ನೆಲಮಾಲಿನ್ಯ ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚಟುವಟಿಕೆ - ಚಟುವಟಿಕೆಯ ಹೆಸರು

ಕೋಷ್ಟಕ ಅಥವಾ ಚಾರ್ಟ ತಯಾರಿಸುವುದು

ಅಂದಾಜು ಸಮಯ

20 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡ್ರಾಯಿಂಗ್ ಕಾಗದ , ಅಳತೆ ಪಟ್ಟಿ , ಮಾರ್ಕರ್ ಪೆನ್ನು /ಪೆನ್ನು ,ದೈನಿಕ/ಸಾಪ್ತಾಹಿಕ /ಮಾಸಿಕ ಪತ್ರಿಕೆಗಳು ನೆಲಮಾಲಿನ್ಯದ ಮಾಹಿತಿಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ ಚಾರ್ಟ ತಯಾರಿಸಲು ತಿಳಿಸುವುದು

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಚಾರ್ಟ ತಯಾರಿಸುವಾಗ ಚಾರ್ಟ ಮೌಲ್ಯಮಾಪನದ ಅಂಶಗಳನ್ನು ತಿಳಿಸುವುದು

ಕಾರಣಗಳು /ಆಕರಗಳು ಮಾಲಿನ್ಯಕಾರಗಳು ಪರಿಣಾಮಗಳು ನಿಯಂತ್ರಣ ಕ್ರಮಗಳು
1.ವ್ಯವಸಾಯ /ಕೃಷಿ ತ್ಯಾಜ್ಯಗಳು ರಸಗೊಬ್ಬರಗಳು ,ಕೀಟನಾಶಕಗಳು ,ಡಿಡಿಟಿ ,ಎಂಡ್ರಿನ್ , ಡೈ ಎಟ್ರಿನ್ ಭೂ ಪೋಷಕಾಂಶಗಳು ಮತ್ತು ಭೂಸಾರ ಕಡಿಮೆ ,ಇತರೆ ಸೂಕ್ಷ್ಮಜೀವಿಗಳ ನಾಶ ,ಅಪಾಯಕಾರಿ ರೋಗಗಳು ಜೈವಿಕ ಕೀಟ ನಿಯಂತ್ರಣ,ಸಾವಯವ ನೈಸರ್ಗಿಕ ಗೊಬ್ಬರಗಳ ಬಳಕೆ ಪ್ರೇರೆಪಣೆ,ಜೈವಿಕ ವಿಘಟನೆಯಾಗುವ ಪೀಡನಾಶಕ ಬಳಕೆ
2.ನಗರ ತ್ಯಾಜ್ಯಗಳು ಕಸ ,ಪ್ಲಾಷ್ಟಿಕ್ ,ರಬ್ಬರ ,ಒಡೆದ ಗಾಜಿನ ಚೂರುಗಳು , ಹಳೆ ಕಟ್ಟಡ ವಸ್ತುಗಳು ನೆಲಮಾಲಿನ್ಯವಾಗುವುದು,ಪ್ರಾಣಿಗಳ ಜೀರ್ಣಾಂಗಗಳ ತೊಂದರೆಗಳು ಪ್ಲಾಷ್ಟಿಕ್ ಗಕೆಳ ಬಳಕೆ ನಿಷೇಧ ,ಗಾಜು ,ಪ್ಲಾಷ್ಟಿಕ್ ,ಕಾಗದಗಳ ಮರುಬಳಕೆ ಮಾಡುವುದು,ನಗರ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡುವುದು
3.ಪರಮಾಣು ಸ್ಫೋಟ : ನೆಲದಲ್ಲಿ ಪರಮಾಣು ಪ್ರಯೋಗಗಳು ಅಪಾಯಕಾರಿ ವಿಕಿರಣಗಳು ನೆಲ ವಿಕಿರಣ ಮಾಲಿನ್ಯವಾಗುವುದು ,ಅನುವಂಶೀಯ ಅವ್ಯವಸ್ಥೆ ಪರಮಾಣು ಪ್ರಯೋಗಗಳಿಗೆ ನಿಷೇಧ ಹೇರುವುದು,ನೆಲ ಮಾಲಿನ್ಯವಾಗದಂತೆ ಮುನ್ನೆಚ್ಚರಿಕೆ ವಹಿಸುವುದು

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ನೆಲದ ಮೇಲೆ ಕಂಡು ಬರುವ ಬಳಸಿ ಬೀಸಾಡಿದ ವಸ್ತುಗಳನ್ನು ಪಟ್ಟಿ ಮಾಡಿ
  2. ಪಟ್ಟಿ ಮಾಡಿದ ವಸ್ತುಗಳಲ್ಲಿ ನೈಸರ್ಗಿಕ /ಜೈವಿಕ ವಿಘಟನೆಗೊಳ್ಳುವ ವಸ್ತುಗಳನ್ನು ಪಟ್ಟಿ ಮಾಡಿ
  3. ಮಾನವ ತಯಾರಿಸಿದ ಜೈವಿಕ ವಿಘಟನೆಗೊಳ್ಳದ ವಸ್ತಗಳಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ತಿಳಿಸಿ
  4. ನೆಲ ಮಾಲಿನ್ಯದ ನಿಯಂತ್ರಣ ಕ್ರಮಗಳೇನು ? ಚರ್ಚಿಸಿ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ನೆಲ ಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ
  2. ನೆಲ ಮಾಲಿನ್ಯದ ಬಗ್ಗೆ ಪತ್ರಿಕಾ ಸುದ್ದಿಗಳನ್ನು ಸಂಗ್ರಹಿಸಿ
  3. ನೆಲ ಮಾಲಿನ್ಯದಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
  4. ಪ್ಲಾಷ್ಟಿಕ್ , ಗಾಜುಗಳನ್ನು ಮರುಬಳಕೆಯ ಅಗತ್ಯತೆ ಹಾಗೂ ಹಂತಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
  5. ನಿಮ್ಮ ಶಾಲೆ ಮತ್ತು ಮನೆಯ ಸುತ್ತಮುತ್ತ ನೆಲ ಮಾಲಿನ್ಯವಾಗದಂತೆ ನಿಯಂತ್ರಿಸುವ ವಿಧಾನಗಳ ಬಗ್ಗೆ ಚರ್ಚಿಸಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್