ಏಕಕೇಂದ್ರಿಯ ವೃತ್ತಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಏಕಕೇಂದ್ರದಲ್ಲಿ ವೃತ್ತಗಳನ್ನು ಚಿತ್ರಿಸುವುದು, ಈ ಕರ-ನಿರತ ಚಟುವಟಿಕೆಯ ವೃತ್ತವು ಆಕಾರವೆಂದು ಮತ್ತು ಅದರ ವ್ಯತ್ಯಾಸಗಳನ್ನು ಪರಿಶೋಧಿಸಲಾಗುತ್ತದೆ.
ಕಲಿಕೆಯ ಉದ್ದೇಶಗಳು :
ಏಕಕೇಂದ್ರಿಯ ವೃತ್ತಗಳು ಒಂದೇ ಕೇಂದ್ರ ಆದರೆ ವಿಭಿನ್ನ ತ್ರಿಜ್ಯಗಳನ್ನು ಹೊಂದಿರುವ ವೃತ್ತಗಳಾಗಿವೆ ಎಂದು ವಿದ್ಯಾರ್ಥಿಗಳು ಕಲಿಯುತ್ತಾರೆ.
ಅಂದಾಜು ಸಮಯ:
15 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಕಾಗದ, ಕೈವಾರ, ಪೆನ್ಸಿಲ್, ಬಣ್ಣದ ಪೆನ್ಸಿಲ್ಗಳು, ಅಳತೆಪಟ್ಟಿ
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ನಿರ್ದಿಷ್ಟ ತ್ರಿಜ್ಯಕ್ಕಾಗಿ ವೃತ್ತಗಳನ್ನು ನಿಖರವಾಗಿ ಚಿತ್ರಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
ವಿಭಿನ್ನ ವೃತ್ತಗಳಿಗೆ ಕೇಂದ್ರ ಯಾವುದು?
ಮೌಲ್ಯ ನಿರ್ಣಯ ಪ್ರಶ್ನೆಗಳು:
- ಏಕಕೇಂದ್ರಿಯ ವೃತ್ತಗಳಿಗೆ ಕೇಂದ್ರವು ಒಂದೇ ಎಂದು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ಸಾಧ್ಯವಿದೆಯೇ?
- ಪ್ರಶ್ನೆ ಕಾರ್ನರ್:
- ಸಮಾ ವೃತ್ತಗಳು (ಸರ್ವಸಮ) ಎಂದರೇನು?
- ವೃತ್ತದ ಗಾತ್ರವನ್ನು ಯಾವುದು ನಿರ್ಧರಿಸುತ್ತದೆ?
- ಏಕಕೇಂದ್ರಿಯ ವೃತ್ತಗಳಿಗೆ ಹೋಲುವ ವಸ್ತುಗಳಿಗೆ ಉದಾಹರಣೆಗಳನ್ನು ನೀಡಿ.