್ದನು. ಯಂಗ್ ಇಟಲಿ ಎನ್ನುವ ಸಂಘವನ್ನು ಸ್ಥಾಪಿಸಿದನು.ಏಕತೆ&ಸ್ವಾತಂತ್ರ್ಯ ಎಂಬುದು ಯಂಗ್ ಇಟಲಿಯ ಘೋಷಣೆಯಾಗಿತ್ತು. ಜೊಸೆಫ್ ಮ್ಯಾಜಿನಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ

ಕೌಂಟ್ ಕ್ಯಾಮಿಲ್ಲೋ ಡಿ ಕವೂರ್

ಏಕೀಕರಣದ ಶಿಲ್ಪಿಗಳಲ್ಲಿ ಒಬ್ಬ .ರಿಸಾರ್ಜಿಮೆಂಟೋ ಎಂಬ ಪತ್ರಿಕೆಯನ್ನು ಆರಂಭಿಸಿ ಇಟಲಿಯ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದನು.ಕೌಂಟ್ ಕ್ಯಾಮಿಲ್ಲೋ ಡಿ ಕವೂರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ

ವಿಕ್ಟರ್ ಎಮ್ಯಾನ್ಯುಯಲ್

ಪ್ರಾಮಾಣಿಕ ದೊರೆ ಎಂದು ಹೆಸರಾಗಿದ್ದವನು.ಉಜ್ವಲ ದೇಶಾಭಿಮಾನಿ,ವಚನ ಪರಿಪಾಲಕ,ಸ್ವತಂತ್ರ ಪ್ರವೃತ್ತಿಯವನು &ಶೂರ ಯೋಧನೂ ಆಗಿದ್ದವನು.ಮಹಾ ಮುತ್ಸದ್ದಿ &ರಾಜನೀತಿಜ್ಞ ಸಹ ಆಗಿದ್ದವನು. ವಿಕ್ಟರ್ ಎಮ್ಯಾನ್ಯುಯಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿರಿ

ಗಿಸೆಪ್ಪೆ ಗ್ಯಾರಿಬಾಲ್ಡಿ(ಕ್ರಿ.ಶ.1807-1882)

ಇಟಲಿಯ ನಿರ್ಮಾಪಕರಲ್ಲಿ ಒಬ್ಬ.ಉಜ್ವಲ ದೇಶಪ್ರೇಮಿ, ಗಣತಂತ್ರವಾದಿ..ಖಡ್ಗದ ಬಲದಿಂದ ಇಟಲಿ ಏಕೀಕರಣಕ್ಕೆ ಶ್ರಮಿಸಿದವನು.ಇವನು ಸ್ಥಾಪಿಸಿದ ಸೈನ್ಯ ಕೆಂಪಂಗಿದಳ ಗಿಸೆಪ್ಪೆ ಗ್ಯಾರಿಬಾಲ್ಡಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಒತ್ತಿರಿ






ಇಟಲಿಯ ಅಧ್ಯಕ್ಷರುಗಳು

ಯುರೋಪ್ ಖಂಡದ ಪ್ರಮುಖ ದೇಶ. ಇಟಲಿ ರಿಪಬ್ಲಿಕ್ ನ ಅಧಿಕೃತ ರಾಜಧಾನಿ ರೋಮ್. ಅಧ್ಯಕ್ಷರ ವಾಸ ರೋಮ್ ನಲ್ಲಿ. ಇಲ್ಲಿನ ಅಧ್ಯಕ್ಷರ ಅವಧಿ ಏಳು ವರ್ಷಗಳು. ಆದ್ಯಕ್ಷರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಇಟಲಿ ದೇಶದ ಅಧ್ಯಕ್ಷರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿರಿ